ಬದುಕಿಗೊಂದು ಸೆಲೆ (ಭಾಗ-೩೭)

ಮೌನವಾಗಿಯೇ ಉಳಿದು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವಲ್ಲಿ ಆಪಲ್ ಜನಕ ಸ್ಟೀವ್ ಜಾಬ್ಸ್    ಅದ್ವಿತೀಯರಾಗಿದ್ದರು. ವೀಣಾ ಹೇಮಂತ್ ಗೌಡ ಪಾಟೀಲ್ ಅಂಕಣದಲ್ಲಿ ‘ಮೌನ ಸಾಧನೆ’ , ತಪ್ಪದೆ ಮುಂದೆ ಓದಿ… 

1997ರ ಅವಧಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ದಿವಾಳಿಯಾಗುತ್ತೇವೆ ಎಂಬ ಭಯ ಇದ್ದಾಗ ಸ್ಟಾಕ್ ಮಾರ್ಕೆಟ್ ನಲ್ಲಿ ಆಪಲ್ ನ ಷೇರುಗಳು ಅತ್ಯಂತ ವೇಗದಲ್ಲಿ ಇಳಿಮುಖ ಪಯಣವನ್ನು ಆರಂಭಿಸಿತ್ತು. ಉದ್ಯೋಗಿಗಳು ಕೆಲಸವನ್ನು ಬಿಡತೊಡಗಿದ್ದರು. ಆಪಲ್ ನೆಲಕಚ್ಚುತ್ತದೆ ಎಂಬುದು ನಿಶ್ಚಿತವಾಗಿತ್ತು. ಆ ಹೊತ್ತಿನಲ್ಲಿ ಆಪಲ್ ನ ಕಾರ್ಯನಿರ್ವಾಹಕ ಅದೇ ಸದಸ್ಯರ ಬೋರ್ಡ್ ಗೆ ಸ್ಟೀವ್ ಜಾಬ್ಸ್ ರನ್ನು ಮತ್ತೆ ಮರಳಿ ಕರೆತರಲಾಗಿತ್ತು.

ಹಾಗೆ ಮರಳಿದ ಸ್ಟೀವ್ ಜಾಬ್ಸ್ ಮೊದಲ ಕಾರ್ಯವೇ ಎಲ್ಲರನ್ನೂ ನಡುಗಿಸಿತ್ತು. ಉತ್ಪನ್ನದ ತಂತ್ರಗಾರಿಕೆಯ ಕುರಿತ ಮೀಟಿಂಗ್ ನಲ್ಲಿ ಆತ ತನ್ನ ಎದುರಿಗಿದ್ದ ಅತಿ ಉದ್ದದ ಟೇಬಲ್ ನ ಮೇಲೆ ಸಾಲಾಗಿ ಉಪಯೋಗಿಸಲಾಗಿದ್ದ ಕಂಪ್ಯೂಟರ್ ಗಳು, ಪ್ರಿಂಟರ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ತೀಕ್ಷ್ಣವಾಗಿ ನೋಡಿದ. ಬಹಳ ಹೊತ್ತಿನವರೆಗೆ ಹಾಗೆ ಆ ವಸ್ತುಗಳನ್ನು ನೋಡುತ್ತಾ ಸುಮ್ಮನೆ ಕುಳಿತ ಆತ ನಂತರ ತುಸು ಕೆಮ್ಮಿ ತನ್ನ ದನಿಯನ್ನು ಸರಿಪಡಿಸಿಕೊಂಡ.

ಆತನ ಕೆಮ್ಮುವಿಕೆಯನ್ನು ಕೇಳಿದ ಉಳಿದೆಲ್ಲ ಸದಸ್ಯರು ತಮ್ಮ ತಮ್ಮ ಸೀಟುಗಳಲ್ಲಿ ಸರಿಯಾಗಿ ಕುಳಿತುಕೊಂಡರು. ಅಂತಿಮವಾಗಿ ಸ್ಟೀವ್ ಅತ್ಯಂತ ಶಾಂತವಾದ ಸ್ವರದಲ್ಲಿ ನಾವು ಒಟ್ಟಾಗಿ ನಾಲ್ಕು ಉತ್ಪನ್ನಗಳನ್ನು ತಯಾರಿಸುತಿದ್ದೇವೆ. ಆ ನಾಲ್ಕು ಉತ್ಪನ್ನಗಳು ಅತ್ಯಂತ ಉತ್ಕೃಷ್ಟವಾಗಿವೆ ಎಂಬುದು ನಿಜ ಎಲ್ಲವೂ ಸರಿಯೇ ಆದರೆ ಅವೆಲ್ಲವನ್ನು ಬಿಟ್ಟುಬಿಡಿ ಎಂದು ನುಡಿದ. ಸಭೆಯಲ್ಲಿದ್ದ ಇಂಜಿನಿಯರಗಳು ಭಯದಿಂದ ನಡುಗಿದರು.ಮಾರುಕಟ್ಟೆ ಹೂಡಿಕೆದಾರರು ತೀವ್ರವಾಗಿ ವಿರೋಧಿಸಿದರು. ಇಡೀ ನಾಲ್ಕು ಉತ್ಪನ್ನಗಳ ಜವಾಬ್ದಾರಿಯನ್ನು ಹೊತ್ತು ನಾಲ್ಕು ಡಿಪಾರ್ಟ್ಮೆಂಟ್ ಗಳ ಸದಸ್ಯರು ತಮ್ಮ ಎಲ್ಲಾ ಉತ್ಪನ್ನಗಳ ಉಳಿಯುವಿಕೆಗಾಗಿ ಆತನನ್ನು ಬೇಡಿಕೊಂಡರು. ಊಹೂಂ ಜಾಬ್ಸ್ ಇದಾವುದನ್ನು ಒಪ್ಪಲಿಲ್ಲ.
ತನ್ನ ಎದುರಿಗಿನ ಟೇಬಲ್ ಮೇಲಿರುವ ಎಲ್ಲ ಒಪ್ಪಂದಗಳನ್ನು ಆತ ಒಂದೊಂದಾಗಿ ತೆರವುಗೊಳಿಸಲು ಆದೇಶ ನೀಡಿದ. ಅಂತಿಮವಾಗಿ ಟೇಬಲ್ ನ ಮೇಲಿದ್ದ ಆಪಲ್ ನ ಪ್ರತಿಯೊಂದು ಉತ್ಪನ್ನಗಳು ಟೇಬಲ್ ಮೇಲಿಂದ ತಳ್ಳಲ್ಪಟ್ಟವು ಅದರ ಜೊತೆಜೊತೆಗೆ ಅದುವರಿಗೆ ಅವರು ಅನುಭವಿಸಿದ ಎಲ್ಲಾ ತೊಡಕುಗಳು ಮತ್ತು ವ್ಯಾಕುಲತೆಗಳು ಕೂಡ ಹೊರ ದಬ್ಬಲ್ಪಟ್ಟವು.

ಒಂದು ಬಾರಿ ಇಡೀ ಟೇಬಲ್ ತೆರವುಗೊಂಡು ಖಾಲಿ ಟೇಬಲ್ ಅನ್ನು ತೋರಿಸಿ ಆತ ಹೀಗೆ ನಾವು ಗೆದ್ದಿದ್ದೆವು ಮತ್ತು ಮುಂದೆ ಕೂಡ ಹೀಗೆಯೇ ಗೆಲ್ಲುತ್ತೇವೆ ಎಂದು ಹೇಳಿದ.

ಮುಂದೆ ಅದೇ ಖಾಲಿ ಟೇಬಲ್ ನ ಮೇಲೆ ಐಮ್ಯಾಕ್, ಐ ಪ್ಯಾಡ್, ಐಫೋನ್ ಮತ್ತು ಐ ಪಾಡ್ ಗಳು ಸೃಷ್ಟಿಯಾಗಿ ಬಂದು ಕುಳಿತವು. ಗ್ರಾಹಕರ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಲಾಭದಾಯಕವಾದ ಉತ್ಪನ್ನವಾಗಿ ಮಾರುಕಟ್ಟೆಯನ್ನು ಆಕ್ರಮಿಸಿದ ಈ ಉತ್ಪನ್ನಗಳು ಇತಿಹಾಸವನ್ನು ಸೃಷ್ಟಿಸಿದವು ಆಪಲ್ ಕಂಪನಿಯು ಕೂಡಿಸುವುದರಿಂದ ಬೆಳೆಯಲಿಲ್ಲ ಬದಲಾಗಿ ಕಳೆಯುವುದರಿಂದ ಹೆಚ್ಚು ಬೆಳವಣಿಗೆಯನ್ನು ಕಂಡಿತು.

ಆಪಲ್ ಕಂಪನಿಯ ಬೆಳವಣಿಗೆಯಲ್ಲಿ ನಮಗೆ ಮಾರುಕಟ್ಟೆ ತಂತ್ರಜ್ಞಾನದ ಕುರಿತ ಪಾಠ ದೊರೆಯುತ್ತದೆ. ವಿಪರೀತ ಸಂಕೀರ್ಣತೆಗಳು ಮಾರಾಟವನ್ನು ಕಡಿಮೆಗೊಳಿಸುತ್ತವೆ. ಸ್ಪಷ್ಟತೆ ಪ್ರಭುತ್ವವನ್ನು ಸಾಧಿಸುತ್ತದೆ. ಬಹುತೇಕ ಜನರು ಮಾರುಕಟ್ಟೆಯಲ್ಲಿ ಕಡೆಗಣಿಸುವ ಕೆಲ ವಿಷಯಗಳನ್ನು ಸ್ಟೀವ್ ಜಾಬ್ಸ್ ಗುರುತಿಸಿದ್ದರು. ಗ್ರಾಹಕರು ಅತ್ಯುತ್ತಮವಾದ ಉತ್ಪನ್ನಗಳನ್ನು ಖರೀದಿಸುವುದಕ್ಕಿಂತ ಸ್ಪಷ್ಟವಾಗಿ ಬಳಸಲು ಅನುಕೂಲವಾಗುವ ಉತ್ಪನ್ನಗಳನ್ನು ಖರೀದಿಸುತ್ತಾರೆ
ಸಾಮಾನ್ಯವಾಗಿ ನಾವು ಡ್ರೈವ ಇನ್ ಗಳಲ್ಲಿ ನೂರೆಂಟು ಆಯ್ಕೆಗಳು ಇದ್ದರೂ ಕೂಡ ಬರ್ಗರ್ ಖರೀದಿಸಲು ಕಾರಣ ಇದೆ.

ಹೋಟೆಲ್ಗಳಲ್ಲಿ ಎಲ್ಲಕ್ಕಿಂತ ಮುಂಚೆ ಆರ್ಡರ್ ಮಾಡೋದು ಇಡ್ಲಿ, ವಡೆ ಇಲ್ಲವೇ ದೋಸೆಗೆ ಮನೆಗೆ ಅತಿಥಿಗಳು ಬಂದಾಗ ಮೊದಲು ಮಾಡುವುದು ಅವಲಕ್ಕಿ ಇಲ್ಲವೆ ಉಪ್ಪಿಟ್ಟನ್ನು ಜೋರು ಗದ್ದಲದ ಸದಾ ಕರ್ಕಶವಾಗಿ ಕೇಳುವ ಚಾನಲ್ ಗಳಿಂದ ಸ್ವಚ್ಛವಾಗಿ ಸ್ಫುಟವಾಗಿ ಕೇಳುವ ರೇಡಿಯೋ ಚಾನೆಲ್ ಗಳನ್ನು ಆಯ್ದುಕೊಳ್ಳುವುದು ಕೂಡ ಇದೇ ಕಾರಣಕ್ಕೆ. ಆಯ್ಕೆಗಳನ್ನು ಕಡಿತಗೊಳಿಸಿದಾಗ ಮಾರುಕಟ್ಟೆಯಲ್ಲಿ ಉತ್ಪನ್ನದ ಬೆಲೆ ಹೆಚ್ಚಾಗುತ್ತದೆ. ಆಯ್ಕೆಗಳನ್ನು ನೀವು ಸರಳಗೊಳಿಸಿದಾಗ ಜನರು ವೇಗವಾಗಿ ಪ್ರತಿ ಸ್ಪಂದಿಸುತ್ತಾರೆ. ಖಾಲಿ ಟೇಬಲ್ ತತ್ವ ನಮಗೆ ಕಲಿಸುವುದು ನಮಗೆ ಹೆಚ್ಚು ಉತ್ಪನ್ನಗಳ ಅವಶ್ಯಕತೆ ಇಲ್ಲ ಬದಲಾಗಿ ಉದ್ದೇಶ ಗಳ ಅವಶ್ಯಕತೆ ಇದೆ.

ಬೆಳವಣಿಗೆ ಎಂದರೆ ಎಲ್ಲವನ್ನು ಕೊಡುವುದಲ್ಲ ಯಾವುದನ್ನು ಎಷ್ಟು ಕೊಡಬೇಕು ಎಂಬುದನ್ನು ಮರೆಯದೆ ಸರಿಯಾಗಿ ನೀಡುವುದು. ನೀವು ಕೊಡುವ ಉತ್ಪನ್ನದಲ್ಲಿ ಸ್ಪಷ್ಟತೆ ಇದ್ದರೆ ಜನರಲ್ಲಿ ಉತ್ಪನ್ನದ ಕುರಿತು ವಿಶ್ವಾಸ ಮೂಡುತ್ತದೆ. ಆಗ ವಸ್ತುಗಳನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಏನಂತೀರಾ ಸ್ನೇಹಿತರೇ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW