ಶಾರುಖ್ ತಾಪ್ಸಿ ಪನ್ನ ಅವರ ಅಭಿನಯದ ಹಿಂದಿ ‘ಡಂಕಿ’ ಸಿನಿಮಾದ ಕುರಿತು ರಶ್ಮಿ ಹುಳಿಯಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…
ನಮಗೆ ಅಷ್ಟಾಗಿ ತಿಳಿಯದ ಕರಾಳ ವಿಷಯವನ್ನು ಒಂದಿಷ್ಟು ವಿಸೃತವಾಗಿ ತಿಳಿದ ಹಾಗಾಯ್ತು ಈ ಸಿನಿಮಾ ನೋಡಿ.
ಶಾರುಖ್ ನ ಓವರ್ ಆಕ್ಟಿಂಗ್ ಸಹ ಇಷ್ಟವಾಗುತ್ತದೆ. ತಾಪ್ಸಿ ಪನ್ನು ಎಂದಿನಂತೆ ಸೂಪರ್. ವಿಕ್ಕಿ ಕೌಶಲ್ ಅವರದು ಸಣ್ಣ ಪಾತ್ರವಾದರೂ ತುಂಬಾ ಚೆನ್ನಾಗಿದೆ. ಡಂಕಿ ಅಂದರೆ ಅರ್ಥವೇನು ಅಂತ ಮೊದಲು ಗೂಗಲ್ ಮಾಡಿ ನೋಡಬೇಕಾಯಿತು.

ಭಾರತದ ಮಿಲಿಟರಿಯ ನಿವೃತ್ತ ಯೋಧನೊಬ್ಬ ಕಾನೂನಿಗೆ ವಿರುದ್ಧವಾಗಿ ಹಾಗೆ ಮಾಡಬಹುದಾ ಎನ್ನುವ ಪ್ರಶ್ನೆಯೊಂದು ಉಳಿದು ಹೋಯಿತು. ಶಾರುಖ್ ನ ಟ್ರೇಡ್ ಮಾರ್ಕ್ ಆದ ಪ್ರಣಯ ಸನ್ನಿವೇಶಗಳ ಹಾಡುಗಳಿಲ್ಲದ ನೀಟ್ ಸಿನಿಮಾ. ಪಳಗಿದ ನಿರ್ದೇಶಕ ರಾಜ್ಕುಮಾರ್ ಹಿರಾನಿಯವರ ಒಳ್ಳೆಯ ನಿರ್ದೇಶನ. ಸಿನಿಮಾ ನನಗಿಷ್ಟವಾಯಿತು. ಇಡೀ ಸಿನಿಮಾದ ಹೆಚ್ಚಿನ ಸಂಭಾಷಣೆ ಪಂಜಾಬಿ ಭಾಷೆಯಲ್ಲಿದ್ದು, ಸಬ್ ಟೈಟಲ್ ನಿಂದಾಗಿ ಸರಿಯಾಗಿ ಅರ್ಥವಾಗುತ್ತದೆ. ಬದುಕಿನ ಕನಸುಗಳನ್ನು ಪೂರೈಸಲು ನಾನಾ ಪಾಡುಪಟ್ಟು ಕಳ್ಳ ಮಾರ್ಗದಲ್ಲಿ ದೇಶವನ್ನು ಬಿಡುವವರಿಗೆ ಮತ್ತೆ ತಮ್ಮ ಸ್ವಂತ ನೆಲ ಮೆಟ್ಟುವ ತುಡಿತ ಅದೆಷ್ಟು ಇರುತ್ತದೆ ಎನ್ನುವುದು ಭಾವುಕ ವಿಷಯ.
ನೈಜ ಘಟನೆಗಳಿಂದ ಪ್ರೇರಿತ ಮನ ಮಿಡಿಯುವ ಚಿತ್ರ. ಒಂಚೂರು ಅಳಿಸಿ, ಮತ್ತಷ್ಟು ನಗಿಸುವ ಲವಲವಿಕೆಯ ಸಿನಿಮಾ…
I loved it.
- ರಶ್ಮಿ ಹುಳಿಯಾರ್
