ಎತ್ತಣ ಸಾಗುತ್ತಿದೆ, ಎಲ್ಲ ಕಡೆಯೂ ಹಣಕ್ಕಾಗಿ ಜನರ ಶವಗಳನ್ನು ಲೆಕ್ಕ ಹಾಕುತ್ತಿರುವವರೆ?. ನಮ್ಮ ಆಡಳಿತ ವ್ಯವಸ್ಥೆ ಯಾಕೆ ಈ ತರವಾಗಿದೆ?. ಹತ್ತಾರು ಪ್ರಶ್ನೆಗಳು ಜನರನ್ನು ಕಾಡುತ್ತಿವೆ.
ನನಗೆ ಈಗಲೂ ಕಾಡುವ ಪ್ರಶ್ನೆ ಜನಸಾಮಾನ್ಯರಿಗೆ ೧೪ ದಿನ ಮನೆಯಲ್ಲಿ ಪ್ರತ್ಯೇಕಿಕರಣ, ಇಲ್ಲ ಆಸ್ಪತ್ರೆಯಲ್ಲಿ ಕೂಡಿ ಹಾಕುವುದು, ಆದ್ರೆ ರಾಜಕೀಯ ವ್ಯಕ್ತಿಗಳಿಗೆ, ಗಣ್ಯವ್ಯಕ್ತಿಗಳಿಗೆ ಈ ನಿಯಮ ಇಲ್ಲವೇ…? ಇದು ಕೂಡ ನಾವು ಕಂಡರಿಯದ ದೃಶ್ಯವೇನಲ್ಲ.ಅವರ ಮೇಲೆ ಇವರ ದೂರು, ಇವರ ಮೇಲೆ ಅವರ ದೂರು ಅಷ್ಟೇ ಇದನ್ನೇ ಕೇಳಿ… ಕೇಳಿ… ಸಾಕಾಯ್ತು ನೋಡ್ರಿ. ಆದ್ರೆ ತೃಪ್ತಿಯಂತೂ ಯಾರಿಗೂ ಸಿಕ್ಕಿದ್ದು ಇಲ್ಲ ಅನ್ನಿಸುತ್ತದೆ. ಈ ಪ್ರತಿಪಕ್ಷಗಳು ಎನ್ ಮಾಡಿದ್ರು ತಪ್ಪು ಅನ್ನೋವಾಗೆ ಆಡಳಿತದಲ್ಲಿರುವರ ಮೇಲೆ ಗೂಬೆ ಕೂರಿಸುವುದು. ಆದ್ರೆ ಬಲಿಪಶು ಆಗೋದು ಮಾತ್ರ ಜನ ಸಾಮಾನ್ಯರು. ಅದರಲ್ಲೂ ಮಧ್ಯಮ ವರ್ಗದವರು, ಕೆಳವರ್ಗದವರು.

ಫೋಟೋ ಕೃಪೆ : Google.com
ಈ ಸಮೂಹ ಮಾಧ್ಯಮಗಳು ಏನು ಪ್ರಾಮಾಣಿಕವಲ್ಲ ನೋಡ್ರಿ. ಇದೇನು ನಿಮಗೆ ತಿಳಿಯದ ವಿಷಯವಲ್ಲ. ಆದ್ರೂ ತಿಳಿಸುವ ಹುಚ್ಚು ಇದೆ ನೋಡಿ. ತೋರಿಸಿದ್ದೆ… ತೋರಿಸ್ತಾ ಇರ್ತಾರೆ ಸಮಾಜಕ್ಕೆ, ಸೌಖ್ಯವಾದದ್ದು ತೋರಿಸೋ ದೊಡ್ಡ ಗುಣ ಇಲ್ಲ. ಇದ್ರು ಅದನ್ನೇ ಪ್ರಸಾರ ಮಾಡುವ ದೊಡ್ಡತನವಿಲ್ಲ. ಯಾವಾಗ ಟಿ ವಿ ಹಾಕಿ ನ್ಯೂಸ್ ಚಾನೆಲ್ ಹಾಕು, ಅಲ್ಲಿ ಅಷ್ಟು ಸತ್ರು,ಇಲ್ಲಿ ಇಷ್ಟು ಸತ್ರು, ಅಲ್ಲಿ ಅಷ್ಟು ಕರೋನ ಕೇಸ್ ದಾಖಲಾಯ್ತು ಅಂತ ತೋರಿದ್ರೋ ವಿನಃಹ ಇಷ್ಟು ಮಂದಿ ಹುಷಾರಾಗಿ ತಮ್ಮ ಗೂಡು ತಲುಪಿದರು ಎಂದು ಎಂದಾದ್ರು ಪದೇ ಪದೇ ಪ್ರಸಾರ ಮಾಡಿ ತೋರಿಸಿದ್ದ ನೀವು ಕಂಡಿದ್ದೀರಾ? ಸ್ವಲ್ಪ ಯೋಚಿಸಿ ನೋಡಿ.
ಇಂದು ಮೈಂಡ್ ಗೇಮ್ ಅಂತ ಅನಿಸ್ತಾ ಇಲ್ವಾ..?
ಮಾತಿಗೆ ದಾಖಲೆ ಅವಶ್ಯಕತೆ ಬೇಡ. ನ್ಯೂಸ್ ಪೇಪರ್ ಓದ್ರಿ ಗೊತ್ತಾಗುತ್ತೆ ಸತ್ಯ ಎಷ್ಟು? ಸುಳ್ಳು ಯಾವ್ದು ಅಂತ. ಪ್ರತಿ ಬರವಣಿಗೆಗೂ ಆತ ದಾಖಲೆ ತೋರಿಸಬೇಕು. ಆದ್ರೆ ವಾಕ್ ಸ್ವಾತಂತ್ರ್ಯ ಕೊಟ್ಟಿರೋ ನಮ್ಮ ನಾಡಲ್ಲಿ ಮಾತಿಗೆ ಪುರಾವೇನೆ ಬೇಡ ಅಂದ್ಮೇಲೆ ದಾಖಲೆ ಬೇಕಾ?.
ಈಗೀಗ ನನಗೆ ಈ ದೂರದರ್ಶಕವೇಕೋ ಅರ್ಥಹೀನದ ಕಡೆ ವಾಲಿಸುವಲ್ಲಿ ಯಶಸ್ವಿಯಾಗಿ ರೂಪುಗೊಳ್ಳುತ್ತಿದೆ ಎನಿಸುತ್ತದೇ. ಆ ಸರಣಿ ಸಾಲಿನಲ್ಲಿ ಬರುವ ಧಾರವಾಹಿಗಳೋ ಯಾರು ಮೆಚ್ಚಬೇಕೋ ನನಗೂ ತಿಳಿದಿಲ್ಲ. ಬೇರೆ ಕಡೆ ಹೋಗ್ತಾ ಇದೆ ಅನಿಸ್ತಾ ಇದೆ ಅದು ಬೇಡ ಬಿಡಿ.
ಕರೋನ ಅಟ್ಟಹಾಸದಿ ಮೆರೆಯುತ್ತಿದೆ ನಿಜ. ಆದ್ರೆ ಟಿವಿಯಲ್ಲಿ ತೋರಿಸುವಷ್ಟು ಏನಿಲ್ಲ. ನ್ಯೂಸ್ ಚಾನೆಲ್ ನೋಡಿ, ನಿಮ್ಮ ಆತ್ಮವಿಶ್ವಾಸವ ನೀವೇ ಕೊಲ್ಲಬೇಡಿ. ೪೪,೪೩೮ ಕೇಸ್ ದಾಖಲಾದ್ರೆ , ೨೦,೯೦೧ ಕೇಸ್ ರಿವಕವರ್ ಆಗುತ್ತೆ. ಆದ್ರೆ ಮಾಧ್ಯಮಗಳು ಯಾಕೆ ಸುಳ್ಳನ್ನ ಹಬ್ಬಿಸಿ ಜನರ ಮಾನಸಿಕ ಸ್ಥಿತಿಯನ್ನ ಹಾಳ್ ಮಾಡ್ತಾ ಇದಾರೋ ನಿಜವಾಗಿಯೂ ತಿಳಿದಿಲ್ಲ.
ಕಳೆದ ಸಲ ಆದ ಲಾಕ್ಡೌನ್ ನ ಹೊಡೆತವೇ ತಣ್ಣಗಾಗಿಲ್ಲ. ಇರೋರು ಕೂಡಿಟ್ಟ ಹಣವನ್ನು ಏನು ಕರಗಿಸಿ ತಿನ್ನುವರು. ದಿನದ ದುಡಿಮೆಯನ್ನೇ ನಂಬಿ ಸಾಯುತ್ತಿರುವವರ ಕಥೆಯೇನು?. ವಿದ್ಯಾವಂತರು ಆದ್ರೂ ನೈತಿಕತೆಯ ಜೊತೆಗೆ ಧೈರ್ಯ ತುಂಬಿ, ಆ ನ್ಯೂಸ್ ಚಾನೆಲ್ ಅವ್ರು ಹೇಳೋದೇ ಸತ್ಯವೆಂದು ನಂಬಿ ಕರೋನ ಬರದೆ ಸತ್ತು ಬಿಟ್ಟಾರು. ನಿಮ್ಮ ಸೂಕ್ತ ಮನಸ್ಸಿಗೆ ನೀ ಆರೋಗ್ಯವಾಗಿದ್ದೀಯಾ? ಎಂದು ಅರ್ಥ ಮಾಡಿಸಿದ್ರೆ ಹೊರಗಿನಿಂದ ರೋಗ ನಿರೋಧಕ ಶಕ್ತಿಯನ್ನು ತುಂಬುವ ಅವಶ್ಯಕತೆ ಇಲ್ಲ.
ಮೊದಲ ಡೋಸ್ ಕೊಟ್ಟು ಎರಡನೇ ಡೋಸ್ ಗೆ ಇಡೀ ಭಾರತವ ಸುತ್ತಿಸಿ ಬಿಟ್ಟಾರು ಹುಷಾರು..
- ಅಮೃತ ಎಂ ಡಿ , ವಿದ್ಯಾರ್ಥಿನಿ (ಎಂ ಎಸ್ಸಿ ದ್ವಿತೀಯ ವರುಷ ಗಣಿತಶಾಸ್ತ್ರ ವಿಭಾಗ) ಮಾಗನಹಳ್ಳಿ.
