ನಿಮಗೆಲ್ಲಾ ಹೂ ಕೋಸು – ಗೋಬಿ / Cauliflower ಗೊತ್ತು. ಹಲವರು ಹೂ ಕೋಸಿನ ರೀತಿಯೇ ಕಾಣುವ ಆದರೆ, ಹಸಿರು ಬಣ್ಣದ ತರಕಾರಿಯನ್ನು ಮಾಲ್ ಗಳಲ್ಲಿ ನೋಡಿರಬಹುದು. ಅದೇ ಬ್ರಾಕಲಿ/ಬ್ರೊಕೊಲಿ (Broccoli). ಒಂದು ಅದ್ಭುತವಾದ ಆರೋಗ್ಯಕರ ಸಸ್ಯ. ತಪ್ಪದೆ ಮುಂದೆ ಓದಿ…
ಇದು ಇಟಲಿ ದೇಶದ ಮೂಲದ ಸಸ್ಯ. ಇದರ ಸಸ್ಯಶಾಸ್ತ್ರದ ಹೆಸರು Brassica oleracea ಮತ್ತು ಇದು ನಮ್ಮ ಎಲ್ಲಾ ತರಹದ ಕೋಸಿನ ತರಹ Brassicaceae ಕುಟುಂಬಕ್ಕೆ ಸೇರಿದ ಪುಟ್ಟ ಏಕ ವಾರ್ಷಿಕ ಸಸ್ಯ. ( ಚಿತ್ರ ನೋಡಿ ). ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಸಸ್ಯ ನಮಗೆ ಬೇಕಾದ ಎಲ್ಲಾ ವಿಟಮಿನ್, ಖನಿಜ ಮತ್ತಿತರ ಗುಣಗಳನ್ನು ಹೊಂದಿದ್ದು ವಿಶ್ವದಾದ್ಯಂತ ಉಪಯೋಗಿಸಲ್ಪಡುತ್ತಿದೆ. ಆದರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಇದರ ಬೆಳೆ ಬೆಳೆಸಲು ಪ್ರಾರಂಭ ಮಾಡಿದ್ದು. ಹೆಚ್ಚು ಬೆಲೆಯ ಕಾರಣ ಹೆಚ್ಚು ಪ್ರಚಾರಕ್ಕೆ ಬಂದಿಲ್ಲ.
ಹಸಿಯಾಗಿ, ಬೇಯಿಸಿ ಅಥವ ಗೋಬಿ ತರಹ ಮಂಚೂರಿ ಮಾಡಿ ನಿಮಗಿಷ್ಟವಾದ ರೀತಿಯಲ್ಲಿ ಈ ಅಪರೂಪದ ಹೂವನ್ನು ಸೇವಿಸಬಹುದು. ಪ್ರತೀ 100 ಗ್ರಾಮ್ ಬ್ರೊಕೊಲಿಯಲ್ಲಿ ಶೇಕಡ 7% ಪಿಷ್ಟ ( Carbohydrates ), 3 % ಪ್ರೊಟೀನ್ ಮತ್ತು ಕೇವಲ 0.3% ಕೊಬ್ಬು ಇದೆ. ಜೊತೆಗೆ 3 % ಜೀರ್ಣವಾಗುವ ನಾರಿನಂಶ ಇದೆ.
ಇನ್ನು ವಿಟಮಿನ್ ಗಳ ವಿಷಯಕ್ಕೆ ಬಂದರೆ ವಿಟಮಿನ್ A ಯಿಂದ ಹಿಡಿದು ವಿಟಮಿನ್ K ವರೆಗೆ 20 ಕ್ಕೂ ಹೆಚ್ಚು ವಿಟಮಿನ್ ಗಳು ಅಲ್ಲದೆ Calcium, Potassium, Iron ಮುಂತಾದ 10 ಕ್ಕೂ ಹೆಚ್ಚು ಖನಿಜಾಂಶಗಳು ಇವೆ. ಇಷ್ಟೊಂದು ಅವಶ್ಯ ಅಂಶಗಳನ್ನು ಹೊಂದಿರುವ ಮತ್ತೊಂದು ತರಕಾರಿ ಸಸ್ಯ ಇಲ್ಲ.
ಈ ಎಲ್ಲಾ ಗುಣಗಳಿಂದಾಗಿ ಈ ಬ್ರಾಕಲಿಯನ್ನು ವಿಶ್ವದ Super food ಎಂದು ಕರೆಯುತ್ತಾರೆ.
ಫೋಟೋ ಕೃಪೆ : google
ಬ್ರಾಕಲಿಯ ಆರೋಗ್ಯದ ಉಪಯೋಗಗಳ ಬಗ್ಗೆ ಹೇಳುವುದಾದರೆ :
1.ಬ್ರಾಕಲಿ ಸೇವನೆ ಕ್ಯಾನ್ಸರ್ ಕಾಯಿಲೆ ತಡೆಗಟ್ಟಲು ಸಹಾಯಕ. ಇದಕ್ಕೆ ಕಾರಣ ಇದರಲ್ಲಿ ಇರುವ Sulforaphane ಮತ್ತು Indole – 3 – carbinol ಎಂಬ ಅಂಶಗಳು. ಅದರಲ್ಲೂ ಸ್ತನ ಕ್ಯಾನ್ಸರ್ ಗೆ ತಡೆ ಹಾಗೂ ನಿವಾರಣೆಗೆ ಸಹಾಯಕ ಎಂದು ಸಾಬೀತಾಗಿದೆ. ಹೆಚ್ಚಿನ ಕಬ್ಬಿಣದ ಅಂಶವೂ ಇರುವ ಕಾರಣಕ್ಕೆ 45 ವರ್ಷ ದಾಟಿದ ಹೆಣ್ಣುಮಕ್ಕಳು ( Menopause stage ) ಬ್ರಾಕಲಿಯನ್ನು ಸೇವಿಸುವುದು ಅತೀ ಅವಶ್ಯ ಎಂದು ಡಾಕ್ಟರ್ ಗಳ ಸಲಹೆ. ಜೊತೆಗೆ Prostate cancer, Colorectal cancer, Kidney cancer ಗೆ ಸಹ ಉತ್ತಮ.
2. ಇದರಲ್ಲಿರುವ Calcium ಮತ್ತು Collagen ಗಳು ನಮ್ಮ ದೇಹದ ಎಲ್ಲಾ ಮೂಳೆಗಳು ಮತ್ತು ಹಲ್ಲುಗಳು ಗಟ್ಟಿಯಾಗಿ ಇರಲು ಸಹಕಾರಿ. ಜೊತೆಗೆ ವಿಟಮಿನ್ K ಸಹಾ ಇರುವುದರಿಂದ Joints pain, Osteoporosis ತೊಂದರೆ ಕಡಿಮೆಯಾಗುತ್ತದೆ.
3. ವಿಟಮಿನ್ C ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಚರ್ಮ ಸುಕ್ಕುಗಟ್ಟುವುದನ್ನು ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ ( anti aging ) ಜೊತೆಗೆ ಚರ್ಮದ ಕ್ಯಾನ್ಸರ್ ತಡೆಗೆ ಉಪಯುಕ್ತ.
4. ಜೀರ್ಣವಾಗುವ ನಾರಿನಂಶ ನಮ್ಮ ಜೀರ್ಣಾಂಗ ಸರಿಯಾಗಿ ಕೆಲಸ ಮಾಡಲು ಸಹಕರಿಸುತ್ತದೆ ಹಾಗೂ acidity, ಮಲಬದ್ಧತೆ ಆಗದಂತೆ ತಡೆಯುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್.
5. ಸಕ್ಕರೆ ಕಾಯಿಲೆ – Type 2 diabetes ಹಿಡಿತದಲ್ಲಿರಲು ಸಹಾಯಕ. ಬ್ರಾಕಲಿ ಸೇವನೆಯ ನಂತರ ರಕ್ತದ ಸಕ್ಕರೆ ಅಂಶ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
6.ಬ್ರಾಕಲಿಯಲ್ಲಿರುವ ನಾರಿನಂಶ, Potassium ಮತ್ತು ಸಾಕಷ್ಟು Antioxidants ಗಳಿಂದಾಗಿ ಇದರ ನಿಯಮಿತ ಸೇವನೆ ಹೃದಯದ ಆರೋಗ್ಯ ಮತ್ತು ಇತರೆ Cardiovascular disease ( CVD ) ನಿಂದ ಕಾಪಾಡಿಕೊಳ್ಳಲು ಉಪಯುಕ್ತ ಎಂದು American Heart Association ಅವರು ಪ್ರಾಮಾಣಿಕರಿಸಿದ್ದಾರೆ. ಜೊತೆಗೆ ಇದು ಅಧಿಕ ರಕ್ತದೊತ್ತಡ – High BP ನಿಯಂತ್ರಣಕ್ಕೂ ಸಹಾಯಕ. ಕೆಟ್ಟ ಕೊಬ್ಬಾದ LDL ಮತ್ತು Triglycerides ಅನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಹೃದಯಾಘಾತ ಸಾಧ್ಯತೆ ಕಡಿಮೆಯಾಗುತ್ತದೆ.
7.ಬ್ರಾಕಲಿಯಲ್ಲಿರುವ Bioactive compounds ಗಳು ಅದರಲ್ಲಿಯೂ ವಿಶೇಷವಾಗಿ Kaempferol ಅಂಶ ನಮ್ಮ ದೇಹದ ಮಾಂಸ ಖಂಡಗಳ ಊತ, ಉರಿಯೂತ ನಿವಾರಿಸುತ್ತದೆ. ಧೂಮಪಾನಿಗಳು / ಮಧ್ಯಪಾನಿಗಳು ಬ್ರಾಕಲಿಯನ್ನು ಅವಶ್ಯ ಸೇವಿಸಬೇಕು.
8.ಬ್ರಾಕಲಿಯನ್ನು ಹಸಿಯಾಗಿ ಅಥವ ಹೆಚ್ಚು ಬೇಯಿಸದೆ, ಹುರಿಯದೇ, ಎಣ್ಣೆಯನ್ನು ಉಪಯೋಗಿಸದೆ ಸೇವಿಸುವುದರಿಂದ ದೇಹದ ಬೊಜ್ಜು, ಅಧಿಕ ತೂಕ ಕಡಿಮೆಯಾಗುವುದು. ಬ್ರೊಕೊಲಿಯಲ್ಲಿ ಸುಮಾರು ಶೇಕಡ 89 % ನೀರಿನಂಶ ಮತ್ತು ” 0 ” % ಕೊಬ್ಬು ಇರುವುದರಿಂದ ಡಯಟ್ ಮಾಡುವವರಿಗೆ ಸಲಾಡ್ ಮಾಡಿಕೊಂಡು ಸೇವಿಸಲು ಉತ್ತಮ ಹಸಿ ತರಕಾರಿ. ಇದರ ಜೊತೆಗೆ ಹೂ ಕೋಸು ಸೇರಿಸಿಕೊಂಡರಂತೂ ಒಂದು ಅದ್ಭುತವಾದ ಆರೋಗ್ಯಕರ ಜೋಡಿ.
9. ಬ್ರೊಕೊಲಿಯಲ್ಲಿರುವ ಹಲವು ಅಂಶಗಳು ನಮ್ಮ ಮಾನಸಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ಉತ್ತಮ. ಹಾಗಾಗಿ ಮಕ್ಕಳಿಗೆ ನಿಯಮಿತವಾಗಿ ಇದನ್ನು ಕೊಡಬೇಕು. ಮಕ್ಕಳು ಬುದ್ಧಿವಂತರಾಗುತ್ತಾರೆ, ವಯಸ್ಸಾದವರ ಮರೆವಿನ ಖಾಯಿಲೆ ಸಹ ನಿಯಂತ್ರಣಕ್ಕೆ ಬರುವುದು.
ಫೋಟೋ ಕೃಪೆ : google
ಬ್ರೊಕೊಲಿಯಲ್ಲಿ 3 ವಿಧಗಳಿದ್ದು ( ಚಿತ್ರ ನೋಡಿ ) ಹಸಿರು ಬ್ರೊಕೊಲಿ ನಮ್ಮಲ್ಲಿ ಸಿಗುತ್ತದೆ ಆದರೆ ಬೇರೆ ಎರಡು ಜಾತಿಗಳನ್ನು ನನಗೆ ತಿಳಿದಹಾಗೆ ನಮ್ಮಲ್ಲಿ ಯಾರು ಬೆಳೆಯುತ್ತಿಲ್ಲ.
ಬ್ರೊಕೊಲಿಯನ್ನು ಕೊಳ್ಳುವಾಗ ಆದಷ್ಟು fresh ಆಗಿರುವುದನ್ನು ಆರಿಸಿಕೊಳ್ಳಿ. ಮೇಲ್ಭಾಗದಲ್ಲಿ ಹಳದಿಯಾಗಿದ್ದರೆ ಅದು ಎಳೆಯ ಮೊಗ್ಗುಗಳು ಅರಳಿರುವ ಸೂಚನೆ. ಅದು ಬಲಿತಿರುತ್ತೆ, ಪೋಷಕಾಂಶಗಳು ಕಡಿಮೆಯಾಗಿರುತ್ತೆ. ಹಾಗಾಗಿ ಕೊಳ್ಳಬೇಡಿ. ಮನೆಗೆ ತಂದನಂತರ ಆದಷ್ಟೂ ಬೇಗ ಉಪಯೋಗಿಸಿ.
ಬೆಲೆ ಕಡಿಮೆಯಿದ್ದಾಗ ಸಿಕ್ಕರೆ, ಉಪ್ಪಿನಕಾಯಿ ಮಾಡಿಟ್ಟುಕೊಳ್ಳಿ ( pickling ) ಅಥವಾ ಹೆಚ್ಚಿಕೊಂಡು locking cover ನಲ್ಲಿ ಹಾಕಿ deep freeze ನಲ್ಲಿಡಿ. ಹೀಗೆ ಇಟ್ಟರೆ 6 – 10 ತಿಂಗಳವರೆಗೂ ಬೇಕಾದಾಗಲೆಲ್ಲಾ ಉಪಯೋಗಿಸಿಕೊಳ್ಳಬಹುದು.
ಸಾಸುವೆ ಕಾಳಿನ ಗಾತ್ರದ ಬ್ರೊಕೊಲಿ ಬೀಜಗಳು Amazon ಮತ್ತಿತರ ಕಡೆ ಸಿಗುತ್ತೆ ( 350 – 400 ಬೀಜಕ್ಕೆ ರೂ. 90.00 ) internet ನಲ್ಲಿ ಹುಡುಕಿ, ತರಿಸಿ pot ನಲ್ಲಿ ಬೆಳೆಸಿಕೊಳ್ಳಿ. 65 – 70 ದಿನಕ್ಕೆ ಕೀಳಬಹುದು. ಮನೆಯಲ್ಲೇ ಬೆಳೆದುಕೊಂಡರೆ ಬ್ರೊಕೊಲಿಯ ಎಲೆಗಳು, ಎಳೆಯ ಕಾಂಡವನ್ನು ಸಹಾ ಉಪಯೋಗಿಸಬಹುದು.
- ಚಿತ್ರ ಮತ್ತು ಲೇಖನ : ಮಂಜುನಾಥ್ ಪ್ರಸಾದ್