‘ಕರಗುತ್ತಿಲ್ಲ ಆಸೆಯು, ಮುಗಿಯುತ್ತಿಲ್ಲ ಬಯಕೆಯು ಬೇಕೆನಿತಿಹುದು…’ ಯುವ ಕವಿ ಖಾದರ್ ಎ ಕೆ ಅವರ ಸುಂದರ ಕವನಗಳು ಮುಂದೆ ಓದಿ …
ಕರಗುತ್ತಿಲ್ಲ ಆಸೆಯು
ಮುಗಿಯುತ್ತಿಲ್ಲ #ಬಯಕೆಯು
ಬೇಕೆನಿತಿಹುದು ಎಲ್ಲವನ್ನು
ಸಾಲುತ್ತಿಲ್ಲ ಎನುತಿಹುದು
ಮುರುಕು ಜೋಪಡಿಯ ಅಡಿಯವನು
ಸಾಲು-ಸಾಲು ಅಂತಸ್ತು ಬಿದ್ದಿರಲು
ಸಾಲುತ್ತಿಲ್ಲ ಎನುತಿಹನು
ಚಿಲ್ಲರೆಯ ಬೇಡುತ್ತ ಬಂದವನು
ಗರಿಗರಿ ನೋಟ ಕಂತೆಯು ಇರಲು
ಸಾಲುತ್ತಿಲ್ಲ ಎನುತಿಹನು
ಹಾಲು ಪಾಳು ಗಂಜಿಗೆ ಅಲೆದಾಡು-
ತ್ತಿದ್ದವನು ಬಿರಿಯಾನಿ ಮಿಕ್ಕಿದರೂ
ಸಾಲುತ್ತಿಲ್ಲ ಎನುತಿಹನು
ಹೋಗಿ ಬಂದು ಒಡಗುಡುತ್ತಿದ್ದವನು
ಜೋಳಿಗೆಯು ತುಂಬಿ ಚೆಲ್ಲಾಡುತ್ತಿದರೂ
ಸಾಲುತ್ತಿಲ್ಲ ಎನುತಿಹನು
ಸಾಲು ಸಾಲು #ಹೆಣಗಳು ಸತ್ತು
ಬಿದ್ದಿರಲು ತನಗೆ ಸಿಕ್ಕಿದ್ದು
ಸಾಲುತ್ತಿಲ್ಲ ಎನುತಿಹನು
- ಖಾದರ್ ಎಕೆ (ಯುವ ಕವಿ)
