ಸ್ಪರ್ಧೆಗಳು ಬಹಳವಿದೆ, ಸ್ಪರ್ಧಿಗಳು ಹಲವಾರು ಕಾಲು ಮುಂದಿಡೆ ಜಯವು ಹಿಂದೆ ಸರಿದರೆ ಸೋಲು…ಅಪ್ಪಯ್ಯ ಯು ಕಾಸರಗೋಡು ಅವರ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ…
ಮಲಗದಿರು ಓ ಮಗುವೇ
ಕಣ್ಣೊರೆಸಿ ಎದ್ದೇಳು l
ಜೀವನದ ಓಟವಿದು
ಹಿಂದೆ ಬೀಳುವೆ ಜೋಕೆ
ಸ್ಪರ್ಧೆ ನಿನಗಿಹುದು
ತೂಕಡಿಕೆಯಿಂದೆದ್ದು
ತುದಿಗಾಲಲಿ ನಿಂತು
ಓಡಲಣಿಯಾಗುll
ಜೀವನದ ಓಟಗಲಿ
ಗೆದ್ದರೆನೀ ಭಲಬಂತ l
ಸೋತೆಯೆಂದರೆ
ನಿನ್ನ ತಳ್ಳುವತರು ಬದಿಗೆ
ಬಲಹೀನನಾಗಬೇಡ ll
ಸ್ಪರ್ಧೆಗಳು ಬಹಳವಿದೆ
ಸ್ಪರ್ಧಿಗಳು ಹಲವಾರು
ಕಾಲು ಮುಂದಿಡೆ ಜಯವು
ಹಿಂದೆ ಸರಿದರೆ ಸೋಲು l
ಆರಿಸಿಕೊ ನಿನ್ನ ದಾರಿಯ
ಏರಿಸಿಕೊ ನಿನ್ನಾತ್ಮ ಶಕ್ತಿಯ l
ಮಲಗುವುದೆ ಬಾಳಲ್ಲ
ಎದ್ದು ಮುಂದಕೆ ನಡೆl
ಹೆಜ್ಜೆ ಮುಂದಿಡೆ ಸ್ವರ್ಗ
ಹೆಜ್ಜೆ ಹಿಂದಿಡೆ ನರಕl
- ಅಪ್ಪಯ್ಯ ಯು ಕಾಸರಗೋಡು.
