ಅರಿಶಿನ ಎಲೆಯ ಕಡುಬು : ಅರುಣ್ ಪ್ರಸಾದ್ 

ಗೌರಿ ಗಣೇಶನ ಹಬ್ಬದ ವಿಶೇಷ ಖಾದ್ಯ ಅರಶಿಣದ ಎಲೆ ಕಡುಬು. ಅರಿಶಿಣದ ಎಲೆಯ ಕಂಪಿನ ಘಮ ಘಮಿಸು ಸಿಹಿ ಮತ್ತು ಸಾದಾ ಕಡಬು ಈ ದಿನಗಳಲ್ಲಿ ತಿನ್ನಲು ತುಂಬಾ ಸವಿ. ಇದನ್ನು ತಯಾರಿಸುವ ಬಗೆಯನ್ನು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್  ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಮಲೆನಾಡಿನಲ್ಲಿ ಈಗ ಅರಿಶಿನ ಎಲೆಯ ಕಡುಬುಗಳ ಕಾಲ, ಈ ಕಾಲದಲ್ಲಿ ಅರಿಶಿನ ಎಲೆಯ ಗಿಡದಲ್ಲಿ ಅರಿಶಿಣದ ಕೊಂಬು ಮಣ್ಣಿನಲ್ಲಿ ಹದವಾಗಿ ಬೆಳೆದಿರುತ್ತದೆ. ಶ್ರಾವಣ ಮಾಸದಲ್ಲಿ ಮತ್ತು ಗೌರಿ ಗಣೇಶ ಹಬ್ಬಕ್ಕೆ ಇದು ವಿಶೇಷ ಔತಣ.

ಫೋಟೋ ಕೃಪೆ : ಅಂತರ್ಜಾಲ

ಅರಿಶಿಣದ ಎಲೆಯ ಕಡುಬು ಮಾಡುವ ವಿಧಾನ :

ಈ ಕಾಲದಲ್ಲಿ ಅರಿಶಿನದ ಗಿಡದ ಕುಡಿ ಎಲೇ ಅರಿಶಿನದ ಕಂಪನ್ನು ಹೆಚ್ಚು ಬೀರುತ್ತದೆ. ಈ ಸಮಯದಲ್ಲಿ ಆಯ್ದ ಅರಿಶಿನದ ಎಲೆಗಳನ್ನು ತಂದು ತೊಳೆದು ಒರೆಸಿ ಇಟ್ಟು ಕೊಳ್ಳಬೇಕು. ನೆನೆಸಿದ ಅಕ್ಕಿಯನ್ನು ರುಬ್ಬಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಸೇರಿಸಿ. ಅದನ್ನು ಅರಿಶಿನದ ಎಲೆಯ ಮೇಲೆ ತಟ್ಟಿ ಹರಡಿ ಅದರೊಳಗೆ ಮೊದಲೇ ತಯಾರಿಸಿಟ್ಟುಕೊಂಡ ಕಾಯಿ ತುರಿ, ಬೆಲ್ಲ, ಚಿಟಕಿ ಉಪ್ಪು, ಏಲಕ್ಕಿ ಪುಡಿ ಸೇರಿಸಿದ ಹೂರಣ ತುಂಬಿಸಿ.

ನಂತರ ಅರಿಶಿಣದ ಎಲೆ ಮಡಚಿ ಹಬೆಯ ಪಾತ್ರೆ ಅಥವಾ ಇಡ್ಲಿ ಪಾತ್ರೆಯಲ್ಲಿ 20 ರಿಂದ 25 ನಿಮಿಷ ಬೇಯಿಸಿದರೆ ಘಮ ಘಮಿಸುವ ಅರಿಶಿಣದ ಎಲೆಯು ಸಿಹಿ ಕಡುಬು ತಿನ್ನಲು ತಯಾರಾಗುತ್ತದೆ.

ಸಿಹಿ ಹೂರಣ ಈ ಕಡಬಿನ ಒಳಗೆ ತುಂಬದಿದ್ದರೆ ಅರಿಶಿಣ ಎಲೆಯ ಸಾದಾ ಕಡುಬಾಗುತ್ತದೆ. ಇದು ಕೂಡ ಅರಿಶಿಣದ ಎಲೆಯ ಘಮದ ವಿಶಿಷ್ಟ ರುಚಿಯದ್ದಾಗಿರುತ್ತದೆ. ಅರಿಶಿಣದ ಎಲೆಯ ಕಂಪಿನ ಘಮ ಘಮಿಸು ಸಿಹಿ ಮತ್ತು ಸಾದಾ ಕಡಬು ಈ ದಿನಗಳಲ್ಲಿ ತಿನ್ನಲು ತುಂಬಾ ಸವಿ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading