ಧುಮ್ಮುಕ್ಕಿ ಹರಿಯುವ ನೀರಿಗೆ ಒತ್ತಡವಿಲ್ಲದಿದ್ದರೆ ಹರಿದು ಹೇಗೆ ಸಾಗರವ ಸೇರುತ್ತಿತ್ತು? …ಸವಿತಾ ಮುದ್ಗಲ್ ಅವರ ಸುಂದರ ಕವಿತೆಯ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಬರಿದಾದ
ನೀಲಿಗಗನದಲಿ
ಮೋಡಗಳಿಲ್ಲದ್ದರೆ
ಎಲ್ಲಿಯ
ಗುಡುಗು
ಮಿಂಚಿಗೆ
ಅವಕಾಶವಿರುತ್ತಿತ್ತು?
ಮಡಿಲಲ್ಲಿ
ಕಂದನಿಲ್ಲದಿದ್ದರೆ
ನಿನಗೆಲ್ಲಿಯ
ಮಾತೃಹೃದಯವು
ಮಿಡಿಯುತಿತ್ತು?
ಧುಮ್ಮುಕ್ಕಿ
ಹರಿಯುವ
ನೀರಿಗೆ
ಒತ್ತಡವಿಲ್ಲದಿದ್ದರೆ
ಹರಿದು ಹೇಗೆ
ಸಾಗರವ
ಸೇರುತ್ತಿತ್ತು?
ನಿತ್ಯವು
ನೋವು
ನಲಿವುಗಳಿಲ್ಲದಿದ್ದರೆ
ಬದುಕಿನ
ಬುನಾದಿಗೆಲ್ಲಿ
ಗಟ್ಟಿತನವ
ತರುತಿತ್ತು?
ಸಮಾಜದಿ
ಹೆಣ್ಣುಮಗಳೋಬ್ಬಳು
ಇಲ್ಲದಿದ್ದರೆ
ವರದಕ್ಷಿಣೆ
ಎಂಬ
ಪಿಡುಗು
ಮರುಜನ್ಮ
ಹೇಗೆ
ಪಡೆಯುತಿತ್ತು?
- ಸವಿತಾ ಮುದ್ಗಲ್ – ಬಳ್ಳಾರಿ
