ಉದಯೋನ್ಮುಖ ಯುವ ಬರಹಗಾರ ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ರಚಿಸಿರುವ ಫಿಲಿಫೈನ್ ಕಾವ್ಯ ಪ್ರಕಾರವಾದ ತನಗಾ ಸಂಕಲನ ‘ಅಂತರಂಗದ ಪ್ರಣತಿ’ 22ರಂದು ಲೋಕಾರ್ಪಣೆಗೊಳ್ಳಲಿದೆ. ಸಾಹಿತ್ಯಾಸಕ್ತರೆಲ್ಲರಿಗೂ ಸ್ವಾಗತ…


ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಕಲ್ಬುರ್ಗಿ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿರುವ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭದಿ ಯಡ್ರಾಮಿ ಪಟ್ಟಣದ ಉದಯೋನ್ಮುಖ ಯುವ ಬರಹಗಾರ ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ರಚಿಸಿರುವ ಫಿಲಿಫೈನ್ ಕಾವ್ಯ ಪ್ರಕಾರವಾದ ತನಗಾ ಸಂಕಲನ ‘ಅಂತರಂಗದ ಪ್ರಣತಿ’ ಕಲ್ಬುರ್ಗಿ ಜಿಲ್ಲೆಯ ಪ್ರಪ್ರಥಮ ತನಗ ಸಂಕಲನವಾಗಿ, ಅನ್ನಪೂರ್ಣ ಕ್ರಾಸಲ್ಲಿ ಇರುವ ಕಲಾ ಮಂಡಳ ಸಭಾಭವನದಿ ಲೋಕಾರ್ಪಣೆಯಲಿದೆ.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಆಯೋಜಕರು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಬಿ ಹೆಚ್ ನಿರಗುಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಆಕೃತಿಕನ್ನಡ ನ್ಯೂಸ್
