‘ದಾಳ’ ಕವನ – ನಾಗರಾಜ ಜಿ. ಎನ್. ಬಾಡ

ಮೋಸ ಮಾಡುವುದೇ ಅವರ ಕಲೆ, ಅದಕ್ಕಾಗಿ ಬೀಸುವರು ಬಲೆ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
 ಯಾರಿಲ್ಲಿ ಒಳ್ಳೆಯವರು
ಯಾರಿಲ್ಲಿ ಕೆಟ್ಟವರು ಅರಿಯಲಾಗದು

ಯಾರಿಲ್ಲಿ ನಮ್ಮವರು
ಯಾರಿಲ್ಲಿ ನಮ್ಮವರಂತೆ ನಟಿಸಿ
ನಂಬಿಸಿ ಮೋಸವ ಮಾಡುವವರು

ಯಾರನ್ನೂ ನಂಬುವುದು ಕಷ್ಟ
ನಂಬಿಕೆ ಮಾಡುವುದು ನಮಗೇ ನಷ್ಟ

ಅವರವರ ಸ್ವಾರ್ಥ ಸಾಧನೆಗೆ
ಯಾರನ್ನ ಬೇಕಾದರೂ ಇಲ್ಲಿ
ನಂಬಿಸಿ ಬಲಿಯ ಹಾಕುವರು

ಅವರ ಲಾಭಕ್ಕೆ ಬಳಸಿಕೊಳ್ಳುವರು
ಸಮಯ ಸಂದರ್ಭದ ನೆಪವ ಹೇಳಿ
ನುಣ್ಣಗೆ ಜಾರಿಕೊಳ್ಳುವರು

ಮೋಸ ಮಾಡುವುದೇ ಅವರ ಕಲೆ
ಅದಕ್ಕಾಗಿ ಬೀಸುವರು ಬಲೆ
ಸಿಕ್ಕಿದ್ದನ್ನು ತಿಂದುಂಡಿ ತೇಗುವರು

ಮತ್ತೆ ಹೊಸ ಮಿಕವ ಹುಡುಕುವರು
ಮತ್ತದೇ ಮೋಸದಾಟಕ್ಕೆ
ಹೊಂಚುಹಾಕಿ ದಾಳವ ಉರುಳಿಸುವರು


  • ನಾಗರಾಜ ಜಿ. ಎನ್. ಬಾಡ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW