ಸ್ಮರಣ ಶಕ್ತಿ ವೃದ್ಧಿಸಲು, ಹೊಟ್ಟೆ ನೋವಿಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಕೆಂಪಗಸೆ ಗಿಡದ ಮಹತ್ವದ ಕುರಿತು ಎಸ್.ಎಚ್.ನದಾಫ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಗಿಳಿಯ ಕೊಕ್ಕಿನ ಹಾಗೆ ವಿಶೇಷ ಆಕಾರದ ಹೂವು ಹಾಗೂ ಕಾಯಿಗಳಿಂದ ಆಕರ್ಷಿಸುವ ಈ ಗಿಡಕ್ಕೆ ಕನ್ನಡ ಭಾಷೆಯಲ್ಲಿ ಅಗಸೆ, ಚೊಗಚೆ, ಕೆಂಪಗಸೆ, ಬಕ ಪುಷ್ಪ , ಚಿನ್ನದಾರೆ ಇತ್ಯಾದಿ.
ಆಂಗ್ಲ ಭಾಷೆಯಲ್ಲಿ sesbane , August flower, Vegetable hummingbird. ಸಂಸ್ಕೃತ ಭಾಷೆಯಲ್ಲಿ ಅಗಸ್ತ್ಯ, ಮುನಿಧೃಮ ಎಲ್ಲ ಕಡೆ ಬೆಳೆಯುವ ಈ ಚೊಗಚೆ ಗಿಡಗಳನ್ನು ಹೆಚ್ಚಾಗಿ ವಿಳ್ಯದೆಲೆ ತೋಟಗಳಲ್ಲಿ ಎಲೆ ಬಳ್ಳಿಗಳ ಆಸರೆಗಾಗಿ ಬೆಳೆಸುತ್ತಾರೆ. ಇಪ್ಪತ್ತರಿಂದ ಮೂವತ್ತು ಅಡಿ ಕಂಬ ಗಳಂತೆ ಈ ಗಿಡಗಳು ಬೆಳೆಯುತ್ತವೆ.

ಫೋಟೋ ಕೃಪೆ : google
ಅಗಸೆ ಬರ ನಿರೋಧಕ ಗಿಡ. ನೆಟ್ಟ ಒಂದೇ ವರ್ಷದಲ್ಲಿ ಹೂವು ಕಾಯಿಗಳನ್ನು ಬಿಡುತ್ತದೆ. ಬಿಳಿ ಹಾಗೂ ಕೆಂಪು ಬಣ್ಣದ ಎರಡು ತಳಿಗಳಿವೆ. ನುಗ್ಗೆ ಕಾಯಿಯ ಹಾಗೆ ಉದ್ದ ಕಾಯಿಗಳಾಗುತ್ತವೆ. ಈ ಗಿಡ ಗಳು ಮಣ್ಣಿನ ಸಾರ ವೃದ್ಧಿಸಲು ಸಹಕಾರಿಯಾಗಿವೆ.
ಚೊಗಚೆ ಗಿಡ ಸಂಪೂರ್ಣ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆ ಹೂವು ಕಾಯಿ ಗಳನ್ನು ತರ ಕಾರಿಯಂತೆ ಬಳಸುತ್ತಾರೆ. ಇದರ ಹೂವು ಗಳಲ್ಲಿ ಅಧಿಕ ಪ್ರಮಾಣದ ಪ್ರೋಟೀನ್, ಎ ವಿಟಮಿನ್, ಶರ್ಕರ ಪೀಷ್ಟ , ಸುಣ್ಣ ಮತ್ತು ಕಬ್ಬಿಣದ ಅಂಶಗಳು ಹೇರಳ ವಾಗಿದ್ದು ಪೋಷಕಾಂಶಗಳ ಕೊರತೆ ನಿವಾರಿ ಸಲು ಸಹಕಾರಿಯಾಗಿದೆ. ಇದರ ಸುಂದರವಾದ ಹೂವುಗಳನ್ನು ಗಿಳಿ ಹಾಗೂ ಅಳಿಲುಗಳು ಸೇವನೆ ಮಾಡುತ್ತವೆ. ಹೂವುಗಳ ಗುಲ ಕಂದ್ ತುಂಬಾ ಆರೋಗ್ಯದಾಯಕ . ಹೂವುಗಳಿಂದ ಪಕೋಡ ತಯಾರಿಸಬಹುದು.

ಫೋಟೋ ಕೃಪೆ : google
ಔಷಧೀಯ ಗುಣಗಳು :
* ಇರುಳುಗಣ್ಣಿಗೆ ಅಗಸೆ ಹೂವುಗಳ ಪಲ್ಯ ಮಾಡಿ ಎರಡು ವೇಳೆ ಸೇವಿಸಬೇಕು.
* ಕಣ್ಣಿನ ರೋಗಗಳಿಗೆ ಬಿಳಿ ಅಗಸೆ ಹೂವಿನ ರಸ ಎರಡೆರಡು ಹನಿ ಹಾಕಬೇಕು. ಹಾಗೂ ಇದರ ಎಲೆಗಳನ್ನು ತುಪ್ಪದಲ್ಲಿ ಹುರಿದು ಸೇವನೆ ಮಾಡುವು ದರಿಂದ ನೇತ್ರ ವಿಕಾರಗಳು ಪರಿಹಾರವಾಗುತ್ತವೆ.
* ಇದರ ಹೂವುಗಳ ಗುಲಕಂದ ತಯಾರಿಸಿ ಸೇವಿಸಿದರೆ ಶಾರೀರಿಕ ದೌರ್ಬಲ್ಯ ದೂರವಾಗಿ ದೇಹ ಕಾಂತಿಯುಕ್ತವಾಗುತ್ತದೆ.
* ಅರ್ಧ ತಲೆ ನೋವಿಗೆ ವಿರುದ್ಧ ದಿಕ್ಕಿನ ಮೂಗಿನ ಹೊರಳೆಯಲ್ಲಿ ನಾಲ್ಕೈದು ಹನಿ ಎಲೆಗಳ ರಸವನ್ನು ಹಿಂಡಬೇಕು.
* ಹೊಟ್ಟೆಯ ಹುಳುಗಳಿಗೆ 20 ಎಂ ಎಲ್ ನಷ್ಟು ಎಲೆಗಳ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿ ಯಬೇಕು.
*ಸ್ಮರಣ ಶಕ್ತಿ ವೃದ್ಧಿಸಲು ಚೊಗಚೆ ಗಿಡದ ಬೀಜಗಳ ಪೌಡರ್ ನ್ನು 05 ಗ್ರಾಂ ನಷ್ಟು ಹಸುವಿನ ತುಪ್ಪದಲ್ಲಿ ಎರಡು ಬಾರಿ ಸೇವನೆ ಮಾಡಬೇಕು.
*ಹೊಟ್ಟೆ ನೋವಿಗೆ ಅಗಸೆ ಗಿಡದ ಚಕ್ಕೆ , ಹುರಿದ ಲವಂಗ ಸೇರಿಸಿ ಕಾಢೆ (ಕಷಾಯ) ತಯಾರಿಸಿ ಸೈಂಧವ ಲವಣ ಸೇರಿಸಿ ದಿನದಲ್ಲಿ ಮೂರು ಬಾರಿ ಸೇವಿಸಬೇಕು.
ಹೀಗೆ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆಯಾಗುವ ಈ ಸುಂದರವಾದ ಅಗಸೆ ಗಿಡಗಳನ್ನು ಮನೆಯಂಗಳದಲ್ಲಿ ಬೆಳೆಸಿದರೆ ಗಿಳಿ ಕೋಗಿಲೆ ಅಳಿಲು ಮುಂತಾದ ಪಕ್ಷಿಗಳಿಗೆ ಆಸರೆಯಾಗಿ ಮನೆಗೂ ತರಕಾರಿ ದೊರೆಯುತ್ತದೆ.
ಈ ಚೊಗಚೆ ಗಿಡದ ಬೀಜಗಳು, ಬೀಜಗಳ ಮಾರಾಟದ ಅಂಗಡಿ ಹಾಗೂ ಬೀಜೋತ್ಪಾದನಾ ಕೇಂದ್ರಗಳಲ್ಲಿ ದೊರೆಯುತ್ತವೆ.
- ಎಸ್.ಎಚ್.ನದಾಫ
