‘ಅರಿವು’ ಕವನ – ಶರಣಗೌಡ ಬಿ.ಪಾಟೀಲ

‘ಯೌವನ ಕಳೆದು ಮುಪ್ಪು ಅಪ್ಪಳಿಸಿದಾಗ ಅರಿವಾಗುತ್ತದೆ’… ಶರಣಗೌಡ ಬಿ.ಪಾಟೀಲ ಲೇಖನಿಯಲ್ಲಿ ಅರಳಿದ ಕವನವನ್ನು, ತಪ್ಪದೆ ಮುಂದೆ ಓದಿ…

ಬಾಲ್ಯ ಕಳೆದು
ಅದೆಷ್ಟೋ
ವರ್ಷಗಳಾದಾಗ
ಆ ನೆನಪು
ಆಗಾಗ ಮರುಕಳಿಸಿ
ಕಣ್ಣೆದುರಿಗೆ ಬರುತ್ತದೆ!

ಯೌವನ ಕಾಲಿಟ್ಟಾಗ
ಗೊತ್ತೇ ಆಗೋದಿಲ್ಲ
ಹಾಗೋ ಹೀಗೋ
ಆ ಯೌವನವು
ಕಳೆದು ಹೋಗಿ
ಏನೇನೋ
ನೆನಪಿಸುತ್ತದೆ !!

ಬದುಕಿನ
ಜಂಜಾಟದಲಿ
ಯೌವನವೂ
ಕಳೆದು ಹೋಗಿ
ನೆನಪಿಸಿಕೊಂಡಾಗ
ಮುಗುಳ್ನಗೆ ತರಿಸುತ್ತದೆ !!!

ಯೌವನ ಕಳೆದು
ಮುಪ್ಪುಅಪ್ಪಳಿಸಿದಾಗ
ಅರಿವಾಗುತ್ತದೆ
ಆಗ ಬದುಕು ಹೇಗಿತ್ತು
ಈಗ ಹೇಗಾಯಿತಲ್ಲ?


  • ಶರಣಗೌಡ ಬಿ.ಪಾಟೀಲ – ತಿಳಗೂಳ, ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW