ಹುಟ್ಟುಹಬ್ಬದ ದಿನ ಹುಟ್ಟಿದ ಕವಿತೆ …

ಪ್ರೊ. ರೂಪೇಶ್ ಅವರ ಜನ್ಮದಿನದಂದು ಹುಟ್ಟಿದ ಈ ಕವಿತೆಯಲ್ಲಿದೆ ಪ್ರಶ್ನೆಗಳ ಸಾಲುಗಳು, ಜೀವನದ ಸಾರಗಳು. ಮುಂದೆ ಓದಿ…

ಯಾರನ್ನು ನಾ ವಂದಿಸಲಿ
ಧನ್ಯತೆ ಯಾರಿಗೆ ನಾ ಸಮರ್ಪಿಸಲಿ?

ಪರಿಸರವೆಂಬ ಈ ಭೂಮಿಯ
ನೈಸರ್ಗಿಕ ಪೀಳಿಗೆ ಎಂಬ
ಮುಂದುವರಿಯುವ ಮಾಯೆಗೋ?

ಆ ಪೀಳಿಗೆಯಲ್ಲಿ ಪ್ರವಹಿಸುವ
ಹಲವು ಪ್ರಯಾಣಿಕರಲ್ಲಿ ಒಬ್ಬನಾಗುವ
ಈ ಸವಾರಿಗೋ?

ವರುಷ ಕಳೆದಂತೆ ಯೋಚನೆಗಳೆಂಬ
ತುಕ್ಕು ಹಿಡಿದ ಬಲೆಗಳಲ್ಲಿ
ಸಿಕ್ಕಿಕೊಳ್ಳುತ್ತಿರುವ ಚಿಂತನೆಗಳಿಗೋ?

ಭೂಮಿಯಲ್ಲಿ ಜನಿಸುವ
ಕಾರಣವಾದ ನಿಯೋಗವೆಂಬ
ನಿಮಿತ್ತಗಳಿಗೋ ?

ಅದಕ್ಕೆ ಅರ್ಧ ಭಾಗಿಯಾದ
ತಾಯಿಗೊ ಅದರರ್ಧ
ಭಾಗಿಯಾದ ಪಿತನಿಗೋ ?

ಮತ್ತೂ ನನ್ನ ಮಾಂಸ ಜೀವದಿಂದ
ಒಂಬತ್ತು ತಿಂಗಳು ಹೊತ್ತು ರೂಪು ರೇಷೆ ಕೊಟ್ಟು
ಸೃಷ್ಟಿಸಿದ ಆ ಗರ್ಭಪಾತ್ರೆಗೋ?

ಕೂಗಿ ಕರೆದು ಕೊಂಡು ಭುವಿಯಲ್ಲಿ
ಮೊದ ಮೊದಲು ನಾ ಹುಟ್ಟಿ ಬಂದ
ಆ ಕ್ಷಣವೆಂಬ ಶುಭಮುಹೂರ್ತಕ್ಕೋ?

ರಕ್ತಭಂದವನ್ನು ಮುರಿದು
ಅವ್ವನಿಂದ ಅನ್ಯಾನಾಗಿರಲು
ಬೇರ್ಪಟ್ಟ ಆ ಹೊಕ್ಕುಳ ಕುಡಿಗೋ?

ಅವ್ವನೊಂದಿಗಿನ ಹೊಕ್ಕುಳ
ಕುಡಿಯನ್ನು ಕಡಿದು
ಬಿಸಾಕಿದ ಆ ಗಳಿಗೆಗೋ?

ತೆವಳಿಕೊಂಡು ನೆಲ ಮುದ್ದಿಸುತ್ತಾ,
ಮಣ್ಣನ್ನು ನೆಕ್ಕಿತಿಂದು , ಅಂಬೆಗಾಲಿಕ್ಕಲು
ನಿಂತು ಬಿದ್ದ ಆ ಕ್ಷಣಗಳಿಗೋ…..

ತೊದಲು ಮಾತಿನಿಂದ ನಾ
ಅಪ್ಪ ಅಮ್ಮ ನಿಗೆ ಕೊಟ್ಟ
ಆ ಮುತ್ತಿನ ಕ್ಷಣಗಳಿಗೋ?

ಹಿರಿಯರೂ-ಗುರುಗಳು ನನ್ನಲ್ಲಿ ಕಂಡ
ಕಾಣಬಯಸಿದನ್ನು ಅರಿಯದೆ
ಎಲ್ಲೆಲ್ಲೋ ಕೈಜಾರಿಕೊಂಡ ಕ್ಷಣಗಳಿಗೋ?

ಬಾಲ್ಯ,ಹುಡುಗಾಟ, ಯೌವ್ವನದ ಸಮಾರಂಭದಲ್ಲಿ
ಕಳೆದುಕೊಂಡ ಅಮೂಲ್ಯ ಆಯುಷ್ಯದ
ಚೆಲ್ಲಿ ಹೋದ ಸಮಯಾ-ಹರ್ಷವೃಂದಕ್ಕೋ?

ಕುಟುಂಬವನ್ನೂ ಅರಿಯದೆ,
ಮುಂಗೋಪವನ್ನು ತೊಟ್ಟು,
ವ್ಯಯಿಸುತ್ತಿರುವ ವಯಸ್ಸಿಗೋ?

ಅನಕ್ಷರಸ್ಥೆಯ ಶ್ರೀಮಂತಿಕೆಯಿಂದ ನಿತ್ಯವೂ ಗೀಚಿದ
ನೀಚನಾದ ನನ್ನ ವಾಕ್ಯವನ್ನು ಮುಗ್ದರಾಗಿ ಅಭಿನಂದಿಸುವ ನಿಮ್ಮನ್ನೋ?

ಇನ್ನೊಂದು ಜನ್ಮ ವಿಲ್ಲವೆಂದರಿತರೂ
ಇದೆಯೆಂದು ಬೀಗುವ ಅಹಂಕಾರದ
ನನ್ನ ಈ ಸೋಮಾರಿತನಕ್ಕೋ?

ಸಮಾಜದ ಕೆಟ್ಟತನಗಳ
ನೋವುಗಳನ್ನ ನೋಡಿ
ಅಸಹಾಯಕನಾಗಿರುವ ಕ್ರೂರತನಕ್ಕೋ?

ನನ್ನ ಹಳೆಯ ಕ್ಯಾಸಿಟಿನಲ್ಲಿ
ತಿರುಗಿದ ತಿರುಗಲಿರುವ
ರೀಲುಗಳಿಗೋ?

ಯಾರನ್ನು ನಾ ವಂದಿಸಲಿ
ಧನ್ಯತೆ ಯಾರಿಗೆ ನಾ ಸಮರ್ಪಿಸಲಿ?

ನಿಮ್ಮವ ನಲ್ಲ
ರೂಪು


  • ಪ್ರೊ.ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು ವಿಜಯಾ ಕಾಲೇಜು ಬೆಂಗಳೂರು)

0 0 votes
Article Rating

Leave a Reply

1 Comment
Inline Feedbacks
View all comments
ರಘುರಾಂ

ತುಂಬ ಚೆನ್ನಾಗಿದೆ

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW