‘ಚೈತ್ರ ವಸಂತ ವೈಶಾಖಿ’ ಕವನ – ಬೆಂಶ್ರೀ ರವೀಂದ್ರ



ಋತುರಾಜ ಹಾಡಿ ಬದುಕಿನ ಸತ್ವ ಕಾಲ ಅನಂತವೆಂದು ಸಾರಿಹನು‌ ಕೇಳಾ…. ಕವಿ ಬೆಂಶ್ರೀ ರವೀಂದ್ರ ಅವರು ಬರೆದ ಸೊಗಸಾದ ಸಾಲುಗಳು, ಮುಂದೆ ಓದಿ…

ಇತ್ತ ಚೈತ್ರಳು ಅತ್ತ ವೈಶಾಖಿಯು
ತಬ್ಬಿ ಬರುತಿಹನು ವಸಂತ ನೋಡಾ
ಹೊಂಗೆ ಮಾವಿನಲಿ ಹೊನ್ನ
ಹೂವರಳಿ ಝೆಂಕಾರ ಕೇಳು ಬಾರಾ

ಪರಪುಟ್ಟನುಲಿಯ ಕಲರವದ ದನಿಯ
ಹಾಡಿಯಲಿ ಪ್ರಣಯನಾದ ಕೇಳಾ
ಘಮಘಮದ ನೆರಳು ಚಕ್ಕಂದ ಬೆರಳು
ಜೀವಜಾಲದಿ ಅವನ ಹುರುಪು ನೋಡಾ

ಬೇವು ಬೆಲ್ಲವ ಬೆರೆಸಿ ಹೋಳಿಗೆಯ ಬಡಿಸಿ
ಪಂಚಾಂಗ ಪಠಿಸಿ‌ ಕುಣಿಸುವನು‌ ಕೇಳಾ
ಬಾಡದೀ ಚೇತನವು ಚಿಗುರಿಸುವ ಮಾವು
ತಳಿರು ತೋರಣ ತೂಗುವುದು ನೋಡಾ

ಇತ್ತ ಚೈತ್ರಳು ಅತ್ತ ವೈಶಾಖಿಯು
ತಬ್ಬಿ ಬರುತಿಹನು ವಸಂತ ನೋಡಾ
ಋತುರಾಜ ಹಾಡಿ ಬದುಕಿನ ಸತ್ವ
ಕಾಲ ಅನಂತವೆಂದು ಸಾರಿಹನು‌ ಕೇಳಾ.


  • ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading