ಜ್ವರ ಬಂದಾಗ ಪಾರಂಪರಿಕ ವೈದ್ಯರಾದ ಸುಮನ ಮಳಲಗದ್ದೆ ಅವರು ಬರೆದಿರುವ ಮನೆಮದ್ದನ್ನು ತಪ್ಪದೆ ಮಾಡಿ ನೋಡಿ…
ಬೇಕಾಗುವ ಪದಾರ್ಥಗಳು :
ಬೇವಿನಸೊಪ್ಪು
ನೀರು
ನಿಂಬೆರಸ
ಉಪ್ಪು
ಫೋಟೋ ಕೃಪೆ : google
ಮಾಡುವ ವಿಧಾನ :
ಒಂದು ಒಳ ಮುಷ್ಟಿಯಷ್ಟು ಬೇವು. ಉದ್ದ ಕಪ್ಪಿನಲ್ಲಿ ಒಂದುವರೆ ಕಪ್ ನೀರು ಹಾಕಿ ಒಂದು ಕಪ್ ಗೆ ಬರುವತನಕ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ನಿಂಬೆರಸ ಮತ್ತು ಉಪ್ಪು ಇರಲಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.
ಸ್ವಲ್ಪ ಬೇವಿನಸೊಪ್ಪು ಹಾಕಿ ಚೆನ್ನಾಗಿ ಕುದಿಯುತ್ತಿರುವ ಕಷಾಯದಲ್ಲಿ ಹಬೆಯನ್ನು ತೆಗೆದುಕೊಳ್ಳಬೇಕು. ರಗ್ಗಿನ ಸಹಾಯದಿಂದ ಪೂರ್ತಿ ದೇಹವನ್ನು ಮುಚ್ಚಿ ಮಲಗಿ ಹತ್ತು ನಿಮಿಷಕ್ಕೆ ದೇಹವೆಲ್ಲಾ ಬೆವರುತ್ತದೆ. ಬೆವರು ಆರದಂತೆ ಚೆನ್ನಾಗಿ ಟವೆಲ್ನಿಂದ ವರೆಸಿಕೊಳ್ಳಿ. ಅರ್ಧ ಗಂಟೆಯೊಳಗೆ ನಿಮ್ಮ ಜ್ವರ ಓಡಿ ಹೋಗಿರುತ್ತದೆ. ದೇಹ ತಣ್ಣಗಾಗಿರುತ್ತದೆ. ದಿನಕ್ಕೆ ಒಮ್ಮೆ ಮಾಡಿದರೆ ಸಾಕು ಹೆಚ್ಚೆಂದರೆ ಮೂರು ದಿನ.
- ಸುಮನ ಮಳಲಗದ್ದೆ – ಪಾರಂಪರಿಕ ವೈದ್ಯರು