ಬಸವಣ್ಣನವರ ಆತ್ಮಾವಲೋಕನದ ಪರಿಕಲ್ಪನೆ

ಆತ್ಮ ಮನುಷ್ಯನ ದೇಹದಲ್ಲಿ ಇರುವುದರಿಂದಲೇ ಆ ದೇಹಕ್ಕೆ ಬೆಲೆಯಿದೆ ಇಲ್ಲದಿದ್ದರೆ ಇಲ್ಲ. ಆತ್ಮ ದೇಹದಿಂದ ಹೊರ ಹೋಗಿ ಪರಮಾತ್ಮನಲ್ಲಿ ಲೀನವಾದರೆ ಈ ದೇಹಕ್ಕೆ ಯಾರು ಹೆಚ್ಚು ಹೊತ್ತು ಇಟ್ಟುಕೊಳ್ಳುವುದಿಲ್ಲ. ಈ ಆತ್ಮ ರೂಪುಗೊಳ್ಳುವ ಬಗೆ ಹೇಗೆ ? ಎಲ್ಲಿಂದ ಬಂದು ಈ ದೇಹದಲ್ಲಿ ಸೇರಿತು ? ಪ್ರಾಧ್ಯಾಪಕರರಾದ ಶ್ರೀಶೈಲ ಮದಾಣಿ ಅವರು ಚಿಂತನ ಲೇಖನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…

೧೨ನೇ ಶತಮಾನದ ಸಮಾನತೆಯ ಹರಿಕಾರ, ಸಮಾಜೋಧಾರ್ಮಿಕ ಚಳುವಳಿಯ ನೇತಾರ, ಅಲ್ಲಂ ಪ್ರಭುಗಳಿಂದ ‘ಭಕ್ತಿ ಭಾಂಡಾರಿ’ ಎನಿಸಿಕೊಂಡ ಜಗಜ್ಯೋತಿ, ವಿಶ್ವಗುರು ಅಣ್ಣ ಬಸವಣ್ಣನವರ ಕುರಿತು ಎನೆಂದು ಸಂಭೋಧನೆ ಮಾಡಿದರು ಕಡಿಮೆಯೆ.

ಇಂತಹ ಮಹಾನ್ ವ್ಯಕ್ತಿಯನ್ನು ಕರ್ನಾಟಕ ಸರ್ಕಾರ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂದು ಘೋಷಿಸಿತು. ಈ ಪ್ರಯುಕ್ತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ೪೦ ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆ ಹಮ್ಮಿಕೊಂಡಿದ್ದು ಇಂದು ನನಗೆ ಬಂದ ವಿಷಯ:

ಬಸವಣ್ಣನವರ ಆತ್ಮಾವಲೋಕನದ ಪರಿಕಲ್ಪನೆ :

  • ಆತ್ಮಾವಲೋಕನ ಎಂದರೇನು?
  • ಆತ್ಮದ ಅವಲೋಕನ. ಹಾಗಾದರೆ ಆತ್ಮ ಎಂದರೆ ಏನು ? ಅವಲೋಕನ ಎಂದರೆ ಏನು?

ಅವಲೋಕನ ಎಂದರೆ ವಿಕ್ಷಣೆ, ನಿರ್ದಿಷ್ಟ ಉದ್ದೇಶ ಇಟ್ಟುಕೊಂಡ ನೋಡುವದು ಎಂದರ್ಥ. ಇನ್ನು ಪರಿಕಲ್ಪನೆ ಎಂದರೆ concept ನಮ್ಮ ದೃಷ್ಟಿಯಲ್ಲಿ ಅದರ ಇರುವಿಕೆ ಆಗಿರುತ್ತದೆ. ಈಗ ಆತ್ಮದ ವಿಷಯಕ್ಕೆ ಬಂದಾಗ ಅದು ಎಲ್ಲಿ ಇರುತ್ತದೆ. ಹೇಗೆ ಬಂದು ದೇಹದಲ್ಲಿ ಸೇರುತ್ತದೆ. ಆತ್ಮ ಮನುಷ್ಯನ ದೇಹದಲ್ಲಿ ಇರುವುದರಿಂದಲೇ ಆ ದೇಹಕ್ಕೆ ಬೆಲೆಯಿದೆ ಇಲ್ಲದಿದ್ದರೆ ಇಲ್ಲ. ಆತ್ಮ ದೇಹದಿಂದ ಹೊರ ಹೋಗಿ ಪರಮಾತ್ಮನಲ್ಲಿ ಲೀನವಾದರೆ ಈ ದೇಹಕ್ಕೆ ಯಾರು ಹೆಚ್ಚು ಹೊತ್ತು ಇಟ್ಟುಕೊಳ್ಳುವುದಿಲ್ಲ. ಅವರವರ ಸಂಪ್ರದಾಯದ ಪ್ರಕಾರ ಸುಡುತ್ತಾರೆ. ಇಲ್ಲವೇ ಮಣ್ಣಲ್ಲಿ ಹೂಳುತ್ತಾರೆ. ಹಾಗಾದರೆ ಈ ಆತ್ಮ ರೂಪುಗೊಳ್ಳುವ ಬಗೆ ಹೇಗೆ ? ಎಲ್ಲಿಂದ ಬಂದು ಈ ದೇಹದಲ್ಲಿ ಸೇರಿತು ? ಹಾಗೇ ಈ ದೇಹದಿಂದ ಹೊರಗಡೆ ಎಲ್ಲಿಗೆ ಹೊಯಿತು ? ಸ್ವಲ್ಪ ನಿಮ್ಮಷ್ಟಕ್ಕೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ.

ನಿಮಗೆ ೨ ಉದಾಹರಣೆ ಮೂಲಕ ಸೃಷ್ಟಿಕರಿಸುತ್ತೇನೆ.

೧. ಕೋಳಿ ಮೊಟ್ಟೆ
೨. ಸಸ್ಯಗಳಲ್ಲಿ ಸಂತಾನೋತ್ಪತ್ತಿ

  • ಕೋಳಿ ಮೊಟ್ಟೆ:

    ನಿವೆಲ್ಲ ನೋಡಿದ್ದಿರಿ ಆ ಮೊಟ್ಟೆಯ ಒಳಗಡೆ ೨ ರೀತಿಯ ದ್ರವ ಪದಾರ್ಥ ಇವೆ. ಬಿಳಿ ಬಣ್ಣದ್ದು, ಹಳದಿ ಬಣ್ಣದ್ದು. ಕೋಳಿ ಆ ತತ್ತಿಯ (ಮೊಟ್ಟೆ) ಮೇಲೆ ಕುಳಿತು ಆಗಾಗ ಇಷ್ಟಿಷ್ಟು ಶಾಖ ಕೊಡುತ್ತಾ ಬರುತ್ತದೆ. ಆಗ ಆ ಮೊಟ್ಟೆಯ (ತತ್ತಿ) ಒಳಗಡೆ ಮರಿ ಕೋಳಿಯ ಅಂಗಾಂಗಗಳು ರೂಪು ಪಡೆಯುತ್ತಾ ಬರುತ್ತವೆ. ಅದರ ಕಾಲು, ಕಣ್ಣು, ಪುಚ್ಚ ಇತ್ಯಾದಿ. ಕೊನೆಗೆ ಅದರಲ್ಲಿ ‘ಜೀವ’ ಬಂದು ಸೇರುತ್ತದೆ. ಆ ಜೀವ ಇಲ್ಲಿಂದ ಬಂತು? ಜೀವ ಎಂದರೆ ಆತ್ಮ.

    ಸರಿ ಯಾರಾದರು ಮಂತ್ರ ಹಾಕಿದರೆ ? ಹಾಗಾದರೆ ಆ ತತ್ತಿಯ ಒಳಗಡೆ ಮರಿಕೋಳಿ ಜೀವ ಪಡೆದುಕೊಂಡು ಹೇಗೆ ಹೊರಗೆ ಬಂತು ? ತಾಯಿಕೋಳಿ ಕೊಡುವ ಆ ‘ಶಾಖ’ದಲ್ಲಿಯೆ ಜೀವ ಪಡೆಯುವ ಶಕ್ತಿಯಿದೆಯೆ ? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ?

ಇನ್ನೊಂದು ಉದಾಹರಣೆ.

  • ಸಸ್ಯಗಳಲ್ಲಿ ಸಂತಾನೋತ್ಪತ್ತಿ :

    ನೀವೆಲ್ಲ ಧಾನ್ಯಗಳನ್ನು ನೋಡಿದ್ದೀರಿ. ಹೆಸರು, ಉದ್ದು, ತೊಗರಿ, ಎಳ್ಳು ಇತ್ಯಾದಿ. ಈ ಕಾಳುಗಳನ್ನು ನೀವು ಮನೆಯ ಡಬ್ಬದಲ್ಲಿ ಇಡುವಿರಿ. ಅವುಗಳನ್ನು ನೀರಿನಲ್ಲಿ ಹಾಕಿ ಇಡಿ ಅಥವಾ ಎಣ್ಣೆಯಲ್ಲಿ ಹಾಕಿ ಇಡಿ ಅವು ಒಂದಕ್ಕೆರಡು ಆಗುವುದಿಲ್ಲ.

    ಅವೇ ಕಾಳುಗಳನ್ನು ನೀವು ಭೂಮಿಯಲ್ಲಿ ಹಾಕಿ ನೋಡಿ ಗಿಡವಾಗಿ ಬೆಳೆದು ತನ್ನದೆ ಸ್ವರೂಪದ ನೂರಾರು ಕಾಳುಗಳನ್ನು ಅಂದರೆ ಈ ಬೀಜಗಳು ಕೊಡುತ್ತವೆ ಹೇಗೆ ಸಾಧ್ಯ ?
    ನಮ್ಮ ಸುತ್ತಮುತ್ತಲಿನ ಈ ಪಂಚಭೂತಗಳ ಸಹಾಯದಿಂದ.

  • ಪಂಚಭೂತಗಳು ಯಾವವು? ಎಂದರೆ :
    ೧. ಭೂಮಿ
    ೨. ನೀರು
    ೩. ಅಗ್ನಿ
    ೪. ಗಾಳಿ
    ೫. ಆಕಾಶ.

ಅಂದರೆ ಜೀವ ಸಂಕುಲಗಳ ಸೃಷ್ಟಿಗೆ ಈ ಪಂಚಭೂತಗಳೆ ಕಾರಣ ಎಂದಾಯಿತು. ಈ ಮಾನವ ದೇಹವೂ ಕೂಡ ಈ ಪಂಚಭೂತಗಳಿಂದ ರೂಪುಗೊಂಡಿದೆ. ಹೀಗಾಗಿ ಎಲ್ಲಕ್ಕೂ ಮೂಲ ಕಾರಣವಾದ ಈ ಪಂಚಭೂತಗಳನ್ನು ಸಂರಕ್ಷಿಸೋಣ. ಅವು ಸರಿಯಿದ್ದರೆ ನಾವು – ನಿವೆಲ್ಲ. ನಾವೇ ಇಲ್ಲ ಎಂದರೆ ಈ ಧರ್ಮ, ಜಾತಿ ಇತ್ಯಾದಿ….ಇತ್ಯಾದಿ..?

ಆತ್ಮಾವಲೋಕನ ಎಂದರೆ ಸರಳವಾಗಿ ಹೇಳುವುದಾದರೆ ತಮ್ಮನ್ನೇ ತಾವು ಪ್ರಶ್ನೆ ಮಾಡಿಕೊಳ್ಳುವುದು? ಉತ್ತರ ಕಂಡುಕೊಳ್ಳುವುದು. ಉತ್ತರ ಸಿಗದೆ ಇದ್ದಾಗ ಪರಮಾತ್ಮನಲ್ಲಿ (ಪಂಚಭೂತ) ಮೊರೆ ಹೋಗುವುದು.

ಈಗ ಬಸವಣ್ಣನವರು ಆತ್ಮಾವಲೋಕನ ಮಾಡಿಕೊಳ್ಳುವ ಪರಿ ತಿಳಿದುಕೊಳ್ಳೋಣ :

ವಚನ:೧

ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯ
ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ,
ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.

ಇಲ್ಲಿ ಬಸವಣ್ಣನವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಕೂಡಲಸಂಗಮ ದೇವನ (ಶಿವನ) ಇಚ್ಛೆಗೆ ಒಪ್ಪಿಸಿದ್ದಾರೆ. ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದರೆ ಸಾಯದೆ ಬೇರೆ ಗತಿಯಿಲ್ಲ ಎನ್ನುವ ಬಸವಣ್ಣನವರು ‘ನನ್ನ ಜೀವನ ನನ್ನ ನಿಯಂತ್ರಣದಲ್ಲಿಲ್ಲ; ಎಲ್ಲವೂ ನಿನ್ನ ಇಚ್ಛೆಗೆ ಒಳಪಟ್ಟಿದೆ ಎಂಬ ಭಾವ ಕಾಣುತ್ತೇವೆ.

ವಚನ: ೨

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದು:ಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ

ಈ ವಚನವು ಬಸವಣ್ಣನವರ ಆತ್ಮಾವಲೋಕನ ಮತ್ತು ಸ್ವಯಂ ಸಂಯಮದ ಮಹತ್ವ ಒತ್ತಿ ಹೇಳುತ್ತದೆ. ಇದರಲ್ಲಿ ಲೋಕದ ಸರಿ-ತಪ್ಪುಗಳನ್ನು ಸರಿಪಡಿಸುವ ಬದಲು ತನ್ನ ಒಳಗಿನ ದೋಷಗಳನ್ನು ಸರಿಪಡಿಸುವ ಕಡೆ ಗಮನಕೊಡಲು ಹೇಳಲಾಗಿದೆ. ಅಂದರೆ ಆತ್ಮ ವಿಮರ್ಶೆಗೆ ಕರೆಕೊಟ್ಟಂತೆ.

ವಚನ: ೩

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ತನುವಿನಲ್ಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ
ಕೂಡಲಸಂಗಮದೇವ.

ಬಸವಣ್ಣನವರ ಈ ವಚನವು ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಸಾಂಕೇತಿಕವಾಗಿ ವ್ಯಕ್ತಪಡಿಸುತ್ತದೆ. ಈ ವಚನದಲ್ಲಿ ಮನೆ ಎಂದರೆ ದೇಹ ಮತ್ತು ಮನೆಯೊಡೆಯ ಎಂದರೆ ದೇವರು (ಆತ್ಮ).

ಮನೆಯೆಂಬ ಈ ದೇಹದಲ್ಲಿ ಮನೆಯೊಡೆದು ಅಂದರೆ ದೇವರು (ಆತ್ಮ) ಇದ್ದಾನೊ ? ಇಲ್ಲವೊ? ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಂಡು (ಆತ್ಮವಲೋಕನದ) ಮನೆಯ ಹೊಸ್ತಿಲಲ್ಲಿ ಹುಲ್ಲು ಹುಟ್ಟಿದೆ, ಮನೆಯೊಳಗೆ ರಜ (ಧೂಳು) ತುಂಬಿದೆ ಅಂದರೆ ಮನುಷ್ಯ ವಾಸಿಸುತ್ತಿಲ್ಲ ಎಂದರ್ಥ ಹೀಗಾಗಿ ಮನೆಯೊಳಗೆ ಮನೆಯೊಡೆಯನಿಲ್ಲ ಎಂದು ಹೇಳಿದ್ದಾರೆ. ಮನೆ ಎಂಬ ಈ ದೇಹದಲ್ಲಿ ಕಾಮ ಕ್ರೋಧ, ಲೊಭ, ಮೊಹ, ಮದ, ಮತ್ಸರ ಎಂಬ ಅರಿಷಡ್ ವರ್ಗಗಳು ತುಂಬಿ ತುಳುಕುತ್ತಿವೆ. ಹೀಗಾಗಿ ದೇವರ (ಮನೆಯೊಡೆಯನ) ವಾಸಕ್ಕೆ ಜಾಗವಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ.

ದೇಹದಲ್ಲಿ ಸುಳ್ಳು ತುಂಬಿ ಮನದಲ್ಲಿ ಪಂಚೇಂದ್ರಿಯಗಳ ತುಂಬಿದ ಕಾರಣ ದೇವರ ಇರುವಿಕೆಗೆ ಯೋಗ್ಯವಾಗಿಲ್ಲ. ಕೊನೆಗೆ ಕೂಡಲಸಂಗಮದೇವನ ಕೃಪೆಯಿಂದ ಈ ಅಶುದ್ಧತೆಯನ್ನು ತೊಡೆದು ಆತನ ಸಾನಿಧ್ಯವನ್ನು ಪಡೆಯುವ ಆಶಾಭಾವ ಕಾಣುತ್ತೇವೆ.

ವಚನ: ೪

ಮಾಡಿ ನೀಡಿ ಲಿಂಗವ ಪೂಜಿಸಿಹೆನೆಂಬವರು ನೀವೆಲ್ಲ ಕೇಳಿರಣ್ಣಾ
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರವಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ
ಧನವ ನಿರಿಸಿದಿರಾ, ಇರಿಸಿದರೆ ಭವ ಬಪ್ಪದು ತಪ್ಪದು
ಕೂಡಲಸಂಗನ ಶರಣರಿಗೆ ಸವೆಸಲೇಬೇಕು (ಖರ್ಚುಮಾಡು).

ಅಂದಾದುಂದಿ (ಸಿಕಾಂಗ) ಖರ್ಚುಮಾಡಿ ಬಾಹ್ಯಾಡಂಬರದ ಪೂಜೆ ಮಾಡುವ ಶ್ರೀಮಂತರನ್ನು ಮತ್ತು ಅವರ ಮನಸ್ಥಿತಿಯನ್ನು ಆತ್ಮಾವಲೋಕನ ಮಾಡುವಂತೆ ಕಠೊರವಾದ ಮಾತುಗಳಲ್ಲಿ ವ್ಯಂಗ್ಯಮಾಡುತ್ತಾರೆ ಬಸವಣ್ಣ.

ಅತಿ ಹೆಚ್ಚು ಬೆಲೆಯ ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟು, ಒಳಗೆ ಹೋಗಿ ದೇವರ ಎದುರು ಕೈ ಮುಗಿಯುವವನ ಮನಸ್ಸಿನಲ್ಲಿ ಆ ದೇವರಿರದೆ ಹೊರಗೆ ಬಿಟ್ಟು ಬಂದ ಬೆಲೆ ಬಾಳುವ ಚಪ್ಪಲ.


  • ಶ್ರೀಶೈಲ ಮದಾಣಿ – ಸಹಾಯಕ ಪ್ರಾಧ್ಯಾಪಕರು, ಬಿ.ಸಿ.ಎ. ಸಹ-ಶಿಕ್ಷಣ ವಿಭಾಗ, ಗಣಕಯಂತ್ರ ನಿಕಾಯ ಶರಣ ಬಸವ ವಿಶ್ವವಿದ್ಯಾಲಯ, ಕಲಬುರ್ಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading