ಸಾಕು ನಾಯಿಗಳಿಗೊಂದು ಪಾರ್ಕ್ ಬೇಕು – ದೇವರಾಜ ಚಾರ್



ಬೃಹತ್ ನಗರಗಳ ಬಡಾವಣೆಗಳಲ್ಲಿ “ಸಾಕು ನಾಯಿಗಳ ಶೌಚಾಲಯಕ್ಕಾಗಿ ಪಾರ್ಕ್ ” ಎನ್ನುವ ಫಲಕಗಳನು ಮುಂದಿನ ದಿನಗಳಲ್ಲಿ ನೋಡಿದರೆ ನಾನಂತೂ ಬಹಳಾ ಸಂತೋಷ ಪಡುತ್ತೇನೆ. ಇವನಿಗೆ ಏನಾಗಿದೆ ಅಂತ ಯೋಚನೆ ಮಾಡ್ತಿದ್ದೀರಾ ?”. ಲೇಖಕರು ನಾಯಿ ಪಾರ್ಕ್ ಬಗ್ಗೆ ತಮ್ಮ ವಿಚಾರ, ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ…

ದಿನಾಲು ಬೆಳಗಿನ ಜಾವ ವಾಕಿಂಗ್ ಹೋದಾಗಲೆಲ್ಲ ನನಗೆ ಈ ಕಲ್ಪನೆ ಬರುತ್ತದೆ. ರಸ್ತೆಯಲ್ಲಿ ಎರಡೂ ಕಡೆ ಬಿಳಿಗೆರೆ ಇರುವುದನ್ನು ನೋಡಿರುತ್ತೀರಿ. ಎರಡು ಗೆರೆಯ ಮಧ್ಯೆ ರಸ್ತೆ .ಇದು ವಾಹನ ಸಂಚಾರಕ್ಕಾಗಿ ಸೀಮಿತ. ಗೆರೆಯ ಹೊರಭಾಗದ ಜಾಗ ಪಾದಾಚಾರಿಗಳ ಓಡಾಟಕ್ಕೆ . ಈ ಪಾದಾಚಾರಿ ಮಾರ್ಗದಲ್ಲಿ ಬೆಳಗಿನ ಜಾವ ನಿರ್ಭೀತಿಯಿಂದ ನೀವು ಸ್ಟೈಲಾಗಿ ನಡೆದುಕೊಂಡು /ಹೋಗುತ್ತಿದ್ದರೆ ಪಚಕ್ ಅಂತ ತುಳಿದು, ಅಸಹ್ಯಪಟ್ಟುಕೊಂಡು ಮುಂದೆ ಹೋಗಲಾರದೆ ‘ಶೂ’ಸ್ವಚ್ಛಕ್ಕಾಗಿ ಪರಿತಪಿಸುವಿರಿ .

ಫೋಟೋ ಕೃಪೆ : Hindustan times

ತುಳಿದಿದ್ದು ಏನು ಅನ್ಕೊಂಡಿದ್ದೀರಾ, ಅದು ‘ಬೆಂಕಿ ಕೆಂಡ ‘ಸ್ವಾಮಿ. ಅಲ್ಲಲ್ಲಿ ಈ ಬೆಂಕಿ ಕೆಂಡ ಗಳಿರುತ್ತವೆ. ಹುಷಾರಾಗಿ ನೋಡಿಕೊಂಡು ಹೋಗಬೇಕು. ನಾವು ಭೂವೈಜ್ಞಾನಿಕ ಸಮೀಕ್ಷೆಗೆ ಹೋದಾಗ “exposure” ಹುಡುಕಿಕೊಂಡು ಹೋಗುತ್ತೇವೆ . ಎಕ್ಸ್ ಪೋಸರ್ ಅಂದರೆ ಭೂಮಿಯ ಮೇಲಿನ ಬಂಡೆ ಅಥವಾ ಶಿಲೆ .

ನಾವು ಈ ರೀತಿಯ ಶಿಲೆಯನ್ನು ಹುಡುಕಿಕೊಂಡು ಹಳ್ಳ, ರಸ್ತೆ, ಚರಂಡಿ, ಗುಡ್ಡದ ಕಡೆ ಹೋಗಬೇಕಾದರೆ, ಸಹ ಉದ್ಯೋಗಿಗಳು ಹೇಳುತ್ತಾರೆ: ಹುಷಾರಪ್ಪ ಅಲ್ಲಲ್ಲಿ ಕೆಂಡಗಳಿರುತ್ತವೆ ಅಂತ ತಮಾಷೆ ಮಾಡುತ್ತಿರುತ್ತಾರೆ. ಅಂದ್ರೆ ಮಾನವನ ಕೆಂಡ. ಶಿಲೆಗಳನ್ನು ಹುಡುಕುವ ರಭಸದಲ್ಲಿ ಮಾನವನ ಕೆಂಡ ತುಳಿಯ ಬೇಕಾದ ಅನಿವಾರ್ಯತೆ ಇರುತ್ತದೆ. ಹಳ್ಳಿಯ ಸುತ್ತಮುತ್ತ ಈಗಲೂ ಬಯಲು ಶೌಚವನ್ನು ಕಾಣಬಹುದು .



ಇರಲಿ, ಆವಾಗ ಪಚಕ್ ಅಂತ ತುಳಿದದ್ದು ಮಾನವ ವಿಸರ್ಜಿಸಿದ ಕೆಂಡ ಅನ್ಕೊಂಡ್ರಾ? ಖಂಡಿತ ಇಲ್ಲ. ಈ ಸ್ವಚ್ಛ ನಗರಿಯಲ್ಲಿ ಬಯಲು ಶೌಚ, ರಸ್ತೆ ಬದಿಯಲ್ಲಿ ಇರಲಾರದು. ಮತ್ತೇನೋ ಅದೇ ಮನುಷ್ಯನ ತರ ಮನೆ ವಾಸ, ಮನೆ ತಿಂಡಿ, ಮನುಷ್ಯನ ಆತ್ಮ ಮಿತ್ರ ನಂಬುಗೆಯ ಪ್ರಾಣಿ. ಆದ್ರೆ ಶೌಚ ಮಾತ್ರ ಬಯಲು. ವಾಕಿಂಗ್ ಮಿತ್ರ ಸಾಕುನಾಯಿ. ಸಾಕು ನಾಯಿ ಮಾಲೀಕರು ಬೆಳಿಗ್ಗೆ ಎದ್ದು ತಮ್ಮ ದೈನಂದಿನ ಪ್ರಕ್ರಿಯೆಯನ್ನು ಮುಗಿಸಿಕೊಂಡು ತಮ್ಮ ಆಪ್ತಮಿತ್ರನನ್ನು ಜತೆಗಾರನನ್ನಾಗಿ ಕರೆದುಕೊಂಡು ಹೋಗುತ್ತಾರೆ. ಮಿತ್ರನೂ ಸಹ ಅದಕ್ಕಾಗಿ ಕಾಯುತ್ತಿದ್ದು, ಕರೆದ ತಕ್ಷಣ ಮನೆಯಿಂದ ಹಾರಿಕೊಂಡು ಬರುತ್ತೆ. ಬೆಳಿಗ್ಗಿನ ಒತ್ತಡ, ಅದಕ್ಕೂ ಸಹ ಅವಸರ ಇರುತ್ತಲ್ಲ. ಮುಂದೆ ಮುಂದೆ ಓಡ್ತಾ ಇರುತ್ತೆ. ಮಾಲೀಕರು ಹಿಂದೆ ಹಿಂದೆ, ಮಿತ್ರನಿಗೇನು ಗೊತ್ತು. ಬರೀ ವಾಕಿಂಗ್ ಮುಗಿಸಿಕೊಂಡು ಬರಬೇಕು ಅಂತ. ಮುಖ್ಯ ರಸ್ತೆಗೆ ಬಂದ ತಕ್ಷಣ ಮಿತ್ರನು ಪಾದಚಾರಿ ಮಾರ್ಗಕ್ಕೆ ಬಂದು ತನಗೆ ಬೇಕಾದ ಸ್ಥಳ ಹುಡುಕುತ್ತಿರುತ್ತದೆ. ಪಾದಾಚಾರಿ ಮಾರ್ಗ ಬರೀ ಮನುಷ್ಯರಿಗೆ ಅಂತ ಎಲ್ಲೂ ಹೇಳಿಲ್ಲವಲ್ಲ. ಆದ್ದರಿಂದ ಮಾಲೀಕರು ಭಯಪಡುವ ಅಗತ್ಯವಿಲ್ಲ. ಎಂದಿನಂತೆ ಮಿತ್ರ ತನ್ನ ಬೆಳಗಿನ ಕೆಲಸ ಮುಗಿಸಿಕೊಂಡು ನಿರಾಳವಾಗಿ ಮುಂದೆ ಹೋಗುತ್ತೆ. ನಿಧಾನವಾಗಿ ನಡೆದುಕೊಂಡು ತನ್ನ ಸ್ನೇಹಿತರಿಗಾಗಿ ಹುಡುಕುತ್ತಿರುತ್ತದೆ. ಸ್ನೇಹಿತರಿಗೇನೂ ಬರವಿಲ್ಲ. ವಾಕಿಂಗ್ ಮುಗಿದು ವಾಪಸ್ಸಾಗುವಾಗ ಮಿತ್ರ ಹಿಂದೆ ಹಿಂದೆ, ಮಾಲೀಕರು ಮುಂದೆ ಮುಂದೆ ಹೋಗ್ತಾ ಬೇಗ ಬಾ ಎಂದು ಕರೆಯುತ್ತಾರೆ.
ಈ ರೀತಿಯಿಂದ ರಸ್ತೆಯ ಎರಡೂ ಬದಿ ನಾಯಿ ಹಾಕಿದ ಕೆಂಡಗಳನ್ನು ನೋಡಬಹುದು .

ಅದಕ್ಕೆ ನಾನು ೮ ಗಂಟೆಯ ನಂತರ ವಾಕಿಂಗ್ ಹೋಗುತ್ತೇನೆ .ಇಲ್ಲದಿದ್ದರೆ ಆ ಪ್ರಕ್ರಿಯೆಯನ್ನು ನೋಡಬೇಕಾಗುತ್ತದೆ. ನಾನು ಹೆಚ್ಚಾಗಿ ಬಿಳಿ ಗೆರೆಯ ಮೇಲೆ ನಡೆದುಕೊಂಡು ಹೋಗುತ್ತೇನೆ. ಗೆರೆಯ ಎಡ ಭಾಗವನ್ನು ನೋಡಬಾರದೆಂದು ಅಂದುಕೊಂಡಿರುತ್ತೇನೆ. ಮನಸ್ಸು ಕೇಳಬೇಕಲ್ಲ, ಎಲ್ಲಾದರೂ ಕೆಂಡ ಇದೆಯಾ ಅಂತ ನೋಡಲು ಹೇಳುತ್ತೆ . ಅಪ್ಪಿತಪ್ಪಿ ನೋಡಿದರೆ ಪಕ್ಕದಲ್ಲಿರುವ ನನ್ನ ಶ್ರೀಮತಿ ಆ ಕಡೆ ಏನು ನೋಡುತ್ತೀರಿ ಸುಮ್ಮನೆ ಮುಂದೆ ನೋಡಿಕೊಂಡು ಹೋಗಿ ಅಂತ ಹೇಳ್ತಾರೆ .

ಫೋಟೋ ಕೃಪೆ : Hindustan times

ಬೀದಿ ನಾಯಿಗಳು ಪಾಪ. ಅದಕ್ಕೆ ಗೊತ್ತಿಲ್ಲ. ಪಾದಾಚಾರಿ ಮಾರ್ಗದಲ್ಲಿ ಹೋಗಿ ತನ್ನ ಶೌಚ ಮುಗಿಸಿ ಕೊಳ್ಳಬೇಕು ಅಂತಾ. ಗಿಡ , ಪೊದೆ ಹುಡುಕಿಕೊಂಡು ಹೋಗುತ್ತದೆ.

ಸಲಹೆ

೧.ಯಜಮಾನರು ತಮ್ಮಂತೆ, ನಾಯಿಗಳು ಶೌಚ ಕಾರ್ಯ ಮುಗಿಸಲು ಮನೆಯಲ್ಲೊಂದು ಸಾಕು ಪ್ರಾಣಿಗಳಿಗಾಗಿ ಶೌಚಾಲಯ ನಿರ್ಮಿಸುವುದು.

ಫೋಟೋ ಕೃಪೆ : premium strata

೨.ವಿದೇಶದಲ್ಲಿ ಯಜಮಾನರು ಮಾಡುವಂತೆ ಕೈಗೆ ಗ್ಲೌಸ್ ಹಾಕಿಕೊಂಡು ೧ ಕವರ್ ಸಹಿತ ನಾಯಿಯ ಹಿಂದೆ ಹೋಗಬೇಕು. ನಾಯಿಯ ವಿಸರ್ಜನೆಯ ನಂತರ ಅದನ್ನು ಎತ್ತಿ ಕವರ್ ನಲ್ಲಿ ಹಾಕಿಕೊಂಡು ಮುಂದೆ ಸಿಗುವ ಕಸದ ಬುಟ್ಟಿಗೆ ಹಾಕಿ ಕೈಗಳನ್ನು ಸ್ವಚ್ಚಮಾಡಿಕೊಳ್ಳುವುದು.

೩.ಸರ್ಕಾರವೇ ಒಂದೊಂದು ಬಡಾವಣೆಗಳಲ್ಲಿ ಜಾಗ ಗುರುತಿಸಿ ಪಾರ್ಕ್ ನಿರ್ಮಿಸುವುದು ಸುತ್ತಲೂ ಹೊಂಡ ನಿರ್ಮಿಸಿ ಮಧ್ಯದಲ್ಲಿ ನಾಯಿಗಳ ಆಟಕ್ಕೆ ವ್ಯವಸ್ಥೆ ಮಾಡುವುದು. ಅಲ್ಲಿ ನಾಯಿಗಳನ್ನು ಬಿಟ್ಟು, ಯಜಮಾನರು ವಾಕಿಂಗ್ ಮುಗಿಸಿ ಬಂದು ತಮ್ಮ ಆಪ್ತಮಿತ್ರನನ್ನು ಜತೆಯಲ್ಲಿ ಕರೆದುಕೊಂಡು ಹೋಗುವುದು.


  • ದೇವರಾಜ ಚಾರ್, ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW