ಕೃಷಿ ಮನೆತನದಿಂದ ಬಂದ ಸಂತೋಷ ಸೈನಿಕರಾಗಿ ನಿವೃತ್ತಿ ಹೊಂದಿದ ಮೇಲೆ ಅಣಬೆ ಕೃಷಿಯನ್ನು ಆಯ್ಕೆ ಮಾಡಿಕೊಂಡರು. ಅವರ ಅಣಬೆ ಕೃಷಿಯ ಯಶಸ್ಸಿನ ಕುರಿತು ಶಿಕ್ಷಕ ಹಾಗೂ ಲೇಖಕರಾದ ಟಿ.ಶಿವಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸ್ವಾವಲಂಬನೆಗಾಗಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹಸನಬಾದಿ ಗ್ರಾಮದ ಸಂತೋಷ ಅರೇರ ಎಂಬ ಯುವಕ ಅಣಬೆ ಬೇಸಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಅಣಬೆ ಎಂದರೆ ಮೂಗು ಮುರಿಯುವವರೆ ಹೆಚ್ಚು. ಅದರೆ ಇದಕ್ಕೆ ಮಸಾಲೆ ಹಾಕಿ ಸಾಂಬಾರು, ಪಲ್ಯೆ ಮಾಡಿದರೆ ಅದರ ರುಚಿ ಎಲ್ಲರಿಗೂ ಹಿಡಿಸುವಂತಹದ್ದು ಹೆಚ್ಚಿನ ಪೋಷಕಾಂಶದಿಂದ ಕೂಡಿರುವ, ಮಧುಮೇಹ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿರುವ ಈ ಅಣಬೆಯನ್ನು ಬೆಳೆಯುವುದು ಕಷ್ಟವೇನಲ್ಲ.

ಕೃಷಿ ಮನೆತನದ ಹಿನ್ನೆಲೆಯಿಂದ ಬಂದಿರುವ ಸಂತೋಷ ಸೈನಿಕನಾಗಿ ಸುಮಾರು 17 ವರ್ಷ ಗಡಿಯನ್ನು ಕಾದು ಕಳೆದ 3 ವರ್ಷಗಳಿಂದ ನಿವೃತ್ತಿ ಹೊಂದಿ ಸ್ವಂತ ಊರಿಗೆ ಬಂದ ಇವರು ಕೃಷಿಯಲ್ಲಿ ಏನಾದರೂ ಮಾಡಬೇಕು ಎನ್ನುವ ಉದ್ದೇಶದಿಂದ ಅಣಬೆ ಕೃಷಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಮನೆಯ ಹಿತ್ತಲಿನಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಈಗ ಅಣಬೆ ಕೃಷಿ ಒಳ್ಳೆಯ ಉದ್ಯಮವಾಗಿ ಮಾರ್ಪಡಿಸಿ ಅದರಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಪದವೀಧರರಾದ ಇವರು ಕೃಷಿ ಕೇತ್ರದಲ್ಲಿಯೂ ಆಸಕ್ತಿಯನ್ನು ಹೊಂದಿದ ಕಾರಣ ಸೈನಿಕ ವೃತ್ತಿಯಿಂದ ನಿವೃತ್ತಿಯಾಗಿ ಬಂದ ತಕ್ಷಣ ಕೆಲ ಅಂತರ್ಜಾಲ ಮಾಹಿತಿ ಕೆಲ ಕೃಷಿ ಆಧಿಕಾರಿಗಳ ಭೇಟಿಯಿಂದ ಅಗತ್ಯ ಮಾಹಿತಿ ಪಡೆದು ತಮ್ಮ ಮನೆಯ ಹಿತ್ತಲಿನಲ್ಲಿ 20*50 ಮತ್ತು 20*40 ಎರಡು ಶೇಡ್‍ಗಳನ್ನು ನಿರ್ಮಿಸಿ ಇದಕ್ಕಾಗಿ ಭತ್ತದಹುಲ್ಲು, ಪ್ಲಾಸ್ಟಿಕ್ ಬ್ಯಾಗ್ ಹಾಗೂ ಅಣಬೆ ಬೀಜ ಮಾತ್ರ ಉಪಯೋಗಿಸಿದ್ದಾರೆ.
ಒಂದು ಬ್ಯಾಗ್ ಆಣಬೆ ತಯಾರಿಸಲು ಸುಮಾರು 30-40 ಖರ್ಚು ಬರಲಿದ್ದು ಒಂದೂವರೆಯಿಂದ ಎರಡು ಕೆ ಜಿ ಅಣಬೆ ಪಡೆಯಬಹುದು ಇದನ್ನು ಒಣಗಿಸಿಯೂ ಮಾರಬಹುದು. ಸದ್ಯದ ಮಾರುಕಟ್ಟೆಯಲ್ಲಿ ಅಣಬೆಗೆ 250 ರಿಂದ 300 ರೂ ಇದೆ ಒಣಗಿದ ಅಣಬೆಗೆ 1000 ರೂ ಇದೆ ಶಿವಮೊಗ್ಗದಿಂದ ಬೀಜಗಳನ್ನು ಅಮದು ಮಾಡಿಕೊಂಡು ಇವರು ಕಟ್ಟಿಗೆಗೆ ಹಗ್ಗವನ್ನು ಕಟ್ಟಿ ಅದಕ್ಕೆ ಹಗ್ಗದ ಸಹಾಯದಿಂದ ಪ್ಲಾಸ್ಟಿಕ್ ಬ್ಯಾಗ್‍ಗೆ ಹುಲ್ಲನ್ನು ತುಂಬಿ ಅದರಲ್ಲಿ ಬೀಜವನ್ನು ಹಾಕಿ ಬ್ಯಾಗ್ ಉಂಡೆಗಳನ್ನು ನೇತು ಹಾಕಿದ್ದಾರೆ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಬೀಜ ಹುಲ್ಲನ್ನು ಹಾಕಿ ಕಡಿಮೆ ತಾಪಮಾನದಲ್ಲಿ ಇರುವಂತೆ ಕಾಪಾಡಿ ಇದನ್ನು ಮಲ್ಟಿ ಲೇಯರ್ ಫಾರ್ಮಿಗ್ ಮತ್ತು ಹ್ಯಾಂಗಿಂಗ್ ಮೆಥಡ್ ನಲ್ಲಿ ಬೆಳೆಯುವುದು ಹೆಚ್ಚು ಲಾಭಕರ ಎನ್ನುವ ಇವರು ಸುತ್ತಲು ಹಸಿರು ಪರದೆ ಹಾಕುವುದರಿಂದ ಕಡಿಮೆ ತಾಪಾಮಾನ ಕಾಪಾಡಿಕೊಳ್ಳುತ್ತದೆ. ಬೆಳೆದ ಅಣಬೆಗಳನ್ನು ಇನ್ನೊಂದು ಕೊಠಡಿಗೆ ಸ್ಥಳಾಂತರಿಸಿ ಬೆಳೆಸಲಾಗುತ್ತದೆ. ಅಣಬೆ ಕೃಷಿಗೆ ಬೇಕಾಗುವ ಕತ್ತಲೆ ಕೋಣೆ ಬೆಳಕಿನ ಕೋಣೆ ನೀರಿನ ತೊಟ್ಟಿ ಒಣ ಹುಲ್ಲು ಕತ್ತರಿಸುವ ಯಂತ್ರಗಳಿಗಾಗಿ ಸುಮಾರು 4-5 ಲಕ್ಷ ವ್ಯಹಿಸಿದ್ದಾರೆ. ಮೊದಲ ಕಟಾವು 35 ದಿನಕ್ಕೆ ಬರುತ್ತದೆ. ಅಣಬೆಗಳನ್ನು ಹಾನಗಲ್ಲ ಪಟ್ಟಣ, ಮಾಲ್‍ಗಳಿಗೆ ಮತ್ತು ಹೋಟೆಲ್‍ಗಳಿಗೆ ಮಾರಾಟ ಮಾಡಲಾಗುತ್ತದೆ ಅನೇಕ ಜನರು ಇವರ ಮನೆಗೆ ಬಂದು ತೆಗೆದುಕೊಂಡು ಹೋಗುತ್ತಾg. ಕುಟುಂಬದವರು ಮತ್ತು ಆಳುಗಳ ಸಹಾಯದಿಂದ ಭತ್ತದ ಹುಲ್ಲು ತುಂಬಿದ ಸುಮಾರು 2000 ಬ್ಯಾಗ್ ನಲ್ಲಿ ಐಸ್ಟಾರ್ ಮಸ್ರೂಮ್ ಬೇಸಾಯ ಮಾಡಿದ್ದಾರೆ ಆರಂಭದಲ್ಲಿ ಕಡಿಮೆ ಇಳುವರಿ ಪಡೆದರು ಈಗ ಉತ್ತಮ ಇಳುವರಿ ಬರುತ್ತಿದೆ ಎನ್ನುತ್ತಾರೆ ಸಂತೋಷ.
ರಾಸಾಯನಿಕ ಬಳಸದೆ ಅಣಬೆ ಬೆಳೆಯಲು ಸಾಧ್ಯವಿದ್ದು, ಪ್ರಸ್ತುತ ದಿನಗಳಲ್ಲಿ ಬಹುಬೇಡಿಕೆ. ಸಸ್ಯಹಾರಿ. ವಿಟಮಿನ್ ಬಿ ಮತ್ತು ಡಿ ಕ್ಯಾಲ್ಸಿಯಮ್ ಪೊಟ್ಯಾಷಿಯಂನೊಂದಿಗೆ ಆರೋಗ್ಯ ಪೂರಕ ಪೋಷಕಾಂಶಗಳಿವೆ ಕಬ್ಬಿಣ ಹಾಗೂ ವಿಟಮಿನ್ ಡಿ ಜೀವಸತ್ವ ಹೊಂದಿದೆ ಅಣಬೆ ಮಕ್ಕಳು ಹಾಗೂ ಮಹಿಳೆಯರಿಗೆ ಪೌಷ್ಠಿಕ ಆಹಾರ ಗರ್ಭಿಣಿ ಹಾಗೂ ಬಾಣಂತಿಯರಿಗೆ ವೈದ್ಯರೇ ಶಿಫಾರಸ್ಸು ಹೆಚ್ಚಿದ್ದು, ಮಾಂಸಹಾರಕ್ಕೆ ಪರ್ಯಾಯ ಆಹಾರ ನಾರ್ಥಇಂಡಿಯನ್ ರೆಸ್ಟೋರೆಂಟ್‍ಗಳಲ್ಲಿ ಅಣಬೆ ಖಾದ್ಯ ಪ್ರಮುಖ ಮೆನು ಆಗಿದೆ. ಎನ್ನುತ್ತಾರೆ ಯುವ ರೈತ ಸಂತೋಷ
ಕಡಿಮೆ ಶ್ರಮದಲ್ಲಿ ಒಳ್ಳೆಯ ಳಾಭದ ಬೆಳೆ ಇದು ದೇಶ ಸೇವೆ ಎಂದರೆ ಅದು ಸೇನೆ ಹಾಗೂ ಕೃಷಿ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ ಅದರಲ್ಲೂ ನನಗೆ ಅಣಬೆ ಕೃಷಿ ಎಂದರೆ ಅಚ್ಚು ಮೆಚ್ಚು ಎನ್ನುತ್ತಾರೆ ಸಂತೋಷ .
- ಟಿ.ಶಿವಕುಮಾರ್ – (ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ) ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.
