ಹೃದ್ರೋಗ ತಜ್ಞರಾದ ಡಾ. ನಿಸರ್ಗಾ ಅವರ ಕ್ಯಾಮೆರಾ ಕಣ್ಣುಗಳಿಂದ ತಗೆದ ಸುಂದರ ಚಿತ್ರಗಳನ್ನು ತಪ್ಪದೆ ನೋಡಿ …
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ನಿಸರ್ಗಾ ಅವರ ವಾಲ್ ನಲ್ಲಿ ಪಕ್ಷಿಗಳ, ಪ್ರಕೃತಿ ಛಾಯಾಚಿತ್ರ ನೋಡಿ, ಅವರಿಗೆ ಇದು ಯಾರು ತಗೆದ ಫೋಟೋ ಎಂದು ನೇರವಾಗಿ ಕೇಳಿದೆ. ಅದಕ್ಕೆ ಅವರು ನಾನು, ಯಾಕೆ? ಅಂದಾಗ, ವಿಚಿತ್ರವಾಯಿತು. ಯಾವಾಗಲೂ ರೋಗಿಗಳು, ಎಮೆರ್ಜೆನ್ಸಿ, ಆಪರೇಷನ್, ಓಟಿ ಮಧ್ಯೆ ಇರುವ ವೈದ್ಯರಿಗೆ ಕ್ಯಾಮೆರಾ ಹಿಡಿಯಲು ಪುರಸೊತ್ತು ಎಲ್ಲಿಂದ ಸಿಗುತ್ತದೆ. ಅದರಲ್ಲಿಯೂ ಪಕ್ಷಿ ಫೋಟೋ ತಗೆಯಲು ಸಾಕಷ್ಟು ತಾಳ್ಮೆಬೇಕು. ಆ ತಾಳ್ಮೆ ಇವರಿಗೆ ಎಲ್ಲಿಂದ ಬರುತ್ತೆ? ..ಎನ್ನುವ ಕುತೂಹಲಕ್ಕೆ ಇದು ಹೇಗೆ ಸಾಧ್ಯ? ಎಂದು ಕೇಳಿದೆ. ಅದಕ್ಕೆ ಅವರು ಯಾಕೆ ಸಾಧ್ಯ ಇಲ್ಲ. ಮನಸ್ಸು ಇದ್ರೆ ಎಲ್ಲ ಸಾಧ್ಯ ಅಂತ ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ್ರು. ಎಷ್ಟಾದ್ರೂ ಡಾಕ್ಟರ್ ಅಲ್ವಾ..ಮಾತು ಕಮ್ಮಿ ಆದ್ರೂ…ಮಾತಿನಲ್ಲಿ ಅರ್ಥ ಇತ್ತು..ಏನೇ ಮಾಡಬೇಕು ಎಂದರೂ ಮನಸ್ಸು ಬೇಕು, ನಮಗಾಗಿ ಸಮಯ ನಾವೇ ಮಾಡಿಕೊಳ್ಳಬೇಕು…
ಅವರು ಕ್ಯಾಮೆರಾ ಕಣ್ಣಲ್ಲಿ ತೆಗೆದ ಸುಂದರ ಪಟಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ ನೋಡಿ ಆನಂದಿಸಿ…
- ಕ್ಯಾಮೆರಾ ಹಿಂದಿನ ಕಣ್ಣು : ಡಾ. ನಿಸರ್ಗಾ – ಹೃದ್ರೋಗ ತಜ್ಞರು