ಕಾಯುವ ಬೇಲಿಯೆ ಹೊಲ ಮೇಯಿದಾಗ – ವಿಕಾಸ್. ಫ್. ಮಡಿವಾಳರ

ಭ್ರಷ್ಟಾಚಾರದಿಂದ ಪ್ರಜೆಗಳಿಗೆ ಅದೆಷ್ಟು ಹಾನಿಯಾಗುತ್ತದೊ ಅಷ್ಟೆ ಸರ್ಕಾರಕ್ಕೂ ಹಾನಿಗುತ್ತಿದೆ.ಜನರ ಹಿತವನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳೆ, ಜನರ ದುಡ್ಡನ್ನು ಕೊಳ್ಳೆ ಹೊಡೆಯುವಾಗ, ನಾವುಗಳು ಯಾರಿಗೆ ನ್ಯಾಯ ಕೇಳಬೇಕು?. ಯುವ ಬರಹಗಾರ ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಮೂಡಿ ಬಂದ ಭ್ರಷ್ಟಾಚಾರದ ಕುರಿತು ಒಂದು ಸುದೀರ್ಘ ಚಿಂತನೆ, ಮುಂದೆ ಓದಿ…

(ಶಿಷ್ಟಾಚಾರದ ಲೋಕದಲ್ಲಿ ಭ್ರಷ್ಟಾಚಾರ)

ಹಿಂದಿನ ಕಾಲದಲ್ಲಿ ಪ್ರಜೆಗಳಿಗೆ ಏನಾದರು ಸಮಸ್ಯೆ ಬಂದೊದಗಿದರೆ, ಪ್ರಜೆಗಳ ಯೋಗಕ್ಷೇಮವನ್ನು ಆ ರಾಜ್ಯದ ರಾಜ ನೋಡಿಕೊಳ್ಳುತಿದ್ದ. ಅದಕ್ಕೆ ಅವನನ್ನು ಪ್ರಜಾಪಿತ ಎಂದು ಕರೆಯುತ್ತಿದ್ದರು. ಈಗ ಕಾಲ ಬದಲಾಗಿದೆ, ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಜಾತ್ಯತೀತ ಹಾಗೂ ಪ್ರಜಾಪ್ರಭುತ್ವದ ಸರಕಾರವಿದೆ. ಈ ಸರಕಾರದ ಬೇರುಗಳು ದೇಶದ ಉದ್ದಗ್ಗಲ್ಲಕ್ಕು ಹರಡಿ ನಮ್ಮನ್ನು ರಕ್ಷಿಸುತ್ತಿದೆ. ಈ ರಕ್ಷಣೆ ಪ್ರಜೆಗಳ ಯೋಗಕ್ಷೇಮಕ್ಕೊ ಅಥವಾ ಕೆಲ ಭ್ರಷ್ಟಾಚಾರಿಗಳ ಯೋಗಕ್ಷೇಮಕ್ಕೊ ನಾ ಅರಿಯೆ.

ಕೆಲ ದಿನಗಳ ಹಿಂದೆ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಮಾಡಿಸಿಕೊಳ್ಳುವ ಹಿನ್ನಲೆಯಲ್ಲಿ ನನ್ನ ಕಾಲುಗಳು, ಕೋರ್ಟ್ ಮತ್ತು ಮಿನಿ ವಿಧಾನಸೌಧದ ದಾರಿ ಹಿಡಿದಿತ್ತು. ಏನೊ ಸ್ವಲ್ಪ ಹೊತ್ತಿನಲ್ಲಿ ಕೆಲಸ ಆಗಬಹುದು ಎಂಬ ಭರವಸೆಯಲ್ಲಿದ್ದ ನನಗೆ ಸತ್ಯಾಂಶಗಳನ್ನು ತಿಳಿಯಲು ಜಾಸ್ತಿ ಸಮಯ ಹಿಡಿಯಲಿಲ್ಲ. ‘ದುಡ್ಡಿದ್ದರೆ ದೊಡ್ಡಪ್ಪ ಇಲ್ಲವಾದರೆ ನೀನ್ಯಾರಪ್ಪ’… ಎಂದು ಕೇಳುವವರೆ ಹೆಚ್ಚಾದರೆ ಹೊರತು ನಿಷ್ಠೆಯಿಂದ ಕೆಲಸ ಮಾಡಿ ಕೊಡುವ ವ್ಯಕ್ತಿ ಸಿಗಲೆ ಇಲ್ಲ. ಎರಡು ನೂರು ರೂಪಾಯಿ ಇದ್ದರೆ ತಳ್ಳು ಇಲ್ಲವಾದರೆ ಮಾಡಿಕೊಡುವುದಿಲ್ಲ ಎಂದು ಹೇಳುವ ಅಧಿಕಾರಿಗಳನ್ನು ಕಂಡ ನನಗೆ, ಭಿಕ್ಷೆ ಬೇಡುವವರಿಗೂ ಇವರಿಗೂ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಭಿಕ್ಷುಕರು ಸಹನಾ ಭಾವದಿಂದ ಬೇಡಿದರೆ, ಇವರು ದರ್ಪದ ಭಾವದಿಂದ ಬೇಡುತ್ತಾರಷ್ಟೆ.

ಫೋಟೋ ಕೃಪೆ : iStock

ನಮ್ಮ ದೇಶದ ಪ್ರಜೆಗಳ ಹಿತಕ್ಷೇಮವನ್ನು ನೋಡಿಕೊಳ್ಳಲು ನಮ್ಮ ಸರ್ಕಾರ ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಪ್ರಜೆಗಳ ಉದ್ದಾರಕ್ಕೆ ದುಡಿಯುತ್ತಿದೆ. ಈ ಯೋಜನೆಗಳನ್ನು ಮತ್ತು ಸರ್ಕಾರದ ಕೆಲಸವನ್ನು ನೋಡಿಕೊಳ್ಳಲು ಕೆಲ ಅಧಿಕಾರಿಗಳನ್ನು ನೇಮಿಸುತ್ತದೆ. ಈ ಸರಕಾರಿ ಅಧಿಕಾರಿಗಳು ಸರಕಾರದಿಂದ ಅದೆಷ್ಟೊ ಸವಲತ್ತುಗಳನ್ನು ಅನುಭವಿಸಿದರೂ, ನಮ್ಮನ್ನು ಕಿತ್ತು ತಿನ್ನುವ ಚಾಳಿಯನ್ನು ಬಿಟ್ಟಿಲ್ಲ. ಒಂದು ಸಹಿಗೋಸ್ಕರ 200 ರೂಪಾಯಿಯಿಂದ 2 ಲಕ್ಷ ರೂಪಾಯಿಯವರೆಗೂ ಲಂಚ ಕೇಳುವ ಇವರು, ಉಂಡ ಮನೆಗೆ ದ್ರೋಹ ಬಗೆಯುವಂತವರು. ಜನರ ಹಿತವನ್ನು ನೋಡಿಕೊಳ್ಳಬೇಕಾದ ಇವರುಗಳೆ, ಜನರ ದುಡ್ಡನ್ನು ಕೊಳ್ಳೆ ಹೊಡೆಯುವಾಗ, ನಾವುಗಳು ಯಾರಿಗೆ ನ್ಯಾಯ ಕೇಳಬೇಕು?. ಭ್ರಷ್ಟಾಚಾರವನ್ನು ಹತ್ತಿಕ್ಕಲು ಲೋಕಾಯುಕ್ತ ಶುರುವಾಗಿದ್ದೆನೊ ನಿಜ. ಆದರೆ ಅದರಲ್ಲೂ ಎಷ್ಟು ಲೋಪ ದೋಷಗಳಿವೆ ಎಂದು ಬನ್ನಿಸಲಾಗದು. ಇದಕ್ಕೆ ಕೆಲ ವರ್ಷಗಳ ಹಿಂದೆ ನಡೆದ ಘಟನೆಯೆ ಪ್ರತ್ಯಕ್ಷ ಸಾಕ್ಷಿ.

ಕೆಳದರ್ಜೆಯ ನೌಕರರು ಇಂತಿಷ್ಟು ಲಂಚ ಪಡೆದರೆ, ಮೇಲದರ್ಜೆಯ ನೌಕರರ ಬಗ್ಗೆ ಹೇಳಲು ಎರಡು ಮಾತುಗಳು ಸಾಲುವುದಿಲ್ಲ. ಇದಕ್ಕೆಲ್ಲ ಮೂಲ ಕಾರಣ ನಾವುಗಳೆ ಎಂಬುದು ಕಹಿ ಸತ್ಯ. ಹೌದು ಇದು ಅರಗಿಸಿಕೊಳ್ಳಲಾಗದ ಸತ್ಯಾಂಶ. ನಮ್ಮ ಕೆಲಸ ಬೇಗ ಆಗಲಿ ಎಂದು ನಾವೆ ಅವರಿಗೆ ಲಂಚದ ರುಚಿ ಹಚ್ಚಿಸಿಬಿಡುತ್ತೇವೆ. ಯಾರಾದರು ಲಂಚ ತಗೆದುಕೊಳ್ಳುತ್ತಿದ್ದರೆ ಅವರನ್ನು ವಿರೋಧಿಸದೆ ಮೌನವಾಗಿ ಉಳಿಯುತ್ತೇವೆ. ಅವರನ್ನು ಪ್ರಶ್ನಿಸಲು ಯಾರು ಇಲ್ಲದಿದ್ದಾಗ ಅವರೆಕೆ ಲಂಚ ಕೇಳುವುದನ್ನು ಬಿಡುತ್ತಾರೆ. ನಮ್ಮ ಸಮಾಜ ಇದನ್ನು ಅರಿಯದೆ ಹೋದರೆ ನಷ್ಟವಾಗುವುದು ನಮಗೆ ಹೊರತು ಭ್ರಷ್ಟಾಚಾರಿಗಳಿಗಲ್ಲ.

ಫೋಟೋ ಕೃಪೆ : indiatvnews

ಭ್ರಷ್ಟಾಚಾರದಿಂದ ಪ್ರಜೆಗಳಿಗೆ ಅದೆಷ್ಟು ಹಾನಿಯಾಗುತ್ತದೊ ಅಷ್ಟೆ ಸರ್ಕಾರಕ್ಕೂ ಹಾನಿಗುತ್ತಿದೆ. ಕೆಲ ಭ್ರಷ್ಟಾಚಾರಿಗಳು ಮಾಡಿದ ಕೆಲಸದಿಂದ ಪ್ರಜೆಗಳಿಗೆ ಮುಖ ತೋರಿಸಲು ಸರಕಾರಕ್ಕೆ ಕಷ್ಟವಾಗುತ್ತಿದೆ. ಭ್ರಷ್ಟಾಚಾರದಿಂದ ಸರಕಾರಕ್ಕೆ ಬರಬೇಕಿದ್ದ ಆಧಾಯ ಕಡಿಮೆ ಆಗುತ್ತಿರುವುದರಿಂದ, ದೇಶವನ್ನು ನಡೆಸಲು ಅದೆಷ್ಟೊ ತೊಂದರೆಗಳು ಎದುರಗುತ್ತಿದೆ. ನಮ್ಮ ದೇಶದ ಬೆಳವಣಿಗೆ ಕುಗ್ಗಲು ಭ್ರಷ್ಟಾಚಾರವು ಕೂಡ ಮೂಲ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವ ಸರಕಾರದ ಮಾತುಗಳು ಬರಿ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರದ ತುಂಬೆಲ್ಲ ಕೆಲ ವಿಷ ಬೀಜಗಳು ಹುಟ್ಟಿರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿದೆ. ಒಬ್ಬರು ಮಾಡಿದ ತಪ್ಪಿಗೆ, ಗುಂಪಿಗೆ ದೋಷಿಸುವುದು ತಪ್ಪು. ಆದರೆ ಇಲ್ಲಿ ಅದೆಷ್ಟು ಭ್ರಷ್ಟಾಚಾರಿಗಳು ಕಣ್ಣಿಗೆ ಕಾಣುತ್ತಿದ್ದಾರೆಂದು ಹೇಳುವ ಅವಶ್ಯಕತೆಯಿಲ್ಲವೆನಿಸುತ್ತದೆ. ಹೀಗೆ ಮುಂದುವರೆದರೆ ನಮ್ಮ ಅಜ್ಜನ ಕಾಲದಲ್ಲಿ ಭಾರತ ಹೇಗೆ ಮುಂದುವರೆಯುತ್ತಿರುವ ದೇಶವಗಿತ್ತೊ, ಮುಂದೆ ನಮ್ಮ ಮೊಮ್ಮಕಳು ಬಂದರೂ ಭಾರತ ಮುಂದುವರೆಯುತ್ತಿರವ ದೇಶವಾಗೆ ಉಳಿಯುತ್ತದೆ. ಎಂದು ನನ್ನ ಭಾರತ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆಯೊ, ಅಂದೆ ನನ್ನ ಭಾರತ ಮುಂದುವರೆದ ದೇಶವಗುತ್ತದೆ ಎಂಬುದು ನನ್ನ ಅನಿಸಿಕೆ.

ನಾನು ಯಾವುದೆ ಸರ್ಕಾರದ ವಿರೋಧಿಯಲ್ಲ, ಸರ್ಕಾರದಲ್ಲಿದ್ದು ಜನರನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರಿಗಳ ವಿರೋಧಿ.

ಇಂತಿ ನಿಮ್ಮ ಪ್ರೀತಿಯ


  • ವಿಕಾಸ್. ಫ್. ಮಡಿವಾಳರ 

4.5 2 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW