ಮಾನಸಿಕ ಒತ್ತಡಕ್ಕೆ ಮದ್ದು ಇದೆಯೇ ?- ಡಾ.ರಾಜೇಂದ್ರ ಸ್ವಾಮಿ

ಇತ್ತೀಚಿಗೆ ಡಿಪ್ರೆಶನ್ ಎನ್ನುವುದು ಎಲ್ಲ ಕಡೆ ಸರ್ವೇ ಸಾಮಾನ್ಯವಾಗಿ ಕಾಣಬಹುದಂತಹ ಕಾಯಿಲೆಯಾಗಿ ಹೊರಹೊಮ್ಮಿದೆ. ಈ ಮಾನಸಿಕ ಒತ್ತಡದ ಕುರಿತು ಡಾ.ರಾಜೇಂದ್ರ ಸ್ವಾಮಿ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ಒತ್ತಡ ಮತ್ತು ಡಿಪ್ರೆಶನ್ ಇವುಗಳಿಂದ ಹೊರಬರಲು ಯಾವುದೇ ಚಿಕಿತ್ಸೆಗಳಿಂದ ಸಾಧ್ಯವಿಲ್ಲ. ಆಯುರ್ವೇದ ಹೋಮಿಯೋಪತಿ, ಅಲೋಪತಿ ಮುಂತಾದ ಯಾವುದೇ ವೈದ್ಯ ಪದ್ಧತಿಯ ಔಷಧಿಗಳು ಕೇವಲ ಸಮಸ್ಯೆಯನ್ನು ಗುಣಪಡಿಸುತ್ತದೆ ವಿನಃ ಸಮಸ್ಯೆಯನ್ನು ಬಾರದಂತೆ ತಡೆಯುವುದಿಲ್ಲ. ನಿಜವಾದ ಆರೋಗ್ಯ ನಿಮ್ಮ ಆಹಾರದಲ್ಲಿದೆ ಎಂಬುದು ಎಷ್ಟು ಸತ್ಯವೋ.. ನಮ್ಮ ಮಾನಸಿಕ ಆರೋಗ್ಯವು ನಾವು ನಮ್ಮ ಜೀವನ ಶೈಲಿಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅಡಗಿದೆ.

ನಮಗೆ ಶಾಲೆಗಳಲ್ಲಿ ಗಣಿತ ವಿಜ್ಞಾನ ಕಂಪ್ಯೂಟರ್ ಹಣಕಾಸು ಹೀಗೆ ಹಲವು ವಿಷಯಗಳ ಬಗ್ಗೆ ಕಲಿಸುತ್ತಾರೆ ವಿನಹ ಜೀವನದ ಶಿಕ್ಷಣಗಳನ್ನು ಕುರಿತು ಕಲಿಸುವುದಿಲ್ಲ ಉದಾಹರಣೆಗೆ ಒಳ್ಳೆಯ ತಂದೆಯಾಗಲು ಯಾವುದೇ ಕೋರ್ಸ್ ಇಲ್ಲ, ಒಳ್ಳೆಯ ಮಗನಾಗಲು ಯಾವುದೇ ಕೋರ್ಸ್ ಇಲ್ಲ. ಆರೋಗ್ಯದ ಬಗ್ಗೆ ಕಲಿಯಲು ಸಹ ಯಾವುದೇ ಕೋರ್ಸಿಲ್ಲ ಇರುವ ವೈದ್ಯ ಪದ್ಧತಿಗಳೆಲ್ಲವೂ ರೋಗದ ಬಗ್ಗೆ ತಿಳಿಸುತ್ತವೆ.

ಫೋಟೋ ಕೃಪೆ : verywellmind

ನಿಜ ಜೀವನಕ್ಕೆ ಬೇಕಾಗುವ ಕೆಲವು ಶಿಕ್ಷಣಗಳ ಕುರಿತು ಚರ್ಚಿಸಿ ಅವುಗಳನ್ನು ಪಟ್ಟಿ ಮಾಡಿ ಕಲಿತುಕೊಂಡರೆ ಎಲ್ಲಾ ರೀತಿಯ ಮಾನಸಿಕ ದ್ವಂದ್ವಗಳಿಂದ ಹೊರ ಬರಬಹುದು. ಇಂಥವುದೇ ವಿಷಯಗಳು ಎಂದು ನಿರ್ದಿಷ್ಟವಾಗಿ ಸೂಚಿಸಿ ಎಲ್ಲರಿಗೂ ತಿಳಿಸಲು ಆಗುವುದಿಲ್ಲ. ಅವರವರ ಅವಶ್ಯಕತೆಗೆ ತಕ್ಕಂತೆ ಅವರವರ ಜೀವನ ಶೈಲಿಗಳಿಗೆ ತಕ್ಕಂತೆ ಜೀವನದ ವಿಷಯಗಳು ಬೇರೆ ಆಗುತ್ತವೆ. ಅವುಗಳನ್ನು ಕಲಿತರೆ, ಆರೋಗ್ಯಯುತ, ಒತ್ತಡ ರಹಿತ ಆನಂದ ಭರಿತ ಜೀವನವನ್ನು ನಡೆಸಬಹುದು.

ಕೆಲವು ಉದಾಹರಣೆಗಳಿಂದ ತಿಳಿದುಕೊಳ್ಳಬಹುದಾದರೆ ದೈಹಿಕ ಆರೋಗ್ಯದ ಗುಟ್ಟನ್ನು ಅರಿತುಕೊಂಡರೆ #ರೋಗ ಬರದಂತೆ ನೋಡಿಕೊಂಡು ದೀರ್ಘಕಾಲದ ಆರೋಗ್ಯವನ್ನು ಅನುಭವಿಸಬಹುದು. ಮಾನಸಿಕ ಆರೋಗ್ಯದ ಗುಟ್ಟನ್ನು ಅರಿತರೆ ಎಲ್ಲಾ ಒತ್ತಡಗಳನ್ನು ತನ್ನ ಜಾಣ್ಮೆಯಿಂದ ನಿಭಾಯಿಸಿ ಸಂತೋಷವಾಗಿ ಜೀವನ ನಡೆಸಬಹುದು. ಸಾಮಾಜಿಕ ಆರೋಗ್ಯದ ಗುಟ್ಟನ್ನು ಅರಿತರೆ ಸಮಾಜದ ಜವಾಬ್ದಾರಿಗಳ ಜೊತೆಗೆ ಹೊಂದಿಕೊಂಡು ಗೌರವಾನ್ವಿತವಾಗಿ ಜೀವನ ನಡೆಸಬಹುದು.

ಆರ್ಥಿಕ ಶಿಕ್ಷಣವನ್ನು ತಿಳಿದುಕೊಂಡರೆ ಬಹಳಷ್ಟು ಬೇಗ ಕಟ್ಟುನಿಟ್ಟಿನ ಯೋಜನೆಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದರು ಸಹ ಅದರಿಂದ ಹೊರಬಂದು ಆರ್ಥಿಕ ಪ್ರಗತಿಯನ್ನು ಸಾಧಿಸಿ ನೆಮ್ಮದಿಯಿಂದ ಜೀವಿಸಬಹುದು. ಸಾಂಸ್ಕೃತಿಕ ಶಿಕ್ಷಣವನ್ನು ತಿಳಿದುಕೊಂಡಾಗ ನಮ್ಮ ದೇಶಪ್ರೇಮ ನಮ್ಮ ಸಂಸ್ಕೃತಿ ಇವುಗಳ ಆಚರಣೆಯಿಂದ ಹೆಚ್ಚು ಆನಂದ ಭರಿತವಾಗಿ ಜೀವನ ನಡೆಸಬಹುದು.

ಫೋಟೋ ಕೃಪೆ : innerself.fit

ಆಧ್ಯಾತ್ಮ ಶಿಕ್ಷಣವನ್ನು ಪಡೆದಾಗ ಹೊರಗಿನ ಪ್ರಪಂಚದ ಭೌತಿಕ ಬೆಳವಣಿಗೆಯ ಜೊತೆ ಜೊತೆಗೆ ಆಂತರಿಕವಾಗಿ ಆಧ್ಯಾತ್ಮವನ್ನು ಬೆಳೆಸಬಹುದು. ಇವುಗಳ ಪಟ್ಟಿಯು ಹೀಗೆ ಸಾಗುತ್ತದೆ. ಯಾರಿಗೆ ಯಾವುದರ ತುರ್ತು ಅಗತ್ಯ ಮತ್ತು ಅನಿವಾರ್ಯವಿದೆಯೋ ಅವುಗಳ ಶಿಕ್ಷಣದಿಂದ ಮಾತ್ರವೇ ಅದರಿಂದ ಬೇಗ ಹೊರಬರಲು ಸಾಧ್ಯ.

ದಿ ರಾಯಲ್ ಅಕಾಡೆಮಿ ಸಂಸ್ಥೆಯ ಮುಖಾಂತರ ಈ ರೀತಿ ಇನ್ನೂ ಹಲವು ಜೀವನ ಶಿಕ್ಷಣಗಳನ್ನು ಕಳೆದ ನಾಲ್ಕು ವರ್ಷಗಳಿಂದ ಜನರಿಗೆ ತಿಳಿಸಿ ಅವರುಗಳ ಮುಖದಲ್ಲಿ ಆರೋಗ್ಯ , ಖುಷಿ, ನೆಮ್ಮದಿ, ಸಂತಸ ತಂದು ಜನರು ನೆಮ್ಮದಿಯಿಂದ ಜೀವಿಸುವಂತೆ ಮಾಡುವಲ್ಲಿ ಶ್ರಮಿಸಿ ಹಲವಾರು ದೇಶಗಳಲ್ಲಿ ಸಾವಿರಾರು ಜನಗಳ ಹರ್ಷಕ್ಕೆ ಕಾರಣವಾಗಿದ್ದೇವೆ…

ಎಲ್ಲಾ ತರಹದ ಸ್ಟ್ರೆಸ್ ಮತ್ತು ಜೀವನ ಸಮಸ್ಯೆ ಇಂದ ಹೊರಗಡೆ ಬರಲು ಜೀವನಕ್ಕೆ ಒಬ್ಬ ಗುರುವನ್ನು ಆಯ್ದುಕೊಳ್ಳಿ ಅವನ ಮಾರ್ಗದರ್ಶನದ ಮೇಲೆ ನಡೆಯಿರಿ.

ಜೀವನ ಶಿಕ್ಷಣದ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ದಿ ರಾಯಲ್ ಅಕಾಡೆಮಿ – 7676660113


  • ಡಾ.ರಾಜೇಂದ್ರ ಸ್ವಾಮಿ  (ಕೇರಳಿಯ ಆಯುರ್ವೇದ ಪದ್ಧತಿಯನ್ನು ಕಲ್ತಿದ್ದಾರೆ, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading