‘ದೀಪದ ಸಾಲು’ ಕವನ – ಶಿವದೇವಿ ಅವನೀಶಚಂದ್ರ

ದೀಪದ ಸಾಲು ಬೆಳಗಿ ಬೆಳಗಿ ಭರವಸೆಯ ತುಂಬಲಿ…ಕವಿಯತ್ರಿ   ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ….

ಪ್ರಜ್ವಲಿಸಲಿ ಬಾಳ ಬೆಳಕು
ಜಗವನೆಲ್ಲ ಬೆಳಗುತ
ಅಜ್ಞಾನದ ಅಂಧಕಾರವ
ಸುಜ್ಞಾನ ಜ್ಯೋತಿಯಿಂದ
ತೊಲಗಿಸುತ

ಮನಮನದಲು ಹಚ್ಚಬೇಕು
ವೈಚಾರಿಕ ದೀಪ
ಹಣತೆಗೆ ಎರೆಯಬೇಕು
ಶ್ರದ್ಧೆ ತೈಲ ನಿರುತ

ಬತ್ತಿಯಾಗಿ ಉರಿಯಬೇಕು
ಸ್ವಾರ್ಥರಹಿತವಾಗಿ
ತನ್ನ ತಾನು ಸಮರ್ಪಿಸಿಕೊಳ್ಳಬೇಕು
ಲೋಕ ಹಿತಕಾಗಿ

ರಕ್ಕಸರ ಸದೆಬಡಿಯಲು
ಅವತರಿಸಿದಂತೆ ವಿಷ್ಣು
ಅಂತರಂಗ ಬಹಿರಂಗದ ವೈರಿಗಳ
ನಿಗ್ರಹಿಸಬೇಕು ಸಹಿಷ್ಣು

ದೀಪ ಸಾಲು ಬೆಳಗಿ ಬೆಳಗಿ
ಭರವಸೆಯ ತುಂಬಲಿ
ನಾಡು ಜನರ ಹೃದಯದಲ್ಲಿ
ಪ್ರೇಮೋತ್ಸವವಾಗಲಿ….


  •   ಶಿವದೇವಿ ಅವನೀಶಚಂದ್ರ – ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading