ಬೆಂಗಳೂರಲ್ಲಿ ಕಂಬಳ ಸಂಭ್ರಮ

ಇತ್ತೀಚಿಗೆ ಕಂಬಳ ಬೆಂಗಳೂರಿನಲ್ಲಿಯೇ ನಡೆಯಿತು. ಆ ಕಂಬಳದ ಅನುಭವದ ಕುರಿತು ಎಲಿಜಬೆತ್ ಕೆ ರಾಜು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಿಮಗೆಲ್ಲಾ ಗೋತ್ತಿದ್ದಂತೆ ಮಂಗಳೂರಿನ ಕಂಬಳ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು . ಲಕ್ಷಾಂತರ ಕಿಕ್ಕಿರಿದ ಜನ ಸಂದಣಿ ಅರ್ಧ ದಕ್ಷಿಣ ಕನ್ನಡ ಜಿಲ್ಲೆ ಬೆಂಗಳೂರಿನಲ್ಲಿ ಸೇರಿತ್ತು. ಪೊಗದಸ್ತಾಗಿ ಸಾಕಿದ ಕೋಣಗಳು ಮೈಗೆ ಎಣ್ಣೆ ತಿಕ್ಕಿಸಿಕೊಂಡು ಲಕ ಲಕ ಎಂದು ಕಪ್ಪಗೆ ಹೊಳೆಯುತ್ತಿದ್ದವು ಅದರಲ್ಲಿಯು ಪಂದ್ಯದಲ್ಲಿ ಪಾಲುಗೊಳ್ಳಲು ಬಂದ ಕೋಣಗಳು ಅಲಂಕಾರಬೇರೆಮಾಡಿದ್ದರು.

ಅವೇನು ಕೋಣಗಳಂತೂ ಆನೆಯ ಮರಿಗಳೋ ಅನ್ನುವಷ್ಟು ದಷ್ಟ ಪುಷ್ಪವಾಗಿ ಬೆಳೆಸಿ ತಂದಿದ್ದರು , ಅದರ ಆಹಾರದಿಂದ ಹಿಡಿದು ಹಣ್ಣು ಹಂಪಲು, ನೀರು, ತಿಂಡಿ ತಿನಿಸುಗಳನ್ನು ಕೂಡ ದಕ್ಷಿಣ ಕನ್ನಡಜಿಲ್ಲೆಯಿಂದಲೆ ಹೊತ್ತು ತಂದಿದ್ದರು. ಅವುಗಳಿಗೆ ಬೆಂಗಳೂರಿನ ಕಲುಷಿತ ಆಹಾರ ತಿಂದು ಆರೋಗ್ಯ ಕೆಡದಿರಲೆಂದು ಇರಬೇಕು. ಅದರ ಆರೋಗ್ಯ ದೃಷ್ಟಿಯಿಂದಲೂ ಇರಬೇಕು ಬಹುಮಾನಗಳಿಸಲೆಂದು ಬಂದ ಕೋಣಗಳು ತಮ್ಮ ಕೋಣಗಳು ಗೆಲ್ಲಬೇಕೆಂಬ ಪೈಪೋಟಿಯಿಂದ ಕರೆತಂದಿದ್ದರು.

ಫೋಟೋ ಕೃಪೆ : google

ಜನರು ಸಹಿತ ಅದನ್ನು ನೋಡಲು ಪೈಪೋಟಿಯಿಂದಲೇ ನೂಕು ನುಗ್ಗಲ ಮೇಲೆಯೆ ಬಂದಿದ್ದರು. ಅರಮನೆ ಮೈದಾನದ ತುಂಬಾ ನಾನ್ವೆಜ್, ವೆಜ್ ಅಹಾರ ಪದಾರ್ಥಗಳನ್ನು ಮಾರುವ ಸಾಲು ಸಾಲು ಅಂಗಡಿಗಳು ಹೋಟೆಲುಗಳು, ರೆಸ್ಟೋರೆಂಟ್ಗಳು.ಕಾಫೀ ಕೆಫೇಗಳು. ಬಣ್ಣ ಬಣ್ಣದ ಮಕ್ಕಳ ಆಟಿಕೆಗಳನ್ನು ಮಾರುವವರು. ಕಡಲೆ ಕಾಯಿ ಬಟಾಣಿ, ವಡೆ ಬೊಂಡ, ಐಸ್ ಕ್ಯಾಂಡಿ ಮಾರುವವರು ಬೆಲೂನ್ ಮಾರುವವರೂ ಎಲ್ಲಾ ತಮ್ಮ ತಮ್ಮ ವ್ಯಾಪರಾಕ್ಕಾಗಿ ಹೊತ್ತು ತಂದಿದ್ದರು. ಹಲವಾರು ವೇಷಭೂಷಣಗಳು. ಕೀಲೂ ಬೊಂಬೆಗಳ ನೃತ್ಯಗಳು ನಾವು ಮಕ್ಕಳಿದ್ದಾಗ ನೋಡಿದ ರಾಮನಾಥಪುರ ಹಾಸನ ಉಚ್ಚಂಗಿ ಜಾತ್ರೆಯ ನೆನಪು ಮರುಕಳಿಸುವಂತೆ ಮಾಡಿದ್ದವು. ಹಿಂದೆ ನೋಡಿದ ಕಂಬಳ ವಿಶೇಷವಾಗಿ ಕಂಡಿತು. ಅರಮನೆಯ ಸ್ವಲ್ಪ ಜಾಗವನ್ನೆ ಕಂಬಳದ ಕೆಸರುಗದ್ದೆಯನ್ನಾಗಿಸಿದ್ದರು. ನಮ್ಮ ದೇಶದ ಸಂಸ್ಕೃತಿ ಅನೇಕತೆಯಲ್ಲಿ ಎಕತೆ ನೋಡಲೆಬೇಕು .ಕಂಬಳದಲ್ಲಿ ಕೋಣಗಳ ಓಟ ಅದ್ಬುತ ಅದರ ಜೋತೆ ಓಡಿದ ಜನ ಇನ್ನೂ ಭಯಂಕರ ಅದ್ಬುತ .ಬಹುಮಾನಾ ಯಾರಿಗೋ. ಓಡಿಸಿದ ವ್ಯಕ್ತಿಗೊ.ಓಡಿದ ಕೋಣಕೊ ಎಂದು ಯೋಚಿಸುವಂತೆ ಮಾಡಿದ್ದವು ..ಒಟ್ಟಿನಲ್ಲಿ ಕಂಬಳ ಜಯಶಾಲಿಯಾಗಿ ಅದ್ದೂರಿಯಾಗಿ ನಡೆಯಿತು. ಕೆಲವರಂತು ಕಂಬಳ ನೋಡಲು ಬಂದಿರಲಿಲ್ಲ ಅನ್ನಿಸುತ್ತಿತ್ತು .ಬರಿ ಅಲ್ಲಿರುವ ನಾನ್ವೇಜ್ ಹೋಟೆಲುಗಳಲ್ಲಿ ಬಿರಿಯಾನಿ, ಫಿಷ್ ಪ್ರೈ , ಕಾಬಾಬ್ ತಿನ್ನಲು ಬಂದಿದ್ದರೇನೊ?.

ಫೋಟೋ ಕೃಪೆ : facebook

ಮಂಗಳೂರಿನ ಗೋಲಿ ಭಜೆ, ತರಾವರಿ ಇಡ್ಲೀಗಳು, ಬನ್ ಗಳು ಸಕತ್ತಾಗಿ ವ್ಯಾಪರವಾಗತಿತ್ತು . ಮಸಾಲೆ ದೋಸೆಯಂತು ಕೇಳಲೆ ಬೇಡಿ ದೋಸೆ ತಿನ್ನಲೆಂದೆ ಬಂದಿದ್ದಾರೇನೋ ಅನಿಸುತ್ತಿತ್ತು. ಸುಮಾರು ಐವತ್ತಕ್ಕೂ ಸೆಲೆಬ್ರೆಟಿಗಳು, ಸಿನಿಮಾ ನಟರು, ಹಾಡುಗಾರು, ರಾಜಕೀಯ ನಾಯಕರು ಬಂದು ಸೇರಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಯ ಸಂಸ್ಕೃತಿ ತೋರಿಸೊ ಅಂತ ವಸ್ತು ಪ್ರದರ್ಶನ ಬೇರೆ ಇತ್ತು. ಶಿಸ್ತಿಲ್ಲದ ನಮ್ಮ ಜನ ನೂಕು ನುಗ್ಗಲು. ಒಬ್ಬರ ಮೇಲೆ ಒಬ್ಬರು ಬಿದ್ದು ವಸ್ತು ಪ್ರದರ್ಶನದೊಳಗೆ ನುಗ್ಗುತ್ತಿದರು. ಹಣಕೊಡುವಂತಿದ್ದರೆ ಯಾರು ಒಳಗೆಹೋಗುತ್ತಿರಲಿಲ್ಲವೇನೊ. ಪುಕ್ಕಟ್ಟೆ ವಸ್ತು ಪ್ರದರ್ಶನ ಬೇರೆ ನಮ್ಮ ಜನ ಸ್ವಚ್ಚತೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂದು ಇಲ್ಲಿನೋಡಬೇಕಾಗಿತ್ತು. ರೆಸ್ಟೋರೆಂಟ್ಗಳಲ್ಲಿ ತಿಂಡಿ ಪದಾರ್ಥಗಳನ್ನು ಕೊಂಡುತಂದು ಮೈಧಾನದಲ್ಲಿ ಕುಳಿತು ತಾವು ತಿಂದು ಮಕ್ಕಳಿಗೂ ತಿನ್ನಿಸಿ .ತಿಂದ ತ್ಯಾಜ್ಯವನ್ನು ಅಲ್ಲಲ್ಲೆ ಬಿಸಾಟು ಕುಡಿದ ನೀರಿನ ಬಾಟಲ್ಲನ್ನು ಎಲ್ಲೆಂದರಲ್ಲಿ ಬಿಸಾಟು ತಿಂದ ಹಣ್ಣಿನ ಸಿಪ್ಪೆ ಐಸ್ಕ್ರೀಮ್ ತಿಂದ ಕಪ್ಗಳು ಎಲ್ಲೆಂದರಲ್ಲಿ ಬಿಸಾಡಿ .ಇದು ನಮ್ಮ ತಪ್ಪೆ ಅಲ್ಲ ಎಂದು ಈ ಕಂಬಳ ಏರ್ಪಡಿಸಿದ್ದವರದೆ ತಪ್ಪು ಎಂಬಂತೆ ಮಕಳ ಕೈಯಲ್ಲಿ ಒಂದು ಎರಡು ಮಾಡಿಸಿ ಬಯಲ ಶೌಚಾಲಯವನ್ನು ಅವರಷ್ಟಕ್ಕೆ ಅವರೆ ನಿರ್ಮಾಣ ಮಾಡಿದ್ದರೂ.ಮೊದಲ ದಿನ ಮಳೆ ಬಂದಿದ್ದರ ಕಾರಣ ಅಲ್ಲಲ್ಲೆ ಕೆಸರು ನೀರು ಅದನ್ನೆ ತುಳಿದುಕೊಂಡು ಕೆಸರಿನಲ್ಲಿ ಕಾಲಿಟ್ಟುಕೊಂಡು ಜನ ಸಂತೋಷಪಡುವಂತಿತ್ತು. ಅಷ್ಟೇನೂ ಪೋಲೀಸರ ಕಾಣಲಿಲ್ಲ. ಅಷ್ಟು ದೊಡ್ಡ ಮೈದಾನ ಸ್ವಚ್ಛಗೊಳಿಸಲು ಕೆಲವೆ ಕೆಲವು ಜನಗಳಿದ್ದರು. ಅವರು ಜನ ಬಿಸಾಡುತ್ತಿದ್ದ ತ್ಯಾಜ್ಯವನ್ನು ನೋಡಿಕೊಂಡು ಸುಮ್ಮನೆ ಕುಳಿತ್ತಿದ್ದರು, ಬಿಸಾಡಲಿ ಆಮೇಲೆ ಒಮ್ಮೆಲೇ ಗುಡಿಸಿದರಾಯಿತು ಅಂದುಕೊಂಡಿದ್ದರೇನೊ. ಒಟ್ಟಿನಲ್ಲಿ ಕಂಬಳ ತುಂಬಾ ಚೆನ್ನಾಗಿ ನಡೆಯಿತು. ಜನ ಸಂತೋಷದ ಮುಗಿಲು ಮುಟ್ಟಿದ್ದರು. ಎರಡು ದಿನ ಬೆಂಗಳೂರು ಮಂಗಳೂರಾಗಿತ್ತು.

ಫೋಟೋ ಕೃಪೆ :google

ಬೆಂಗಳೂರಿನ ನಾಗರಿಕ ಜನ ಅರಮನೆ ಮೈದಾನವನ್ನೂ ಕೊಳಚೆ ಪ್ರದೇಶವನ್ನಾಗಿಸಿದ್ದರೂ ಬೆಂಗಳೂರಿನ ಸೊಕಾಲ್ಡ್ ಮಾಡ್ರನ್ ಎಜುಕೆಟೆಡ್ ಜನ.ಕಂಬಳ ಮುಗಿದಾದ ಮೇಲೆ ಜನರೆಲ್ಲಾ ನಿರ್ಗಮನವಾದಾಗ ನೋಡಬೇಕಿತ್ತು ಆ ದೃಶ್ಯ ನನಗೆ ಹಿರೋ ಶಿಮ ನಾಗಸಾಕಿಯ ಮೇಲೆ ಬಾಂಬ್ ಬಿದ್ದ ಮರುದಿನ ಆ ಜಾಗವನ್ನು ವರ್ಣಿಸಿದ ಲೇಖನವನ್ನು ಎಂದೊ ಓದಿದ ನೆನಪು ಬಂತು.

ಅರ್ಜುನ್ ಜನ್ಯಾರವರ ಟೀಂ ಅನುಶ್ರೀಯವರ ಜೊತೆಯಲ್ಲಿ ನಡೆಯಿತು ದಕ್ಷಿಣ ಕನ್ನಡ ಜಿಲ್ಲೆಯ ಹುಲಿವೇಶದ ಕುಣಿತ ಹತ್ತಾರೂ ಸಾಂಸ್ಕೃತಿಕ ನೃತ್ಯಗಳು ಅದ್ಭುತವಾಗಿದ್ದವು .ಅಲ್ಲಿಯು ಜನದ ನುಕೂ ನುಗ್ಗಲು. ತಳ್ಳಾಟ ಬಾಯಿಮಾತಿನ ಜಗಳದ ಜೋತೆಗೆ ಪ್ರೇಕ್ಷಕರು ಕಿಕ್ಕಿರಿದು ಬಂದು ನೋಡಿದರೂ .ಪ್ರತಿ ದಿನ ಮಾಂಸಹಾರ ವನ್ನು ಅಷ್ಟೋಂದು ಕೀಳಾಗಿ ಬರೆಯುತ್ತಿದ್ದದ್ದನ್ನು ಓದಿದ್ದ ನಾನು ಕಂಬಳದಲ್ಲಿ ಬಿರಿಯಾನಿ ಕಬಾಬ್, ಪೀಷ್ ಪ್ರೈಗಾಗಿ ನೂಕು ನುಗ್ಗಲಲ್ಲಿ ಕೊಂಡುಕೊಳ್ಳುತ್ತಿರುವುದನ್ನು ನೋಡಿ ಆಶ್ಚರ್ಯವಾಯಿತು !

ಹೀಗೂ ಉಂಟೆ ಎಂಬ ಭಾವನೆ! .ಅಲ್ಲಿ ಯಾವ ಜಾತಿಬೇದವಿರಲಿಲ್ಲ. ಯಾರು ಯಾವ ಜಾತಿ ಎಂದು ಯಾರಿಗೂ ಗೋತ್ತಿಲ್ಲ ಯಾವ ಊರು ಯಾವ ಭಾಷೆ ಯಾರಿಗೂ ಗೊತ್ತಿರಲಿಲ್ಲ‌ ‌ಅಲ್ಲಿ ಹೆಚ್ಚು ಜನ ಮೈಸೂರು ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದರೂ .ಸಿಂಹಪಾಲು ದಕ್ಷಿಣ ಕನ್ನಡ ಜಿಲ್ಲೆಯವರದು ತುಳುಭಾಷೆ ಮಾತಾಡುತ್ತಿದ್ದರೂ ಕನ್ನಡದಲ್ಲೆ ವ್ಯವಹಾರ ಮಾಡುತ್ತಿದ್ದರು .
ಅಂಗಡಿಗಳು ಹೋಟೆಲುಗಳು ತುಳುವರದೆ ಹೆಚ್ಚಿತ್ತು .ಆದರೂ ಯಾರದು ಏನೂ ತಕರಾರಿರಲಿಲ್ಲ.

ಎಲ್ಲರ ಜೋತೆಗೆ ಹೋಗಿದ್ದರು ಎಲ್ಲಾ ಕಡೆ ಒಬ್ಬಳೆ ಸುತ್ತಾಡಿ ಬಂದೆ ಒಂದುದಿನ ಉಪಯುಕ್ತವಾಗಿ ಕಳೆದ ಧನ್ಯತೆ …..‌‌ನನ್ನಲ್ಲಿ ಮೂಡಿ ನಮ್ಮ ದೇಶದ ಸಂಸ್ಕೃತಿಯ ಬಗ್ಗೆಯು ಹೆಮ್ಮೆ ಎನಿಸಿತು ?


  • ಎಲಿಜಬೆತ್ ಕೆ ರಾಜು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading