‘ದೀಪಾವಳಿ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ಆರತಿಯೆತ್ತಲು ನಾರಿಯರೆಲ್ಲರು ಬೀರಿತು ಜ್ಯೋತಿಯು ನಳನಳಿಸಿ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಕತ್ತಲನಳಿಸಲು
ಹೊತ್ತಿಸೆ ಹಣತೆಯ
ಮುತ್ತಿತು ಬೆಳಗುತ ಪ್ರಜ್ವಲಿಸಿ
ಚಿತ್ತದಲುಳಿದಿಹ
ಮೆತ್ತಿದ ತಮವನು
ಸುತ್ತುತ ಜ್ಞಾನದ ಬೆಳಕಿಳಿಸಿ

ನೀರೆಯರೆಲ್ಲರು
ತೋರುತ ಬೆಡಗನು
ಸೇರುತ ಹಬ್ಬವನಾಚರಿಸಿ
ಆರತಿಯೆತ್ತಲು
ನಾರಿಯರೆಲ್ಲರು
ಬೀರಿತು ಜ್ಯೋತಿಯು ನಳನಳಿಸಿ

ನರಕಾಸುರನನು
ಹರಿತಾ ವಧಿಸಲು
ಧರೆಯಲಿ ಮೊದಲಿಗೆ ಪೂಜಿಪರು
ಕರೆವರು ಬಲಿಯನು
ಬೆರೆಯಲು ಹಬ್ಬದಿ
ತರತರ ಪೂಜೆಯ ಮಾಡುವರು.


  • ಚನ್ನಕೇಶವ ಜಿ ಲಾಳನಕಟ್ಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading