‘ದೀವಟಿಗೆ ನನಗಲ್ಲ’ ಕವನ – ಶಿವದೇವಿ ಅವನೀಶಚಂದ್ರ

ದೀಪ ನನಗಲ್ಲ… ನನ್ನನರಿಯದ ಅಂಧರಿಗೆ… ಕಣ್ಣಿದ್ದೂ ಬಗೆಗುರುಡುತನ…ಇರುವ ಜಾಣ ಮಂದಿಗೆ…ಹಿರಿಯ ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಕವಿದ ಕತ್ತಲಿನಲ್ಲಿ
ದೀವಟಿಗೆ ಹಿಡಿದು
ಮೌಲ್ಯಗಳ ಬೆಳಕನ್ನು
ಅರಸುತಿಹೆನು

ಪ್ರಜ್ಞೆಯೋ ಅವಜ್ಞೆಯೋ
ಅರಿಯದಂತಹ
ನಿರೀಕ್ಷೆಯ ಮರಳುಗಾಡಿನಲ್ಲಿ
ಅಲೆಯುತಿಹೆನು

ನಾನು ಅಂಧನಿರಬಹುದು
ದೃಷ್ಟಿಯಲಿ
ಭಾವ ಚೈತನ್ಯಕೆಂದೂ
ಅಂಧಕಾರದ ಸುಳಿವಿಲ್ಲ

ನಿತ್ಯಜಾಗೃತವೆನ್ನ ಸುಪ್ತಚೇತನವಿಹುದು
ಪರರ ಕಾಳಜಿಯೆನೆಂದೂ
ಕಡೆಗಣಿಸಲಿಲ್ಲ

ದೀಪ ನನಗಲ್ಲ
ನನ್ನನರಿಯದ ಅಂಧರಿಗೆ
ಕಣ್ಣಿದ್ದೂ ಬಗೆಗುರುಡುತನ
ಇರುವ ಜಾಣ ಮಂದಿಗೆ

ಬೇಡೆನು ನಾನೇನನೂ
ನಿಮ್ಮಲ್ಲಿ ಅಂಜದಿರಿ
ಢಿಕ್ಕಿಯಾಗದಂತೆ ನನ್ನ
ಪಥದಲ್ಲಿ ನಡೆಯಗೊಡಿ


  • ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading