ನೀವು ಕನಸು ಕಾಣುವವರೆ..!

ಜನ ನಿಮ್ಮ ಉಪಯೋಗವನ್ನು ಅಥವಾ ನಿಮ್ಮ ಉತ್ಪನ್ನಗಳನ್ನು ಬಯಸುತ್ತಾರೆಯೇ ಹೊರತು ನಿಮ್ಮನ್ನಲ್ಲ. ಇಂತಹ ವಿಚಿತ್ರ ಜನರ ಪ್ರಪಂಚದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಜೀವನಕ್ಕೊಂದು ಸ್ಫೂರ್ತಿ ನೀಡುವ ಡಾ. ರಾಜಶೇಖರ ನಾಗೂರ ಅವರ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಅವನಿಗೆ ಅದೆಂತ ಹೀನಾಯ ಸ್ಥಿತಿ ಬಂದಿತೆಂದರೆ ಅವನು ತನ್ನ ಹೆಂಡತಿಯ ಆಭರಣಗಳನ್ನೆಲ್ಲಾ ಮಾರಿದ. ಆದರೂ ಪರಿಸ್ಥಿತಿ ಸರಿಯಾಗದೆ ಇನ್ನೂ ಬಿಗಡಾಯಿಸಿತು. ಮನೆ ಇಲ್ಲದಂತಾದ. ಬೀದಿಗೆ ಬಿದ್ದ. ನಂಬಿ ಬಿಡಿ ನ್ಯೂಯಾರ್ಕ್ ಬಸ್ ನಿಲ್ದಾಣದಲ್ಲಿ ಮೂರು ದಿನ ಮಲಗಿದ. ಬಾಡಿಗೆ ಕಟ್ಟುವುದಾಗಿರಲಿಲ್ಲ. ಕೊನೆ ಪಕ್ಷ ಊಟಕ್ಕೂ ಇಲ್ಲದ ಸ್ಥಿತಿ ತಲುಪಿದ.

ಅವನ ಅತೀ ಕೆಳಮಟ್ಟದ ಕ್ಷಣವೆಂದರೆ, ಅದಕ್ಕೆ ಆಹಾರ ಒದಗಿಸುವ ತಾಕತ್ತೂ ಇಲ್ಲವೆಂದು ತನ್ನ ಮುದ್ದಿನ ಸಾಕು ನಾಯಿಯನ್ನು ಮಾರಿದ್ದು. ಕೇವಲ 25 ಡಾಲರ್ ಗೆ ಮಾರಿ ಕಣ್ಣೀರು ಸುರಿಸುತ್ತಾ ತನ್ನನ್ನೇ ನೋಡುತ್ತಿದ್ದ ನಾಯಿಯನ್ನು ಬಿಟ್ಟು ಹೊರಟ.ಎರಡು ವಾರಗಳ ನಂತರ, ಮಹಮ್ಮದ್ ಅಲಿ ಮತ್ತು ಚಕ್ ವೆಪ್ನರ್ ನಡುವೆ ನಡೆದ ಬಾಕ್ಸಿಂಗ್ ಮ್ಯಾಚ್ ನ್ನು ನೋಡುತ್ತಿದ್ದ. ಆ ಮ್ಯಾಚ್ ಅವನಿಗೊಂದು ಚಿತ್ರದ ಸ್ಕ್ರಿಪ್ಟ್ ಬರೆಯಲು ಪ್ರೇರಣೆಯಾಯಿತು. 20 ತಾಸು ಕುಳಿತುಕೊಂಡು ಆ ಸ್ಕ್ರಿಪ್ಟ್ ನ್ನು ಮುಗಿಸಿದ. ಆ ಸ್ಕ್ರಿಪ್ಟ್ ಗೆ ROCKY ಎಂದು ಹೆಸರಿಟ್ಟ.

ಫೋಟೋ ಕೃಪೆ : google

ಆ ಸ್ಕ್ರಿಪ್ಟ್ ನ್ನು ಮಾರಲು ಪ್ರಯತ್ನ ಪಟ್ಟ. 1,25,000 ಡಾಲರ್ ಗೆ ಕೊಂಡುಕೊಳ್ಳಲು ಒಂದು ಅವಕಾಶ ಬಂದಿತು. ಆದರೆ ಆ ಮೂವಿಲಿ ತನ್ನನ್ನೇ ಹೀರೋ ( ROCKY ) ಮಾಡಬೇಕೆಂಬ ಇವನದೊಂದು ಕಂಡೀಶನ್ ಇಟ್ಟ. ನಡಿ ಆಚೆಗೆ ಎಂದರು.

ಸ್ವಲ್ಪ ದಿನಗಳ ನಂತರ ಅದೇ ಸ್ಟುಡಿಯೋದವರು ಆ ಸ್ಕ್ರಿಪ್ಟ್ ಗೆ 2,50,000 ಡಾಲರ್ ಆಫರ್ ಇಟ್ಟರು. ಅವನು ನಿರಾಕರಿಸಿದ. ಸ್ಟುಡಿಯೋದವರು ಮತ್ತೆ 3,50,000 ಡಾಲರ್ ಗೆ ಆಫರ್ ಕೊಡುತ್ತಾರೆ. ಆದರೂ ಅವನು ನಿರಾಕರಿಸಿದ. ಅವರು ಅವನ ಮೂವಿಯನ್ನು ಬೇಕೆಂದು ಬಯಸಿದರೇ ಹೊರತು ಇವನನ್ನು ಚಿತ್ರದ ನಾಯಕನನ್ನಾಗಿ ಮಾತ್ರ ಬೇಡ ಎನ್ನುತ್ತಿದ್ದರು. ಅವನು ಸ್ಕ್ರಿಪ್ಟ್ ಕೊಡಲು ಒಪ್ಪಲೇ ಇಲ್ಲಾ. ತನ್ನ ಸ್ಕ್ರಿಪ್ಟ್ ನ ಹೀರೋ ತಾನೇ ಆಗಬೇಕು ಹಾಗಾದರೆ ಮಾತ್ರ ಸ್ಕ್ರಿಪ್ಟ್ ಕೊಡುವುದಾಗಿ ಹೇಳಿ ನಿರಾಕರಿಸಿದ.

ಕೊನೆಗೆ ಸ್ಟುಡಿಯೋದವರು ಸ್ಕ್ರಿಪ್ಟ್ ನ್ನು 35,000 ಡಾಲರ್ ಗೆ ತೆಗೆದುಕೊಳ್ಳುವುದಾಗಿ ಒಪ್ಪಿ, ಅವನನ್ನು ಚಿತ್ರದ ಹೀರೋ ನನ್ನಾಗಿ ಮಾಡಲು ಒಪ್ಪಿಗೆ ಕೊಟ್ಟರು. ಆಮೇಲೆ ROCKY ಚಿತ್ರ ಬಿಡುಗಡೆಯಾಯ್ತು. ಮಿಕ್ಕಿದ್ದು ಇತಿಹಾಸ. ಆ ಮೂವಿ Best movie, best directing, best editing ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಆಗಿನಿಂದ ಈ ಭೂಮಿಯ ಮೇಲೆ ನಡೆದಾಡಿದ ಅತೀ ಶ್ರೇಷ್ಠ ಮತ್ತು costly ಆಕ್ಟರ್ ಗಳಲ್ಲೊಬ್ಬನಾದ.

ಒಂದು ಕಾಲದಲ್ಲಿ ಊಟಕ್ಕೂ ಗತಿ ಇಲ್ಲದೆ, ಮನೆ ಇಲ್ಲದೆ, ಬಸ್ ಸ್ಟಾಂಡ್ ಅಲ್ಲಿ ಮಲಗಿ, ನಾಯಿಯನ್ನು ಸಾಕಲು ಯೋಗ್ಯತೆ ಇಲ್ಲದೆ ಅದನ್ನು ಮಾರಿದ ವ್ಯಕ್ತಿಯು ಅದೆಷ್ಟು ಶ್ರೀಮಂತನಾದಂನೆಂದರೆ ಅವನ ಹೆಸರನ್ನು ಕೇಳಿದರೆ ನೀವೇ ಹೌದೆನ್ನುವಿರಿ. ಆತನೇ RAMBO, ROCKY ಖ್ಯಾತಿಯ ಹಾಲಿವುಡ್ ಹೀರೋ ಸಿಲ್ವೇಸ್ಟರ್ ಸ್ಟಾಲ್ಲೋನ್ (Sylvester Stallone). ನಿಮಗೆ ಗೊತ್ತಾ, ಅವನ ಮೊದಲ ಚಿತ್ರದ ಸಂಭಾವನೆ 35000 ಡಾಲರ್ ಬಂದಾಗ ಅವನು ಮೊದಲು ಕೊಂಡು ಕೊಂಡಿದ್ದು ಏನೆಂದು? ಗೆಸ್ ಮಾಡಿ ನೋಡೋಣ.. ಈ ಮೊದಲು ಮಾರಿದ ಆತನ ನಾಯಿಯನ್ನು. ಯಾವ ಜಾಗದಲ್ಲಿ ಅವನು ತನ್ನ ನಾಯಿಯನ್ನು ಮಾರಿದ್ದನೋ ಆ ಸ್ಥಳಕ್ಕೆ ಬಂದು ಸತತವಾಗಿ ಮೂರು ದಿನ ಆ ನಾಯಿ ತೆಗೆದುಕೊಂಡವನು ಬರುವವವರೆಗೆ ಕಾಯುತ್ತಾನೆ. ಆ ಮನುಷ್ಯ ಕಂಡ ತಕ್ಷಣ ಅವನ ಹತ್ತಿರ ಓಡಿ ಹೋಗಿ ತಾನು ಏಕೆ ಈ ನಾಯಿಯನ್ನು ಮಾರಿದೆ ಎಂದು ವಿವರಿಸಿ, ತನ್ನ ನಾಯಿಯನ್ನು ತನಗೆ ಕೊಡಲು ಭಿಕ್ಷುಕನಂತೆ ಕೈ ಜೋಡಿಸಿ ಅವನ ಮುಂದೆ ಕೆಳಗೆ ಕೂಡುತ್ತಾನೆ. ಆದರೂ ಆ ವ್ಯಕ್ತಿ ನಿರಾಕರಿಸುತ್ತಾನೆ. ಸ್ಟಾಲ್ಲೋನ್ ಆತನಿಗೆ 100 ಡಾಲರ್ ಆಫರ್ ಕೊಡುತ್ತಾನೆ. ಆತ ಒಪ್ಪಲಾರ. ಮತ್ತೆ 200 ಡಾಲರ್ ಆಫರ್ ಕೊಡುತ್ತಾನೆ. ಅವನು ಒಪ್ಪಲಾರ. 500 ಡಾಲರ್.. ಒಪ್ಪಲಾರ. 1000 ಡಾಲರ್.. ಒಪ್ಪಲಾರ.

 

ಫೋಟೋ ಕೃಪೆ : google

 

ನಂಬಿ, ಬಿಡಿ ಯಾವ ನಾಯಿಯನ್ನು ಕೇವಲ 25 ಡಾಲರ್ ಗೆ ಮಾರಿದ್ದನೋ ಅದನ್ನು ಮರಳಿ ಪಡೆಯಲು ಅದೇ ಸಿಲ್ವೇಸ್ಟರ್ ಸ್ಟಾಲ್ಲೋನ್ 15000 ಡಾಲರ್ ಕೊಡಲು ತಯಾರಾದಾಗ ಆ ವ್ಯಕ್ತಿ ಇವನ ನಾಯಿಯನ್ನು ಕೊಡಲು ಒಪ್ಪುತ್ತಾನೆ.

ಒಂದು ದಿನದ ಬದುಕಿಗೆ ಹೋರಾಡಿದ ವ್ಯಕ್ತಿಯು ಮುಂದೆ ಪ್ರಪಂಚದ ಅತೀ ಬೇಡಿಕೆಯ ನಾಯಕನಾಗಿ ಜೀವನ ನಡೆಸುತ್ತಾನೆ. ಇದರ ಅರ್ಥ ಇಷ್ಟೇ! ನಮ್ಮ ಕನಸುಗಳನ್ನು ಜೀವಂತ ವಿರಿಸಿಕೊಂಡೆ ಮುಂದೆ ಸಾಗಬೇಕು. ಒಂದಿಲ್ಲ ಒಂದು ದಿನ ಇಡೀ ಪ್ರಪಂಚ ನಮ್ಮನ್ನು ತಲೆ ಎತ್ತಿ ನೋಡಬಹುದು. ಜನ ನಿಮ್ಮ ಉಪಯೋಗವನ್ನು ಅಥವಾ ನಿಮ್ಮ ಉತ್ಪನ್ನಗಳನ್ನು ಬಯಸುತ್ತಾರೆಯೇ ಹೊರತು ನಿಮ್ಮನ್ನಲ್ಲ. ಇಂತಹ ವಿಚಿತ್ರ ಜನರ ಪ್ರಪಂಚದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ.

ಹೀಗಾಗಿ ನೀವು ಕನಸು ಕಾಣುವವರಾಗಿದ್ದರೆ, ನಿಮ್ಮನ್ನು ಯಾರಾದರೂ ತುಳಿದರೋ ಕನಸು ಕಾಣುವುದ ಬಿಡಬೇಡಿ, ಯಾರಾದರೂ ಭರವಸೆಯನ್ನು ಇಲ್ಲವಾಗಿಸಿದರೋ ಕನಸು ಕಾಣುವುದ ಬಿಡಬೇಡಿ. ಯಾರಾದರೂ ಷಡ್ಯಂತ್ರ ಮಾಡಿ ನೋಯಿಸಿದರೋ ಕನಸು ಕಾಣುವುದನ್ನು ಬಿಡಬೇಡಿ. ನಿಮ್ಮನ್ನು ಹಿಯಾಳಿಸಿದರೋ ಕನಸು ಕಾಣುವುದನ್ನು ಬಿಡಬೇಡಿ.
ನಿಮ್ಮ ಕನಸುಗಳ ಜೊತೆ ಎಂದೆಂದೂ ಕಾಂಪ್ರೊಮೈಸ್ ಆಗಬೇಡಿ. ಅದೇ ನಿಮ್ಮ ಗೆಲುವಿನ ಮುನ್ನುಡಿ.

ಡ್ರೀಮ್ ಡ್ರೀಮ್ ಡ್ರೀಮ್ ಡ್ರೀಮ್..

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ 

5 1 vote
Article Rating

Leave a Reply

1 Comment
Inline Feedbacks
View all comments

[…] ನೀವು ಕನಸು ಕಾಣುವವರೆ..! […]

Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW