ಇತ್ತೀಚಿಗೆ ಶ್ರೀ ಚಂದ್ರ ಆರ್ಯ ಅವರು ಕೆನಡಾದ ಸಂಸತ್ ಸದಸ್ಯರಾಗಿದ್ದು,ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ, ನಮಗೆಲ್ಲ ಹೆಮ್ಮೆ ತಂದಿದ್ದಾರೆ. ಅವರ ಮೇಲೆ ಕವಿ ಬೆಂಶ್ರೀ ರವೀಂದ್ರ ಅವರು ಬರೆದ ಕವನ, ಮುಂದೆ ಓದಿ…
ಕೆನಡಾದ ಕೆಳಮನೆಯಲ್ಲಿ ಕನ್ನಡದ ಕಂಪು
ಉದ್ದರಿಸಿದರು ರಾಜಕುಮಾರ ಕುವೆಂಪು
ಎಲ್ಲಾದರೂ ಇರು ಕನ್ನಡವಾಗಿರೆಂಬ ಪೆಂಪು
ಹೆಮ್ಮೆ ಐದುಕೋಟಿ ಜನರ ನುಡಿಯೆಂದು
ಜಗದ ಹಳೆಯ ಭಾಷೆಗಳಲಿ ಸುಂದರವೆಂದು
ದ್ವಾರಾಳುವಿನ ಕನ್ನಡದ ಕಂದ ತಾನೆಂದು
ನಮ್ಮ ಸಂಸದರು ಶಾಸಕರು ಕನ್ನಡ ನುಡಿ
ಆಡಲು ಅಂಜುವರು ಹೇರಿಕೆಯನೊಪ್ಪಿ
ಕೆನಡಾ ಸಂಸತ್ತು ಮೆಚ್ಚಿತು ಚಪ್ಪಾಳೆಯನಪ್ಪಿ
ಮಣ್ಣಿನಮಗ ಚಂದ್ರ ಆರ್ಯರ ದಾಖಲೆಯು
ಭಾರತದ ಗಡಿಯಾಚೆ ಪ್ರಪ್ರಥಮವಾಗರಳಿ
ಅನುರಣಿಸಿತು ಪ್ರೀತಿಯಲಿ ಕನ್ನಡ ನುಡಿಯು
ನಿವಾಸಿಯಾ ಅನಿವಾಸಿ ಅಸ್ಮಿತೆ ಕನ್ನಡವಾಗು
ಸಾರಿತು ಜಗಕೆ ಆರ್ಯರ ಮಾತಿನ ಮೆರಗು
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು