ಮಾಸದ ಬೆಂಗಳೂರಿನ ನೆನಪು

ಹಳೆಯ ಬೆಂಗಳೂರಿನ ಚೆಲುವಿನ ನೆನಪು ಮರುಕಳಿಸುತ್ತಿತ್ತು…

ಕೆಲ ದಿನಗಳಿಂದ

ಊಹಿಸಲೂ ಅಸಾಧ್ಯವೆಂದು ಸಾರುತ್ತಿತ್ತು…

ಬೃಹತ್ ಬೆಂಗಳೂರು ದಶಕದಿಂದ

ಕೆಲವೊಂದಾದರೂ ನನಸಾದವು ಕ್ಷಣಿಕಕಾಲ LockDown ನಿಂದ

ಸುತ್ತಲೂ ನಿಶಬ್ದ,ಹೊಗೆ ಧೂಳಿ ನಿಂದ ಬಿಡುಗಡೆ, ಪಕ್ಷಿ ಗಳ ಚಿಲಿಪಿಲಿ ಹಾರಟ, ಜೊತೆಗೆ ವರುಣನ ಕೃಪೆ,

ಮರಳಿದ ಪ್ರಕೃತಿ ಮಾತೆಯ ಸೌಂದಯ೯

ಅಲ್ಲೊಂದು ಇಲ್ಲೊಂದು ವಾಹನ, ಅಲ್ಲೊಬ್ಬ ಇಲ್ಲೊಬ್ಬ

ದಿನಸಿ ತರಕಾರಿಗೆ ಜನ

ಮುಂಜಾನೆಯ ಅಲಾರಾಂ ಪಕ್ಷಿಗಳ ಸರಿಗಮದಿಂದ

ಗೋಧೂಳಿ ಸಮಯ (ಮುಸ್ಸಂಜೆ) ಹಸುವಿನ ‘ಅಂಬಾ’ ಎಂಬ ಕೂಗಿನಿಂದ

ಯಾವ ಒತ್ತಡವೂ ಇಲ್ಲದ ಮನೆ ವಾತಾವರಣ

ಬಾಲ್ಯದ ಟಿ ವಿ ಕಾಯ೯ಕ್ರಮ

ವಾರದ ದಿನದಲ್ಲೂ ಮಾತು-ಹರಟೆ

ಇವೆಲ್ಲಾ ಬೆಂಗಳೂರು ಸೌಂದಯ೯ದ ಮಾಸದ ನೆನಪಿನಿಂದ

ಇದೆಲ್ಲ ಸೋಜಿಗ ಅನಿಸುವುದು…

ನವ ಬೆಂಗಳೂರ ನಾಗರಿಕರಿಂದ

ನೆನಪಿಗೆ ಜಾರುವವರು ೨ ದಶಕಗಳ ಮುಂಚೆ ಬಂದ ನಾಗರಿಕರಿಂದ

ಇನ್ನಾದರೂ ಪ್ರಕೃತಿ ಮಾತೆಗೆ ತಲೆಬಾಗೋಣ

“ಗಾಡ೯ನ್ ಸಿಟಿ” ಯಾಗೇ ಉಳಿಸಿಕೊಳ್ಳೋಣ ನಮ್ಮ ಬೆಂಗಳೂರನ್ನ…

ಕವನ : ವಾಣಿರಾಜ್ ಜೋಶಿ
aakritikannada@gmail.com

 

%d bloggers like this:
Aakruti Kannada

FREE
VIEW