ಕವಿಯತ್ರಿ ಪ್ರತಿಭಾ ನಂದಕುಮಾರ್ ಅವರು ಗಂಡು ಗಂಡು , ಹೆಣ್ಣು ಹೆಣ್ಣು ಮುಕ್ತವಾಗಿ ಕಾಮಿಸುವ ಸಲಿಂಗ ಕಾಮದ ಬಗೆಗೂ ಆಸಕ್ತಿ ಹುಟ್ಟುತ್ತಿರುವದನ್ನು ಅನೇಕ ಕವಿತೆಗಳಲ್ಲಿ ಅಂಥ ಜೋಡಿಗಳನ್ನು ನೋಡುತ್ತೇವೆ. ನಮ್ಮ ಸಮಾಜದ ನಡೆ ಯಾವ ಕಡೆ ಹೋಗುತ್ತಿದೆ ಎಂಬುದನ್ನು ಕವಯಿತ್ರಿ ತುಂಬ ಎಚ್ಚರಿಕೆಯಿಂದ ಸೆರೆ ಹಿಡಿಯುವ ಪ್ರಯತ್ನವನ್ನು ಕಾಫೀ ಹೌಸ್ ನಲ್ಲಿ ಮಾಡುತ್ತಾರೆ. ಸಾಹಿತಿ ಡಾ. ಯೈ, ಎಂ. ಯಾಕೊಳ್ಳಿ ಅವರು ಕಾಫೀ ಹೌಸ್ ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಓದಿ…
ಪುಸ್ತಕ : ಕಾಫೀ ಹೌಸ್
ಲೇಖಕರು : ಪ್ರತಿಭಾ ನಂದಕುಮಾರ್
ಪ್ರಕಾಶನ : ಅಂಕಿತಾ
ಬೆಲೆ : ೮೦.೦೦
ಪುಟಗಳು : ೮೮
ಲೇಖಕರು : ಪ್ರತಿಭಾ ನಂದಕುಮಾರ್
ಪ್ರಕಾಶನ : ಅಂಕಿತಾ
ಬೆಲೆ : ೮೦.೦೦
ಪುಟಗಳು : ೮೮
೧೯೮೦ ರ ನಂತರ ದ ಕಾಲಘಟ್ಟವೆಂಬುದು ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಬರಹದಲ್ಲಿ ಅರ್ಪಿಸಿಕೊಂಡ ಕಾಲ. ಅವರ ಅಸ್ಮಿತೆಯನ್ನು ಅತ್ಯಂತ ಪರಿಸ್ಪುಟವಾಗಿ ವ್ಯಕ್ತ ಮಾಡಿದ ಕಾಲ. ೧೯೭೦ ರ ದಶಕದಲ್ಲಿ ಅರಂಭವಾದ ದಲಿತ ಮತ್ತು ಬಂಡಾಯ ಚಳುವಳಿ ಮಹಿಳೆಯೊಳಗೂ ಹುದುಗಿರುವ ಸ್ವಾತಂತ್ರ್ಯದ ಈ ಹೋರಾಟವನ್ನು ಬಡಿದೆಬ್ಬಿಸಿತು. ಹೀಗಾಗಿ ಅಲ್ಲಿಯವರೆಗಿನ ನವೋದಯ ಕಾಲದ, ನವ್ಯ ಕಾಲದ ಮಹಿಳಾ ಸಾಹಿತಿಗಳಿಗಿಂತ ೧೯೮೦ ರ ನಂತರದ ದಶಕದಲ್ಲಿ ಬರೆಯುವ ಮಹಿಳೆ ತನ್ನ ಸಾಮಾಜಿಕ ಬದ್ಧತೆ ಮತ್ತು ತನ್ನ ಪ್ರತಿಭಟನೆಯನ್ನು ತೋರಿದಳು. ತನ್ನ ವಯಕಿಕ ನೋವನ್ನು ಮನದಾಳದ ಆಕ್ರೋಶವನ್ನು ಯಾವುದೇ ಮುಲಾಜಿಲ್ಲದೇ ಹೊರಹಾಕತೊಡಗಿದಳು.
ಈ ಹೊಸ ಅಭಿವ್ಯಕ್ತಿಯ ಮಹತ್ವದ ನಿದರ್ಶನ ಕನ್ನಡದ ಮಹತ್ವದ ಕವಯಿತ್ರಿಯರಲ್ಲೊಬ್ಬರಾಬ್ಬರಾದ ಪ್ರತಿಭಾ ನಂದಕುಮಾರ್ ಅವರು. “ನಾವು ಹುಡುಗಿಯರೇ ಹೀಗೆ “ ಎಂದು ಘೋಷಿಸುತ್ತಲೇ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ ಪ್ರತಿಭಾವಂತರು ಅವರು. ಪತ್ರಕರ್ತೆ, ಸ್ತ್ರೀವಾದಿ ಅಂಕಣಕಾರ್ತಿ ಮತ್ತು ಕವಯಿತ್ರಿ ಯಾಗಿರುವ ಪ್ರತಿಭಾ ಅವರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಕಾವ್ಯದ ಪ್ರವರ್ತಕರಲ್ಲಿ ಒಬ್ಬರು. ‘ನಾವು ಹುಡುಗಿಯರೇ ಹೀಗೆ’ ಎಂಬ ಸಂಕಲನದ ನಂತರ, ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾಕಾರಂ, ಕೌಬಾಸ ಮತ್ತು ಕಾಮಪುರಾಣ, ಮುದುಕಿಯರಿಗಿದು ಕಾಲವಲ್ಲ, ಕಾಫಿ ಹೌಸ್, ಶೃಂಗಾರ ಹೀಗೆ ಅನೇಕ ಕವನ ಸಂಕಲನಗಳನ್ನು, ಪ್ರಬಂಧ, ಸಣ್ಣಕಾದಂಬರಿ ಪ್ರಕಾರದಲ್ಲಿ ಎರಡೆರಡು ಕೃತಿಗಳನ್ನೂ ಈಚೆಗೆ ‘ಅನುದಿನದ ಅಂತರಗಂಗೆ’ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ಅವರ ಕೃತಿಗಳ ಹೆಸರು ಓದಿದೊಡನೆ ಅವರದು ಮುಕ್ತ ಮನದ ಅಭಿವ್ಯಕ್ತಿಯ ಕಾವ್ಯವೆಂಬುದು ವ್ಯಕ್ತವಾಗುತ್ತದೆ. ಅಲ್ಲಿ ಸ್ವಾತಂತ್ರ್ಯ, ತನ್ನ ಎಲ್ಲ ಭಾವಗಳನ್ನು ಯಾರು ಎಂದು ಯೋಚಿಸದೇ ಹಾಗೇ ವ್ಯಕ್ತ ಮಾಡಿಬಿಡುವ ದಂಗೆಯ ಪ್ರವೃತ್ತಿ ಇವು ಎದ್ದು ಕಾಣುತ್ತದೆ.

ಇನ್ನೂ ಮುಂದುವರೆದು ಕವಿತೆಯ ‘ಫಾರ‍್ಮ’ (ರೂಪ) ದ ಬಗೆಗೂ ಬಹಳಷ್ಟು ತಲಕೆಡಿಸಿಕೊಳ್ಳದೆ ಆ ವಿಷಂiÀiದಲ್ಲಿಯೂ ಹೊಸತನವನ್ನು ತಂದವರು ಅವರು. ವಿಶೇಷವಾಗಿ ಅವರ ‘ಕಾಫಿಹೌಸ್’ ಕವನ ಸಂಕಲನವನ್ನು ದೃಷ್ಟಿಯೊಳಗಿಟ್ಟು ಕೊಂಡು ಈ ಮಾತುಗಳನ್ನು ಹೇಳಲಾಗಿದೆ. ಆಧುನಿಕ ಮಹಿಳೆಯ ಅತ್ಯಂತ ಮುಕ್ತವಾದ ಬದುಕಿನ ಒಳಮನದ ಬೇಗುದಿಗಳನ್ನು , ಅತಿ ಮುಂದುವರಿದ ಬದುಕಿನ ಮುಕ್ತತೆಯನ್ನು ವ್ಯಕ್ತ ಮಾಡುವ ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಓದಲು ಕೈಗೆತ್ತಿಕೊಂಡೊಡನೆ ಈ ಕವಿತೆಗಳ ವಸ್ತು , ಹಾಗೆಲ್ಲಾ ಇದೆಯಾ ಎನ್ನಿಸುವಷ್ಟು ದಿಗ್ಭçಮೆಗೊಳಿಸುವ ರೀತಿಯವು. ಸ್ವತ: ಕವಿಯತ್ರಿಯೇ “ ಕಾಫೀಹೌಸ್ ಪಕ್ಕಾ ನಗರ ಪ್ರಜ್ಙೆಯ ಕವನಗಳು ಇಲ್ಲಿ ವಸ್ತು, ಭಾಷೆ ಎಲ್ಲದರಲ್ಲೂ ಒಂದು ಹೊಸ ಪ್ರಯೋಗ. ಒಂದು ಕಾಫಿ ಹೌಸಿನಲ್ಲಿ ನಡೆಯುವ ವಿದ್ಯಮಾನಗಳು , ದಿನ ನಿತ್ಯ ಬಂದು ಹೋಗುವ ಪಾತ್ರಗಳು , ಸನ್ನವೇಶಗಳೂ ಇದರಲ್ಲಿವೆ. ಜ್ವರ ಬಂದ ಹಾಗೆ ಸರಸರನೆ ಬರೆದ ನೂರಾರು ಕವನಗಳಲ್ಲಿ ಸುಮಾರು ಅರವತ್ನಾಲ್ಕನ್ನು ಇಲ್ಲಿ ಪ್ರಕಟಿಸಿದ್ದೇನೆ. ಕೆಲವರು ಇದನ್ನು ಸುದೀರ್ಘ ಒಂದೇ ಕವನ ಎಂದು ತಪ್ಪು ತಿಳಿದಿದ್ದಾರೆ. ಇವು ಬೇರೆ ಬೇರೆ ಕವನಗಳು” ಎನ್ನುತ್ತಾರೆ ಅರಿಕೆಯಲ್ಲಿ.
ಹೀಗೆ ಒಂದೆ ಕವಿತೆ ಎಂಬ ಭಾವನೆ ಓದುಗರಲ್ಲಿ ಉಂಟಾಗುವದಕ್ಕೆ ಕಾರಣ ಕವಿತೆಯ ವಸ್ತು . ಕಾಪಿ ಹೌಸ್ ಎಂಬುದು ನಗರಗಳಲ್ಲಿ ಆಧುನಿಕ ಬದುಕಿನಲ್ಲಿ, ಅತ್ಯಾಧುನಿಕ ಜನ ಕಾಫಿಗೆಂದು ಸೇರುವ ಒಂದು ಪ್ರದೇಶ. ಅಲ್ಲಿ ಗಂಡು ಹೆಣ್ಣುಗಳೆಂಬ ಭೇದವೇನೂ ಇರುವುದಿಲ್ಲ “ಕಾಫಿ ಹೌಸ್ ಎಂಬ ಕಲ್ಪನೆಯೆ ನಮಗೆ ಹೊಸದು. ಅಲ್ಲೆನು ನಡೆಯುತ್ತಿದೆ ಎಬುದು ಅನೇಕರಿಗೆ ವಿಸ್ಮಯ. ಗಂಟೆಗಟ್ಟಲೇ ಕೂತು ಕಾಫಿ ಹೌಸುಗಳಲ್ಲಿ ಏನು ಮತಾಡುತ್ತಾರೆ. ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ. ಒಂದು ಕಾಫಿಯ ದೆಸೆಯಿಂದ ಏನೆನೋ ಅಗಿಬಿಡಬಹುದು ಎಂದು ನಂಬುವುದು ಕಷ್ಟ ಮತ್ತು ಸುಲಭ” ( ಜೋಗಿ -ಮುನ್ನುಡಿಯಲ್ಲಿ)
ಅತ್ಯಾಧುನಿಕ ಜಗತ್ತಿನ ಒಂದು ಕೇಂದ್ರ ‘ಕಾಪಿ ಹೌಸ್’. ಅದು ಗೆಳೆಯ ಗೆಳತಿಯರ ನಡುವಿನ ಸಂಭಾಷಣ ತಾಣವೂ ಹೌದು. ಮನಸ್ಸು ಮನಸ್ಸುಗಳನ್ನು ಸೇರಿಸುವ, ಮತ್ತು ಪ್ರತ್ಯೇಕವಾಗಿಸುವ ಒಂದು ವಿಸ್ಮಯ ಕೇಂದ.್ರ
ವಾಸ್ತವದಲ್ಲಿ ಇದು ಕಾವ್ಯವೇ ಎಂಬ ಪ್ರಶ್ನೆ ಕೂಡ ಸಾಂಪ್ರದಾಯಿಕ ಮನಸ್ಸನ್ನು ಕಾಡದಿರದು . ನಮಗೆ ಮಾತ್ರವಲ್ಲ ಮುನ್ನುಡಿ ಬರೆದ ಜೋಗಿಯವರಿಗೂ ಈ ಭಾವನೆ ಬಂದು ಹೋಗಿದೆ. ಪ್ರತಿಭ ಅವರ ಎರಡು ಪುಟ್ಟ ಕವಿತೆಗಳನ್ನು ಉದಾಹರಿಸುತ್ತ ಅವರು “ ಈ ಎರಡು ಪುಟ್ಟ ಕವಿತೆಗಳನ್ನು ಓದುತ್ತ ಪ್ರತಿಭಾ ನಂದಕುಮಾರ್ ಕವಿತ್ವವನ್ನು ಹಿಡಿಯಲು ಹೊರಟೆ. ಇದು ಕಾವ್ಯವಲ್ಲ ಅನ್ನಿಸುವ ಹೊತ್ತಿಗೆ , ಆಧುನಿಕ ಕಾವ್ಯ ಯಾವುದು ಎಂಬ ಪ್ರಶ್ನೆ ಎದುರಾಯಿತು. ಕಾವ್ಯದ ಬಗೆಗೆ ನಮ್ಮೊಳಗೆ ಎಂತೆAಥಹ ಭ್ರಮೆಗಳಿವೆ. ಎಂದು ಯೋಚಿಸಿದೆ. ಕವಿತೆಯಂದರೆ ಛಂದಸ್ಸಿನಲ್ಲಿ ಹೇಳಿಸಿಕೊಂಡ ಕಥನ . ಕವಿತೆಯಂದರೆ ಒಪ್ಪವಾದ ಭಾಷೆಯಲ್ಲಿ ಒಪ್ಪಿಸಿಕೊಂಡ ಅನುಭವ , ಕವಿತೆಯಂದರೆ ಮತ್ಯಾವ ಥರವೂ ಹೇಳಲಿಕ್ಕಾಗದ್ದು, ಕವಿತೆಯಂದರೆ ಒಳಗುಟ್ಟು, ಕವಿತೆ ಎಂದರೆ ಏಕಾಂತ, ದುಗುಡ, ದುಮ್ಮಾನ ಆ ಕ್ಷಣವೆ ಹುಟ್ಟಿ ಮರುಕ್ಷಣ ಸಾಯುವಂಥದದು .ಕವಿv ಎಂದರೆ ಉದ್ಘಾರ, ಪ್ರತಿಭಟನೆ, ಬಂಡಾಯ, ವಿಸ್ಮಯ, ಭ್ರಾಂತಿ, ಚಾಟಿ, ಚಾಡಿ, ಚಿತ್ಕಾರ” ಇದೆಲ್ಲವೂ ‘ಕಾಫಿ ಹೌಸ್’ ನಲ್ಲಿವೆ. ಇಲ್ಲಿರುವ ಹೆಣ್ಣುಗಳು ಅನೇಕ ಗಂಡ ಹೆಂಡತಿ ಎಂಬ ಸಂಬಂಧವನ್ನು ಹೊಂದಿರುವವರಾದರೂ ಅವರದು ತುಂಬ ಮುಕ್ತವಾದ ಜೀವನ . ಇಲ್ಲಿ ಅತ್ಯಾಧುನಿಕ ಹುಡುಗಿಯರ ಮನದ ಒಳತೋಟಿಗಳೆ ಕವಿತೆಯಾಗಿವೆ. ವಸ್ತು ಕೂಡಾ ಸ್ವಚ್ಛಂದ ಬದುಕಿನ ಮುಕ್ತ ರೀತಿಯೇ.

ಇಲ್ಲಿನ ಹುಡುಗಿಯರ ಪ್ರಶ್ನೆ ಆತಂಕ ಏನು ಎಂದರೆ “ಆಕ್ಟಿವಿಸ್ಟ ಆಗುವದು ಸುಲಭವಲ್ಲ, ನಿನ್ನೆವರೆಗೆ ಜೊತೆಗೆ ಮಲಗಿದವನು ಪಾಸಿಟಿವ್ ಅಂತ ಗೊತ್ತಾದಾಗ ತಡೆದುಕೊಳ್ಳುವದು ಕಷ್ಟ. ‘ಬಟ್‌ವಿ ವಿಲ್ ಫೈಟ್” ಹೀಗೆ ಮೊದಲ ಕವಿತೆಯಲ್ಲಿಯೆ ತನ್ನ ಗೆಳತಿಗೆ ಕಾಫಿ ಹೌಸ್ನಲ್ಲಿ ಕುಳಿತು ಹೇಳುತ್ತಿರುವ ಇನ್ನೊಬ್ಬ ಹುಡುಗಿಯಿದ್ದಾಳೆ. ಆಕೆ ನಿತ್ಯವೂ ತನ್ನನ್ನು ಇನ್ನೊಬ್ಬನೊಂದಿಗೆ ಹಂಚಿಕೊಳ್ಳುತ್ತಿದ್ದಾಳೆ. ಅದು ಕೇವಲ ಗಂಡು ಹೆಣ್ಣಿನ ದೈಹಿಕ ಸಂಬಂಧ. ಅದನ್ನು ಹೊಂದಲು ಮದುವೆ ಎನ್ನುವಂತಹ ವ್ಯವಸ್ಥೆಯೂ ಬೇಕಿಲ್ಲ ಎಂದು ತಿಳಿದವರು, ಹಾಗೆಯೇ ಬದುಕುವವರೂ ಇಲ್ಲಿನ ಪಾತ್ರಗಳು .ಇಲ್ಲಿನ ಹುಡುಗಿಯರು ಎಷ್ಟು ಮುಂದುವರೆದವರೆAದರೆ ಇನ್ನೊಬ್ಬಾಕೆ ನೇಣು ಹಾಕಿಕೊಂಡಾಗ ಪೊಲಿಸರ ಜೊತೆ ಜಗಳವಾಡಬಲ್ಲಷ್ಟು, ಪತ್ರಿಕೆಯವರು ಸಚಿದರ್ಶನಕ್ಕೆ ಬಂದರೆ ಅವರನ್ನು ಬೈದು ಕಳಿಸಬಲ್ಲವರು.
ಇಲ್ಲಿನ ಕವಿತೆ ಇಂತಹ ಹುಡುಗಿಯರ ಮನದ ಭಾವನೆಗಳನ್ನು ಮುಕ್ತವಾಗಿಯೇ ಹೊರಹಾಕುವ ಸಾಧನವಾಗಿದೆ. ಒಂದು ಕವಿತೆಯನ್ನು ವಿವರವಾಗಿ ಗಮನಿಸಿದರೆ ಇಲ್ಲಿನ ಕವಿತೆಗಳ ಶೈಲಿ ನಮಗೆ ಇನ್ನು ಹೆಚ್ಚು ಅರ್ಥವಾಗುತ್ತದೆ.
ನಿನ್ನೆ ಮತ್ತೆ ಯಾರೋ ಅಳುತ್ತ ಬಂದು
ಹೆಗಲು ಕೇಳಿದರು . ಹೆಗಲಿರುವುದೇ ಕೊಡಲು
ಈ ಸಲ ಮಾತ್ರ ಹೆಗಲ ಮೇಲಿನ ಮುಖ ಸರಿಸಿ
ಕಣ್ಣೊಳಗೆ ಇಣುಕಿ ನೋಡಲಿಲ್ಲ
ಒದ್ದೆ ರವಿಕೆಯ ಗೊಡವೆಯಿಲ್ಲದೇ
ಸೆರಗು ಹೊದ್ದು ಸರಿದು ಹೋದೆ
ಬಹಳ ಕಾಲದ ಮೆಲೆ
ಮತ್ತೆ ಪದ್ಯ ಬರೆಯುವಂತಾಗಿದೆ
ಮೊದಲ ಓದುಗ
ಯಾರೆನ್ನುವ ಆತಂಕ
ಕವಿತೆ ವಿರಾಮ ಕಾಲದ ಸುಖದ ಬರವಣಿಗೆಯಲ್ಲ. ಅದು ಒಂಟಿ ಹೆಣ್ಣಿನ ನೋವಿಗೆ ಸ್ಪಂದಿಸಿದ ಕಥನ ಎನ್ನುವದು ಇಲ್ಲಿನ ಮಹತ್ವದ ಅಂಶ. ಹೀಗೆ ಸ್ನೇಹವನ್ನು ಕಳೆದುಕೊಂಡು ಒಂಟಿನ ಹೆಣ್ಣಿನ ಅಳುವ ಚಿತ್ರಗಳು ಇಲ್ಲಿ ಮತ್ತೆ ಮತ್ತೆ ಎದುರಾಗುತ್ತವೆ. ಇಲ್ಲಿ ವಿಘಟಿತರಾದವರು ಬರೀ ಹೆಂಗಳೆಯರು ಮಾತ್ರವಲ್ಲ, ಯುವಕರೂ ಇದ್ದಾರೆ. ಅದೇ ಹಳೆಯ ಕಾಪಿ ಕೆಫೆಯಲ್ಲಿ ತ್ರಸ್ತನಾದ ಇನ್ನೊಬ್ಬನನ್ನು ನಿರೂಪಕಿ (ಕವಯಿತ್ರಿ ) ಕೇಳುತ್ತಾರೆ.
ಯಾಕಿಷ್ಟು ಪೋಲಿ ಚಿತ್ರಗಳ ಹುಚ್ಚು ಎಂದು ಕೇಳಿದ್ದಕ್ಕೆ ಒಣದನಿಯಲ್ಲಿ ಹೇಳಿದ್ದ ಇನ್ನು ಬೇರೆ ಯಾರಿದ್ದರೆ ಜೊತೆಗೆ? ಹೀಗೆ ಜೊತೆ ಕಳೆದುಕೊಂಡ, ಯಾರೊಡನೆ ಸರಿಯಾಗಿ ಬದುಕಲಾಗದೇ ನೋಯುವ ಯುವ ಜನಾಂಗವೆ ಇಲ್ಲಿ ದೊರೆಯುತ್ತದೆ. ಲಿಪ್ಟ ಒದರಲ್ಲಿ ಲೈಟು ಹೋದೊಡನೆ ಪಕ್ಕದಲ್ಲಿರುವವರನ್ನು ಗಮನಿಸದೇ ಅಲ್ಲಿಯೇ ಮೆಲ್ಲನೆ ಬಟ್ಟೆ ಸರಿಸುವ ಯುವ ಜೋಡಿಗಳ ಚಿತ್ರ ಓದುವಾಗ ಬರೀ ಕಾಮವೆ ಮುಖ್ಯವಾದ ಇಂದಿನ ಜೋಡಿಗಳು ತಟ್ಟನೆ ಎದುರಾಗುತ್ತವೆ. ಇಲ್ಲಿನ ಯುವ ಜನಾಂಗದ ಬಹುದೊಡ್ಡ ತೊದರೆಯಂದರೆ ಒಂದು ಸಂಬಂಧ ಮುಗಿದ ಮೇಲೆ ಇನ್ನೊಂದಕ್ಕೆ ಬದಲಾಗುವ ಹುಚ್ಚಿನದು. ಒಂದು ಕವಿತೆಯಲ್ಲಿ (ಕವಿತೆ ೯) ಒಬ್ಬಾಕೆ ಹೇಳಿದುದನ್ನು ಕವಿತೆ ದಾಖಲಿಸುತ್ತದೆ.
ಅವಳು ಹೇಳುತ್ತಿದ್ದಳು ನನಗೆ ಬೇಟೆಯಲ್ಲಿಯೆ ಹೆಚ್ಚು ಅಸಕ್ತಿ , ಬಲಿ ಸಿಕ್ಕಮೇಲೆ ಮತ್ತೆ ಬೇಜಾರು ಯಾವುದನ್ನು ಪವಿತ್ರ ದೇಹ ಬಂದನ ಎಂದು ನಾವು ತಿಳಿದುಕೊಂಡಿದ್ದೆವೋ, ಶತಕ ಅರ್ದ ಶತಕದವರೆಗೆ ಅದನ್ನೇ ಪೋಷಿಸುತ್ತ ಬಂದ ಸಂಸ್ಕೃತಿಯಿತ್ತೋ (ಅನ್ಯ ಸಂಬಂಧಗಳಿರಲಿಲ್ಲವೆಂದಲ್ಲ, ಅದಕ್ಕೂ ಒಂದು ಚೌಕಟ್ಟಿತ್ತು) ಅದನ್ನು ಮೀರಿ ಬಹು ದೂರ ಹೋದ ಜನಾಂಗದ ತಹತಹವನ್ನು ಕವಿಯಿತ್ರಿ ಚಿತ್ರಿಸುತ್ತಿದ್ದಾರೆ ಎನಿಸುತ್ತದೆ.
ಈ ಜನಾಂಗಕ್ಕೆ ಹಣ ಒಂದು ಸಮಸ್ಯೆಯೆ ಅಲ್ಲ ಅವರು ಹಣ ಬೇಕಾದಷ್ಟನ್ನು ಗಳಿಸಿ ಮುಕ್ತ ಬದುಕು ಬದುಕುವ ಜನಾಂಗ ಎಂಬುದು ಅಲ್ಲಲ್ಲಿ ಗೊತ್ತಗುತ್ತದೆ. (ಕವಿತೆ ೧೩) ಹೀಗೆ ಬರುವ ಹಣವೇ ಇಲ್ಲಿನ ಮೌಲ್ಯಗಳ ಅಧ:ಪತನಕ್ಕೆ ಕಾರಣವಾಯಿತೇ ? ಎಂಬ ಪ್ರಶ್ನೆ ಯೂ ಮನದಲ್ಲಿ ಸುಳಿದು ಹೋಗದಿರದು. ಇವರಿಗೆ ಪ್ರೀತಿ ಒಂದು ಪ್ರಶ್ನೆಯೆ ಅಲ್ಲ .ಒಂದು ಹುಡುಗಿಯನ್ನು ಕವಿತೆಯ ನಿರೂಪಕಿ ಕರೆದು ‘ಅವನು ನಿನ್ನನ್ನು ಪ್ರೀತಿಸುತ್ತಾನೆ. ನಿನ್ನ ಸಲುವಾಗಿ ಡಲ್ ಆಗಿದ್ದಾನೆ’ ಎಂದು ಹೇಳಿದರೆ ಆ ಹುಡುಗಿ ‘ಇಷ್ಟೇನಾ ನಾನು ಮತ್ತೆನೋ ಎಂದುಕೊಂಡಿದ್ದೆ ಎಂದು ಎದ್ದು ಹೋಗುತ್ತಾಳೆ.

ಗಂಡ ಟಿವಿನಲ್ಲಿ ಬರುವ ಬ್ರಾ ಪ್ಯಾಂಟಿ ಖರಿದಿಸಿದವಳು ನಿರೂಪಕಿಯನ್ನು ಹಣ ಕೇಳುತ್ತಾಳೆ. ಆಗ ನಿರೂಪಕಿ ನಿನ್ನ ಹತ್ತಿರ ಹಣ ಇಲ್ಲದೇ ಯಾಕೆ ಖರಿದಿಸಿಯಂದರೆ ಆಕೆ ಫ್ಯಾಸನ್ ಟಿವಿನಲ್ಲಿ ತೋರಿಸ್ತಾರರಲ್ಲಾ ಅದನ್ನ ರಾತ್ರಿ ಎಷ್ಟೋ ಹೊತ್ತು ನೋಡ್ತಾ ಕೂತಿತಾಣೆ ಎನ್ನುತ್ತಾಳೆ ಆಗ ಹಿರಿಯಾಕೆ ಅದು ಕಾಮ ಕಣೆ, ನಿನ್ನ ಬಗ್ಗೆ ಪ್ರೇಮ ಅವನಿಗೆ
ಎಂದರೆ ಆಗ ಆ ಹೆಂಡತಿಯಾದವಳು –
ನನ್ನ ಬಗ್ಗೆನೂ ಕಾಮ ಯಾಕಿಲ್ಲ ಅಂತ ಹಟ ಹಿಡಿದಳು ಎನ್ನುತ್ತದೆ. ಕವಿತೆ ಅಚಿದರೆ ನಿಜವಾದ ಸಮಸ್ಯೆ ಇರುವದು ಇಲ್ಲಿ. ಕಾಮದ ಅರಕೆಯಿಂ ದ ಕೊರಗುವ ಹುಡುಗಿಯರ ಮದುವೆಯಾದ ಹುಡುಗಿಯರ ಚಿತ್ರಗಳೇ ಇಲ್ಲಿ ಕಾಣ ಸಿಗುತ್ತವೆ. ಮದುವೆಯ ಸಂಬಂದ ಗಂಡು ಹೆಣ್ನಿನ ನಡುವೆ ಬರು ಬರುತತಾ ಆಕರ್ಷಣೆ ಕಳೆಉಕೊಳ್ಳುವದು ಅವರಲ್ಲಿ ಸಮಸ್ಯೆ ಮೂಡಿಇಸದೆ. ಮತ್ತು ಇಂದಿನ ಕಾಲಕ್ಕೆ ಹುಡುಗಿರಲ್ಲಿ ಬೇರೆ ಬಂಧ ಅಥವ ಮುಲಕ್ತ ಬದುಕಿಗೆ ಕಾರಣವಾಗುತ್ತಿದೆ.
ಇಲ್ಲಿ ಸೇರುವ ಪ್ರತಿಯೊಬ್ಬರು ಒಂದಲ್ಲ ಒಂದು ಕಾರಣಕ್ಕೆ ನೊಂದವರು. ಅಲ್ಲಿ ಬಂದು ಇನ್ನಾರದೋ ಹೆಗಲ ಮೆಲೆ ತನಗಾಗಿರುವ ದು:ಖವನ್ನು ಇನ್ನೊಬ್ಬರಿಗೆ ಹೇಳಿ ದು:ಖ ಹಂಚಿಕೊಳ್ಳುವರು. ಅವರು ಅತ್ಮೀಯೆಎ ಗೆಳೆಯರೇ , ಹಂಗೇನೂ ಇರಬೆಕಾಗಿಲ್ಲ ಹೆಗಲಿರುವುದೇ ಅಳುವವರಿಗೆ ಕೊಡಲು ಎಂಬ ಂತಹ ತೀವ್ ಮಾನವೀಯತ ಇಲ್ಲಿದೆ. ಮತ್ತು ಅವರು ಯಾರು ಏಕೆ ಅಳುತ್ತಿದ್ದಾರೆ ? ಇದೆಲ್ಲವನ್ನೂ ಕೆಳದೇ ಸುಮ್ಮನೆ ಅವರ ದು:ಖಕ್ಕೆ ಹೆಗಲಾಗಿರು ವ ಒಳ್ಳೆಯತನವೂ ಅಲ್ಲಿದೆ.
ಗಂಡು ಗಂಡು , ಹೆಣ್ಣು ಹೆಣ್ಣು ಮುಕ್ತವಾಗಿ ಕಾಮಿಸುವ ಸಲಿಂಗ ಕಾಮದ ಬಗೆಗೂ ಆಸಕ್ತಿ ಹುಟ್ಟುತ್ತಿರುವದನ್ನು ಅನೇಕ ಕವಿತೆಗಳಲ್ಲಿ ಅಂಥ ಜೋಡಿಗಳನ್ನು ನೋಡುತ್ತೇವೆ. ನಮ್ಮ ಸಮಾಜದ ನಡೆ ಯಾವ ಕಡೆ ಹೋಗುತ್ತಿದೆ ಎಂಬುದನ್ನು ಕವಯಿತ್ರಿ ತುಂಬ ಎಚ್ಚರಿಕೆಯಿಂದ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಾರೆ.( ಕವಿತೆ ೩೬)
ಇವೆಲ್ಲವೂ ಹೆಣ್ಣಿನ ಮುಕ್ತ ಮನದನ್ನಿಸಿಕೆಗಳೆ ಇಲ್ಲಿ ಗಂಡು ಅಗಾಗ ಬಂದು ಹೋಗುವ ಪ್ರಾಣಿಯಷ್ಟೇ ಹೆಚ್ಚೆಂದರ ಅಥ ಕಮ ಹಂಚಿಕೊಳ್ಳುವ ಒಂದು ದೇಹ ಮಾತ್ರ ,ಆದರೆ ವಿಚಿತ್ರವೆನ್ನುವಷ್ಟು ಸಲ ಇಲ್ಲಿನ ಕಾಫಿ ಹೌಸಿನ ಸಪ್ಲಾಯರ್ ಅಗಿದ್ದಿರಬಹುದುಅಸದ ವಿನ್ಸಂಟ್ ಹುಡುಗನ ಪಾತ್ರ ಬಂದಿದೆ.
೧೯೯೦ ರ ನಂತರ ದ ಆಧುನಿಕ ಹೆಣ್ಣಿನ ಅಭಿವ್ಯಕ್ತಿಯಾಗಿ ಪ್ರತಿಭಾರವರ ಕವಿತೆಗಳು ಈ ಮೊದಲಿನ ಸಂಕಲನದಲ್ಲಿರುವದಕ್ಕಿಂತಲೂ ಹೆಚ್ಚು ಮುಕ್ತವಾಗಿವೆ. ಇಲ್ಲಿರುವದು ಇಂದು ಬೆಂಗಳೂರಿನAತಹ ಅತ್ಯಾಧುನಿಕ ಜಗತ್ತಿನ ಹುಡುಗಿಯರ ಲೋಕ ವಸ್ತುವನ್ನು ಕುರಿತು ಕವಿತೆಗಳನ್ನು ಅರ್ಥಮಾಡಿಕೊಳ್ಳಲು ಜೋಗಿಯವರ ಮಾತುಗಳು ಸಹಾಯ ಮಾಡುತ್ತವೆ. “ ಇಲ್ಲಿನ ಕವಿತೆಗಳನ್ನು ಒಂದಾದ ಮೇಲೊಂದರಂತೆ ಓದುತ್ತಾ ಹೋದರೆ ನಿಮಗೆ ವರ್ತಮಾನದ ಚಿತ್ರ ಸಿಗುತ್ತದೆ. ಪೇಜ್ ಥ್ರೀ ಸಂಸ್ಕೃತಿಯನ್ನು ವಿಡಂಬಿಸುವ ಸಿನಿಮಾದಂತೆ .ರಸ್ತೆಯಲ್ಲಿ ಹಾದು ಹೋಗುವ ಬಡಪಾಯಿಯ ಕಣ್ನಿಗೆ ಬೀಳುವ ಸಲ್ಲಾಪ , ಜಗಳ ಮತ್ತು HB ಸಂಬಂಧದಂತೆ .” ..”ಈ ಕವಿತೆಗಳೂ ಹೊಸರುಚಿಯೇ. ಇಲ್ಲಿ ಪಾತ್ರಗಳಿವೆ ಆ[ಪಾತ್ರಗಳ ಕೇಂದ್ರವಿರುವದು ಕಾಮದಲ್ಲಿ ಎಂದು ಮೇಲ್ಕನೋಟಕ್ಕೆ ಅನಿಸುತ್ತದೆ ಆದರೆ ನಿಜವಾಗಿಯೂ ಅವುಗಳ ವಿಘಟನೆಯಲ್ಲಿ .ತನ್ನನ್ನು ತನು ಗುರುತಿಸಿಕೊಳ್ಳಲಾಗದ ,ಯಾವ ಸಂಬಂಧದ ಜತೆಗೂ ದೀರ್ಘ ಕಾಲ ಬಾಳಲಾರದ , ಸಮನ್ವಯಗೊಳ್ಳಲದ ಮೈಮನಸ್ಸು ಎಲ್ಲವನ್ನೂ ನಿರಕರಿಸುವ ಮನಸ್ಸಿಗೆ ಶೂನ್ಯ ಕೂಡ ದಕ್ಕದೇ ಹೋದಾಗ ಎದುರಾಗುವ ವಿಹ್ವಲ ಸ್ಥಿತಿಯಲ್ಲಿರುವ ಪಾತ್ರಗಳಿವು ಅಂತ ನಮಗೆ ಥಟ್ಟನೆ ಅನ್ನಿಸಬಹುದು.ಅದುನಮ್ಮಕಾಲದ ಸತ್ಯ.” (ಮುನ್ನುಡಿಯಲ್ಲಿ)
ಗಂಡು ಹೆಣ್ಣಿನ ಬಂಧವೇ ಇಲ್ಲಿನ ವಸ್ತುವೂ ಕೂಡ. ಅದರೆ ಅದು ಹೆಚ್ಚಾಗಿ ಇಬ್ಬರ ನಡುವೆ ಈಗ ಮುಗಿದು ಹೋಗಿರುವ ವಿಘಟನೆಯ ಹಳಹಳಿಕೆಯೇ ಅಗಿರುವದು. ನಾವೆಷ್ಟೇ ನಿರಾಕರಿಸಿದರೂ ಬಹುತೇಕ ಕಲಿತ ಯುವಜನಾಂಗ ಅನುಭವಿಸುತ್ತಿರುವ ಮುಕ್ತ ಬದುಕಿದು ಇದನ್ನು ಕವಿತೆಯಾಗಿಸುವ ಸ್ವಾತಂತ್ರ್ಯವನ್ನು ಇಲ್ಲಿಯವರಗಿನ ಯಾವ ಕವಿಯೂ ಕವಯಿತ್ರಿಯೂ ಮಾಡಿರಲಿಲ್ಲ ಅದನ್ನು ಕನ್ನಡ ಕವ್ಯಲೋಕದಲ್ಲಿ ಮೊದಲ ಸಲ ಆಗುಮಡಿದ ಕವಿಯತ್ರಿ ಪ್ರತಿಭಾ ಅವರಾಗಿದ್ದರ. ಹಗಾಗಿಯೇ ಇಲ್ಲಿನ ಕವಿತೆಗಳ ಚಂಧ ಕೂಡ ಹೊಸದೇ ಹಿಗೆಹೀಗೆ ಅಂತ ವಿವರಿಸಲಾಗದ್ದೇ. ಒಂದು ಕವಿತೆಯಲ್ಲಿ ಇಲ್ಲಿನ ಸಾಂಪ್ರದಾಯಿಕ ಮನಸ್ಸುಗಳನ್ನು ಕಂಡು ಪ್ರತಿ¨ಭಾ ಅವರು ಯಾವ ಬಡ್ಡಿಮಕ್ಕಳು ಹೊಸರುಚಿಗೆ ಯತಯಾರಿಲ್ಲ
ನಾನೆ ವಾಸಿ ಉಡುದಾರ, ಶಿವದಾರ, ಜನಿವಾರ ಎಲ್ಲದಕ್ಕೂ ಸೈ ಕನ್ನಡ ಕಾವ್ಯಲೋಕದ ಎಲ್ಲ ಸ್ಥರಗಳನ್ನೂ ಓದಿದ ಮತ್ತು ಕವಿಯತ್ರಿಯಾಗಿ ಅನುಭಣವಿಸಿ ಹೊರಬಂದ ಅವರು ಇದೀಗ ತಾಳಿರುವ ಹೊಸತನವನ್ನು ಉಳಿದ ಓದಗರಾಗಲಿ ಕವಿಗಣವಾಗಲಿ ಇನ್ನೂ ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಬಗೆಗೆ ಅವರಿಗೆ ಆತಂಕವಿದೆ. ನಮ್ಮ ಯುವಜನಾಂಗ ಯಾವುದೇ ಒಂದು ನಂಬಿಕೆಗೊಳಗಾಗದೇ ಗಂಡು ಹೆನ ಸಂಬಂಧದ ನಡುವೆಯೂ ಯಾವುದೆ ಅನಂದವನ್ನು ಕಾಣದೇ ಅಲ್ಲಿ ಮದ ಅಲ್ಲಿಗೆ ಇನ್ನೊಂದರಿಂದ ಮತ್ತೊಂದಕೆ ಸುಖ ಅರಸಿ ಹಾರುತ್ತ ಅತಂಕಗೊಳಳುತ್ತಿದೆ ನಮ್ಮ ಯುವ ಜನಾಂಗ ಮುಂದಿರುವ ಬಹುದೊಡ್ಡ ಸಂಕಟ ಎನ್ನುವದನ್ನು ಪ್ರತಿಭ ಅವರು ಈ ಹೊಸ ಕವಿತೆಗಳ ಮೂಲಕ ಮುನ್ನೆಲೆಗೆ ತರುತ್ತಿದ್ದಾರೆ. ನಮ್ಮ ಕಾವ್ಯ ತೆರದುಕೊಳ್ಳಬೇಕಾಗಿರುವ ಎಷ್ಟೊ ಹೊಸ ಬದುಕು ಇದೆ ಎನ್ನವುದು ನಮ್ಮ ಅರಿವಿಗೆ ತಂದಿದ್ದಾರೆ.
ಇಲ್ಲಿ ಕಾಫಿ ಕೂಡ ಒಂದು ವಸ್ತುವಾಗಿ ಕವಿತೆಗಳನ್ನು ಆಕ್ರಮಿಸಿರುವುದನ್ನು ಹೇಳಲೇಬೇಕು. ಕವಿತೆ ೫೨ ನ್ನು ಗಮನಿಸಿದರೆ
ಕಾಫಿ ಕುಡಿಯುವದು ಒಂದು ಕಲೆ ಅಂತ ಯಾರು ಹೇಳಿದರು
ಅಂತ ಹೇಳಬೇಕಾಗಿಲ್ಲ ಅವನೇ ಇದ್ದಾನಲ್ಲಾ ಮಹಾಜ್ಞಾನಿ
ಅವನ ಪ್ರಕಾರ ಕಾಫಿ ಕುಡಿಯುವದೆಂದರೆ ಮೈಥುನದಂತೆ
ಬಿಸಿಯಾಗಿರಬೆಕು ಆದರೂ ಗಂಟಲು ಸುಡಬಾರದು
ಸಿಹಿಯಾಗಿರಬೆಕು ಆದರೂ ಅತಿಯಗಬಾರದು
ಮಿತವಾಗಿರಬೆಕು ಆದರೂ ಸಾಲದೆನಿಸಬಾರದು
ಸಾಕು ಸಾಕು ಸುಮ್ಮನೇ ಏನೋ ಒದರಬೇಡಾ ಅಂತ ಸುಮ್ಮನಿರಿಸಿದೆ
ಕಾಫಿ ಮಗ್ ತುಟಿಗಿಡುವಾಗ ಮಾತ್ರ ಅದು ನೇರವಾಗಿ
ಸಖತ್ ರೊಮಾಂಚನವಾಯಿತು.
ಬದುಕು ಎಂದರೆ ಹಾಗೇ ಯಾವ ಯಾವ ವಿಷಯ ಮನುಷ್ಯನಿಗೆ ಆಸಕ್ತಿ ಹುಟ್ಟಿಸುವದೋ ಗೊತ್ತಿಲ್ಲ. ಹೀಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಹುಟ್ಟಿಸಿಕೊಳ್ಳುವ ಆಸಕ್ಕಿತೇ ಬದುಕಿನ ಬಹು ಮುಖ್ಯ ಆಸಕ್ತಿಕರವಿಷಯ ಎನ್ನಬಹುದು.
ಇರಲಿ , ಇಂದು ಹೊಸ ಜನಾಂಗದ ಆದ್ಯತೆಗಳು, ಬಯಕೆಗಳು, ಬದುಕು ಎಲ್ಲವೂ ಬದಲಾಗಿರು ವದನ್ನು ಕವಿತೆಯಾಗಿ ಹಿಡಿದಿಟ್ಟಿರುವ ರೀತಿಗಾಗಿ ಪ್ರತಿಭಾ ನಂದಕುಮಾರ್ ಕನ್ನಡದ ಬಹುಮುಖ್ಯ ಕವಯಿತ್ರಿಯಾಗಿ ಕಾಣಿಸುತ್ತಾರೆ.
- ಡಾ. ಯೈ, ಎಂ. ಯಾಕೊಳ್ಳಿ – ಸಾಹಿತಿಗಳು, ಸವದತ್ತಿ.