ದೆವ್ವಗಳನ್ನು ನೋಡಿದ್ದೀರಾ?…ನೋಡಿದ್ದರೆ ಅಥವಾ ನೋಡದ್ದಿದ್ದರೆ ಒಮ್ಮೆ ಡಾ.ಪ್ರಕಾಶ ಬಾರ್ಕಿ ಅವರ ಈಥರಿಕ್ ಡಬಲ್ ಬಗ್ಗೆ ಏನು ಹೇಳುತ್ತಾರೆ ಅನ್ನುವುದನ್ನು ತಪ್ಪದೆ ಓದಿ…ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಸಾಮಾನ್ಯವಾಗಿ ಜನರು ದೆವ್ವಗಳನ್ನು ನೋಡಿದೆವು ಎಂದು ಹೇಳುತ್ತಾರಲ್ಲಾ, ಅವುಗಳನ್ನು “ಈಥರಿಕ್ ಡಬಲ್”ಗಳು ಎಂದು ಕರೆಯಬಹುದು. ಇದನ್ನು ವಿವರಿಸಲು ಒಬ್ಬ ಆರೋಗ್ಯಕರ ವ್ಯಕ್ತಿಯು ಅಪಘಾತದಿಂದಲೋ ಅಥವಾ ಆತ್ಮಹತ್ಯೆಯಿಂದಲೋ ಆಕಸ್ಮಾತ್ತಾಗಿ ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ತೆಗೆದುಕೊಳ್ಳೊಣ. ಪ್ರತಿಯೊಬ್ಬ ಮಾನವನ ದೇಹದ ಜೀವಕೋಶಗಳಲ್ಲಿ ರಾಸಾಯನಿಕ ದ್ರವ್ಯಗಳಿರುತ್ತವೆ. ಈ ರಾಸಾಯನಿಕ ದ್ರವ್ಯಗಳ ನಡುವಿನ ಕ್ರೀಯೆಯಿಂದ ವಿದ್ಯುತ್ ವಿಸರ್ಜನೆಯಾಗುತ್ತಿರುತ್ತೆ ಹಾಗೂ ಈ ವಿಸರ್ಜನೆಯು ಆ ವ್ಯಕ್ತಿಯ ಭೌತಿಕ ಶರೀರದ ಆಕಾರದಲ್ಲೇ ಇರುತ್ತದೆ. ಒಬ್ಬ ವ್ಯಕ್ತಿಯು ಆಕಸ್ಮಾತ್ ಸಾವನಪ್ಪಿದಾಗ ದೇಹವು ಸುಟ್ಟೋ ಅಥವಾ ಮಣ್ಣು ಮಾಡಿಯೋ ಅಳಿದು ಹೋಗುತ್ತದೆ. ಆದರೆ ದೇಹದಿಂದ ಹೂರದೂಡಲ್ಪಡುವ ವಿದ್ಯುದಾವೇಶವು ಸಂಪೂರ್ಣವಾಗಿ ಇಳಿಯುವವರೆಗೂ ಹಾಗೆಯೇ ಸ್ವತಂತ್ರವಾಗಿ ಉಳಿದುಬಿಡುತ್ತದೆ. ಈ ವಿದ್ಯುದಾವೇಶವೇ “ಈಥರಿಕ್ ಡಬಲ್”.
ಈ “ಈಥರಿಕ್ ಡಬಲ್” ತನ್ನ ಭೌತಿಕ ದೇಹಕ್ಕೆ ಸಂಬಂಧಪಟ್ಟ ವಸ್ತುಗಳಿಗೆ ಹಾಗೂ ಸ್ಥಳಗಳಿಗೆ ಕರುಣಾಭಾವದ ಸಂಪರ್ಕವನ್ನು ಹೊಂದಿರುವುದರಿಂದ, ವಿದ್ಯುದಾವೇಶವು ಸಂಪೂರ್ಣವಾಗಿ ಇಳಿದು ಹೋಗುವವರೆಗೂ, ಪರಿಚಿತ ಸ್ಥಳಗಳಲ್ಲಿ ಹಾಗೂ ವಸ್ತುಗಳ ಸುತ್ತಲೂ ಆಯಸ್ಕಾಂತೀಯ ಸೆಳೆತಕ್ಕೊಳಪಟ್ಟು ಸುಳಿದಾಡುತ್ತಿರುತ್ತದೆ.

ಒಂದು ನೆನಪಿನಲ್ಲಿರಲಿ, ದೆವ್ವ ಎಂದು ತಪ್ಪು ತಿಳಿಯುವ ಈ “ಈಥರಿಕ್ ಡಬಲ್”ನಿಂದ ಯಾವ ತೊಂದರೆಯೂ ಆಗದು. ಅದು ಕೆಲವೊಮ್ಮೆ ಮಬ್ಬುಮಬ್ಬಾದ ರಾತ್ರಿಗಳಲ್ಲಿ ಅಥವಾ ಕೆಲವು ವಿಶೇಷ ಸಂದರ್ಭಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅದಕ್ಕೆ ಯಾವ ಉದ್ದೇಶವಾಗಲೀ ಅಥವಾ ಬುದ್ದಿಯಾಗಲೀ ಇರುವುದಿಲ್ಲ. ಅದು ಕೇವಲ ಒಂದು ವಿದ್ಯುದಾವೇಶ. ಅದಕ್ಕೆ ಯಾರನ್ನೂ ಹಾನಿಗೊಳಿಸುವ ಸಾಮರ್ಥ್ಯವಿಲ್ಲ. ಆದರೆ ಇದ್ದಕಿದ್ದಂತೆ ಕಾಣಿಸಿಕೊಂಡಾಗ ಮಾತ್ರ ಭಯದಿಂದ ದುರ್ಬಲ ಹೃದಯವು ತನ್ನ ಬಡಿತವನ್ನೇ ನಿಲ್ಲಿಸಿಬಿಡಬಹುದು.

ಎ ಇ ಪೊವೆಲ್
ಪ್ರಕೃತಿಯ ನಿಯಾಮಾನುಸಾರ “ಈಥರಿಕ್ ಡಬಲ್” ವಿಭಜನೆಗೊಳ್ಳಬೇಕು.
“ಓಂ ನಮಃ ಶಿವಾಯ” ಅಥವಾ ” ಓಂ ನಮೋ ನಾರಾಯಣ” ಅಥವಾ ಕುರಾನಿನ ಕೆಲವು ನಿರ್ದಿಷ್ಟ ಶ್ಲೋಕಗಳು- ಈ ರೀತಿಯ ಆಧ್ಯಾತ್ಮಿಕ ಕಂಪನದ ಮಂತ್ರಗಳು “ಈಥರಿಕ್ ಡಬಲ್”ನ ಶಕ್ತಿಯನ್ನು ಇಲ್ಲವಾಗಿಸಿ ಕೂಡಲೇ ವಿಭಜನೆಗೊಳ್ಳುವಂತೆ ಮಾಡಬಲ್ಲರು.
ತಾವು ವಾಮಾಚಾರಿಗಳೆಂದು ಹೇಳಿಕೊಳ್ಳುವ ಅನೇಕರು, ಸಾಮಾನ್ಯ ಜನರ ಭಯ ಮತ್ತು ಮುಗ್ಧ ಹಾಗೂ ದುರ್ಬಲ ಮನಸ್ಸಿನ ಮೇಲೆ ಆಟವಾಡುವ ಕಪಟ ಮೋಸಗಾರರು…
ಶ್ರೀ ಎಂ.
“ಪಯಣ ನಿರಂತರ” ಪುಸ್ತಕದ ಆಯ್ದ ಭಾಗ.
(ಹಿಮಾಲಯದ ಗುರುವಿನ ಗರಡಿಯಲ್ಲಿ ಪುಸ್ತಕದ ಮುಂದುವರೆದ ಭಾಗ)
- ಪ್ರಕಾಶ ಬಾರ್ಕಿ, ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ.
