ಮಕ್ಕಳನ್ನು ದೊಡ್ಡ ದೊಡ್ಡ ವಿದ್ವಾಂಸರನ್ನಾಗಿ ಮಾಡುವ ಮೊದಲು ಶಿಕ್ಷಕರು ಸರಳ ಭಾಷೆಯಲ್ಲಿ ಪಾಠ ಮಾಡಿದರೆ ಮಕ್ಕಳಿಗೆ ಅದನ್ನು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ ಎನ್ನುತ್ತಾರೆ ಶಿಕ್ಷಕ ಶಶಿರಾಜ್ ಆಚಾರ್ಯ, ತಪ್ಪದೆ ಮುಂದೆ ಓದಿ ಇಂದಿನ ಶಿಕ್ಷಣದ ಕುರಿತಾದ ಲೇಖನ.
ಮಕ್ಕಳಿಗೆ ವಿಜ್ಞಾನ ಪಾಠ ಮಾಡುವಾಗ ನಿಮಗೆಷ್ಟು ಪದವಿ ಬುಧ್ಧಿವಂತಿಕೆಗಳಿವೆ ಅನ್ನೋದು ಮುಖ್ಯ ಆಗೋದಿಲ್ಲ. ನೀವು ನಿಮ್ಮ ಹಾಗೂ ಪಾಠದ ಭಾಷೆಯನ್ನು ಬಿಟ್ಟು ಅವರ ಭಾಷೆಯಲ್ಲಿಯೇ ಅರ್ಥ ಆಗುವಂತೆ ಪಾಠ ಮಾಡಬೇಕಾಗುತ್ತದೆ.
ಇದಕ್ಕೆ ಬಹಳಷ್ಟು ಪೂರ್ವ ತಯಾರಿಯೂ ಇರಬೇಕಾಗುತ್ತದೆ. ಆದರೆ ಪರೀಕ್ಷೆಗಳಲ್ಲಿ ಅವರ ಉತ್ತರಗಳು ಮಾತ್ರ ನಿಮ್ಮ ವಿಷಯ-ಭಾಷೆಯಲ್ಲಿಯೇ ಇರುವಂತೆ ನೋಡಿ ಕೊಳ್ಳಬೇಕಾಗುತ್ತದೆ. ಹೀಗಾಗಿ ಮೂರರಿಂದ ಹತ್ತನೇ ತರಗತಿಯ ಪಾಠಬೋಧನೆ ಯಾವ ವಿಷಯದಲ್ಲೂ ಸುಲಭದ ದಾರಿಯಲ್ಲ.
ಫೋಟೋ ಕೃಪೆ : google
ಹೀಗಾಗಿ ಒಂದರಿಂದ ಹತ್ತನೆಯ ತರಗತಿಯ ಮಕ್ಕಳಿಗೆ ಚಂದವಾಗಿ ಕಾನ್ಸೆಪ್ಟ್ ಗಳು ಅರ್ಥವಾಗುವಂತೆ ಸರಳವಾಗಿ ಪಾಠ ಮಾಡಿ ಆದಷ್ಟೂ ನೇರ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಿ ವಿಜ್ಞಾನ ಕಲಿಕೆಗೆ ಅವರನ್ನು ಉತ್ತೇಜಿಸಬೇಕೇ ಹೊರತು ಡಿಗ್ರಿ ಇಂಜಿನಿಯರಿಂಗ್ ವಿಜ್ಞಾನಿಗಳ ತಲೆಗಳೆಲ್ಲವನ್ನೂ ಹತ್ತನೇ ತರಗತಿಯ ಮಕ್ಕಳಲ್ಲೇ ಕಂಡು ತಿರುಗಾ ಮುರುಗಾ ಪ್ರಶ್ನೆ ಹಾಕಿ ಅವರ ಕಲಿಕೆಯ ಇಷ್ಟ ಆಸಕ್ತಿಯನ್ನೇ ಚಿವುಟಿ ಹಾಕಲು ಪ್ರಶ್ನೆ ಪತ್ರಿಕೆ ತಯಾರಕರು ಹೋಗಬಾರದು..
ಇವತ್ತಿನ ದಿನಗಳಲ್ಲಿ ತರಗತಿಯಲ್ಲಿ ಬಹಳಷ್ಟು ಶಿಕ್ಷಕರು ಸೋತು ಒಂದೆರಡು ವರ್ಷದಲ್ಲೇ ಹೊರಬರಲು ಇವೆಲ್ಲವೂ ಮುಖ್ಯ ಕಾರಣವಾಗಿವೆ…
- ಶಶಿರಾಜ್ ಆಚಾರ್ಯ – ಶಿಕ್ಷಕರು, ಲೇಖಕರು