‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ

ಲೇಖಕಿ ಶೈಲಜಾ ಸುರೇಶ್ ಅವರು ೨೦ ಕ್ಕಿಂತ ಅಧಿಕ ಕೃತಿಗಳ ಮೂಲಕ ಸಾಹಿತ್ಯಲೋಕದಲ್ಲಿ ತಮ್ಮನ್ನು ಕೊಂಡಿದ್ದು, ಅವರ ‘ಬದುಕ ಭಿತ್ತಿಯ ಚಿತ್ರಗಳು’ ಕೃತಿಯ ಕುರಿತು  ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಚ್ಚ್ಚಿಕೊಂಡಿದ್ದಾರೆ, ತಪ್ಪದೆ ಓದಿ…

ಕೃತಿ  : ಬದುಕ ಭಿತ್ತಿಯ ಚಿತ್ರಗಳು
ಲೇಖಕರು: ಶೈಲಜಾ ಸುರೇಶ್
ಗೀತಾಂಜಲಿ ಪಬ್ಲಿಕೇಷನ್ಸ ಬೆಂಗಳೂರು
ಮುದ್ರಣದ ವರ್ಷ: ೨೦೧೯
ಪುಟಗಳು:೧೪೪
ಬೆಲೆ: ರೂ. ೧೫೦

ಲೇಖಿಕಾ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಮತ್ತು ಸಂಚಾಲಕಿಯೂ ಆಗಿದ್ದಾರೆ. ಹವ್ಯಾಸಿ ಪತ್ರಕರ್ತೆ ಮತ್ತು ದೂರದರ್ಶನ/ ಆಕಾಶವಾಣಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

ಇದು ಅವರ ೧೪ ಕಥೆಗಳನ್ನೊಳಗೊಂಡ ಕಥಾ ಸಂಕಲನ. ಕೆಲವು ಕಥೆಗಳ ಪರಿಚಯ….



*ಮೌಲ್ಯ

ಮನುಷ್ಯನ ಶರೀರದಲ್ಲಿ ಜೀವ ಇದ್ದರೆ ಮಾತ್ರ ಒಂದು ಮೌಲ್ಯ. ಉಸಿರು ನಿಂತಕ್ಷಣ ಅದು ಹೆಣ ಅನ್ನಿಸಿಕೊಳ್ಳುತ್ತದೆ. ಒಂದು ದಿನವೂ ಅನಾರೋಗ್ಯವೆಂದು ಮಲಗದ ಕುಸುಮಳ ಗಂಡನೀಗ ಆಪರೇಷನ್ ಆಗಿ ಆಸ್ಪತ್ರೆಯಲ್ಲಿ ಮಲಗಿದ್ದ.!

ಸಣ್ಣ ಬಿಸಿನೆಸ್ ಮಾಡಿ ಕೊಂಡ ಮದ್ಯಮ ವರ್ಗದ ಜಗನ್ನಾಥರದ್ದು ಮಿತವ್ಯಯದ ಸಂಸಾರ. ಅದೇ ತಾನೇ ಇಂಜನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದ ಮಗ ಆದಿತ್ಯ. ಹೇಗೋ ಹಣ ಹೊಂದಿಸಿ ಕೊಂಡು ಬಿಲ್ ಕಟ್ಟಿ ಡಿಸ್ಚಾರ್ಜ್ ಮಾಡಿಸಿ ಮನೆಗೆ ಹೋಗಬೇಕೆಂದು ಕೊಂಡಾಗ ಹೊಸ ಸಮಸ್ಯೆ ಎದುರಾಗಿತ್ತು! .ಸರ್ಕಾರದ ಆದೇಶದಂತೆ ಸಾವಿರ ರೂಪಾಯಿಗಳ ನೋಟು ಬ್ಯಾನ್ ಆಗಿತ್ತು.
ಆಗ ಆದಿತ್ಯ ಮಾಡಿದ್ದೇನು?…

*ಬದುಕ ಭಿತ್ತಿಯ ಚಿತ್ರಗಳು

ಮೀರಾ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್. ತನ್ನ ದುಡಿಮೆಯ ಹಣವನ್ನು ಗಂಡನೇ ಖರ್ಚು ಮಾಡುತ್ತಾನೆ. ತನಗೆ ಸ್ವಾತಂತ್ರ್ಯವಿಲ್ಲ. ಮುಂದೇನು?…ಎಂದು ಲಾಯರ್ ಊರ್ಮಿಳಾ ಕುಲಕರ್ಣಿಯವರ ಭೇಟಿಗೆ ಕಚೇರಿಗೆ ಬಂದಿದ್ದಳು.

ಅಲ್ಲಿ ವನಿತಾ ಎಂಬಾಕೆಯ ಪರಿಚಯವಾಗುತ್ತದೆ. ಆಕೆ ತಾನೂ ೨೦ ವರ್ಷಗಳ ಹಿಂದೆ ತನ್ನ ಕೆರಿಯರ್ ಮುಖ್ಯ ಎಂದು ಗಂಡ ಮತ್ತು ಎರಡು ವರ್ಷದ ಪುಟ್ಟ ಮಗಳನ್ನು ಬಿಟ್ಟು ಡೈವೋರ್ಸ್ ಪೇಪರ್ ಗೆ ಸೈನ್ ಹಾಕಿ ಅಮೇರಿಕಾಕ್ಕೆ ಹಾರಿದ್ದು, ಅಲ್ಲಿ ಬೇರೊಬ್ಬನನ್ನು ಮದುವೆಯಾದರೂ, ಮಕ್ಕಳಾಗದೇ ಈಗ ಪುನಃ ಭಾರತಕ್ಕೆ ಬಂದಿದ್ದು, ಮೊದಲ ಗಂಡನಿಂದ ತನ್ನ ಮಗಳನ್ನು ತನಗೆ ಕೊಡಿಸ ಬೇಕೆಂದು ಈಗ ಕೋರ್ಟ್ ಕೇಸ್ ಹಾಕಿದ್ದನ್ನು ತಿಳಿಸಿದ್ದಳು.

ಹಣದಿಂದ ಏನು ಬೇಕಾದರೂ ಕೊಳ್ಳಬಹುದೆಂದು ಕೊಂಡಿದ್ದ ವನಿತಾಳಿಗೆ ಅವಳ ಹೆತ್ತ ಮಗಳೆ ತಾಯಿಯ ಬಳಿಗೆ ಬರಲು ನಿರಾಕರಿಸಿದಾಗ, ಅನಿಸಿದ್ದೇನು?… ಮೀರಾ ಲಾಯರನ್ನು ಬೇಟಿ ಮಾಡದೇ ಹಿಂದಿರುಗಿ ಹೋಗಿದ್ದೇಕೆ? …

*ತೀರ್ಪು ಎಂಬ ಕಥೆ ಇದರ ಮುಂದುವರೆದ ಭಾಗದಂತೆ ಇದ್ದು, ವನಿತಾ ಅಲ್ಲಿ ಹೇಳಿದ ಮಾತನ್ನು ಇಲ್ಲಿ ಅವಳ ಮಗಳು ಪ್ರಕೃತಿ ಅಮ್ಮನಿಲ್ಲದ ತನ್ನನ್ನು ಅಪ್ಪ ಕಾಪಾಡಿದ ರೀತಿಯನ್ನು ಹೇಳುವಂತಿದೆ.

* ವಿಪರ್ಯಾಸ

ಮದುವೆಯಾದಾಗಿನಿಂದ ಕುಡುಕ ಗಂಡನ ಹಿಂಸೆಯಿಂದ ಎಲ್ಲರ ತಿರಸ್ಕಾರಕ್ಕೊಳಗಾಗಿ ನೊಂದ ತನ್ನ ತಾಯಿಯನ್ನು ಬೇರೆ ಮನೆ ಮಾಡಿ ತನ್ನೊಂದಿಗೆ ಕರೆದೊಯ್ಯಲು ನಿಶ್ಚಯಿಸಿದ್ದ ಮಗ. ಆಗಲೇ ಭಾವೀ ಸೊಸೆ ಪೋನ್ ಮಾಡಿದ್ದಳು. ‘ನೀವು ಈ ಮನೆಗೆ ಬಂದರೆ ಮಾವನೂ ಇಲ್ಲಿ ಬಂದು ಗಲಾಟೆ ಮಾಡುತ್ತಾರೆ. ನಾನು ಗೌರವದಿಂದ ಬಾಳಲು ಅವಕಾಶ ಮಾಡಿಕೊಡಿ…ಪ್ಲೀಸ್…ನೀವಿಲ್ಲಿ ಬರಬೇಡಿ… ಎಂದು.
ತನ್ನದಲ್ಲದ ಮತ್ತೊಂದು ನಿರ್ಧಾರಕ್ಕೆ ಆಕೆ ಒಪ್ಪಿದಳೆ?…

*ಶಿಕ್ಷೆ

ಮುಗ್ಧ ಹುಡುಗಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾಳೆ. ಇದಕ್ಕೆ ಕಾರಣಕರ್ತ ರಾದವರು ಸಮಾಜದ ಪ್ರಭಾವಶಾಲಿ ವ್ಯಕ್ತಿಗಳು. ಅಂತಹ ಆರೋಪಿಗಳನ್ನು ಪತ್ತೆ ಹಚ್ಚಲು ವೈದ್ಯರು ತಮ್ಮ ಪೊಲೀಸ್ ಮಿತ್ರರೊಂದಿಗೆ ಸೇರಿ ಒಂದು ಸುಳ್ಳು ತಂತ್ರವನ್ನು ಉಪಯೋಗಿದರು.ಅದು ಸತ್ಯವನ್ನು ಪತ್ತೆ ಹಚ್ಚಿತೇ?…

ಇಲ್ಲಿನ ಕೆಲವು ಕಥೆಗಳು ಸಮಸ್ಯೆಯನ್ನು ತಾನೇ ಪರಿಹರಿಸಿ ಕೊಂಡು ಸರಾಗವಾಗಿ ಸಾಗುತ್ತದೆ. ದುಃಖದ ಅಂತ್ಯವುಳ್ಳ ಕಥೆಗಳು ಓದುಗನ ಮನದಲ್ಲೂ ತಲ್ಲಣವನ್ನುಂಟು ಮಾಡುತ್ತವೆ. ಸ್ತ್ರೀ ಪರ ನಿಲುವಿನ ಹಾಗೂ ಸೊಗಸಾಗಿ ಹೆಣೆದ ಇವರ ಸಣ್ಣ ಕಥೆಗಳು ಸುಲಲಿತವಾಗಿ ಓದಿಸಿ ಕೊಳ್ಳುವ ಗುಣ ಹೊಂದಿದೆ.ಇಲ್ಲಿರುವ ಇನ್ನಷ್ಟು ಕತೆಗಳನ್ನು ನೀವೂ ಓದಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  •  ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW