ನೀರನ್ನು ನಿಂತು ಏಕೆ ಕುಡಿಯಬಾರದು? (ಭಾಗ ೨) – ಡಾ.ರಾಜೇಂದ್ರ ಸ್ವಾಮಿನೀರನ್ನು ನಿಂತು ಏಕೆ ಕುಡಿಯಬಾರದು? (ಭಾಗ-೧) ಮುಂದೊರೆದ ಭಾಗವಿದು, ಆಯುರ್ವೇದದ ಪ್ರಕಾರ ಮಳೆಯ ನೀರನ್ನು ಎರಡು ವಿಧವಾಗಿ ಪರಿಗಣಿಸಬಹುದು. ಮತ್ತು ಭೂಮಿಯ ಮೇಲೆ ನಮಗೆ ಸಿಗುತ್ತಿರುವ ನೀರನ್ನು ಎಂಟು ವಿಧವಾಗಿ ವಿಂಗಡಿಸಬಹುದು.  ಡಾ.ರಾಜೇಂದ್ರ ಸ್ವಾಮಿ ಅವರು ಮಳೆ ನೀರಿನ ಹಾಗೂ ಅದರ ಗುಣಗಳ ಬಗ್ಗೆ ತಿಳಿಸಿಕೊಡುತ್ತಾರೆ, ಮುಂದೆ ಓದಿ…

ನೀರನ್ನು ನಿಂತು ಏಕೆ ಕುಡಿಯಬಾರದು? (ಭಾಗ-೧) – ಡಾ.ರಾಜೇಂದ್ರ ಸ್ವಾಮಿ

ಕಾವೇರಿ, ಶರಾವತಿ, ಗಂಗಾ ಮೊದಲಾದ ನದಿಗಳು ಕೃಷ್ಣರಾಜಸಾಗರ ಮುಂತಾದ ದೊಡ್ಡ ಜಲಾಶಯಗಳ ನೀರು ಮತ್ತು ಹಿಮಾಲಯ ಪರ್ವತದ ಮಂಜುಗಡ್ಡೆಗಳು ಸೂರ್ಯನ ಶಾಖಕ್ಕೆ ಕರಗಿ ಆವಿಯಾಗಿ ಆಕಾಶದ ಕಡೆಗೆ ಏರಿ ಅಲ್ಲಿ ಮೋಡವಾಗಿ ಹರಿದಾಡುತ್ತಿರುತ್ತದೆ. ಅದಕ್ಕೆ ತಂಪುಗಾಳಿ ತಾಗಿದಾಗ ಪುನಃ ಭೂಮಿಗೆ ಬೀಳುತ್ತದೆ. ಈ ರೀತಿ ನದಿ ಜಲಾಶಯಗಳಿಂದ ರೂಪುಗೊಂಡ ಮಳೆಯ ನೀರಿಗೆ ಗಂಗಾಂಬು ಎನ್ನುತ್ತಾರೆ.

ಈ ನೀರು ಎಲ್ಲವನ್ನೂ ಜೀವಂತವಾಗಿರುವ, ದೇಹಕ್ಕೆ ಶಕ್ತಿ ನೀಡುವ, ರಸ ರಕ್ತ ಮಾಂಸ ಧಾತುಗಳನ್ನು ಪೋಷಿಸುವ ಹೃದಯ ಮತ್ತು ಮನಸ್ಸುಗಳಿಗೆ ಹಿತ ಮತ್ತು ಆನಂದವನ್ನು ನೀಡುವ, ಬುದ್ಧಿಗೆ ಚುರುಕು ಕೊಡುವ, ರೂಪದಲ್ಲಿ ಸ್ವಚ್ಛವಾಗಿ ಮುಟ್ಟಿ ನೋಡಿದರೆ ತಂಪಾಗಿಯೂ ಸೇವಿಸಿದ್ದರು ತಂಪಾಗಿ ದೇಹವನ್ನು ಪೋಷಿಸುವ ಗುಣವನ್ನು ಹೊಂದಿರುತ್ತದೆ. ಈ ಗುಣಗಳು ನಾವು ವಾಸಿಸುವ ಪ್ರದೇಶದ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ಈ ಮಳೆಯ ನೀರನ್ನು ಸೇವಿಸುವ ಮೊದಲು ಅದನ್ನು ಪರೀಕ್ಷಿಸುವುದನ್ನು ಕಲಿತಿರಬೇಕು.

ಮನೆಯ ಹೊರಗೊಂದು ಕಡೆ ಶುಚಿಯಾದ ಅಗಲವಾದ ಮಣ್ಣಿನ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ಆ ನೀರನ್ನು ಸಂಗ್ರಹಿಸಬೇಕು ಅದಕ್ಕೆ ಮನೆಯಲ್ಲಿ ತಯಾರಿಸಿದ ಅನ್ನವನ್ನು ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಇಡಬೇಕು. ಮಳೆಸುರಿದು ಕೆಲವು ಗಂಟೆಗಳ ನಂತರ ಅನ್ನದಲ್ಲಿ ಬೆವರುವಿಕೆಯಾಗಲಿ ಮತ್ತು ಅನ್ನದ ಬಣ್ಣ ಬದಲಾಗುವಿಕೆಯಾಗಲಿ ಕಂಡುಬರದಿದ್ದರೆ ಆ ನೀರು ಕುಡಿಯಲು ಶ್ರೇಷ್ಠವಾಗಿರುತ್ತದೆ ಮತ್ತು ಅದನ್ನು ಅಡುಗೆಗೂ ಸಹ ಬಳಸಬಹುದು ಇದರಿಂದ ಆರೋಗ್ಯವು ದ್ವಿಗುಣವಾಗುತ್ತದೆ.

ಆಕಾಶದಿಂದ ಬೀಳುವ ಸಮುದ್ರದ ಜಲ ವಿಶಾಲವಾದ ಸಮುದ್ರದ ಮೇಲೆ ಸೂರ್ಯನ ಕಿರಣಗಳು ಬೇರೆ ಬಿಸಿಯಾದ ಉಪ್ಪುನೀರು ಆವಿಯಾಗಿ ಆಕಾಶದಲ್ಲಿ ಮೋಡವಾಗಿ ಪಸರಿಸುತ್ತದೆ. ಗಾಳಿ ಬೀಸಿ ಮೋಡಗಳು ಬೇರೆ ಕಡೆ ಚಲಿಸಿ ಅಲ್ಲಿ ಮಳೆಯಾದಾಗ ಬೀಳುವ ನೀರು ಸಾಮುದ್ರದ ಜಲ ಎನಿಸಿಕೊಳ್ಳುತ್ತದೆ. ಈ ನೀರು ಕುಡಿಯಲು ನಿಷೇಧವಾಗಿದೆ.  ಈ ನೀರನ್ನು ಸಹ ಮೇಲಿನ ರೀತಿ ಪರೀಕ್ಷಿಸಬೇಕು.
ಅನ್ನವು ಬೆವರಿದರೆ ಮತ್ತು ಬಣ್ಣದಲ್ಲಿ ಬದಲಾವಣೆ ಕಂಡರೆ ನೀರು ವಿಷವೆಂದು ಆಮ್ಲೀಯ ಗುಣ ಹೊಂದಿದೆ ಎಂದು ಭಾವಿಸಬೇಕು ಈ ನೀರನ್ನು ಸೇವಿಸಿದರೆ ಅಸಿಡಿಟಿ ಇನ್ನಿತರ ಉದರ ಸಮಸ್ಯೆಗಳು ಉಂಟಾಗುತ್ತದೆ.

ಈ ನೀರನ್ನು ಸ್ನಾನಕ್ಕೆ ಮತ್ತು ಇನ್ನಿತರ ಕೆಲಸಗಳಿಗೆ ಉಪಯೋಗಿಸಿದರೆ ದೇಹಕ್ಕೆ ಚರ್ಮದ ಅಲರ್ಜಿ ಉಂಟಾಗಬಹುದು. ಪ್ರಕೃತಿಯಲ್ಲಿ ಸಿಗುವ ವಿವಿಧ ಬಗೆಯ ನೀರು ಮತ್ತು ಅವುಗಳ ಗುಣಲಕ್ಷಣ ಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

  • ಸಂಪರ್ಕಿಸಿ : ದಿ ರಾಯಲ್ ಅಕಾಡೆಮಿ –  7676660113

  • ಡಾ.ರಾಜೇಂದ್ರ ಸ್ವಾಮಿ (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW