“ದೀಪಾವಳಿಯು ಸಕಲರಿಗೆ ಸನ್ಮಂಗಳವನ್ನು ಉಂಟು ಮಾಡಲಿಯೆಂದು ಬೆಳಕಿನಂಗಳದಲಿ ಪ್ರಾರ್ಥಿಸೋಣ, ಕವಿ ಬೆಂ ಶ್ರೀ ರವೀಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಾನಂಗಳದಲಿ ಬಣ್ಣಬಣ್ಣದ ಬೆಳಕಿನ ಬಿರುಸು
ಬುವಿಯಲಿ ಆಕ್ರಂದನ ರಕ್ತದೊಕುಳಿ ದುರಸು
ವರ್ಷವಿಡಿ ನಡೆದಿದೆ ದ್ಷೇಷಾಕ್ರೋಶದ ಗರಸು
ಏಕೆ ಮುಗಿದಿಲ್ಲ ಈ ನಿತ್ಯ ಪಟಾಕಿಯ ಮರಸು
ಓ ಬೆಳಕೆ ಚೆಲ್ಲು ಎಲ್ಲೆಲ್ಲೂ ಸುಜ್ಞಾನವೇನೆ
ಚೆಲ್ಲುತಿಹೆ ಬಿರಸು ಬಿಲ್ಲು ಬಾಣದ ಮೊನೆ
ಮುಗ್ದರಕ್ತದ ನದಿಯು ಕಡಲ ತುಳಕಿಸಿವೆ
ನಾಯಕರೆಸೆವ ದೇಹಗಳು ರಣವನುಕ್ಕಿಸಿವೆ
ಬಲಿಗಳನಿತ್ತು ಬಲೀಂದ್ರರಾಗದ ಬಲವು
ಕುಗ್ಗಿಸಿತೇ ದೀಪಾವಳಿಯ ಖುಷಿ ಕಸುವು
ಕವಿಯು ಬೇಡವುನು ಕನಿಕರಿಸು ತಾಯೇ
ಅಡಗಿಸು ದುರುಳ ಅಹಂಕಾರದ ಮಾಯೆ
- ಬೆಂ ಶ್ರೀ ರವೀಂದ್ರ
