ಗೌರವಯುತ ಜೀವನಕ್ಕೆ ಬೇಕು”ಮಾನವ ಹಕ್ಕುಗಳು”

ಮಾನವ ಹಕ್ಕುಗಳ ರಕ್ಷಣೆಯು ಕೇವಲ ಒಂದು ಕಾನೂನು ಪ್ರಕ್ರಿಯೆಯಲ್ಲ ಇದು ಮಾನವೀಯತೆಯ ಮೌಲ್ಯಗಳನ್ನು ಮರೆಯದಂತೆ ಮಾಡುವ ಸಮಾಜದ ಅತ್ಯಗತ್ಯ ಹೊಣೆಗಾರಿಕೆಯಾಗಿದೆ. ಡಿಸೆಂಬರ್ 10 ರಂದು ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖಿಸಲಾಯಿತು. ಇಂದು ವಿಶ್ವ ಮಾನವ ಹಕ್ಕುಗಳ ದಿನ ಈ ದಿನದ ವಿಶೇಷತೆಯನ್ನು ಲೇಖಕಿ ಗೀತಾಂಜಲಿ ಎನ್ ಎಮ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳೂ ಗೌರವಪೂರ್ಣವಾಗಿ, ಸ್ವತಂತ್ರವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಹಕ್ಕುಗಳನ್ನು
ಹೊಂದಿರುತ್ತಾರೆ, ಅದು ಪ್ರತೀ ಮಾನವನ ಜನ್ಮ ಸಿದ್ದ ಹಕ್ಕು ಮತ್ತು ಹುಟ್ಟಿದ ಪ್ರತೀ ಮನುಷ್ಯ ಹೊಂದಿರುವ ಮೂಲಭೂತ ಸ್ವಾತಂತ್ರ್ಯಗಳು ಇವನ್ನೇ ಮಾನವ ಹಕ್ಕುಗಳು ಎನ್ನುವುದು. ಈ ಹಕ್ಕುಗಳು ಯಾವುದೇ ಸರ್ಕಾರ, ಸಮಾಜ ಅಥವಾ ವ್ಯಕ್ತಿಯಿಂದ ನೀಡಲ್ಪಡುವುದಲ್ಲ ಆದರೆ ಇವುಗಳನ್ನು ಕಾನೂನುಗಳು ಸಂವಿಧಾನ ಮತ್ತು ಮಾನವ ಹಕ್ಕುಗಳ ಘೋಷಣೆಗಳು ರಕ್ಷಿಸುತ್ತವೆ. ಇವು ಮನುಷ್ಯನು ಜನ್ಮದಿಂದಲೇ ಹೊಂದಿರುವ ಸ್ವಾಭಾವಿಕವಾದ ಜನ್ಮ ಸಿದ್ದ ಹಕ್ಕುಗಳಾದ್ದರಿಂದ ಒಂದು ವ್ಯಕ್ತಿ ಹುಟ್ಟಿದ ಕ್ಷಣದಿಂದಲೇ ಹೊಂದಿರುವ ಯಾರೂ ಕಸಿದುಕೊಳ್ಳಲಾರದ ಅಥವಾ ಯಾರೂ ನೀಡಬೇಕಾಗಿಲ್ಲದ ಮೂಲಭೂತ ಹಕ್ಕುಗಳಾದ್ದರಿಂದ ಪ್ರತಿಯೊಬ್ಬ ವ್ಯಕ್ತಿಗಳು ಗೌರವಯುತವಾಗಿ ಜೀವಿಸುವುದನ್ನು ಪ್ರತಿಬಿಂಬಿಸುತ್ತದೆ ಹಾಗಾದರೆ ಈ ಮಾನವ ಹಕ್ಕುಗಳು ಯಾವುವು ಎಂಬ ಪ್ರಶ್ನೆ ಸಹಜ.

ಸ್ವಾತಂತ್ರ್ಯದ ಹಕ್ಕು, ಗೌರವದ ಹಕ್ಕು ಸಮಾನತೆ ವಿಚಾರ ಸ್ವಾತಂತ್ರ್ಯ ಹಕ್ಕು, ಜೀವಿಸುವ ಹಕ್ಕು ಇತ್ಯಾದಿಗಳು ಈ ಮಾನವ ಹಕ್ಕುಗಳು. ಇವು ಜಾತಿ, ಧರ್ಮ, ಭಾಷೆ ಲಿಂಗ, ಬಣ್ಣ, ದೇಶ ಮತ್ತು ಸಾಮಾಜಿಕ ಸ್ಥಿತಿ ಇವೆಲ್ಲವುಗಳಿಂದ ಮುಕ್ತವಾಗಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ಮಾನವ ಸಹಜವಾಗಿ ಹೊಂದಿರುವ ಅಗತ್ಯವಾದ ಹಕ್ಕುಗಳಿವು, ಮಾನವ ಹಕ್ಕುಗಳ ರಕ್ಷಣೆಯು ಕೇವಲ ಒಂದು ಕಾನೂನು ಪ್ರಕ್ರಿಯೆಯಲ್ಲ ಇದು ಮಾನವೀಯತೆಯ ಮೌಲ್ಯಗಳನ್ನು ಮರೆಯದಂತೆ ಮಾಡುವ ಸಮಾಜದ ಅತ್ಯಗತ್ಯ ಹೊಣೆಗಾರಿಕೆಯಾಗಿದೆ.

ಫೋಟೋ ಕೃಪೆ : ಅಂತರ್ಜಾಲ

ಜೀವನ ಮತ್ತು ಸ್ವಾತಂತ್ರ್ಯ ಹಕ್ಕು ಎಂದರೆ

ಪ್ರತಿಯೊಬ್ಬ ಮನುಷ್ಯನಿಗೂ ಸುರಕ್ಷಿತ ಜೀವನ ನಡೆಸುವ ಹಕ್ಕಿದೆ. ಯಾರು ಯಾರಿಂದಲೂ ಅನ್ಯಾಯವಾಗಿ ಸ್ವಾತಂತ್ರ್ಯ ಕಸಿದುಕೊಳ್ಳಲು ಆಗುವುದಿಲ್ಲ. ಇನ್ನು ಸಮಾನತೆ ಹಕ್ಕು ಎಂದರೆ ಧರ್ಮ, ಜಾತಿ, ಲಿಂಗ, ಭಾಷೆ, ದೇಶ–ಯಾವ ಭೇದಗಳೂ ಮಾನವ ಹಕ್ಕುಗಳನ್ನು ಕಡಿಮೆ ಮಾಡುವುದಿಲ್ಲ, ಎಲ್ಲರೂ ಕಾನೂನಿನ ಮುಂದೆ ಸಮಾನರು. ಅಭಿವ್ಯಕ್ತಿಯ ಸ್ವಾತಂತ್ರ್ಯ ಎಂದರೆ ವ್ಯಕ್ತಿ ತನ್ನ ಆಲೋಚನೆ, ಅಭಿಪ್ರಾಯ, ನಂಬಿಕೆಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕು. ಮತ್ತು ಶಿಕ್ಷಣ ಹಕ್ಕು ಎಂದರೆ ವಿದ್ಯೆ ಪಡೆಯುವುದು, ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಏಕೆಂದರೆ ಜ್ಞಾನವು ಮಾನವ ಅಭಿವೃದ್ಧಿಗೆ ಇರುವ ಮೂಲಭೂತ ಶಕ್ತಿ. ಗೌರವಪೂರ್ಣ ಜೀವನ ನಡೆಸುವ ಹಕ್ಕು ಎಂದರೆ ಶೋಷಣೆ, ಹಿಂಸಾಚಾರ, ಶೋಷಣೆ, ದಾಸ್ಯ, ಮತ್ತು ಮಾನವೀಯತೆಯನ್ನು ಅವಮಾನಿಸುವ ಯಾವುದೇ ಕೃತ್ಯಗಳಿಂದ ಮುಕ್ತವಾಗಿ ಬದುಕುವುದು.

ಮಾನವ ಹಕ್ಕುಗಳ ಅಗತ್ಯತೆ ಕೇವಲ ಕಾನೂನುಪರ ಹಕ್ಕುಗಳ ಸಮೂಹವಲ್ಲ ಇವು ಸಮಾನತೆ,ನ್ಯಾಯ,ಮತ್ತು ಮಾನವೀಯತೆ ಯನ್ನು ಬಲಪಡಿಸುವ ಸಿದ್ಧಾಂತಗಳು. ಇವು ಮಾನವನ ಮೌಲ್ಯಗಳನ್ನು ರಕ್ಷಿಸುತ್ತವೆ ಮತ್ತು ಒಂದು ಸುಸ್ಥಿರ ನ್ಯಾಯಸಮ್ಮತ ಸಮಾಜ ನಿರ್ಮಾಣಕ್ಕೆ ನೆರವಾಗುತ್ತವೆ. ಸರಳವಾಗಿ ಹೇಳುವುದಾದರೆ ಮಾನವ ಹಕ್ಕುಗಳು ಮನುಷ್ಯನ ಗೌರವ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳುವ ಜೀವಾಳ.ಇವು ಪ್ರತಿಯೊಬ್ಬರಿಗೂ ಸಮಾನವಾಗಿ ದೊರಕಬೇಕಾದ ಮೂಲಭೂತ ಹಕ್ಕುಗಳು. ಮಾನವ ಹಕ್ಕುಗಳನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಏಕೆಂದರೆ ಮಾನವೀಯತೆ ಉಳಿಯುವುದು ಹಕ್ಕುಗಳ ರಕ್ಷಣೆಯಲ್ಲಿ ಇದೆ.

ಮಾನವ ಹಕ್ಕುಗಳು ರಾಷ್ಟ್ರೀಯತೆ, ಲಿಂಗ, ಬಣ್ಣ ಧರ್ಮ ಅಥವಾ ಯಾವುದೇ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿ ಬಂದಿರುವುದರಿಂದ ಈ ಹಕ್ಕುಗಳು ಸರ್ಕಾರಗಳ ಮೇಲೆನಿರ್ಬಂಧಗಳನ್ನು ವಿಧಿಸುತ್ತವೆ ಮತ್ತು ನಾಗರಿಕರು ಪರಸ್ಪರ ಗೌರವದಿಂದ ಬದುಕಲು ಸಹಾಯ ಮಾಡುತ್ತವೆ ಇದು ಘನತೆ, ಸಮಾನತೆ ಮತ್ತು ನ್ಯಾಯದ ತತ್ವಗಳ ಆಧಾರವಾಗಿದೆ. ಮಾನವ ಹಕ್ಕುಗಳ ದಿನವು ಕೇವಲ ಆಚರಣೆ ಮಾತ್ರವಲ್ಲ ಇದು ಜನರಲ್ಲಿ ಜಾಗೃತಿ ಮೂಡಿಸುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿಸುವ, ಮತ್ತು ಸಮಾನತೆಯ ಸಮಾಜದ ನಿರ್ಮಾಣದ ಸಂಕೇತವಾಗಿದೆ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೇ ಇತರರ ಹಕ್ಕುಗಳನ್ನೂ ಗೌರವಿಸಬೇಕು. ಅದಾಗಿಯೇ ಮಾನವ ಹಕ್ಕುಗಳ ದಿನದ ಅರ್ಥ ಸಂಪೂರ್ಣವಾಗುತ್ತದೆ.

ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948 ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಡಿಸೆಂಬರ್ 10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ಆದರೆ ವಾಸ್ತವಿಕ ಜೀವನದಲ್ಲಿ ಇಂದಿಗೂ ಅನೇಕರು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಅಸಮಾನತೆ, ಬಡತನ, ಬಾಲಕಾರ್ಮಿಕತೆ, ಮಹಿಳೆಯರ ಮೇಲೆ ಹಿಂಸೆ, ಜಾತಿ-ಧರ್ಮ ವೈಷಮ್ಯಗಳು, ಬಾಲ್ಯವಿವಾಹ ಇನ್ನೂ ಸಾಕಷ್ಟು ಕಂಡುಬರುತ್ತವೆ. ಇಂತಹ ಸಂದರ್ಭಗಳಲ್ಲಿ ಮಾನವ ಹಕ್ಕುಗಳ ದಿನವು ಜನರಿಗೆ ಹಕ್ಕುಗಳ ಮಹತ್ವವನ್ನು ನೆನಪಿಸುವ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ.

ಉದಾಹರಣೆ ಸಹಿತ ಒಂದು ಘಟನೆಯನ್ನು ಹೇಳುವುದಾದರೆ ಒಂದು ಶಾಲೆಯಲ್ಲಿ 14 ವರ್ಷದ ಬಾಲಕ ಕುಟುಂಬದ ಆರ್ಥಿಕ ಸಂಕಷ್ಟದಿಂದ ಕೆಲವೊಮ್ಮೆ ತರಗತಿಗಳಿಗೆ ಹಾಜರಾಗಲಾಗುತ್ತಿ ರುವುದಿಲ್ಲ ಶಿಕ್ಷಕ ಕಾರಣ ಕೇಳಿದಾಗ ಅವನು ಮನೆಗೆ ಹಣ ತರಬೇಕೆಂಬ ಕಾರಣಕ್ಕೆ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಾಲಾ ನಿರ್ವಾಹಕ ಮಂಡಳಿ ಮತ್ತು ಸ್ಥಳೀಯ ಅಧಿಕಾರಿಗಳು ಮಧ್ಯಪ್ರವೇಶಿಸಿ, ಅವನಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಕುಟುಂಬಕ್ಕೆ ಸರ್ಕಾದಿಂದ ಇರುವ ನೆರವನ್ನು ಒದಗಿಸುತ್ತಾರೆ,ಇದರಿಂದ ಆ ಹುಡುಗ ಶಾಲೆಗೆ ನಿಯಮಿತವಾಗಿ ಹೋಗಲು ಪ್ರಾರಂಭಿಸುತ್ತಾನೆ. ಈ ಘಟನೆಯು “ಶಿಕ್ಷಣದ ಹಕ್ಕು” ಮತ್ತು “ಬಾಲ ಕಾರ್ಮಿಕತೆಯಿಂದ ಮುಕ್ತಿ” ಎಂಬ ಮಾನವ ಹಕ್ಕುಗಳನ್ನು ರಕ್ಷಿಸಿದ ಉದಾಹರಣೆಯಾಗಿದೆ.

ಮಾನವ ಹಕ್ಕುಗಳ ದಿನವು ಕೇವಲ ಆಚರಣೆ ಮಾತ್ರವಲ್ಲ ಇದು ಜನರಲ್ಲಿ ಜಾಗೃತಿಮೂಡಿಸುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿಸುವ, ಮತ್ತು ಸಮಾನತೆಯ ಸಮಾಜದ ನಿರ್ಮಾಣದ ಸಂಕೇತವಾಗಿದೆ. ಭೂಮಿಯ ಮೇಲೆ ಪ್ರತಿಯೊಂದು ಜೀವಿಗಳಿಗೂ ಬದಕುವ ಹಕ್ಕಿದೆ. ಸ್ವತಂತ್ರವಾಗಿ ತಮಗೆ ಬೇಕಾದ ಹಾಗೇ, ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೇ ಇತರರ ಹಕ್ಕುಗಳನ್ನೂ ಗೌರವಿಸಬೇಕು ಹಾಗಾದಾಗ ಮಾತ್ರವೇ ಮಾನವ ಹಕ್ಕುಗಳ ದಿನದ ಅರ್ಥ ಸಂಪೂರ್ಣವಾಗುತ್ತದೆ.


  • ಗೀತಾಂಜಲಿ ಎನ್ ಎಮ್ – ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW