ಒಂದು ವರ್ಷದ ನಂತರ ಗರಿಷ್ಟ ಎಲ್ಲಾ ಮೂಳೆಗಳು ಮಣ್ಣಿನ ಶಾಖದಿಂದ ಕರಗಲು ಶುರುವಾಗುತ್ತದೆ. ಅದು ಗಟ್ಟಿ ದ್ರವ (Fluid) ರೂಪ ಪಡೆಯುತ್ತದೆ. ಹೀಗೆ ಯಾವುದೇ ಪ್ರಾಣಿಯ ಹೂತ ದೇಹವು, ಭೂಮಿಯ ಮೇಲ್ಮೈಯಿಂದ ಕಣ್ಮರೆಯಾಗುತ್ತದೆ ಅಥವಾ ಪ್ರಕೃತಿ ಅದನ್ನು ಅಳಿಸಿ ಹಾಕುತ್ತದೆ. ಪ್ರೊ. ರೂಪೇಶ್ ಪುತ್ತೂರು ಈ ಕುತೂಹಲಕಾರಿ ಈ ಲೇಖನವನ್ನು ತಪ್ಪದೆ ಓದಿ…
ಸಾಧಾರಣ ಸಾಮಾನ್ಯ ವೈಜ್ಞಾನಿಕ ದೃಷ್ಟಿಕೋನದಿಂದ, ಒಬ್ಬ ವ್ಯಕ್ತಿಯ ದೇಹ ಸಾವನ್ನಪ್ಪಿ, ಹೂತುದಹನ ಮಾಡಿದ ನಂತರ, ಆ ದೇಹವು 24 ಗಂಟೆಗಳ ಒಳಗೆ ಕೊಳೆಯ ತೊಡಗುತ್ತದೆ ಮತ್ತು ಹೂಳದಿದ್ದರೆ/ದಹಿಸದಿದ್ದರೆ ದುರ್ವಾಸನೆಯನ್ನು ಹೊರ ಸೂಸುತ್ತದೆ.
ನಾವು ಒಂದು ಸಿಹಿ ಪದಾರ್ಥ ನೆಲದಲ್ಲಿ ಚೆಲ್ಲಿದ ಕೆಲವೇ ಹೊತ್ತಿನಲ್ಲಿ, ಅಥವಾ ಒಂದು ಜಿರಳೆ ನೆಲದಲ್ಲಿ ಸತ್ತು ಬಿದ್ದ ಬಳಿಕ, ಎಲ್ಲಿಂದಲೋ ಸಹಸ್ರಾರು ಇರುವೆಗಳು ಬಂದು ಮುತ್ತುವುದು ಕಂಡಿರುತ್ತೇವೆ. ಅಲ್ಲವೇ??? ಅದೇ ರೀತಿ ಮಾನವ ಮೃತ ದೇಹ ಭೂಮಿಯೊಳಗೆ ಹೂತ ನಂತರ ಅದರ ದುರ್ವಾಸನೆಯಿಂದ ಆಕರ್ಷಿತರಾಗಿ ಎರಡು ದಿನದಲ್ಲಿ ಲಕ್ಷಾಂತರ ಹುಳುಗಳು, ಕೀಟಗಳು ಮತ್ತು ಇರುವೆಗಳು ಒಂದರ ನಂತರ ಒಂದರಂತೆ ಬರುತ್ತವೆ.
ಮೂರನೇ ದಿನ:
ಹೂಳಲಾದ ಶವದ ಮೂಗು ಮೊದಲು ಕೊಳೆಯಲು /ದ್ರವೀಕರಿಸಲು ಪ್ರಾರಂಭಿಸುತ್ತದೆ.
ಆರನೇ ದಿನ :
ಉಗುರುಗಳು ಉದುರುತ್ತವೆ.
ಒಂಬತ್ತನೇ ದಿನ : ಕೂದಲು ಬೇರ್ಪಟ್ಟು ದೇಹದಿಂದ ಉದುರಲು ಪ್ರಾರಂಭವಾಗುತ್ತದೆ, ದೇಹದ ಮೇಲಿನ ಎಲ್ಲಾ ಕೂದಲುಗಳು ಹೀಗೇ ಉದುರುತ್ತವೆ ಮತ್ತು ಹೊಟ್ಟೆ ಊದಿಕೊಳ್ಳಲು ಪ್ರಾರಂಭಿಸುತ್ತದೆ.
ಹದಿನೇಳನೇ ದಿನ :
ಹೊಟ್ಟೆ ಒಡೆದು ಶವದ ಒಳಗಿನ ಅಂಗಾಂಗಗಳು ಹೊರಗೆ ಚೆಲ್ಲುತ್ತವೆ.
ಅರವತ್ತು ದಿನಗಳ ನಂತರ, ಶವದಲ್ಲಿರುವ ಎಲ್ಲಾ ಮಾಂಸಗಳು ಕೊಳೆಯುತ್ತವೆ, ಒಂದೇ ಒಂದು ಮಾಂಸದ ತುಂಡಿಲ್ಲದ ಅಸ್ಥಿಪಂಜರವಾಗಿ ಉಳಿದು ಬಿಡುತ್ತವೆ. ಭೂಮಿ ಚಲಿಸುವಂತದು, ಅದು ೧-ಸೂರ್ಯನ ಸುತ್ತಲೂ , ೨-ತನ್ನ ಅಕ್ಷದಲ್ಲೂ ಸುತ್ತುತ್ತದೆ. ಚಲಿಸುವಾಗ ಭೂಮಿಯ ಒಳ ಪದರಗಳಲ್ಲಿ ಕಂಪನ ಇದ್ದೇ ಇರುತ್ತದೆ. ಚಲಿಸುವ ಶಾಖವೂ ಒಳ ಪದರದಲ್ಲಿ ಇರುತ್ತದೆ.
(ನಾವು ನಡೆದಾಗ ದೇಹದ ಶಾಖದಿಂದ ಬೆವರುವುದು, ನಿರಂತರ ಓಡಿದ ಮೋಟಾರು ಬಿಸಿ ಆಗುವುದು. ನಿಮಗೆ ಗೊತ್ತು)

ಈ ನಿರಂತರ ಕಂಪನದಿಂದ 90 ದಿನಗಳ ನಂತರ, ಅಸ್ಥಿ ಪಂಜರದಲ್ಲಿರುವ ಮೂಳೆಗಳು ಪರಸ್ಪರ ಬೇರ್ಪಡಲು ಪ್ರಾರಂಭಿಸುತ್ತವೆ. ಒಂದು ವರ್ಷದ ನಂತರ ಗರಿಷ್ಟ ಎಲ್ಲಾ ಮೂಳೆಗಳು ಮಣ್ಣಿನ ಶಾಖದಿಂದ ಕರಗಲು ಶುರುವಾಗುತ್ತದೆ. ಅದು ಗಟ್ಟಿ ದ್ರವ (Fluid) ರೂಪ ಪಡೆಯುತ್ತದೆ. ಹೀಗೆ ಯಾವುದೇ ಪ್ರಾಣಿಯ ಹೂತ ದೇಹವು, ಭೂಮಿಯ ಮೇಲ್ಮೈಯಿಂದ ಕಣ್ಮರೆಯಾಗುತ್ತದೆ ಅಥವಾ ಪ್ರಕೃತಿ ಅದನ್ನು ಅಳಿಸಿ ಹಾಕುತ್ತದೆ.
ಒಂದು ಚಿಕ್ಕ ಬಕೇಟಿನಲ್ಲಿ ನೀರು, ಮಣ್ಣು, ಕೊಬ್ಬರಿ ಎಣ್ಣೆ ಮಿಶ್ರ ಮಾಡಿ, ಆ ಬಕೇಟನ್ನು ಹಗ್ಗ ಕಟ್ಟಿ, ಏಕರೂಪದ ವೇಗ (uniform speed) ನಲ್ಲಿ ವೃತ್ತಾಕಾರದಲ್ಲಿ ನಿಧಾನವಾಗಿ ತಿರುಗಿಸಿ, ಕೊನೆಗೆ ನಿಧಾನ ಚೆಲ್ಲದಂತೆ ನಿಲ್ಲಿಸಿ ನೋಡಿ. ಮೇಲಿನ ಪದರದಲ್ಲಿ ಎಣ್ಣೆ ತೇಲುತ್ತಿರುತ್ತದೆ. ಮಧ್ಯೆದಲ್ಲಿ ತಿಳಿಯಾದ ನೀರು ಇರುತ್ತದೆ. ಕೆಳ ಪದರದಲ್ಲಿ ಮಣ್ಣು ಇರುತ್ತದೆ ಅಲ್ಲವೇ???? ಅಲ್ಲವೇ????
ಅದೇ ರೀತಿ ಭೂಮಿಯ ತಿರುಗುವಿಕೆಯಿಂದ ಪಳೆಯೊಳಿದ ಮನುಷ್ಯ, ಹಕ್ಕಿ, ಸಿಂಹ,ಹುಲಿ, ಗಿಡ, ಮರ ಗಳ ದ್ರವೀಕರಿಸಿದ Fluid ಭೂಮಿಯ ಒಂದು ಮೂಲೆಯಲ್ಲಿ ಕೇಂದ್ರೀಕೃತ ಆಗುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ತೋಡಿದರೆ ನೀರು, ದುಬೈ ಎಂಬ ಭೂಮಿಯ ಪದರದಲ್ಲಿ ತೋಡಿದರೆ ಕಚ್ಛಾ ತೈಲ(crude oil ) ಸಿಗುತ್ತದೆ. ಇದು ಭೂಮಿಯ ಒಂದು ಮಂತ್ರಜಾಲ ಮ್ಯಾಜಿಕ್ ಅಲ್ಲದೆ ಮತ್ತೇನು???
ಮನುಷ್ಯನ ಪಳೆಯೊಳೆದ ಆಸ್ತಿ ಪಂಜರ ಹೀಗೆ ಮೌನವಾಗಿ ನನ್ನಲ್ಲಿ ಮಾತನಾಡಬಹುದು. ” ಏಯ್ ಮಾನವರೇ……ನೀವು ಎಲ್ಲಾ ಮಾನವರು ಎಷ್ಟೇ ಶಕ್ತಿ, ಬುದ್ಧಿವಂತಿಕೆ, ಸೌಂದರ್ಯ, ಹೆಮ್ಮೆ, ಸ್ವಾಭಿಮಾನ, ದ್ವೇಷ, ಧೈರ್ಯ, ಗೌರವ ಮತ್ತು ಸಂಪತ್ತನ್ನು ಹೊಂದಿದ್ದರೂ, ಒಂದು ದಿನ ನೀವೆಲ್ಲಾ ನೆಲದ ಮೇಲೆ ಸಾಧಿಸಿದ್ದನ್ನೆಲ್ಲಾ ಬಿಟ್ಟು ಬರಿಗೈಯಲ್ಲಿ ಭೂಗತರಾಗುವ ನೈಜ ಸ್ಥಿತಿ ಇದೆ. ಅದು ಎಲ್ಲರಿಗೂ ಅನ್ವಯಿಸುವ ಸತ್ಯ.
ನೀವು ನನ್ನ ನೋಡಿ ಚಿಂತಿಸಿ. ನೀವು ಇತರರನ್ನು ವಂಚಿಸಿ, ವಂಚಿಸಿ ಸ್ವಯಂ ವಂಚಿಸುತ್ತಾ, ದುರಾಸೆಯಿಂದ “ಸಾಕಾಗಿಲ್ಲ… ಸಾಕಾಗಲಿಲ್ಲ” ಎಂದು ಹೇಳುತ್ತಾ, ಜೀವನದಲ್ಲಿ ಒಮ್ಮೆಯೂ ಮನಸ್ಸು ತೆರೆದು ನಗದೆ, ಸಂಪತ್ತನ್ನು ಸಂಗ್ರಹಿಸುತ್ತಾ, ಸಮಾಜಕ್ಕೆ ಹೊಂದಿಕೆಯಾಗದ ಕೆಲಸಗಳನ್ನು ಮಾಡುತ್ತಾ ಏಕೆ ಬದುಕುತ್ತೀರಿ?
ಈ ಭೂಮಿಯಲ್ಲಿ ನೀವು ಉಸಿರಾಟ ನಿಲ್ಲಿಸಿದರೆ, ನಿಮ್ಮ ಈ ಶ್ರಂಗರಿಸಿದ , ಸದಾ ನನ್ನದೇ ಎನ್ನುವ ದೇಹ, ಇತರರನ್ನು ಕಾಣದ, ಕೇಳದ -24 ಗಂಟೆಗಳಲ್ಲಿ ಹುಳು ತಿನ್ನುವ ಮಾಂಸವಾಗಿ ನಿಶ್ಚಲರಾಗಿ ಬಿದ್ದಿದ್ದು ತೋರಿಸಲಾಗುತ್ತದೆ, ಮತ್ತು ನೀವು ಇತರರ ಮಾತುಗಳನ್ನು ಕೇಳಿದ, ಆಡಿದ, ಓಡಿದ, ಅಹಂಕರಿಸಿದ, ಹೆಮ್ಮೆಯಿಂದ ತಿರುಗಾಡಿದ ಎಲ್ಲಾ ಆಧಿಪತ್ಯ – ಶಕ್ತಿ ಕಳೆದುಕೊಂಡ ನಿರ್ಜೀವಿಗಳಾಗುತ್ತೀರಿ.
ನೀವು ಜೀವನದುದ್ದಕ್ಕೂ ಮರಣವೆಂಬ ಸತ್ಯವನ್ನು ಎಷ್ಟೇ ಸುಳ್ಳೆಂದು ಮುಚ್ಚಿಟ್ಟರೂ ಪರವಾಗಿಲ್ಲ… ಜೀವನದಿಂದ ಮರಣದೊಳಗೆ ನೀವು ಎಷ್ಟೇ ಗೌರವಾನ್ವಿತರು ಎಂದು ಇತರರಿಗೆ ಸುಲಭವಾಗಿ ಮನವರಿಕೆ ಮಾಡಿದರೂ , ನಿಮ್ಮ ಕ್ರಿಯೆಗಳು ಹೇಗೆ ಸತ್ಯವನ್ನು ತೋರಿಸುತ್ತವೆಯೋ ಅದೇ ರೀತಿ ಮರಣವೆಂಬ ದೇಹದಿಂದ ಜೀವದ ಬೇರ್ಪಟಿಕೆ ಎಂಬ ಅಂತ್ಯವೂ ನಿಸರ್ಗ ನಿಮಗೆ ತೋರುತ್ತದೆ. ನೀವು ನಿಮ್ಮ ಸ್ವಂತ ಆತ್ಮಸಾಕ್ಷಿಯನ್ನು ಮೋಸಗೊಳಿಸಲು ಸಾಧ್ಯವಿಲ್ಲ. ನೀವು ತಲೆಬುರುಡೆಯಾಗುವ ಮೊದಲು ನೀವೇ ಯೋಚಿಸಿ…
ನ್ಯಾಯ ನೀತಿ ಸತ್ಯ ಈ ದಾರಿಯಲ್ಲಿ ನಡೆದ ನಿಮ್ಮ ಪಾದ ಮುದ್ರೆಗಳು ಮಾತ್ರ , ನಿಮ್ಮ ಮರಣಾನಂತರ ಜೀವ ಪಡೆಯುತ್ತದೆ.
ಎಲೈ ಮೂರ್ಖ ಸಾಕು ಮಾಡು ನಿನ್ನ ಬರಹ
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು – ರಸಾಯನಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು
