ಆಕೃತಿ ಕನ್ನಡ ಓದುಗರಿಂದ ಒಂದು ಪುಟ್ಟ ಲೇಖನ:
ಕರೋನ ಒಂದು ರೀತಿ ನಮ್ಮಗೆಲ್ಲಾ ಎಚ್ಚರಿಕೆ ಕೊಡಿಸುತ್ತಿದೆಯೋ ಅಥವಾ ನಮಗೆಲ್ಲ ಜೀವನದ ಪಾಠ ಹೇಳಿಕೊಡಿಸುತ್ತಿದೆಯೋ? ತಿಳಿಯುತ್ತಿಲ್ಲ. ಒಂದು ಕಡೆ ಸ್ವಚ್ಛತೆಯ ಪಾಠ ಹೇಳಿಕೊಡುತ್ತಿದೆ. ಇನ್ನೊಂದು ಕಡೆ ಜೀವಬೆದರಿಕೆ ಹುಟ್ಟಿಸುತ್ತಿದೆ. ಒಂದು ಕಡೆ ಮನೆಯಲ್ಲಿಯೇ ಇರುವ ಹಾಗೆ ಮಾಡಿ ಮನೆಯವರೊಂದಿಗಿನ ಬಾಂಧವ್ಯವನ್ನುಇನ್ನು ಗಟ್ಟಿಗೊಳಿಸಿದೆ. “ಮುಂದೇನು? ” ಎನ್ನುವ ಪ್ರಶ್ನೆಗಳು, ಆತಂಕಗಳು ಎಲ್ಲರಲ್ಲೂ ಮನೆ ಮಾಡುತ್ತಿವೆ.
ವೀಕೆಂಡ್ ಎಂದರೆ ಆಚೆ ಸುತ್ತುವುದು, ಕೈಗೆ ಸಿಕ್ಕಿದ್ದೆಲ್ಲಾ ಹೊರಗೆ ತಿನ್ನುವುದೇ ಒಂದು ಮನರಂಜನೆ ಎಂದುಕೊಂಡಿದ್ದೆವು.ಪುಸ್ತಕ ಓದುವುದು, ಬಗೆ ಬಗೆಯ ಅಡುಗೆಗಳನ್ನು ಕಲಿಯುವುದು, ಮಕ್ಕಳೊಂದಿಗೆ ಆಟವಾಡುವುದು ಇತ್ಯಾದಿಗಳ ಮೂಲಕ ಮನೆಯಲ್ಲಿಯೇ ಇದ್ದು ಹೇಗೆಲ್ಲ ಮನರಂಜನೆಗೊಳ್ಳಬಹುದು ಎನ್ನುವ ಪಾಠವನ್ನು ಕಲಿಸಿಕೊಟ್ಟಿದೆ.
ಸದಾ ಆಫೀಸ್ ಕೆಲಸ, ಮನೆ ಕೆಲಸ ಎಂದು ಕಷ್ಟಪಡುತ್ತಿದ್ದ ಮಹಿಳೆಯರಿಗೆ ಸ್ವಲ್ಪ ವಿಶ್ರಾಂತಿ ಯನ್ನು ಕೊಟ್ಟಿದೆ. ಮತ್ತು ಮನೆಯಲ್ಲಿಯೇ ಇದ್ದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನೀನೇ ನಿಭಾಯಿಸು ಎಂದು ಎಚ್ಚರಿಸುತ್ತಿದೆಯೋ ಒಂದು ತಿಳಿಯದಾಗಿದೆ.
ಈ ಪ್ರಕೃತಿಗೆ ನಾವು ತಲೆ ಬಾಗಲೇಬೇಕು ಎಂಬ ಸತ್ಯವನ್ನು ನಮಗೆ ಈ ಕರೋನ ಮಹಾಮಾರಿಯ ಮೂಲಕ ಅರಿವಾಗಿದೆ.ಆದರೆ ಜೀವನದ ಉದ್ದಕ್ಕೂ ಈ ಕರೋನ ರೂಪಿಸಿಕೊಟ್ಟ ಪಾಠವನ್ನು ಮುಂದೆಯೂ ನಾವೆಲ್ಲರೂ ಪಾಲಿಸೋಣ.
ಈ ಕ್ಷಣದಿಂದ ಮುಂದಿನ ನಮ್ಮ ಭವಿಷ್ಯಕ್ಕಾಗಿ ನಾವೆಲ್ಲರೂ ಮನೆಯಲ್ಲಿಯೇ ಇದ್ದು, ಕರೋನ ಹರಡದಂತೆ ನೋಡಿಕೊಳ್ಳೋಣ.ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ
ಲೇಖನ : ಭವಾನಿ ದಿವಾಕರ್