‘ದೂರ ಹೋಗುವ ಮುನ್ನ ಕೇಳು ನನ್ನೊಲವೆ’…ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ದೂರ ನಿಂತು ದೂರುತಿರುವ ನನ್ನೊಲವೆ ಕೇಳು.
ನಿನಗೊಂದು ಮನವಿಯನು ನಾ ತಂದಿರುವೆ.
ತಪ್ಪಿನ ಅರಿವಾಗಿ ಕ್ಷಮಿಸೆಂದು ಬೇಡುವೆನು
ದೂರ ಹೋಗುವ ಮುನ್ನ ಕೇಳು ನನ್ನೊಲವೆ….1
ಯಾರು ಮಾಡಿರದ ತಪ್ಪನ್ನು ನಾ ಮಾಡಿರಲಿಲ್ಲ.
ನಿನ್ನ ಕಳೆದುಕೊಳ್ಳುವೆ ಎಂಬ ಭಯವಿತ್ತು.
ನನ್ನ ಕೋಪದ ಮಾತುಗಳನ್ನಷ್ಟೇ ನೀ ಕೇಳಿದ್ದೆ
ಆ ಮಾತಿನ ಹಿಂದೆ ಬೆಟ್ಟದಷ್ಟು ಪ್ರೀತಿಯಿತ್ತು.
ದೂರ ನೀ ಹೊರಟಾಗ ಮರಳಿ ಬಾ ಎಂದು ಕರೆಯಲಿಲ್ಲ.
ನಾನೇನು ಮಾಡಿರುವೆ ಎಂಬ ಜಂಭವಿತ್ತು.
ನೀನಿರದ ಗಳಿಗೆಯಲಿ ಬದುಕೆ ಬೇಡವೆನಿಸಿದಾಗ
ನಿಜವಾದ ಪ್ರೀತಿಯ ಅರಿವಾಗಿತ್ತು…2
ಮಂಡಿ ಉರಿ ಕೇಳುವೆನು ಕ್ಷಮಿಸುವೆಯಾ ಮತ್ತೊಮ್ಮೆ.
ಮರಳಿ ಕೈ ಹಿಡಿದು ನಡೆಯುವೆ ಜೊತೆಗೊಮ್ಮೆ.
ನೋವು ನಲಿವಿನ ಬದುಕು ನಿನಗಾಗಿ ಮುಡಿಪಿಡುವೆ.
ಒಂದು ಅವಕಾಶವನು ಕೊಡು ನೀ ನನ್ನೊಲವೆ…3
- ವಿಕಾಸ್. ಫ್. ಮಡಿವಾಳರ