ಚುಮು ಚುಮು ಮಳೆಯ ಮಧ್ಯೆ ಮನೆಯಲ್ಲೇ ಬಿಸಿ ಬಿಸಿ ಕೋಡುಬಳೆ ಮಾಡಿ ತಿಂದ್ರೆ ಎಷ್ಟು ಚೆನ್ನ. ನಾನು ನಿಮ್ಮ ಪ್ರೀತಿಯ ನಾಗಮಣಿ ಎಚ್ ಆರ್, ಕೋಡುಬಳೆ ಮಾಡೋದನ್ನ ನಾನು ಹೇಳ್ಕೊಡ್ತೀನಿ, ನೀವು ಮನೆಯಲ್ಲೇ ಮಾಡಿ ನನಗೆ ಫೋಟೋ ಕಳಸ್ತೀರಾ ತಾನೇ…
ಮಾಡಲು ಬೇಕಾಗುವ ಸಾಮಗ್ರಿಗಳು :
- ಅಕ್ಕಿಹಿಟ್ಟು (ಅರ್ಧ ಕಿಲೋ)
- ಗೋಧಿ ಹಿಟ್ಟು (ಕಾಲು ಕಿಲೋ)
- ಚಿರೋಟಿ ರವೆ (ಐದು ಚಮಚ)
- ಕೆಂಪು ಮೆಣಸಿನಕಾಯಿ
- ಹಸಿರು ಮೆಣಸಿನಕಾಯಿ ಮಿಕ್ಸ್ ಮಾಡಿ ನಿಮ್ಮ ಖಾರಕ್ಕನುಗುಣವಾಗಿ
- ಕೊತ್ತಂಬರಿ ಸೊಪ್ಪು (ಅರ್ಧ ಕಟ್ಟು)
- ಕರಿಬೇವು ಐದಾರು ಕಡ್ಡಿ.
- ಮೆಣಸು pepper (ಒಂದು ಚಮಚ)
- ಜೀರಿಗೆ (ಒಂದು ಚಮಚ)
- ಓಂ ಕಾಳು (ಎರಡು ಚಮಚ)
- ಬಿಳಿ ನೈಲಾನ್ ಎಳ್ಳು (ನಾಲ್ಕು ಚಮಚ)
- ಬಲಿತ ತೆಂಗಿನಕಾಯಿ (ಒಂದು ಫುಲ್)
- ಒಣ ಕೊಬ್ಬರಿ (ಕಾಲು ಭಾಗ)
- ತುಪ್ಪ / ಡಾಲ್ಡ ಅಲ್ಲ (ಎರಡು ಚಮಚ)
- ಹುರಿಗಡಲೆ (ಒಂದು ಹಿಡಿ)
- ಇಂಗು (ಚಿಟಿಕೆ)
- ಫ್ರೈ ಮಾಡಲು ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಮೊದಲು ಮೆಣಸಿನಕಾಯಿ ಜೀರಿಗೆ ಮೆಣಸು ಕೊತ್ತಂಬರಿ ಸೊಪ್ಪು, ಹುರಿಗಡಲೆ ಕರಿಬೇವು ಕೊಬ್ಬರಿ ಕಾಯಿ ಇಷ್ಟನ್ನೂ ನೀರು ಹಾಕದೇ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ದೊಡ್ಡದಾದ ಬಾಯಿ ಅಗಲವಿರುವ ಪಾತ್ರೆ ಅಥವಾ ಟಬ್ ಗೆ ಅಕ್ಕಿಹಿಟ್ಟು ಹಾಕಿ. ಗೋಧಿ ಹಿಟ್ಟು ಹಾಗೂ ಚಿರೋಟಿ ರವೆಯನ್ನು ಸ್ವಲ್ಪ ಬೆಚ್ಚಗಾಗುವಷ್ಟು ಹುರಿದು ಅದನ್ನು ಅಕ್ಕಿಹಿಟ್ಟಿಗೆ ಬೆರೆಸಿ. ರುಬ್ಬಿದ ಮಸಾಲೆಯನ್ನು ಹಾಕಿ , ಹಿಟ್ಟಿಗೆ ಉಪ್ಪು ಎಳ್ಳು ಓಂ ಕಾಳು ತುಪ್ಪ ಹೆಚ್ಚು ಕಾಯಿಸದೇ ಕರಗಿಸಿ ಅದನ್ನೂ ಹಿಟ್ಟಿಗೆ ಹಾಕಿ ಬೆರೆಸಿ . ಒಂದು ಚಿಕ್ಕ ಕಪ್ ನಷ್ಟು ಎಣ್ಣೆಯನ್ನು ಸ್ವಲ್ಪವೇ ಬಿಸಿ ಮಾಡಿ ಅದನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಬೆರೆಸಿ.
ಮಸಾಲೆ ರುಬ್ಬಿದ ಮಿಕ್ಸಿ ಜಾರಿನ ನೀರನ್ನು ಚೆಲ್ಲದೆ ಅದೇ ನೀರಿನಲ್ಲಿ ಸ್ವಲ್ಪ ಸ್ವಲ್ಪವೇ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಉಪ್ಪು ಸರಿಯಾಗಿದೆಯಾ ನೋಡಿ .
ಕೋಡುಬಳೆ ಹೊಸೆದು ಬಾಣಲೆಯಲ್ಲಿ ಕರಿಯಿರಿ . ಕೋಡುಬಳೆ ರೆಡಿ ತಿನ್ನಿರಿ.ರುಚಿ ಹೇಗಿದೆ ಹೇಳಿರಿ.
- ನಾಗಮಣಿ ಎಚ್ ಆರ್ (ಲೇಖಕಿ, ಸಾಹಿತ್ಯ ಪ್ರಿಯರು), ಹಾಸನ