‘ಮೂರು ದಿನದ ಬದುಕು…ಆರು ಅಡಿಯೇ ನಿನ್ನ ಜಗತ್ತು…ಸಾಗು ಮುಂದಿನ ಊರಿಗೆ…ಸ್ವರ್ಗವೋ ನರಕವೋ’…ಯುವ ಕವಿಯತ್ರಿ ಶೃತಿ ಅವರ ಲೇಖನಿಯಲ್ಲಿ ಅರಳಿದ ಬದುಕಿನ ವಾಸ್ತವ ಕವನವನ್ನು ಆಕೃತಿಯಲ್ಲಿ ತಪ್ಪದೆ ಓದಿ …
ಆಗಸ ಭೂಮಿಯ ನೆತ್ತಿಗೆ
ಸೂರು…
ಕಳ್ಳರು, ಸುಳ್ಳರು ಇಲ್ಲಿ ಎಲ್ಲಾ
ಪಾತ್ರಧಾರಿಗಳು, ವೇಷಧಾರಿಗಳ
ಊರು…
ಸೂರ್ಯ,ಚಂದ್ರನ ಬೆಳಕು
ಕಂಪ ಬೀಸಿತು…
ಕಾಣುವ ದಾರಿ ಕಾಣದೆ ಹೋಯಿತು
ಕುರುಡು ಕಾಂಚನದ ಸಂತೆ ಮಾಯದ ಬಲೆ
ಎಣಿಕೆ ಆಗದೆ ಹೋಯಿತು…
ಮೇಲಿನ ಸಾಹುಕಾರ, ಮಾಲೀಕ
ಕಾಣಲೆ ಇಲ್ಲಾ ಇವನ ಮುಖ
ಜೀವನದ ಗುರುವು ಸಖನು ಇವ
ಬದುಕು ನಾಟಕ ರಂಗ
ಕಾಣದ ಕೈಯಲ್ಲಿ ಗೊಂಬೆನಾ
ಆಟ ಮುಗಿದ ಮೇಲೆ
ಬರಿಗೈಯಲ್ಲಿ ಹೋಗುವ ಬಣ್ಣವ ಕಳಚಿ
ಪಕ್ಕಕ್ಕೆ ಸರಿಸಿ
ಪಾಪ ಪುಣ್ಯದ ಬುತ್ತಿಯ ಹೊತ್ತು
ಸಾಗುವ ಬಿದಿರಿಗೆ ಗೊಂಬೆಯು ನಾವು ಆಗುತ್ತಾ
ಪಾಪ ಪುಣ್ಯದ ಬುತ್ತಿಯ ಹೊತ್ತು
ಸಾಗುವ ಬಿದಿರಿಗೆ ಗೊಂಬೆಯು
ನಾವು ಆಗುತ್ತಾ…
ಬದುಕಿನ ತಂತಿ, ತಾಳ
ತಪ್ಪಿದ್ದರೆ
ಎಲ್ಲವೂ ಇಲ್ಲಿ ನಗ್ನ
ಸತ್ಯ…
ಮೂರು ದಿನದ ಬದುಕು
ಆರು ಅಡಿಯೇ ನಿನ್ನ ಜಗತ್ತು
ಸಾಗು ಮುಂದಿನ ಊರಿಗೆ
ಸ್ವರ್ಗವೋ ನರಕವೋ
ಎಂಬ ಪರೀಕ್ಷೆಯ ನಿರೀಕ್ಷೆಯಲ್ಲಿ …
- ಶೃತಿ