ಜೀವ ಅಮೂಲ್ಯ ಕಳೆದುಕೊಳ್ಳದಿರಿ – ಪವಿತ್ರ.ಹೆಚ್.ಆರ್

ಅಂದನೊಬ್ಬ ಬ್ರೈನ್ ಲಿಪಿಯಲ್ಲಿ ಓದಿ ಐ.ಎ.ಎಸ್ ಪಾಸು ಮಾಡುತ್ತಾರೆ. ಕೈ ಕಾಲು ಇಲ್ಲದ ವಿಕಲಚೇತನರೊಬ್ಬರು ಈಜು ಸ್ಪರ್ಧೆಯಲ್ಲಿ ಮೀನಿನಂತೆ ಈಜಿ ದೇಶಕ್ಕೆ ಚಿನ್ನ ತಂದು ಕೊಡಬಲ್ಲರು ಎಂದಾಗ ಕೈಕಾಲು ಗಟ್ಟಿ ಇರುವವರು ಯಾಕೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಒಂದು ಅವಲೋಕ. ವಕೀಲೆ ಪವಿತ್ರ.ಹೆಚ್.ಆರ್ ಅವರ ಈ ಲೇಖನವನ್ನು ತಪ್ಪದೆ ಓದಿ…

ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರೆ ಎರಡನೇ ಮೂರನೇ ಪುಟದಲ್ಲಿ ಒಂದಾದರೂ ಆತ್ಮಹತ್ಯೆ ಸುದ್ದಿ ಕಾಣಸಿಗುತ್ತವೆ. ಇನ್ನೂ ಟಿವಿಹಾಕಿದ್ರೆ ಸ್ಕ್ರೋಲಿಂಗ್ನನಲ್ಲಿ, ಕೆಲವೊಮ್ಮೆ ಹೆಡ್ಲೈನಲ್ಲಿ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಕಡೆಯು ಒಂದಲ್ಲ ಒಂದು ಕಾಣಸಿಗುವ ಪ್ರಮುಖ ಆಂಶ ಎಂದರೆ ಅದು ಆತ್ಮಹತ್ಯೆ, ಅಮ್ಮ, ಅಪ್ಪ, ಅಣ್ಣ, ಗಂಡ, ಬೈದರೆಂದೂ, ಪ್ರೀತಿ, ಪ್ರೇಮ ವಿಫಲವಾಯ್ತು ಎಂದೋ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕೆ ಪರೀಕ್ಷೆಯಲ್ಲಿ ಪಾಸಾಗಿಯೂ ತಾನು ಇಷ್ಟ ಪಟ್ಟ ಅಂಕ ಸಿಗಲಿಲ್ಲ ಎಂದೋ. ಮೆಡಿಕಲ್ ಸೀಟ್ ಸಿಗಲಿಲ್ಲವೆಂದೋ…ಮೆಡಿಕಲ್ ಸೀಟು ಸಿಕ್ಕಿ ಮೊದಲ ವರ್ಷವೆ ಫೇಲಾಗಿದಕ್ಕೂ ಇಲ್ಲ.  ಓದಲು ಕಷ್ಟವೆಂದೂ, ಕೌಟುಂಬಿಕ ಕಲಹಗಳಿಂದಲೂ, ಬೆಳೆ ಹಾನಿಯಿಂದ ಮತ್ತು ಸಾಲಬಾಧೆಯಿಂದ ರೈತರು ಆರೋಗ್ಯ ಸಮಸ್ಯೆಯಿಂದ ಬಳಲುವವರು, ಹಿರಿಯ ಅಧಿಕಾರಿಗಳ, ರಾಜಕಾರಣಿಗಳು ಕಿರುಕುಳಕೆ ಬೆಸತ್ತ ಅಧಿಕಾರಿಗಳು, ಹೀಗೆ ಯಾರು ಯಾವ ಕಾರಣಕ್ಕೆ ಸತ್ತಿದ್ದಾರೆ ಎಂದು ತಿಳಿಯದೆ.

ಜೀವನವನ್ನು ಎದುರಿಸಲಾಗದೆ ಹೇಡಿತನದಿಂದ ತಮ್ಮ ಜೀವನವನ್ನು ಕೊನೆಗೊಳಿಸಿ ಕೊಳ್ಳುವವರ ಸಂಖ್ಯೆ ವಿಶ್ವ ವ್ಯಾಪ್ತಿಯಾಗಿ ಎಂಟು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ !! ಅಂದರೆ ಊಹಿಸಿ… ಈ ಎಂಟು ಲಕ್ಷದ ಜನರ ಕುಟುಂಬಗಳು ಇವರುಗಳ ಆತ್ಮಹತ್ಯೆಯಂತ ಸ್ವಯಂಕೃತ ದುಷ್ಕ್ರತ್ಯದಿಂದ ಕಣ್ಣೀರಲ್ಲಿಮುಳುಗೇಳುತ್ತಿವೆ.

ಇಂದು ಪ್ರಪಂಚದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಯುವಜನತೆ ಪ್ರಮಾಣ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ ಬ್ಯೂರೋ ( ಎನ್ ಸಿ. ಆರ್.ಬಿ ) ಪ್ರಕಾರ 2015 ರಿಂದ 2022 ಇಸವಿವರಿಗಿನ ಲೆಕ್ಕದ ಪ್ರಕಾರ ದೇಶದಲ್ಲಿ ಪ್ರತಿಗಂಟೆಗೆ ಇಬ್ಬರು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಪರಿಸ್ಥಿತಿ ಹೇಗಿರಬಹುದೆನ್ನುವುದನ್ನು ಊಹಿಸಿಕೊಳ್ಳಬಹುದು. ಯುವಜನಾಂಗವು ಆತ್ಮಹತ್ಯೆ ಮಾಡಿಕೊಳ್ಳಲು ಬಹಳಷ್ಟು ಕಾರಣಗಳು ಏನೇ ಇದ್ದರೂ ಬದುಕಲು ಸಹ ಹಲವು ದಾರಿಗಳಿವೆ… ಅಂತಹ ದಾರಿಗಳನ್ನು ಹುಡುಕಿಕೊಂಡು ಸಾಗಬೇಕೆ ಹೊರತು ನಮ್ಮ ಕೈಯಾರೆ ಆತ್ಮಹತ್ಯೆ ಎಂಬ ದುಷ್ಕ್ರತ್ಯವನ್ನು ಎಸಗಬಾರದು. ಅದು ಎಷ್ಟೇ ದೊಡ್ಡ ಸಮಸ್ಯೆ ಆದರೂ ಸಹಿತ ಅದಕ್ಕೆ ಪರಿಹಾರ ಖಂಡಿತವಾಗಿ ಸಾವು ಅಲ್ಲವೇ ಅಲ್ಲ ..!

ಬಹುತೇಕ ಆತ್ಮಹತ್ಯೆಗೆ ಒತ್ತಡವೇ ಪ್ರಮುಖ ಕಾರಣ ಎಂಬುದು ಹಲವು ವರದಿ, ದಾಖಲೆಗಳ ಮೂಲಕ ತಿಳಿಯುತ್ತದೆ. ಕೆಲಸ, ಜೀವನ, ಸಂಬಂಧ, ಕ್ಷುಲ್ಲಕ ವಿಷಯಗಳು ಸೇರಿದಂತೆ ಒತ್ತಡಕ್ಕೆ ಯಾವುದೇ ಕಾರಣವಿರಬಹುದು, ಆದರೆ ಒತ್ತಡಕ್ಕೆ ಒಳಗಾದ ವ್ಯಕ್ತಿಗೆ ಇದರಿಂದ ಮುಕ್ತಿ ಪಡೆಯುವುದಕ್ಕೆ ಆತ್ಮಹತ್ಯೆಯೇ ದಾರಿ ಎಂಬ ತಪ್ಪು ಕಲ್ಪನೆಯಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ.

ಫೋಟೋ ಕೃಪೆ : google

ಜೀವನ ಒಂದು ವರವಿದ್ದಂತೆ ಅದನ್ನು ಅಷ್ಟು ಸುಲಭವಾಗಿ ಕೊನೆಗಾಣಿಸಿಕೊಳ್ಳುವುದು ನಾಗರಿತೆ ನಡೆ ಅಲ್ಲ, ಬಾಳು ಬಾಳುವುದಕ್ಕಾಗಿದೆಯೇ ಹೊರತು ಕೇವಲ ಬಳಲಿ ಬೆಂಡಾಗುವುದಕ್ಕಲ್ಲ, ಜೀವನದಲ್ಲಿ ನಂಬಿಕೆ ಮುಖ್ಯ ಅದೇ ನಮ್ಮನ್ನು ಉಳಿಸಿ ಬೆಳೆಸುವುದು, ಸಮಸ್ಯೆ, ಸಂಕಟ ಬದುಕಿನ ಭಾಗ ಅದನ್ನು ಮೆಟ್ಟಿ ನಿಂತಾಗಲೇ ನಿಜವಾದ ಜೀವನ ರೂಪುಗೊಳ್ಳುವುದು,ನಿರಾಸೆ, ಹತಾಶೆ ಬಾಳಿನ ವೈಫಲ್ಯ. ನಾನು ಏನು ಮಾಡಲಿ..? ಎನ್ನುವ ಪ್ರಶ್ನೆಯನ್ನು ತನಗೆ ಯಾವಾಗಲೂ ಕೇಳಿಕೊಳ್ಳುವ ವ್ಯಕ್ತಿ ಜೀವನದಲ್ಲಿ ಕಹಿಯನ್ನು ಕಾಣುತ್ತಾನೆ ಹೊರತು ಸವಿಯನ್ನು ಸವಿಯಲಾರ ಅಲ್ವಾ..??.

ನಮ್ಮನ್ನು ಈ ಭೂಮಿಗೆ ತಂದ ನಮ್ಮ ತಂದೆ ತಾಯಿಗೆ ಏನನ್ನು ಕೊಟ್ಟಿದ್ದಿವಿ. ನಮ್ಮನ್ನು ಬದುಕಲು ಅನುವು ಮಾಡಿಕೊಟ್ಟ ನಮ್ಮ ಸುತ್ತ ಮುತ್ತಲಿನ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ಸಿಕ್ಕಿದಿಯಾ…ಇಲ್ಲ ಅಂದ್ಮೆಲೇ ಕಡೇ ಪಕ್ಷ ಸಾವು ತಾನಾಗಿಯೇ ಬರುವವರೆಗೆ ನಾವು ಗೌರವಯುತವಾಗಿ ಬದುಕಿ ಬಾಳುವುದು !!

ಬದುಕುವುದೆನ್ನುವುದು ಪುಟ್ಟ ಅಲೋಚನೆ ಮಾತ್ರವಲ್ಲ, ಬದುಕಿಸುವ ಧೈರ್ಯ ಅದಾಗಿದೆ,ಆ ಧೈರ್ಯ ತುಂಬುವ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿ ಮನೋಬಲವನ್ನು ಗಟ್ಟಿಮಾಡುವ ಸಾಕಷ್ಟು ಘಟನೆಗಳು ನಮ್ಮ ಕಣ್ಮುಂದೆ ಉದಾಹರಣೆಯಾಗಿ ಸಿಗುತ್ತವೆ.

ಬದುಕಿನಲ್ಲಿ ಎಷ್ಟೇ ಸಮಸ್ಯೆಗಳು ಎದುರಾದರೂ ಬಹಳಷ್ಟು ಮಂದಿ ಜೀವನದ ಬಗ್ಗೆ ಆಸಕ್ತಿ ಕಳೆದುಕೊಂಡಿಲ್ಲ, ತನ್ನನ್ನು ಮನೆಯವರೆಲ್ಲರೂ ತ್ಯಜಿಸಿದರೂ ಸಹಿತ ಸಮಾಜಕ್ಕೆ ಹಿತವೆನ್ನಿಸುವಂತಹ ಕೆಲಸವನ್ನು ಮಾಡುತ್ತಾ ಮತ್ತೊಬ್ಬರಿಗೆ ಸ್ಪೂರ್ತಿದಾಯಕವಾದ ಬದುಕನ್ನು ನಡೆಸುವುದನ್ನು ನೋಡಿದ್ದೆವೆ.

ಅಂದನೊಬ್ಬ ಬ್ರೈನ್ ಲಿಪಿಯಲ್ಲಿ ಓದಿ ಐ.ಎ.ಎಸ್ ಪಾಸು ಮಾಡುತ್ತಾರೆ. ಕೈ ಕಾಲು ಇಲ್ಲದ ವಿಕಲಚೇತನರೋಬ್ಬರು ಈಜು ಸ್ಪರ್ಧೆಯಲ್ಲಿ ಮೀನಿನಂತೆ ಈಜಿ ದೇಶಕ್ಕೆ ಚಿನ್ನ ತಂದು ಕೊಡುತ್ತಾರೆ. ವಯಸ್ಸಾದ ಅಜ್ಜ–ಅಜ್ಜಿ ಯ ತನ್ನ ಪಿಂಚಣಿ ಪಡೆಯಲು ಸರತಿ ನಿಂತು ಕಾಯುತ್ತಾರೆ, ಎಂದಿಗೂ ವಾಸಿಯಾಗದ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಬಲಿಯಾದವರು ಪ್ರಾಣ ಉಳಿಸಿಕೊಳ್ಳಲು ಸದಾ ಹೋರಾಡುತ್ತಾರೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾದ ಪುಟ್ಟ ಪುಟ್ಟ ಮಕ್ಕಳು ತಮಗೆ ಇಷ್ಟವಾದ ನಗುವನ್ನು ಎಂದಿಗೂ ಮರೆಯದೆ ನಾಳಿನ ಭರವಸೆಯ ಹೊಂಗಿರಣವನ್ನು ಎದುರು ನೋಡುತ್ತಾ ದಿನದೊಡುತ್ತಾರೆ. ಹೀಗೆ ಅದೇಷ್ಟು ಉದಾಹರಣೆಗಳು ನಮ್ಮ ಮುಂದೆ ಇಲ್ಲ ಹೇಳಿ. ಕಷ್ಟ ಅನ್ನುವುದು ಯಾರಿಗಿಲ್ಲ..?

ತೊಂದರೆ ಬಂತೆಂದು ಜೀವ ಕಳೆದುಕೊಂಡಿದ್ದಾರೆಯೇ ಅಂತಹವರು ? ಜೀವನವನ್ನು ಪ್ರೀತಿಸುವ ಯಾರು ಅದನ್ನು ಹಾಳು ಮಾಡುವುದಕ್ಕೆ ಹೋಗಬಾರದು. ಸಮಯಪ್ರಜ್ಞೆ,ಕಾರ್ಯ ಪ್ರಜ್ಞೆ, ಸಾಧಿಸುವ ಛಲದ ಗುರಿ ಇರಿಸಿಕೊಂಡು ನಡೆಯುವವನ ಜೀವನ ಪ್ರಗತಿಯಾಗುತ್ತದೆ. ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳದ,ನೋಡಲಾಗದ ಜೀವಿಗಳು ಮಾತ್ರ ಆತ್ಮಹತ್ಯೆ ಗೆ ಶರಣಾಗುತ್ತಾರೆ,ಅರಿತು ಕೊಂಡು ನಡೆಯುವವರ ಬದುಕು ಬಂಗಾರವಾಗುತ್ತದೆ.

ಆತ್ಮಹತ್ಯೆಗೆ ಮೂಲ ಕಾರಣ ಖಿನ್ನತೆ, ಹತಾಶೆ,ಯಾರದೋ ಪ್ರಚೋದನೆ, ದೀರ್ಘ ಕಾಲದ ಖಾಯಿಲೆ, ಕೌಟುಂಬಿಕ, ಆರ್ಥಿಕ ಸಮಸ್ಯೆಗೆ ನರಳಿ ಆತ್ಮಹತ್ಯೆ ಎಂಬ ದುಷ್ಕ್ರತ್ಯ ಎಸುಗುವ ಮುನ್ನ ಆತ್ಮಸ್ಥೈರ್ಯ, ದೂರ ದೃಷ್ಟಿ ಹೊಂದಿದರೆ ಸಮಸ್ಯೆ ನಿವಾರಣೆ ಖಂಡಿತ ಸಾಧ್ಯ ಎನ್ನುತ್ತಾರೆ ಮನಶಾಸ್ತ್ರಜ್ಞರು. ನಿರಾಶವಾದಿಗೆ ಜೀವನದಲ್ಲಿ ಸಾಧ್ಯವಿರುವುದು ಅಸಾಧ್ಯವಾಗಿ ಕಾಣಿಸುತ್ತದೆ. ಆಶಾವಾದಿಗೆ ಅಸಾಧ್ಯವೆನ್ನುವುದು ಕೂಡಾ ಸಾಧ್ಯವಾಗಿ ತೋರುವುದು ಅಲ್ಲದೆ ಕವಿದ ಕಾರ್ಮೋಡದಲ್ಲಿಯೂ ಒಂದು ಬೆಳ್ಳಿಯ ಗೆರೆ ಕಂಡುಬರುತ್ತದೆ. ಆದರೆ ಅದೇ ನಿರಾಶವಾದಿಗೆ ಹಗಲು ಬೆಳಕಿನಲ್ಲಿಯೂ ಕತ್ತಲೆ ಕವಿದಂತೆ ಕವಿದುಕೊಂಡಿರುತ್ತದೆ. ಇದನ್ನು ಹೆತ್ತವರು, ಪೋಷಕರು, ಹಿರಿಯರು ಗಮನಿಸಬೇಕು ಅವರಲ್ಲಿ ಮನೋಬಲ ಹೆಚ್ಚಿಸಿ ಆತ್ಮವಿಶ್ವಾಸ ತುಂಬಬೇಕು.

ಫೋಟೋ ಕೃಪೆ : google

ಆತ್ಮಹತ್ಯೆಗೆ-ಆಲೋಚನೆ-ಮಾಡುವವರನ್ನು ಗುರುತ್ತಿಸುವುದಾದರೂ ಹೇಗೆ :

* ಜನರೊಂದಿಗೆ ಬೆರೆಯಲು ಇಷ್ಟ ಪಡದಿರುವುದು, ಸದಾ ಒಂಟಿಯಾಗಿರಲು ಆದ್ಯತೆ ನೀಡುವುದು.

* ಸಪ್ಪೆಯಾಗಿ, ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡಂತೆ ಇರುವುದು.

* ಯಾವುದೋ ಒಂದು ವಿಧದಲ್ಲಿ ಇದೇ ವಿಷಯದ ಬಗ್ಗೆ ಮಾತನಾಡುತ್ತಿರುವುದು,ಮತ್ತು ಯೋಚನೆ ಮಾಡುವುದು.

*ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಡಿಪ್ರೆಷನ್ಗೆ ಸಂಬಂಧಪಟ್ಟಂತಹ ಪೋಸ್ಟ್ಗಳನ್ನು ಹಾಕುವುದು.

*ಹೆಚ್ಚಾಗಿ ಒಂಟಿತನದ ಬಗ್ಗೆ ಮಾತನಾಡುತ್ತಿರುವುದು

*ವ್ಯಕ್ತಿ ಖಿನ್ನತೆ, ಒತ್ತಡ ಅಥವಾ ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೆ ಅವರನ್ನು ಆದಷ್ಟು ಏಕಾಂಗಿಯಾಗಿ ಬಿಡಬೇಡಿ. ಅವರು ತಮಗೆ ತಾವೇ ನೋವು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಒಬ್ಬ ಉತ್ತಮ ಸ್ನೇಹಿತ ಅಥವಾ ಸಹೋದರ/ರಿಯ ಅಗತ್ಯವಿರುತ್ತದೆ.

ಇಂತಹ ನಡುವಳಿಕೆಯನ್ನು ಗಮನಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು, ಮನೋಬಲ ಹೆಚ್ಚಿಸಬೇಕು, ವಿದ್ಯಾರ್ಥಿಗಳೇ ಆಗಿರಲಿ, ಪ್ರೇಮಿಗಳೇ ಆಗಿರಲಿ, ರೈತರೇ ಆಗಿರಲಿ, ಕೌಟುಂಬಿಕ ಕಲಹದೋಳಗೆ ಬೆಸತ್ತವರೇ ಆಗಿರಲಿ ಯಾರೇ ಆದರೂ ಚೈತನ್ಯ ಕಳೆದುಕೊಳ್ಳಬಾರದು. ಅದಕ್ಕೆಂದೇ ” ಈಸಬೇಕು ಇದ್ದು ಜಯಿಸಬೇಕು” ಎಂದು ದಾಸರು ಹೇಳಿರುವುದನ್ನು ನಾವೆಲ್ಲರೂ ಒಮ್ಮೆ ಮನನ ಮಾಡಿಕೊಳ್ಳಬೇಕು,ಅಲ್ಲದೆ ನಮ್ಮನ್ನು ಪ್ರೀತಿಸುವವರ ಸಲುವಾಗಿ, ನಮಗಾಗಿ, ನಮ್ಮ ಮಕ್ಕಳಿಗಾಗಿ, ನಮ್ಮ ಹೆತ್ತವರಿಗಾಗಿ ..ಕೊನೆ ಪಕ್ಷ ನಮಗೆ ಜನ್ಮ ನೀಡಿದ ಈ ತಾಯ್ನಾಡಿನ ಋಣ ತಿರಿಸುವ ಸಲುವಾಗಿ ಒಳ್ಳೆಯ ಸದ್ವಿಚಾರ ಹೊಂದಿರುವ ಅಲೋಚನೆಗಳಿಂದ ,ಕೈಲಾದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ… ಆತ್ಮಹತ್ಯೆ ಎನ್ನುವ ಭಯಕ್ಕೆ ಧೈರ್ಯವಾಗಿ ಉತ್ತರ ನೀಡುತ್ತಾ ಕಾಲನ ಕರೆ ಬರುವವರೆಗೆ ಧೈರ್ಯದಿಂದ ಬದುಕಿ ಬಿಡೋಣ…!.

ಫೋಟೋ ಕೃಪೆ : google

ಆತ್ಮಹತ್ಯೆ ಎಂಬ ದುಷ್ಕ್ರತ್ಯದ ಬಗ್ಗೆ ಕಾನೂನು ಏನು ಹೇಳುತ್ತೆ?

ಆತ್ಮಹತ್ಯೆ ಎಂಬ ದುಷ್ಕ್ರತ್ಯವನ್ನು ತಡೆಯುವ ಸಲುವಾಗಿ ” ವಿಶ್ವ ಆತ್ಮಹತ್ಯಾ ವಿರೋಧಿ ” ದಿನವನ್ನು ಆತ್ಮಹತ್ಯೆಗೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಬಗೆಗೆ ಅರಿವು ಮೂಡಿಸುವ ದಿನವಾಗಿ ಸೆಪ್ಟೆಂಬರ್ 10 ರಂದು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಈ ಆತ್ಮಹತ್ಯೆ ಎಂಬ ದುಷ್ಕ್ರತ್ಯಕ್ಕೂ ಕಾನೂನಿಗೂ ಇರುವ ಬಲವಾದ ನಂಟು ಬಹುಜನರಿಗೆ ಗೊತ್ತಿಲ್ಲ, ನಮಗೆ ಕಾನೂನು ಎಂಬ ಪದವೆ ಭಯ, ಆತಂಕ ಎಂಬ ಪದಗಳಿಗೆ ಅಂಟಿಕೊಂಡು ಬಿಟ್ಟಿದೆ ಅದರ ಪರಿಣಾಮ ಕಾನೂನಿನ ಅರಿವಿನ ಮಹತ್ವ ತಿಳಿಯದಾಗಿದೆ. 150 ವರ್ಷಗಳ ಹಿಂದೆ ರೂಪುಗೊಂಡಿದ್ದ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ (ಐ.ಪಿ.ಸಿ.) 309 (45of 1860 ) ರ 16 ನೇ ಅಧ್ಯಾಯದಲಿ ತಿಳಿಸಿರುವಂತೆ ಆತ್ಮಹತ್ಯೆ ಅಪರಾಧವಾಗಿತ್ತು ಅಲ್ಲದೆ ಕಾನೂನು ಬಾಹಿರ ಕೃತ್ಯವಾಗಿತ್ತು. ಆದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕಿಕೊಂಡರು.

ಕಾನೂನಿನ ಮುಂದೆ ಶರಣಾಗಲೇಬೇಕಿತು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಕೇಸನ್ನು ಮೆಡಿಕಲ್ ಲೀಗೂ ಎಂದು ದಾಖಲಿಸಬೇಕಿತು .. ಅಪರಾಧ ಸಾಬೀತ್ತಾದರೆ ನ್ಯಾಯಾಲಯವು ನೀಡುವ ಒಂದು ವರ್ಷದ ಸಾದ ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕಾಗುತ್ತಿತ್ತು……ಈ ಕಾರಣದಿಂದ ಆತ್ಮಹತ್ಯೆ ಪ್ರಯತ್ನದಿಂದ ಬದುಕಿ ಉಳಿದರು ಕಾನೂನಿಗೆ ಮಣ್ಣೆರುಚ್ಚುತ್ತಿದ್ದರು ಆಸ್ಪತ್ರೆಯಲ್ಲಿ ಸುಳ್ಳು ಹೇಳಿಕೆ ಕೊಡುವ ಮೂಲಕ…..ಮತ್ತೆ ಮರಳಿ ಖಿನ್ನತೆ, ಹತಾಶೆ ಒಳಗಾಗುತ್ತಿದ್ದರು..ಇವೆಲ್ಲಾ ಕಾರಣದಿಂದ ಆತ್ಮಹತ್ಯೆ ಬಗ್ಗೆ ಇದ್ದ ಐ.ಪಿ.ಸಿ.309 ಕಲಂ 16 ರ ಆತ್ಮಹತ್ಯೆ ಕಾನೂನಿಗೆ ತಿದ್ದುಪಡಿ ತಂದು ಈಗ ಆತ್ಮಹತ್ಯೆ….. ಅಪರಾಧವಲ್ಲವೆಂದು ಪರಿಗಣಿಸಿ ಮಾನಸಿಕ ಆರೋಗ್ಯ ಆರೈಕೆಗೆ ಸಂಬಂಧಿಸಿದಂತೆ 2017 ಇಸವಿಯಲ್ಲಿ ತಿದ್ದುಪಡಿ ಆಗಿ ಹೊಸ ಕಾನೂನು ಬಂದಿದೆ, ಆತ್ಮಹತ್ಯೆ ಅಪರಾಧವಲ್ಲ ಅದಕ್ಕೆ ಶಿಕ್ಷೆಯ ಬದಲು ಆತ್ಮಹತ್ಯೆಗೆ ಒಳಾಗುವ ವ್ಯಕ್ತಿಯ ಮನೋಬಲವನ್ನು ಗಟ್ಟಿಗೊಳಿಸಿ ,ಬದುಕಿನ ಬಗ್ಗೆ ಆಶಾಭಾವನೆ ತುಂಬಿ ಆತ್ಮವಿಶ್ವಾಸ ವೃದ್ದಿಸಿ ಅವರನ್ನು ಹತಾಶೆ, ಖಿನ್ನತೆ, ಗಳಿಂದ ಹೊರತರಲು ಮಾನಸಿಕ ಚಿಕಿತ್ಸೆ ಬೇಕು ಎಂಬ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಭಾರತಿಯ ಕಾನೂನು ಇಟ್ಟಿದೆ.

ಆತ್ಮಹತ್ಯೆ ಮಾಡಿಕೊಳ್ಳುವಂತೆ ಯಾರಾದರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಚೋದನೆ ಮಾಡಿದ್ದರೆ.. ಅದನ್ನು ಆತ್ಮಹತ್ಯೆ ಸಮಯದಲ್ಲಿ ಡೆತ್ ನೋಟ್ ಮೂಲಕ, ಇಲ್ಲ ಸಾಯುವ ಕೊನೆ ಘಳಿಗೆಯಲ್ಲಿ ದಾಖಲಿಸುವ ಹೇಳಿಕೆಯನ್ವಯ ಪ್ರಲೋಭನೆ ಮಾಡಿದ ವ್ಯಕ್ತಿಯನ್ನು ಅಪರಾಧಿ ಎನ್ನಲಾಗುತ್ತದೆ. ಹಾಗಾಗಿ ಆತ್ಮಹತ್ಯೆ ಎಂಬ ದುಷ್ಕ್ರತ್ಯ ಕೆ ಪ್ರಚೋದನೆ ಮಾಡುವವರು ಅಪರಾಧಿ ಗಳಾಗುತ್ತಾರೆ. ಈ ನಿಟ್ಟಿನಲ್ಲಿ ಸ್ವಯುಂಕೃತವಾಗಿ ಆತ್ಮಹತ್ಯೆ ಪ್ರಯತ್ನ ವಿಫಲವಾಗಿ ಬದುಕುಳಿದ ವ್ಯಕ್ತಿಗಳಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ.


  • ಪವಿತ್ರ .ಹೆಚ್.ಆರ್. – ವಕೀಲರು, ಸೋಮವಾರಪೇಟೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW