ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರಿಗೆ ೧೯೮೨ರಲ್ಲಿ ಬಾಳ ಸಂಗಾತಿ ಗಿರಿಜಾ ಶಾಸ್ತ್ರೀ ಅವರು ಬರೆದ ಮೊದಲು ಪ್ರೇಮ ಕವಿತೆ, ಮುಂದೆ ಓದಿ…
ನನ್ನ ಪ್ರೀತಿಯ ಹುಡುಗನಿಗೆ
ನನ್ನ ಪ್ರೀತಿಯ ಹುಡುಗಾ
ನಿನ್ನ ಹಂಬಲದ ಹರಕೆಗೆ
ನನ್ನ ಆಸೆಯ ಕನಸುಗಳು ನೂರು
ಜಡವಾಗಿದ್ದು ಚಿಗುರಿ ಬಗೆ ಕೊನರಿದ್ದು
ಮಣ್ಣಾಗುವಂತರಕೆ ನೀನು ಏನಾದರೂ ಸರಿ
ಎಳೆದೆಳೆದು ಜಗ್ಗಿ ಕಿತ್ತು
ಕಾಮನಬಿಲ್ಲ ಕಾಣುವುದು ಬೇಡ
ಒಗಟಿನೆಳೆ ಮುಸುಕಿನಲಿ ಮುಲುಗಿದ್ದು,
ಕಣ್ಣು ಒಳಗಣ್ಣನರಿಯುವ ಬೇಟದಲಿ
ಸ್ನೇಹ ಸ್ನೇಹಕೆ ನಂಟು ಹಚ್ಚೋಣ ಬಾ
ಎಳೆದಂತೆ ಮುಖಸ್ಪಷ್ಟ
ಉಳಿದಂತೆ ನನ್ನ ನಿನ್ನ ಅಜ್ಜನ ವಿಸ್ಮಯಕೆ
ಭ್ರಮೆ ಬಿಟ್ಟ ಬದುಕ ಬಯಲಲ್ಲಿ ಅರಸಿ
ನಗ್ನ ಸಾಂಗತ್ಯದ ಮುನ್ನುಡಿ ಬರೆಯೋಣ ಬಾ
- ಗಿರಿಜಾ ಶಾಸ್ತ್ರೀ – ಇಂಗ್ಲಿಷ್ ಉಪನ್ಯಾಸಕರು,ಲೇಖಕರು, ಮುಂಬೈ.