ನೀರನ್ನು ನಿಂತು ಏಕೆ ಕುಡಿಯಬಾರದು? (ಭಾಗ-೩) – ಡಾ.ರಾಜೇಂದ್ರ ಸ್ವಾಮಿ



ನೀರಿನ ಬಗ್ಗೆ ಚರ್ಚಿಸಿದಷ್ಟು ಸಾಕಷ್ಟು ವಿಷಯಗಳಿವೆ. ವಿಷಯದ ಆಳ ಹಾಗಿದೆ. ಅದನ್ನು ಲೇಖಕ ಡಾ.ರಾಜೇಂದ್ರ ಸ್ವಾಮಿ ಅವರು ಹಂತ ಹಂತವಾಗಿ ಸಾಧ್ಯವಾದಷ್ಟು ಆಯುರ್ವೇದ ಕ್ರಮದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದಾರೆ, ತಪ್ಪದೆ ಓದಿ…

ಭೂಮಿಯಲ್ಲಿ ಸಿಗುವ ನೀರನ್ನು ಎಂಟು ವಿಧವಾಗಿ ವಿಂಗಡಿಸಲಾಗಿದೆ.

ಫೋಟೋ ಕೃಪೆ: google

  • ಬಾವಿಯ ನೀರು : ಬಾವಿಯ ನೀರು ಕ್ಷಾರತೆ ಯಿಂದ ಕೂಡಿದ್ದು ಪಿತ್ತದೋಷವನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.
  • ಸರೋವರದ ನೀರು : ಸರೋವರದ ನೀರು ರುಚಿಯಲ್ಲಿ ಸಿಹಿ ಯಾಗಿದ್ದು ದೇಹ ಮತ್ತು ಮನಸ್ಸನ್ನು ಹಗುರಗೊಳಿಸುತ್ತದೆ.
  • ಕೆರೆಯ ನೀರು : ವಿಶಾಲವಾದ ದೊಡ್ಡ ಕೆರೆಯ ನೀರು, ಸಂಗ್ರಹಿಸಲ್ಪಟ್ಟ ನೀರಾದರೂ ಸಿಹಿಯಾಗಿಯೂ ಲಘು ಗುಣವುಳ್ಳದ್ದು ಆಗಿದೆ.
  • ಬಂಡೆ ಮತ್ತು ಬೆಟ್ಟಗಳಲ್ಲಿ ಮರೆಮಾಚಿರುವ ಶಿಲಾ ಹಳ್ಳದ ನೀರು, ಈ ನೀರು ಅಧಿಕ ಖನಿಜ ಅಂಶಗಳಿಂದ ಕೂಡಿದ್ದು ದಾಹವನ್ನು ನೀಗಿಸುವಲ್ಲಿ ಹಾಗೂ ಆರೋಗ್ಯವನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.
  • ಬೆಟ್ಟಗಳ ಚಿಲುಮೆಯ ನೀರು ಈ ನೀರು ಹರಿದು ಬರುವಾಗ ರಭಸಕ್ಕೆ ಅಲ್ಲಿರುವ ಕಲ್ಲುಗಳ ಮಧ್ಯೆ ಘರ್ಷಿಸಲ್ಪಡುತ್ತದೆ.  ಅದರಿಂದ ನೀರ ಹರಿದುಬರಲು ಅಡ್ಡಿಯುಂಟಾಗಿ ಹೆಚ್ಚೆಚ್ಚು ನೀರಿನ ಖಂಡಗಳಾಗಿ ಪರಿವರ್ತನೆಗೊಳ್ಳುತ್ತದೆ ಈ ನೀರು electrolysed water ರೂಪದಲ್ಲಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  • ನೆಲದಿಂದ ಒಸರುವ/ಸ್ರವಿಸುವ ನೀರು ಈ ಜಲವು ರುಚಿಯಲ್ಲಿ ಸಿಹಿ ಹಾಗೂ ಪಿತ್ತನಾಶಕವೂ ಆಗಿದೆ.
  • ಕಲ್ಯಾಣಿ ಕೊಳದ ನೀರು ಕೊಳದ ನೀರಿಗೆ ಬಾವಿಯ ನೀರಿನಷ್ಟೇ ಸಿಹಿಯಾಗಿರುವ ಹಾಗೂ ಗ್ಯಾಸ್ಟ್ರೈಟಿಸ್ ಅನ್ನು ಕಡಿಮೆ ಮಾಡುವ ಗುಣ ಇರುತ್ತದೆ.
  • ಹೊಳೆಯ ನೀರು : ಹೊಳೆಯ ನೀರು ಸ್ವಲ್ಪ ಕಹಿಯಾಗಿದ್ದು ವಾತ ವರ್ಧಕ ವಾಗಿದೆ ಅಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನೇಕ ಮಂಡಿ ನೋವುಗಳಿಗೆ ಹಾಗೂ ಮೂಳೆಯ ಸಮಸ್ಯೆಗಳಿಗೆ ಈ ನೀರು ಸಹ ಕಾರಣವಾಗಿರಬಹುದು.

ಫೋಟೋ ಕೃಪೆ: google

ಮಾನವನ ದೇಹದಲ್ಲಿ ಶೇಕಡ 70 ಭಾಗ ನೀರಿನ ಅಂಶವಿದ್ದು, ಮಾನವ ಎದುರಿಸುತ್ತಿರುವ ಹಲವು ಪ್ರಮುಖ ಕಾಯಿಲೆಗಳಿಗೆ ಕೇವಲ ಕುಡಿಯುವ ನೀರನ್ನು ಸರಿ ಪಡಿಸುವುದರಿಂದ ಅನೇಕ ರೋಗಗಳಿಂದ ಹೊರಬರಬಹುದು.

ನಮ್ಮ ಪ್ರದೇಶಗಳಲ್ಲಿ ದೊರಕುತ್ತಿರುವ ನೀರನ್ನು ಶುದ್ಧೀಕರಿಸುವ ಬಗೆಯನ್ನು ಮುಂದಿನ ಸಂಚಿಕೆಗಳಲ್ಲಿ ನೋಡೋಣ.

ಸಂಪರ್ಕಿಸಿ : ದಿ ರಾಯಲ್ ಅಕಾಡೆಮಿ – 7676660113.

ಮುಂದೊರೆಯುತ್ತದೆ….


  • ಡಾ.ರಾಜೇಂದ್ರ ಸ್ವಾಮಿ  (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW