ಮಳೆಯಿರಲಿ ಬಿಸಿಲಿರಲಿ ಬೀದಿಯಲಿ ಸದಾ ಆಟ. ಆಟ ಪಾಠದ ಹೊರತು ಬೇರೆ ಚಿಂತೆಯಿಲ್ಲ ಮಧುರ ಬಾಲ್ಯ…ಸುಜಾತಾ ರವೀಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಆಟ ಪಾಠದ ಹೊರತು ಬೇರೆ ಚಿಂತೆಯಿಲ್ಲ
ಐಸ್ಕಡ್ಡಿˌ ಹುಳಿ ಕಿತ್ತಳೆಗಳೆ ಬಾಯಿರುಚಿಗೆಲ್ಲ
ಜಾರುಬಂಡೆ ಉಯ್ಯಾಲೆ ಮನ ತಣಿಸುತಿತ್ತಲ್ಲ
ಚೌಕಾಭಾರ ಹಳಗುಳಿಗಳಲಿ ಕಾಲ ಕಳೆಯುತಿತ್ತಲ್ಲ.
ಹಬ್ಬ ಬಂದರೆ ಹೊಸಬಟ್ಟೆಯ ಸಂಭ್ರಮ
ಮನೆತುಂಬ ಬಗೆ ಬಗೆಯ ತಿಂಡಿಗಳ ಗಮಗಮ
ರಜೆಯಲ್ಲಿ ಅಜ್ಜಿಮನೆಯಲಿ ಬಂಧುಗಳೊಡನಾಟ
ಮಳೆಯಿರಲಿ ಬಿಸಿಲಿರಲಿ ಬೀದಿಯಲಿ ಸದಾ ಆಟ.
ಬಾಳ ಘಟ್ಟಗಳಲೆಲ್ಲಾ ಬಹು ಮಧುರವದು ಬಾಲ್ಯ
ಅದಕೇ ಅದು ಮಾಡಿಕೊಡುತ್ತದೆ ತಿಳಿಯಲಿಲ್ಲ
ಕಾಲಚಕ್ರ ಒಂದೊಮ್ಮೆ ಹಿಂದುರುಳುವುದಾದರೆ
ಮರಳಿಸು ಮತ್ತೆ ನನ್ನ ಬಾಲ್ಯವ ಓ ದೇವರೇ!
- ಸುಜಾತಾ ರವೀಶ್
