ಬಿಗ್ ಬಾಸ್ ನಲ್ಲಿ ‘ನಾನು’ – ಶಾಲಿನಿ ಹೂಲಿ ಪ್ರದೀಪ್

ಅಸಾಧ್ಯ ಅಂದುಕೊಂಡದ್ದು ಅಪ್ಪಿತಪ್ಪಿ ಹೀಗೆ ಆದ್ರೆ ಜೀವನ ಜಿಂಗ್ ಲಾಲಾ ಅಲ್ವಾ…ತಪ್ಪದೆ ಓದ್ರಿ.. ಬಿಗ್ ಬಾಸ್ ನಲ್ಲಿ ನಾನು ಮತ್ತು ನನ್ನ ಕತೆ…

“ಹಲೋ, ಶಾಲಿನಿ ಅವ್ರಾ?”…ಆ ಕಡೆಯಿಂದ ಧ್ವನಿ ಬಂತು.

“ಹೌದು… ಯಾರ್ ಮಾತಾಡೋದು”…

“ನಾವು colours ಕನ್ನಡ ಚಾನೆಲ್ ನಿಂದ ಕಾಲ್ ಮಾಡ್ತಿದ್ದೀವಿ”. ಅಂದಾಗ

ಚಾನೆಲ್ ನವರು ಯಾಕೆ ನಂಗೆ ಕಾಲ್ ಮಾಡಿದ್ದಾರೆ, ಸೀರಿಯಲ್ ನಲ್ಲಿ ಏನಾದ್ರೂ ಆಕ್ಟಿಂಗ್ ಅವಕಾಶ ಕೊಡೋಕೆ ಕಾಲ್ ಮಾಡಿದ್ದಾರಾ??…ಇಲ್ಲಾ, ಅದು ಸಾಧ್ಯನೇ ಇಲ್ಲಾ ….ಕುಟ್ಟಿದ್ರೂ ನನ್ನಲ್ಲಿ ನಟನಾ ಸರಸ್ವತಿ ಇಲ್ಲಾ…ನಟನೆ ಬರೋಲ್ಲ. ಇನ್ನೂ ಹಿಂದೆ ಕೆ ಎಂ ಚೈತನ್ಯ ಅವರ ಸಾರಥ್ಯದಲ್ಲಿ ಒಂದು ಧಾರವಾಹಿಗೆ ಚಿತ್ರಕತೆ ಬರೆದಿದ್ದೆ. ಅದೇತರ ಏನಾದ್ರೂ ಮತ್ತೊಂದು ಧಾರವಾಹಿಗೆ ಆಫರ್ ಬಂದಿರಬಹುದಾ?….ಅಂತ ಊಹಿಸುತ್ತಾ…

” ಏನ್ ಹೇಳಿ… ನನ್ನಿಂದ ಏನ್ ಆಗಬೇಕಿತ್ತು”….ಅಂತ ಕೇಳಿದೆ.

” ಮೇಡಂ…ನಿಮಗೆ ಬಿಗ್ ಬಾಸ್ ಹೋಗೋಕೆ ಆಸಕ್ತಿ ಇದೇನಾ?”… ಅಂತ colours ಅವರು ಕೇಳಿದಾಗ ಒಮ್ಮೆಲ್ಲೇ ಶಾಕ್ ಆಯಿತು. ಮೊಬೈಲ್ ಟಪ್ಪಾರ್ ಅಂತ ಕೈಯಿಂದ ಜಾರಲಿಲ್ಲ ಅಷ್ಟೇ…

ಆಫ಼ರ್ ಕೇಳಿ ಯಪ್ಪಾಡೆ… ಯಾಹೂ… ಯಾಹೂ… ಅನ್ನಲೋ… ಅಥವಾ ಬಿಗ್ ಬಾಸ್ ವಿಚಿತ್ರ ಪ್ರಪಂಚದಲ್ಲಿ “ನಾನು ನಾನಾಗಿದ್ದೇನೆ”… ಅಂತ ಹೇಳಿಕೊಳ್ಳುತ್ತಾ… ಅವರಿವರ ಮೇಲೆ ಏಗರಿ ಬೀಳಲೇ…. ಅಥವಾ ನಾನು ನೇರ, ದಿಟ್ಟ, ನಿರಂತರ ಅಂತ ತೋರಿಸೋ ವೇದಿಕೆ ಅನ್ಕೊಂಡು ಒಳಗೆ ಹೋಗಿ ಇಂಗ ತಿಂದ ಬಂದ ಮಂಗಣ್ಣ ಆಗಲೋ …ಅಂತ ಯೋಚ್ನೆ ಮಾಡುತ್ತಿದ್ದೆ.

“ಮೇಡಂ… ಮೇಡಂ… ಕೇಳಸ್ಕೊತ್ತಿದ್ದೀರಲ್ವಾ?”… ಮತ್ತೆ ಆ ಧ್ವನಿ.

“ಒಂದು ನಿಮಿಷ ಇರಿ”… ಅಂತ ಬಾತ್ ರೂಮ್ ಹೋಗಿ ಮೂಖಕ್ಕೆ ನೀರು ಎರಚಿಕೊಂಡು ಬಂದು ಹಲೋ…. ಹೇಳಿ ಅಂದೆ.

“ಬಿಗ್ ಬಾಸ್ ಹೋಗೋಕೆ ರೆಡಿನಾ?”… ಅಂತ ಮತ್ತೆ ಕೇಳಿದಾಗ ಇದು ಕನಸ್ಸಲ್ಲ ನಿಜ ಅನಿಸಿತು. ಪದ್ದಣ್ಣ, ಮಕ್ಕಳಿಗೆ ಬಿಟ್ಟು ಒಂದು ದಿನಾನೂ ತವರು ಮನೆಗಂತ ಹೋಗಿಲ್ಲ. ಕೊನೆ ಪಕ್ಷ ಇದರಿಂದ ಮನೆಯವರಿಗೆಲ್ಲ ನನ್ನ ಬೆಲೆ ಏನು ಅಂತ ತೋರಿಸೋಕೆ ಇದು ಸುವರ್ಣಾವಕಾಶ ಅನ್ಕೊಂಡು ಗಟ್ಟಿ ನಿರ್ಧಾರದಿಂದ ಪದ್ದಣ್ಣ, ಅಪ್ಪಾಜಿ ಅಭಿಪ್ರಾಯ ಕೇಳದೆ “ಆಯ್ತು, ನಾನು ರೆಡಿ… ಮುಂದೆ ಏನ್ ಮಾಡಬೇಕು ಹೇಳಿ” ಅಂದೆ.

“colours ಕನ್ನಡ ಆಫೀಸ್ ವಿಳಾಸ ಕಳಸ್ತೀವಿ. ಅಲ್ಲಿಗೆ ಬಂದ್ರೆ ಟರ್ಮ್ಸ್ ಅಂಡ್ ಕಂಡೀಶನ್ ಹೇಳ್ತೀವಿ, ಒಪ್ಪಿಗೆ ಆದ್ರೆ ಅಗ್ರಿಮೆಂಟ್ ಗೆ ಸಹಿ ಹಾಕ್ಬೇಕು”… ವಿವರಣೆ ಕೊಟ್ಟರು.

ನಾನು ಎಲ್ಲದಕ್ಕೂ ಎಸ್… ಎಸ್… ಹೇಳಿದೆ. ಎಲ್ಲ ಮಾತಾಡಿ ಫೋನ್ ಇಟ್ಟಮೇಲೆ ಮೈಮೇಲೆ ಶ್ರೇಯಾ ಘೋಷಲ್ ಆವರಿಸಿದ್ದಳು.

“ನಿಂತಲ್ಲಿ… ನಿಲ್ಲಲಾರೆ…ಅಹಹಾ…
ಕುಂತಲಿ ಕೂರಲಾರೆ… ಅಹಹಾ…
ನಿನ್ನದೇ ಜಾದು ಎಲ್ಲ.. ಅಹಹಾ”…
ಹೇಳಲು ಮಾತೆ ಇಲ್ಲಾ… ಅಹಹಾ…

ಪದ್ದಣ್ಣ ಕೆಲಸ ಬಿಟ್ಟು ನನ್ನತ್ತ ಗುರಾಯಿಸಿಸುತ್ತ ನೋಡಿದ.

‘ಶ್ರೇಯಾ ಘೋಷಲ್ ಜೊತೆಗೆ ಹಾಡೋಕೆ ಮೇಲ್ ಸಿಂಗರ್ ಚಾನ್ಸ್ ನಿಂಗೆ ಸಿಗಬಹುದು ಅಂತ ನೋಡ್ತಿದ್ರೆ ಮರೆತು ಬಿಡು. ನಾನು ನಿನ್ನನಂತೂ ಸೆಲೆಕ್ಟ್ ಮಾಡೋಲ್ಲ’… ಅಂತ ನನ್ನ ಸಂಭ್ರಮದಲ್ಲಿ ನಾನಿದ್ದೆ .

ಕೌಂಟರ್ ಪದ್ದಣ್ಣ “ಅಯ್ಯೋ… ದೇವರಾಣೆಗೂ ನಿನ್ನಂತ ಶ್ರೇಯಾ ಘೋಷಲ್ ಇದ್ರೆ ನನಗೆ ಕೋಟಿ ಕೊಡ್ತೀನಿ ಅಂದ್ರು ಹಾಡೋಲ್ಲ ” ಅಂದ.

“ಮತ್ಯಾಕೆ ನನ್ನನ್ನೇ ನೋಡತ್ತಿದ್ದಿ”…ಅಂತ ವಾಪಾಸ್ ಕೌಂಟರ್ ಕೊಟ್ಟೆ.

“ಎಂತ ಒಳ್ಳೆ ಹಾಡನ್ನ ಎಷ್ಟು ಕೆಟ್ಟದಾಗಿ ಹೇಳ್ತಿದ್ದಿ… ಈ ಹಾಡು ಹಾಡೋಕೆ ಸ್ಫೂರ್ತಿ ಕೊಟ್ಟೋರು ಯಾರು”…ಕೇಳಿದ.

ನಂಗೂ ಪದ್ದಣ್ಣನಿಗೆ ಹೊಟ್ಟೆ ಉರಿಸಬೇಕು ಅಂತಿತ್ತು. ವಿಷಯ ತಿಳಿಸೋಕೆ ತಡ ಮಾಡಲಿಲ್ಲ. colours ಕನ್ನಡದಿಂದ ಕಾಲ್ ಬಂದಿತ್ತು. ಬಿಗ್ ಬಾಸ್ ಕರೀತಿದ್ದಾರೆ ಅಂದೆ.

ಪದ್ದಣ್ಣನ ಬಾಯಿಂದ ಮಾತೇ ಹೊರಗೆ ಬರಲಿಲ್ಲ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು “ಏನ್ ಹೇಳ್ತಿದ್ದೀಯೇ… ನಿಜನಾ… ಬಿಗ್ ಬಾಸ್ ಅಂದ್ರೆ ಏನ್ ಗೊತ್ತಾ…ಬೆಳಗ್ಗೆ ಅಡುಗೆ ಮನೆಯಲ್ಲಿ ಬೈತೀರತ್ತಿಯಲ್ಲ ಅದಲ್ಲ… ಆದರ ನೆಕ್ಸ್ಟ್ ಲೆವೆಲ್ ಇರುತ್ತೆ… ನಿಂಗೆ ಸ್ವಲ್ಪ ಜೋರ್ ಧ್ವನಿಯಲ್ಲಿ ನಾನು ಮಾತಾಡಿದ್ರೆನೇ..ಕಣ್ಣಲ್ಲಿ ನೀರು ತುಂಬಕೊಂಡು ನಿಮ್ಮ ಅಪ್ಪ ಅಮ್ಮನಿಗೆ ಕಾಲ್ ಮಾಡ್ತಿಯಾ. ಅಲ್ಲಿ ನಿನಗಿಂತ ಅಪ್ಪನಂತವರು, ಅಮ್ಮನoತವರು ಬಂದಿರತ್ತಾರೆ. ಅದೆಲ್ಲಾ ನಿನ್ನ ಕಡೆ ಆಗೋಲ್ಲ ಸುಮ್ನೆ ನಮ್ಮನೇ ಬಿಗ್ ಬಾಸ್ ಆಟ ಆಡ್ಕೊಂಡು ತೆಪ್ಪಗೆ ಇರು…ಸುಮ್ನೆ ಅಲ್ಲಿ ಹೋಗಿ ಒದ್ದಾಡ ಬೇಡಾ… ಸುಮ್ನೆ ಬೇಡಾ ಅನ್ನು”… ಅಂದ ಪದ್ದಣ್ಣ.

ಮೊದಲಿಂದಲೂ ಪದ್ದಣ್ಣ ನನ್ನ ಮಾತಿಗೆಲ್ಲ ಉಲ್ಟಾ ಹೊಡೆಯೋದೆ ಜಾಸ್ತಿ…

“ಏನೇ ಆಗ್ಲಿ… ದೊಡ್ಡ ಪ್ರಳಯವೇ ಆಗ್ಲಿ, ನಾನು ಬಿಗ್ ಬಾಸ್ ಹೋಗೋಳೇ…ಅಂತ ನನ್ನ ಕನಸ್ಸಿನ ಲೋಕದಲ್ಲಿದ್ದೆ . ಪದ್ದಣ್ಣ ಕಂಗಲಾಗಿ ನನ್ನನ್ನೇ ನೋಡುತ್ತಾ ಕೂತ.

ನಾಳೆ ನಾನು ಬಿಗ್ ಬಾಸ್ ಹೋಗ್ತಿನೋ ಇಲ್ವೋ ತಪ್ಪದೆ ಓದಿ…


  • ಶಾಲಿನಿ ಹೂಲಿ ಪ್ರದೀಪ್

 

0 0 votes
Article Rating

Leave a Reply

1 Comment
Inline Feedbacks
View all comments

[…] ಬಿಗ್ ಬಾಸ್ ನಲ್ಲಿ ‘ನಾನು’ (ಭಾಗ – ೧) […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW