‘ದೇವಾಲಯಗಳ ಬೀಡು’ ಬಾರ್ಕೂರು

ನಮ್ಮ ಬಾರ್ಕೂರಿನಲ್ಲಿಯೇ 365 ದೇವಸ್ಥಾನಗಳಿದ್ದು, ಅದನ್ನು ‘ದೇವಾಲಯಗಳ ಬೀಡು’ ಎಂದೇ ಕರೆಯಲಾಗುತ್ತದೆ. ಶ್ರೀ ಕ್ಷೇತ್ರ ಕುಲಮಹಾಸ್ತ್ರೀ ಬೆಣ್ಣೆಕುದ್ರು ದೇವಸ್ಥಾನ, ಬಾರ್ಕೂರು ಇದು ಅಲ್ಲಿನ ಒಂದು ದೇವಸ್ಥಾನದ ಪರಿಚಯ. ಶಕುಂತಲಾ ಸವಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ… 

ಬನ್ನಿ ಶ್ರೀ ಕ್ಷೇತ್ರ ಬೆಣ್ಣೆಕುದ್ರಿಗೆ

ಇತಿಹಾಸ ಪ್ರಸಿದ್ಧ ಬಾರ್ಕೂರಿನ ಕಲ್ಲು ಚಪ್ಪರದ ಪಶ್ಚಿಮ ದಿಕ್ಕಿಗೆ ಸುಮಾರು ಒಂದೂವರೆ ಕಿಲೋ ಮೀಟರು ದೂರದಲ್ಲಿ ಸುತ್ತಲೂ ಜಲಾವೃತಗೊಂಡಿರುವ ಪುಟ್ಟ ದ್ವೀಪವೇ ಬೆಣ್ಣೆಕುದ್ರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಮೊಗವೀರ ಕುಲಬಾಂದವರು ನಂಬಿ ಆರಾಧಿಸಿಕೊಂಡು ಬಂದಿರುವ ಮೂಲ ಸಂಸ್ಥಾನವೇ ಈ ಪುಟ್ಟ ದ್ವೀಪದಲ್ಲಿ ನೆಲೆನಿಂತ ಶ್ರೀಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನ. ಸರಿ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವು ಒಂಭತ್ತು ತಲೆಮಾರಿನ ಶ್ರೇಷ್ಟವಾದ ಭವ್ಯ ಗುರು ಪರಂಪರೆಯ ನೆಲೆಯಾಗಿತ್ತು.

ಹತ್ತು ಹಲವು ಮಂದಿ ಭಕ್ತರು ಒಟ್ಟಿಗೆ ಸೇರಿ ಸಾಮೂಹಿಕ ನೆಲೆಯಲ್ಲಿ ಸಮುದಾಯದ ಒಳಿತಿಗೆ ಮಾಡುವ ಸಾಮೂಹಿಕ ಪ್ರಾರ್ಥನೆಗೆ ಈ ಕ್ಷೇತ್ರದಲ್ಲಿ ವಿಶೇಷ ಪ್ರಾಶಸ್ತ್ಯವಿದೆ.

ಸ್ಥಳ ಪುರಾಣ : ವಿಜಯನಗರದ ಅರಸರ ಕಾಲಕ್ಕಿಂತಲೂ ಪೂರ್ವದಲ್ಲಿ ಬೆಣ್ಣೆಕುದ್ರು, ಬಾರ್ಕೂರು ಸಂಸ್ಥಾನದ ಸೇವಾ ಠಾಣೆಯಗಿತ್ತು. ಅಂತೆಯೇ ಸೇನಾಪತಿಗಳು ಆರಾಧಿಸಿಕೊಂಡು ಬರುತ್ತಿದ್ದ ವೀರಭದ್ರ ದೇವಸ್ಥಾನವೂ ಮೂಲದಲ್ಲಿತ್ತು ಎನ್ನುವ ಮಾಹಿತಿ ಸ್ಥಳ ಪುರಾಣದಿಂದ  ತಿಳಿದುಬರುತ್ತದೆ.


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading