‘ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ’- ರೇಷ್ಮಾ ಗುಳೇದಗುಡ್ಡಾಕರ್ಪ್ರತಿಯೊಬ್ಬನಿಗೂ ತನ್ನದೆಯಾದ ಕೆಲಸ ಕಾರ್ಯಗಳಿದ್ದರೂ ತನ್ನ ಬಹು ಪಾಲು ಜೀವನವನ್ನ ಮೀಸಲು ಇಡುವುದು ಮತ್ತೊಬ್ಬರ ಬಗೆಗೆ ತಿಳಿಯುವ ತವಕ ಮುಂದೆ ಓದಿ ಲೇಖಕಿ ರೇಷ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯಲ್ಲಿ ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ ಪುಸ್ತಕ ಪರಿಚಯ…

ಪ್ರೀತಿ ತಣ್ಣಗೆ ಬಸ್ ಗೆ ಹತ್ತಿದ್ದಳು. ಕಣ್ಣಂಚನ್ನು ಒಂದಿಷ್ಟು ಒದ್ದೆ ಮಾಡದೇ, ಖಾಲಿಯಾದ ವಾಸ್ತವವ ಒಪ್ಪಿಕೊಂಡು, ಎದೆಯಲ್ಲಿ ಕನಸುಗಳ ಭದ್ರವಾಗಿ ಹಿಡಿದುಕೊಂಡು ಬಸ್ ರಸ್ತೆಯ ಸೀಳಿ ವೇಗವಾಗಿ ಸಾಗುತ್ತಿತ್ತು. ಮನವು ತೆಪ್ಪಗೆ ಕುಳಿತ್ತಿತ್ತು. ತನಗೆ ಲಭ್ಯವಾದ ಅವಮಾನ, ತನ್ನ ಓದು – ಬರಹ ಹವ್ಯಾಸವನ್ನೇ ಟೀಕೆ ಮಾಡಿ ಅವುಗಳಿಗೆ ಅಡ್ಡಿ ಪಡಿಸುವ ಮನಗಳು, ಮಾಡಿದ ಒತ್ತಡಗಳು ಪದೆ ಪದೆ ಚುಚ್ಚುವ ಮಾತುಗಳು, “ಒಂಟಿ” ಎಂಬ ಪದ ತಾನು ಮರೆತರು ನೆನಪಿಸುತ್ತಿದ್ದ ಸುತ್ತುವರಿದ ಸಂಕುಚಿತ ಮನೋಭಾವಗಳು. ತನ್ನ ಖಾಸಗೀತನವ ಇಣುಕುತ್ತಾ ಅದನ್ನೆ ವ್ಯಾಪಕವಾಗಿ ಚರ್ಚಿಸಿ ಸಂತಸ ಪಡುವ ಅತೃಪ್ತರಿಂದ ಅವರುಗಳ ನಯವಾದ ಮಾತುಗಳ ಮೂಲಕವೇ ಹೃದಯಕ್ಕೆ ಭರ್ಜಿ ಹಾಕಿ ಇರಿದರು. ಪ್ರೀತಿ ತಣ್ಣಗೆ ಆ ಸ್ಥಳ ಕ್ಕೆ ವಿದಾಯ ಹೇಳಿದ್ದಳು ಮೌನದಿಂದದಲೇ … ಯಾವ ಪ್ರಶ್ನೆಯನ್ನು ಮಾಡದೆ ಯಾರನ್ನು ದೂರದೇ!.

ತನಗೆ ಗೊತ್ತಿಲ್ಲದೇ ಅಪ್ಪಿದ philosophy , ಈ philosophy ಗೆ ಸಂಬಂಧಿಸಿದ ಕೃತಿಗಳ ಹುಡುಕಾಟ, ಅವುಗಳ ಓದು ತನ್ನ ಮನವ ಗಟ್ಟಿಗೊಳಿಸಿತೆ ಎಂಬ ಅಚ್ಚರಿ ಅವಳಿಗೆ!.

ಕೈಯಲ್ಲಿ ಹಿಡಿದ ಹೊತ್ತಿಗೆ “ಅಂತರಂಗದ ಕೃಷಿ ” ತನ್ನ ಬದುಕನ್ನೆ ಮತ್ತೊಮ್ಮೆ ಹಸನುಗೂಳಿಸಲು ತನಗರಿಯದೇ ಸಿದ್ದ ಮಾಡಿದ್ದನ್ನು ಅರಿತು ಅವಳಿಗೆ ನೋವು ಮರೆತು ಹೊತ್ತಿಗೆಯ ಚಮತ್ಕಾರವ ಕಂಡು ಮನದಲ್ಲಿ ಸಂತಸ ಮತ್ತು ಸಂಭ್ರಮ ಮನೆಮಾಡಿದ್ದು ಸುಳ್ಳಲ್ಲ.

“ನಡೆದರೆ ದಾರಿ ನಡೆಯದಿದ್ದರೆ ಗೋರಿ ” ಎಂಬ ನುಡಿ ಮನದ ಗೋಡೆಗೆ ಅಂಟಿಸಿದಳು. ನಡೆದರೆ ದಾರಿ ತಾನಾಗಿಯೇ ಗೋಚರಿಸುತ್ತದೆ ಎಂಬ ಬಲವಾದ ನಂಬಿಕೆ ಮತ್ತೆ ಮೊಳೆಯಿತು. ಕಿಟಕಿಯಿಂದ ತಂಪಾದ ತಂಗಾಳಿ ತನುವ ಸೋಕಿ ಪುಳಕವಾಗಿಸಿತು. ಹೆರಳುಗಳಿಗೆ ಸ್ವಾತಂತ್ರ್ಯ ಕೊಡಿಸಿತ್ತು.

‘ಓದು – ಬರಹ’ ಎಂಬ ಶಕ್ತಿ ಅನನ್ಯ ಅನುರೂಪ. ಓದದೆ ಬರಹವಿಲ್ಲ, ಬರೆಯದೆ ಓದಲು ಸಾಧ್ಯವಿಲ್ಲ. ಎರಡೂ ಒಂದಕ್ಕೊಂದು ಪೂರಕ. ಹೊತ್ತಿಗೆಗಳು ವಿಭಿನ್ನ ಹಾಗೂ ವಿಷೇಶವು ಹೌದು.  ಅವಳು ಓದಿದ ಆಧ್ಯಾತ್ಮಿಕ ಹೊತ್ತಗೆಗಳು ಅವಳ ಒಣ ವೇದಾಂತ ನೀಡದೆ ತಾರ್ಕಿಕವಾಗಿ ಬದುಕನ್ನು ವಿಶ್ಲೇಷಣೆ ಮಾಡಿದ ರೂಪಕವನ್ನು ನೀಡಿದ್ದವು .

ಹೆಣ್ಣು ಎಂಬ ಕಾರಣಕ್ಕೆ ಮಾನ್ಯತೆ ಎಂದೂ ಪಡೆಯಲು ಪ್ರೀತಿ ಹಲುಬಿರಲಿಲ್ಲ. ಬದಲಾಗಿ ಸ್ನೇಹ, ಮಾನವೀಯತೆ ಎಲ್ಲ ಕಂಗಳಲ್ಲಿ ಕಾಣಲು ಕಾತರವಾದವಳು. ಆದರೆ ಅಂತಹ ಮನಗಳು ಸಿಗುವುದು ಸುಲಭ ಇಲ್ಲ. ನಮಗೇ ನಾವೇ ಸಿಗುವುದು ಬಹು ಪ್ರಯಾಸ. ಇಂದಿನ ದಿನಗಳಲ್ಲಿ ಹೀಗಿರುವಾಗ ಒಂದು ಮನ – ಒಂದು ಯೋಚನೆ ಎಂಬುದು ನಿಲುಕದ ನಕ್ಷತ್ರ. ವಿವಿಧತೆಯಲ್ಲಿ ಏಕತೆಯ ಕಾಣುವ ನಾವು ಒಮ್ಮೊಮ್ಮೆ ನಮ್ಮೊಳಗಿನ ಭಿನ್ನತೆಯೇ ಮತ್ತೊಬ್ಬರಿಗೆ ಕುಹುಕವಾಗುವ ವಿಷಯವಾಗಿರುತ್ತದೆ.

ನಮ್ಮಗಳಿಗೆ ಮಾಡಲು ಹಲವಾರು ಕೆಲಸ ಕಾರ್ಯಗಳು ಇದ್ದರೂ ನಾವು ಬಹು ಪಾಲು ಮೀಸಲು ಇಡುವುದು ಮತ್ತೊಬ್ಬರ ಬಗೆಗೆ ತಿಳಿಯುವ ಅದಮ್ಯ ಆಸಕ್ತಿ. ತಿಳಿದು ಅವರ ಕಾರ್ಯ ಅಡ್ಡಿಪಡಿಸುವ ಇಲ್ಲದ ಹುಳುಕು‌ ಹುಡುಕಿ ನಿರಂತರ ದಾಳಿ‌ಮಾಡುವ ಮನಗಳು. ಪ್ರಪಂಚದ ಅಗ್ರ ಪಾಲು ಹೊಂದಿವೆಯೇನೋ ಎಂಬಷ್ಟು ವಿವಿಧತೆಯಲ್ಲಿ ಏಕತೆಯಾಗಿ ಕಾಣಸಿಗುತ್ತವೆ.

ತನ್ನಗೆಂದೆ ಒಂದು ಲೋಕ ಇದೆ, ಇಂದಲ್ಲ ನಾಳೆ ಅದಕ್ಕೆ ರಹದಾರಿ ಗೋಚರಿಸುತ್ತದೆ ಎಂದು ಮಹಲಿನ ಪುರವ ತೊರೆದಳು. ನಿರಾಸೆಯ ವನಧಿಯ ಸೂಕದೆ ಸರಿದಳು.

ರಾಜನಿದ್ದರೂ ಇಲ್ಲದಂತೆ ಇರುವ ಹೇಳುವರಿಲ್ಲದೆ ಹಾಳಾದ ತಮಗೆ ತಾವೇ ದೂರೆ ಎಂದು ಬೀಗುವ ಅಲ್ಪ ಜನಮನಗಳ ನಡುವಿನ ನಿತ್ಯದ ಹಾಜರಿ ತನ್ನೊಳಗೆ ತನ್ನ ಇರುವಿಕೆಯನ್ನೆ ಮರೆಸಿ ಢಾಂಬಿಕತೆಯ ಮೆರೆಸಿ ಸೀನಿಕ ತನವ ಬೆಳೆಸುವ ವಾತಾವರಣ ಒಬ್ಬರಿಗೆ ಒಬ್ಬರನ್ನು ಕಾಲು ಎಳೆಯುವ, ಏಳಿಗೆಯ ಕಂಡು ಪರಿತಪಿಸಿ ಅದಕ್ಕೆ ತೊಡಕಾಗುವ ಜಗತ್ತು ಹೇಗೆ ಘನ ಸಂಸ್ಥೆಯಾಗಿ ಬೆಳೆಯುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿಯುತು ಮನವು ಮರುಕ ಪಟ್ಟಿತು.

” what you wish for others

it will come back you

its law of Nature ” ಎಂಬ ಬುದ್ದನ ವಾಣಿ ಸತ್ಯ ಬಹುನಗಳಿಗೆ ತಲಿಪಿಲ್ಲ. ತಲುಪುವುದೇ ಇಲ್ಲ .

ಯಾರಿಗೆ ಎನು ಮಹತ್ವವೋ ಅದಕ್ಕೆ ಮಾತ್ರ ಪ್ರಾಶಸ್ತ್ಯ .ಆದರೆ ಆ ಮಹತ್ವ ಇಂದಿನ ದಿನಗಳಲ್ಲಿ ಅಸಮಾನತೆ ಮತ್ತು ಅಸಹನೆಗಾಗಿಯೇ ಇರುತ್ತದೆ. ಹೊರತು ಮತ್ತೇನು ಇರುವುದಿಲ್ಲ. ಎಲ್ಲ ಯೋಚನೆಗಳ ಸರಿಸಿ ಮನ ಹಗುರವಾಗಿ ಬಸ್ ನಿಂತಾಗಲೆ ಅವಳಿಗೆ ಹೊರ ಜಗತ್ತಿನ ಅರಿವಾಯಿತು. ಮನೆಗೆ ಬಂದಾಗ ಮಗಳು ಮಾಡಿದ ಖಡಕ್ ಚಹಾ ಕಾದಿತ್ತು ತನ್ನ ದಾರಿಯ ಹೊಸ ಹೊತ್ತಿಗೆ ಟೇಬಲ್ ಮೇಲೆ ವಿರಾಜಮಾನವಾಗಿತ್ತು.

” ಹಿಮಾಲಯದ ಮಹಾತ್ಮರ ಸನ್ನಿದಿಯಲ್ಲಿ
ಪ್ರೀತಿ ಯ ಹೊಸ ಓದಿಗೆ ತೆರೆ ಸರಿಯಿತು …
ಮಹಲಿನ ಪುರದ ನೆನಪು ಹಸಿರಾಯಿತು
ಪುಟ್ಟ ಹೃದಯ ದೊಂದಿಗೆ ಹೊಸ ಜಗತ್ತಿನ
ಕಾತರಕ್ಕೆ ಮನವು ಸ್ವಾಗತಿಸಿತು “


  • ರೇಷ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW