ದಶಿ೯ನಿ .ಆರ್. ಪ್ರಸಾದ್ ಅವರ ಮೊದಲ ಕೃತಿ “ಮನದನಿಯ ಚಿತ್ತಾರ” ಕವನ ಸಂಕಲನ. ಅವರಿಗೆ ಧಾರವಾಡದ ಚೇತನ ಫೌಂಡೇಶನ್ ಸಂಸ್ಥೆ ವತಿಯಿಂದ “ಪುಸ್ತಕ ಸೊಗಸು” ಪ್ರಶಸ್ತಿ ಲಭಿಸಿದೆ. ದರ್ಶಿನಿ ಅವರ ಸಾಹಿತ್ಯ ಕೃಷಿ ಕುರಿತು ಸಾಹಿತಿ ನಾರಾಯಣಸ್ವಾಮಿ .ವಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ಕನ್ನಡ ಸಾಹಿತ್ಯಲೋಕದಲ್ಲಿ ಬರಹಗಾರರು ಹೆಚ್ಚಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ಒಂದು ಕಡೆ ಬೆಳೆಯುತ್ತಿದೆ ಅಂತ ಖುಷಿ ಪಡುವ ಸಂದರ್ಭದಲ್ಲಿ ಓದುಗರ ಸಂಖ್ಯೆಯು ತೀರ ಕಡಿಮೆಯಾಗುತಿದೆ ಎಂಬುದು ಖೇದಕರವಾದ ಸಂಗತಿಯಾಗಿದೆ. ಇದಕ್ಕೆ ಕಾರಣ ಮೊಬೈಲ್ ಎಂಬ ಮಾಯಲೋಕ. ಈ ಮಾಯಲೋಕಕ್ಕೆ ಒಮ್ಮೆ ಆಡಿ ಇಟ್ಟರೆ ಸಾಕು, ಆದೇ ತನ್ನ ಲೋಕದತ್ತ ಸೆಳೆದುಕೊಂಡು ಹೋಗಿ ಮನುಷ್ಯನಲ್ಲಿರುವ ಕಲೆ’ ಹವ್ಯಾಸಗಳನ್ನೆ ಮಾಯವಾಗಿಸಿ ಬಿಡುತ್ತದೆ. ಅಂತಹ ಶಕ್ತಿ ಈ ಮೊಬೈಲ್ ಯೆಂಬ ಮಾಯಲೋಕಕ್ಕೆ ಇದೆ. ಈ ಮೊಬೈಲ್ ಕಲಾಪ್ರಪಂಚದಲ್ಲಿ ಬರೀ ಕಟ್ಟದ್ದೆ ಇದೇ ಎಂದು ಹೇಳಲು ಆಗುವುದಿಲ್ಲ. ಇದೇ ಮಾಯಲೋಕನಲ್ಲಿಯೇ ತನ್ನ ಬರಹ, ಕಲೆ, ಸಂಗೀತಾ ಮುಂತಾದ ಹವ್ಯಾಸಕ್ಕಾಗಿ ಮುಖಪುಟವನ್ನೆ ವೇದಿಕೆಯಾಗಿ ಮಾಡಿಕೊಂಡು ತನ್ನನ್ನು ಈ ಸಮಾಜದಲ್ಲಿ ಗುರುತಿಸಿಕೊಂಡು ಬೆಳೆದವರು ಬಹಳಷ್ಟು ಪ್ರತಿಭಾವಂತರಿದ್ದಾರೆ.
ಕಾಲೇಜು ದಿನಗಳಲ್ಲಿ ಬರೆಯುವ ಹವ್ಯಾಸವಿದ್ದರು ಮುಖಪುಟ ಬೆಳಕಿಗೆ ಬಂದ ನಂತರ ಕನ್ನಡ ಸಾಹಿತ್ಯದ ಬರವಣಿಗೆಯ ಮೂಲಕವೂ ಬರಹಗಾರರಾಗಿ ಗುರುತಿಸಿಕೊಂಡು ಮುಖಪುಟದಲ್ಲಿ ಸಿಕ್ಕ ಹಲವಾರು ಸಾಹಿತ್ಯದ ಗ್ರೂಪ್ ಗಳಲ್ಲಿ ಬರೆಯುತ್ತಾ, ಹಲವು ಪತ್ರಿಕೆಗಳಲ್ಲಿ ಕವಿತೆ ಲೇಖನ ಬರೆಯುತ್ತಾ ನಂತರದಲಿ ಪುಸ್ತಕಗಳನ್ನು ಬರೆದು ಕನ್ನಡಮ್ಮನ ಮಡಿಲಿಗೆ ಅಪಿ೯ಸಿ ಕನ್ನಡ ಸಾಹಿತ್ಯಲೋಕದಲ್ಲಿ ಕವಯತ್ರಿಯಾಗಿ ಗುರುತಿಸಿಕೊಳ್ಳುತಿರುವ ಪ್ರತಿಭೆಯೇ ದಶಿ೯ನಿ ಆರ್ ಪ್ರಸಾದ್.

ದರ್ಶಿನಿ ಆರ್ ಪ್ರಸಾದ್ ರವರು ಶ್ರೀ ಸಣ್ಣಪ್ಪ ಗೌಡ ಮತ್ತು ಕಮಲಮ್ಮ ರವರ ಮಗಳಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವನಗೂರು ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವನಗೂರು ಇಲ್ಲಿ ಮುಗಿಸಿ, ಪದವಿ ಪೂರ್ವ ಶಿಕ್ಷಣ ಸರ್ಕಾರಿ ಪದವಿ ಪೂರ್ವ ಕಾಲೇಜು ಹೆತ್ತೂರಿನಲ್ಲಿ ಪೂರೈಸಿ ಬಿ.ಎ ಪದವಿಯನ್ನು ಎ ವಿ ಕೆ ಪದವಿ ಕಾಲೇಜು ಹಾಸನದಲ್ಲಿ ಪಡೆದರು.
ದರ್ಶಿನಿ ಆರ್ ಪ್ರಸಾದ್ ರವರು ರಘು ಪ್ರಸಾದ್ ರವರನ್ನು ವಿವಾಹವಾಗಿ ಸಂಸಾರಿಕ ಜೀವನದತ್ತ ಪಯಣವನ್ನು ಆರಂಭಿಸಿ ಸುಖಿ, ಸೃಷ್ಟಿ ಯೆಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಜೊತೆಯಲ್ಲಿ ಗೃಹಿಣಿಯಾಗಿ ಸುಂದರ ಬದುಕನ್ನು ಕಳೆಯುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕಾಲೇಜು ದಿನಗಳಿಂದಲೂ ಕನ್ನಡದಲ್ಲಿ ಬರವಣಿಗೆ ಬರೆಯುವ ಹವ್ಯಾಸವಿದ್ದು ನಂತರದ ದಿನಗಳಲ್ಲಿ ಹಲವಾರು ರೀತಿಯ ಹವ್ಯಾಸಗಳು ಅಂದರೆ ರಂಗೋಲಿ ಬಿಡಿಸುವುದು, ಚಿತ್ರಕಲೆ ಹವ್ಯಾಸ, ಸಮೂಹ ನೃತ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡುವುದು, ಕೈತೋಟದಲ್ಲಿ ವಿವಿಧ ಹೂವುಗಳನ್ನು ತರಕಾರಿ ಬೆಳೆಯುವ ಆಸಕ್ತಿ, ಸಮಯ ಸಿಕ್ಕಾಗ ಉಡುಗೆಗಳನ್ನು ಸಿದ್ಧಪಡಿಸುವುದು, ಉಡುಗೆಗಳಿಗೆ ಕಸೂತಿ ಕೆಲಸ, ಸಂಗೀತದಲ್ಲಿ ಆಸಕ್ತಿ ಹೀಗೆ ಹಲವಾರು ಹವ್ಯಾಸಗಳಲ್ಲಿ. ತೊಡಗಿಸಿಕೊಂಡರೂ ಕೊನೆಗೆ ಪ್ರವೃತ್ತಿಯಾಗಿ ರೂಢಿಸಿಕೊಂಡ ಬರವಣಿಗೆ ನನ್ನ ಕೈಹಿಡಿದು ಕವಯಿತ್ರಿ ಎಂಬ ಹೆಸರು ತಂದುಕೊಟ್ಟಿತು ಎನ್ನುತ್ತಾರೆ ದರ್ಶಿನಿ ಆರ್ ಪ್ರಸಾದ್.

ಮುಖಪುಟದಲ್ಲಿ ಹಲವಾರು ಸಾಹಿತ್ಯದ ಗುಂಪುಗಳಲ್ಲಿ ಬರೆಯುತ್ತಾ ಬರಹವನ್ನು ರೂಡಿಸಿಕೊಂಡು “ಮನದನಿಯ ಚಿತ್ತಾರ” ಯೆಂಬ ಚೊಚ್ಚಲ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯಲೋಕದಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡ ದರ್ಶಿನಿ ಆರ್ ಪ್ರಸಾದ್ ರವರು 2023 ರಲ್ಲಿ “ಭಾವಯಾನ ” ಯೆಂಬ ಚುಟುಕು ಸಂಕಲನವನ್ನು ಎರಡನೇ ಕೃತಿಯಾಗಿ ಹೊರತಂದು ಲೋಕಾರ್ಪಣೆ ಮಾಡಿ ಯಶಸ್ವಿಯಾಗಿದ್ದಾರೆ.
ದರ್ಶಿನಿ ಆರ್ ಪ್ರಸಾದ್ ರವರ ಲೇಖನಗಳು, ಕವನಗಳು ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿನಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿಯಾಗಿ ಇವರು ಬರೆಯುತ್ತಿದ್ದ ‘ಸಸ್ಯಸತ್ವ’ ಎಂಬ ವಾರದ ಅಂಕಣ ಸುಮಾರು 80 ಕಂತುಗಳಲ್ಲಿ ಪ್ರಕಟವಾಗಿದೆ. ಈಗ ಆ ವಿನಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ಕೃತಿಯನ್ನು ಹೊರತರುವ ಪ್ರಯತ್ನದಲ್ಲಿ ಸಾಗುತ್ತಿದ್ದು ಈ ಕೃತಿಯು ಮುದ್ರಣ ಹಂತದಲ್ಲಿದೆ.
ದಶಿ೯ನಿ ಆರ್ ಪ್ರಸಾದ್ ರವರಿಗೆ ಅಭಿನಯದಲ್ಲೂ ಕೂಡ ಆಸಕ್ತಿ ಹೊಂದಿದ್ದು, ಮೂರು ಹಾಸ್ಯ ನಾಟಕಗಳನ್ನು ಬರೆದು ಮಹಿಳಾ ಸಂಘದ ಕಾರ್ಯಕ್ರಮಗಳಲ್ಲಿ ಸ್ವತಃ ತಾವೇ ನಿದೇ೯ಶಿಸಿ, ಗೆಳತಿಯರೊಂದಿಗೆ ನಟಿಸಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೂಡ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನೆಡಿಸಿದ್ದಾರೆ ಮತ್ತು ಒಮ್ಮೆ ಡಿಡಿ ಚಂದನ ವಾಹಿನಿಯಲ್ಲಿ ಪುನೀತ್ ಕಲಾ ನಮನ ಕಾರ್ಯಕ್ರಮದ ನಿರೂಪಣೆ ಮಾಡಿ ಪೇಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.

ದಶಿ೯ನಿ ಆರ್ ಪ್ರಸಾದ್ ರವರು ರಾಜ್ಯಮಟ್ಟದ ಹಲವಾರು ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಇವರ ಸಾಹಿತ್ಯ ಮತ್ತು ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಇವರ ಮೊದಲ ಕೃತಿಯಾದ “ಮನದನಿಯ ಚಿತ್ತಾರ” ಕವನ ಸಂಕಲನಕ್ಕೆ ಧಾರವಾಡದ ಚೇತನ ಫೌಂಡೇಶನ್ ಸಂಸ್ಥೆ ವತಿಯಿಂದ “ಪುಸ್ತಕ ಸೊಗಸು” ಪ್ರಶಸ್ತಿ ಲಭಿಸಿದೆ.
ಇವರ ಸಾಹಿತ್ಯ ಕೃಷಿಯು ಹೀಗೆಯೇ ಸಾಗಲಿ, ಇನ್ನೂ ಹಲವಾರು ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯಲೋಕಕ್ಕೆ ಬರಹದ ಮೂಲಕ ಇನ್ನಷ್ಟು ಸೇವೆಯನ್ನು ಸಲ್ಲಿಸಲಿ, ಮುಂಬರುವ ಸಾಹಿತ್ಯವು ನೊಂದ ಮಹಿಳೆಯರ, ಧಮನಿತರ ತಲ್ಲಣಗಳ ಬರಹಗಳನು ಬರೆಯಲಿ, ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ಕನ್ನಡದ ಸಾಹಿತ್ಯಲೋಕದ ಭಾವಧಾರೆ ವಿದ್ಯಾ ಅರಮನೆ
- ವೃತ್ತಿಯಲ್ಲಿ ಶಿಕ್ಷಕಿ, ಲೇಖಕಿ, ಸಾಮಾಜಿಕ ಹೋರಾಟಗಾತಿ೯
- ಬಹುಮುಖ ಪ್ರತಿಭೆ ಉದಯೋನ್ಮುಖ ಲೇಖಕಿ ಅಭಿಜ್ಞಾ ಪಿ ಎಮ್ ಗೌಡ
- ಕನ್ನಡ ಕಾವ್ಯಲೋಕದ ಮುಕ್ತಕ ಕವಯಿತ್ರಿ ಕಮಲಾ ರಾಜೇಶ್
- ನಾರಾಯಣಸ್ವಾಮಿ .ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.
