ಆಕೃತಿ ಓದುಗರಿಂದ ಒಂದು ಕವನ.
ಒದ್ದೋಡಿಸೋಣ “ಕೊರೋನಾ”ವನ್ನ…..
ಎಲ್ಲೆಲ್ಲೂ ಆ ಆಗಂತುಕನದ್ದೇ ಮಾತು,
ಎಷ್ಟೋ ದೇಶದಿ ಬಾರಿಸಿತು ಮರಣ ಮೃದಂಗ
ಸಾಲದ್ದಕ್ಕೆ ಬಂತು ನಮ್ಮ ದೇಶಕ್ಕೂ…..
ಕುಂತರೂ ಅವನದ್ದೇ ಧ್ಯಾನ,
ನಿಂತರೂ ಅವನದೇ ಧ್ಯಾನ,
ಉಂಡರೂ ಅವನದೇ ಧ್ಯಾನ,
ಕೈ ತೊಳೆದರೂ ಅವನದೇ ಧ್ಯಾನ,
ಕೆಮ್ಮಿದರೂ ಅವನದೇ ಧ್ಯಾನ,
ಕೊಂಚ ಸೀನಿದರೂ ಅವನದೇ ಧ್ಯಾನ,
ಹೋಗಲಿ, ಇನ್ನೊಬ್ಬರನು ಸ್ಪರ್ಶಿಸಿದರೂ ಅವನದೇ ಧ್ಯಾನ,
ಇಂತಹವನನು ಧ್ಯಾನಿಸುವ ಬದಲಿಗೆ
ಅವನನು ಓಡಿಸುವ ಧ್ಯಾನ
ಮಾಡೋಣ ಎಲ್ಲರೂ ಒಟ್ಟಾಗಿ,
ಅದಕ್ಕಾಗಿ,
ಗುಟ್ಟಾಗಿ ಅವಿತಿರಿ ಮನೆಯಲಿ ಹಲವು ದಿನ,
ಚೆನ್ನಾಗಿ ಕೈ ತೊಳೆಯೋಣ ಅನುದಿನ,
ಕೈತೊಳೆಯುತಿರಿ ಕೆಲಸದ ನಂತರ ಪ್ರತಿಕ್ಷಣ,
ಕಾಯೋಣ ಅಂತರ ಎಲ್ಲರಿಂದ ಒಂದಿಷ್ಟು ದಿನ,
ಮಾಡೋಣ ಮತ್ತೆ ಸದೃಢ ಭಾರತವನ್ನ,
ಪಡೆಯೋಣ ರೋಗನಿರೋಧಕತೆಯನ್ನ,
ಬಿಡೋಣ ನೆಮ್ಮದಿಯ ನಿಟ್ಟುಸಿರನ್ನ,
ಒದ್ದೋಡಿಸೋಣ ಆ “ಕೊರೋನಾ”ವನ್ನ…..
********************************************************
ಕರೋನ ವೈರಸ್ ವಿರುದ್ಧ ಹೊರಾಡೋಣ…
********************************************************
– ಶಿವಪ್ರಸಾದ ಪುರುಷೋತ್ತಮ ಮಂಡಿ