ನೊಬೆಲ್ ವಿಜೇತೆ ಲೂಯಿಸ್ ಗ್ಲಕ್ ಒಂದು ನೆನಪು



ಗ್ಲಕ್ ಕವಿತೆಗಳನ್ನು ಬರೆಯುವುದು ತನ್ನನ್ನು ತಾನು ಕಂಡುಕೊಳ್ಳುವ , ಬಿಡುಗಡೆಗೊಂಡು ಹಗುರಾಗುವ ಮಾರ್ಗವನ್ನಾಗಿ ಆಯ್ದುಕೊಂಡರು. ನಿರಂತರ ಬದಲಾವಣೆಯಿಂದ ರೂಪಾಂತರಗೊಂಡು ಸಾಹಿತ್ಯ ಲೋಕದ ನಕ್ಷತ್ರವಾದ ಲೂಯಿಸ್ ಗ್ಲಕ್ ಮಹಿಳೆಗೆ ನಮನಗಳು.

ಕಾವ್ಯ ಪ್ರೀತಿಗಾಗಿ,ಕಾವ್ಯವನ್ನೇ ಉಸಿರಾಗಿಸಿದ  I think,the question of who’s going to be a writer has more to do with intelligence and hunger than anything you would say was talent_ Louise Gluck ಕಠಿಣತೆಯು ತನ್ನ ವೈಯುಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ, ತನ್ನ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ, ೨೦೨೦ ಯ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಅಮೆರಿಕಾದ ಪ್ರಸಿದ್ಧ ಮಹಿಳಾ ಕವಯತ್ರಿ ಗೆ ಎಪ್ಪತ್ತೇಳರ (೭೫) ಹರೆಯ.

ಪ್ರತಿಯೊಂದು ಬರವಣಿಗೆಯೂ ಬರಹಗಾರನ ಆತ್ಮದ ಸೂಕ್ಷ್ಮ ಪ್ರತಿಫಲನಗಳು. ತನ್ನದೇ ಭಾವನಾತ್ಮಕ ತಾಕಲಾಟಗಳೊಂದಿಗೆ ಹೋರಾಡುತ್ತಾ, ತನ್ನದೇ ಕವಿತಾ ಜಗತ್ತಿನೊಳಗೆ ಇಳಿದು, ಅಲ್ಲಿನ ವ್ಯಕ್ತಿಗಳೊಂದಿಗೆ, ಸನ್ನಿವೇಶದೊಂದಿಗೆ ಮೈ ಮರೆತು, ಪ್ರಬುದ್ಧವಾಗಿ ಮಾಗುವ ಗ್ಲಕ್ ಕವಿತೆಗಳು ತಮ್ಮದೇ ಆದ ದರ್ಶನ, ಒಳನೋಟ, ಕಾಣ್ಕೆ ಒದಗಿಸಬಲ್ಲ ಶಕ್ತಿಯನ್ನು ಹೊಂದಿವೆ.

ಫೋಟೋ ಕೃಪೆ : Slate

ಲೂಯಿಸ್ ಎಲಿಜಬೆತ್ ಗ್ಲಕ್ ಕಿರು ಪರಿಚಯ

ಲೂಯಿಸ್ ಎಲಿಜಬೆತ್ ಗ್ಲಕ್ ಏಪ್ರಿಲ್ ೨೨, ೧೯೪೩ ರಂದು ನ್ಯೂಯಾರ್ಕ್ ನಲ್ಲಿ ಜನಿಸಿದರು. ಬೆಳೆದದ್ದು ಲಾಂಗ್ ಐಲ್ಯಾಂಡ್ ನಲ್ಲಿ.ಬಾಲ್ಯದಿಂದಲೇ ತನ್ನ ಅಜ್ಜಿ ಹಾಗೂ ಅಪ್ಪನಿಂದ ಪುಸ್ತಕದ ಗೀಳನ್ನು ಹಚ್ಚಿಕೊಂಡ ಗ್ಲಕ್ ಪ್ರತೀ ಹಂತದಲ್ಲೂ ಓದನ್ನು ಆನಂದಿಸುತ್ತಾ ಬೆಳೆಯುತ್ತಾರೆ. ಒಂದು ಹಂತದಲ್ಲಿ ನಟಿಯಾಗುವ ತನ್ನ ಹುಚ್ಚು ಆಸೆಯನ್ನು ನಯವಾಗಿ ತಿರಸ್ಕರಿಸಿ, ತನ್ನ ಕಾವ್ಯದ ಪ್ರೀತಿಯನ್ನು ಪ್ರೋತ್ಸಾಹಿಸಿ , ಪ್ರತೀ ಹಂತದಲ್ಲೂ ತನಗೆ ಒತ್ತಾಸೆಯಾಗಿ ನಿಂತ ಕುಟುಂಬವನ್ನು ಪ್ರೀತಿಯಿಂದ ನೆನೆಯುತ್ತಾರೆ.

ಹರೆಯದಲ್ಲೇ Anorexia nervosa ( ಒಂದು ಮಾನಸಿಕ ವ್ಯಾಧಿ. ಇಲ್ಲಿ ವ್ಯಕ್ತಿ ತಾನು ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ ಎಂಬ ತೀವ್ರವಾದ ತಪ್ಪಿತಸ್ಥ ಭಾವನೆಯಲ್ಲಿ ನರಳುತ್ತಾ ತೂಕ ಇಳಿಸಿಕೊಳ್ಳಲು ಅನಾರೋಗ್ಯಕರವಾದ ರೀತಿಯಲ್ಲಿ ಪಥ್ಯ ಪಾಲಿಸುವುದು, ಇಲ್ಲವೇ ಉಪವಾಸವಿರಲು ಪ್ರಯತ್ನಿಸುವುದು) ಕಾಯಿಲೆಯಿಂದ ಬಳಲುತ್ತಾರೆ. ಆ ಸಮಯದಿಂದಲೇ ಶುರುವಾದ ತನ್ನ ಒಂಟಿತನ, ಹತಾಶ ಭಾವನೆಗಳು, ಈ ಸಮಸ್ಯೆಯಿಂದ ಪುನಃ ಮೇಲೆದ್ದು ಬರುವಲ್ಲಿ ಏಳು ವರ್ಷಗಳ ತನ್ನ ಹೋರಾಟದ ಹಾದಿಯನ್ನು ಬರೆಯುತ್ತಾ ಹೋಗುತ್ತಾರೆ. ನೋವುಗಳನ್ನು ಕವಿತೆಯಾಗಿಸುತ್ತಾರೆ .ಈ ಕಾರಣದಿಂದಾಗಿ ಪದವೀಧರೆಯಾಗುವ ತನ್ನ ಪ್ರಯತ್ನವನ್ನು ಕೈಬಿಟ್ಟು ವಿಶ್ವವಿದ್ಯಾಲಯದ ಹೊರಗುಳಿದೇ ಕಲಿಯುತ್ತಾರೆ. ತನ್ನ rehabilitation ದಿನಗಳನ್ನು ನೆನೆಯುತ್ತಾ…” ಒಂದು ಹಂತದಲ್ಲಿ ನಿಜಕ್ಕೂ ಸಾವು ಖಚಿತ ಅಂದುಕೊಂಡಿದ್ದೆ. ಸಾಯಲು ಮನಸ್ಸಿಲ್ಲ. ಆದರೆ ನನ್ನೂಡನೆಯೇ ಎಡೆಬಿಡದೆ ಗಸ್ತು ಹೊಡೆಯುತ್ತಿರುವ ಭಾವನೆಗಳ ತಾಕಲಾಟ ಅಸಹನೀಯ” ಅಂದ ಮಾತುಗಳು ಸಮಸ್ಯೆಯ ಗಂಭೀರತೆಯನ್ನು ಅರಿವಾಗಿಸುತ್ತದೆ.



ಗ್ಲಕ್ ತನ್ನ ಕಾವ್ಯದ ತರಬೇತಿಯನ್ನು ಸೈಂಟ್ ಲಾರೆನ್ಸ್ ಕಾಲೇಜ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪಡೆದು,ಕಾವ್ಯದ ಕಾರ್ಯಾಗಾರಗಳನ್ನು ಆರಂಭಿಸುತ್ತಾರೆ. ಗ್ಲಕ್ ಕಾವ್ಯವು ಆಳವಾದ ನೋವು,ಅಸೂಯೆ,ದ್ರೋಹ ,ಪ್ರತ್ಯೇಕತೆಯ ಸ್ಪಷ್ಟ ಅಭಿವ್ಯಕ್ತತೆಗಾಗಿಹೆಸರುವಾಸಿಯಾಗಿವೆ.ಅಚ್ಚರಿ,ಬಯಕೆ, ಪ್ರಕೃತಿಯ ಪ್ರಕಾಶಮಾನ ಮಹತ್ವದ ಅಂಶಗಳನ್ನು ತನ್ನ ಕವಿತೆಗಳಲ್ಲಿ ಕೇಂದ್ರೀಕರಿಸಿದ್ದಾರೆ .ಗ್ಲಕ್ ಕವಿತೆಗಳಲ್ಲಿ ಒಂಟಿತನ,ಅಸಹನೀಯ ಮೌನದ ತುಣುಕುಗಳಿವೆ.ಅದಮ್ಯ ಪ್ರೀತಿಯ ಭಾವಗಳಿವೆ.ವಿಕ್ಷಿಪ್ತ ಮನಸ್ಥಿತಿಯ ಗೊಂದಲಗಳಿವೆ.ತಾನೊಂದು ಶುದ್ಧ ಆತ್ಮವಾಗುಳಿವ ಬಯಕೆಯಿದೆ.’Even before you touched me ,I belong to you..all you had to do was look at me’_ ಭಾವತೀವ್ರತೆ ಗಾಢವಾಗಿ ತಟ್ಟುತ್ತದೆ.

೧೯೬೮ ರಲ್ಲಿ ತಮ್ಮ ಫಸ್ಟ್ ಬಾರ್ನ್ ( first born) ಕಾವ್ಯ ಸಂಕಲನದ ಪ್ರಕಟಣೆಯಿಂದ ಕಾವ್ಯಕ್ಷೇತ್ರದಲ್ಲಿ ಹೆಜ್ಜೆಯೂರಿದ ಗ್ಲಕ್ ಅತೀ ಶೀಘ್ರದಲ್ಲಿ ಅಮೆರಿಕಾದ ಕವಿವಲಯದಲ್ಲಿ ಗುರುತಿಸಲ್ಪಡುತ್ತಾರೆ . ತನ್ನದೇ ವಿಭಿನ್ನ ಶೈಲಿಯ ಕವಿತೆಗಳಿಂದ ಜನರ ನೆನಪಲ್ಲಿ ಬೆಳೆಯುತ್ತಾ ಹೋಗುತ್ತಾರೆ. ಅರಸಿ ಬಂದ ಪ್ರಶಸ್ತಿಗಳು ಹಲವಾರು.

ಫೋಟೋ ಕೃಪೆ : WBUR

ಪ್ರಶಸ್ತಿಗಳು

ಅಮೆರಿಕಾದ ಕವಿಪ್ರಶಸ್ತಿ ( poet Laureate) ಪುರಸ್ಕೃತ ಮಹಿಳೆಯೂ ಹೌದು. ಹಲವು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಯೇಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಬದುಕು ಮತ್ತು ಲೋಕದ ಮೂಲಭೂತ ತತ್ವವೇ ಬದಲಾವಣೆ ಅಥವಾ ಚಲನಶೀಲ ರೂಪಾಂತರ.


  • ಡಾ. ವೈಶಾಲಿ ನಾಯಕ್ (ಆಯುರ್ವೇದ ವೈದ್ಯರು, ಲೇಖಕರು), ಮುಂಬೈ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading